Search
  • Follow NativePlanet
Share
» »ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು

ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು

ಟ್ರಕ್ಕಿಂಗ್ ಅಥವಾ ಚಾರಣ ಪ್ರವಾಸವು ಪ್ರಯಾಣಿಗರಲ್ಲಿ ಕೈಗೊಳ್ಳುವಂತಹ ಒಂದು ಪ್ರಮುಖ ಚಟುವಟಿಕೆಯಾಗಿದೆ. ಸಾಮಾನ್ಯವಾಗಿ ಈ ಸ್ಥಳಗಳು ದೂರದ ಪ್ರಯಾಣವಾಗಿದ್ದು ಈ ಪ್ರದೇಶಗಳಿಗೆ ವಾಹನಗಳ ಸೌಲಭವು ಇರುವುದಿಲ್ಲ. ಹಿಮಾಲಯದ ಮಾರ್ಗಗಳು ಟ್ರಕ್ಕಿಂಗ್ ಗಾಗಿ ಅತ್ಯಂತ ಪ್ರಮುಖವಾಗಿದ್ದು, ಇಲ್ಲಿ ಚಾರುಣಿಗರು ಹಿಮದ ಇಳಿಜಾರು ಪ್ರದೇಶಗಳಲ್ಲಿ ತಮ್ಮ ಜೀವನವನ್ನು ಅಪಾಯಕ್ಕೆ ಒಡ್ಡುವುದರ ಮೂಲಕ ಟ್ರಕ್ಕಿಂಗ್ ಮಾಡಬೇಕಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಟ್ರೆಕ್ಕಿಂಗ್ ರಜಾದಿನಗಳನ್ನು ಆನಂದಿಸುವುದು ಇಂದಿನ ದಿನಗಳಲ್ಲಿ ಚಾಳಿ ಎಂದೇ ಹೇಳಬಹುದು.

ದಕ್ಷಿಣ ಭಾರತವು ಕೇವಲ ತನ್ನಲ್ಲಿಯ ಸ್ಮಾರಕಗಳು ಅಥವಾ ದೇವಾಲಯಗಳಲ್ಲಿ ವಾಸ್ತುಶಿಲ್ಪ ವೈಭವವನ್ನು ಪ್ರದರ್ಶಿಸುವುದು ಮಾತ್ರವಲ್ಲದೆ, ವಿಸ್ತಾರವಾದ ವನ್ಯಜೀವಿಗಳು, ಚಹಾ ಮತ್ತು ಕಾಫಿ ತೋಟಗಳು ಮತ್ತು ಬೆಟ್ಟಗುಡ್ಡಗಾಡು ಪ್ರದೇಶಗಳನ್ನೂ ಹೊಂದಿದ್ದು, ಇವು ಸಾಹಸ ಬಯಸುವವರಿಗಾಗಿ ರಜಾದಿನಗಳಲ್ಲಿ ಅನ್ವೇಶಣೆ ಮಾಡಲು ಕೈಬೀಸಿ ಕರೆಯುತ್ತದೆ. ಮುನ್ನಾರ್‌ನ ಹುಲ್ಲುಗಾವಲುಗಳು, ಕೂರ್ಗ್‌ನ ಕಡಿದಾದ ಭೂಪ್ರದೇಶ ಅಥವಾ ಪೆರಿಯಾರ್‌ನ ಮಳೆಕಾಡುಗಳಲ್ಲಿ ಟ್ರೆಕ್ಕಿಂಗ್ ಪ್ರವಾಸವು ನಿಮಗೆ ರೋಚಕ ಅನುಭವವನ್ನು ನೀಡುತ್ತದೆ.

ದಕ್ಷಿಣ ಭಾರತದಲ್ಲಿ ಟ್ರಕ್ಕಿಂಗ್ ಮಾಡಬಹುದಾದ ಕೆಲವು ಅತ್ಯಂತ ಹೆಸರಾಂತ ಸ್ಥಳಗಳ ಪಟ್ಟಿ ಈ ಕೆಳಗಿನಂತಿವೆ

ನೀಲಗಿರಿ,ತಮಿಳುನಾಡು

ನೀಲಗಿರಿ,ತಮಿಳುನಾಡು

ನೀಲಗಿರಿ ಬೆಟ್ಟಗಳು ಅಥವಾ ಪಶ್ಚಿಮಘಟ್ಟಗಳ ಒಂದು ಭಾಗವಾಗಿರುವ ನೀಲಗಿರಿಯು ತಮಿಳುನಾಡಿನಲ್ಲಿ ನೆಲೆಸಿದ್ದು ಇದು ಕರ್ನಾಟಕ ಮತ್ತು ಕೇರಳದಲ್ಲಿ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ. ನೀಲಗಿರಿ ಜಿಲ್ಲೆಯ ಊಟಿ, ಕೋಟಗಿರಿ ಮತ್ತು ಕೂನೂರ್ ತಮಿಳುನಾಡಿನ ಅತ್ಯಂತ ಪ್ರಸಿದ್ದ ಟ್ರೆಕ್ಕಿಂಗ್ ತಾಣಗಳಾಗಿವೆ. ಆಹ್ಲಾದಕರ ಹವಾಮಾನ, ಸೌಮ್ಯವಾದ ಇಳಿಜಾರುಗಳು ಮತ್ತುಕಡಿಮೆ ನಿರ್ಬಂಧಗಳು ಚಾರಣಿಗರಿಗೆ ಸುಲಭವಾಗಿಸುತ್ತದೆ. ಏಪ್ರಿಲ್ ನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ಡಿಸೆಂಬರ್ ನೀಲಗಿರಿ ಚಾರಣಕ್ಕೆ ಸೂಕ್ತ ಸಮಯವಾಗಿದೆ ಏಕೆಂದರೆ ಈ ಸಮಯದಲ್ಲಿ ತಾಪಮಾನವು ಬಿಸಿಯಾಗಿರುವುದಿಲ್ಲ ಅಥವಾ ತುಂಬಾ ತಂಪಾಗಿಯೂ ಇರುವುದಿಲ್ಲ. ವನ್ಯಜೀವಿ ವಾರ್ಡನ್‌ನಿಂದ ಟ್ರೆಕ್ಕಿಂಗ್ ಅನುಮತಿಗಳನ್ನು ಮುಂಚಿತವಾಗಿ ನೀಡಲಾಗುತ್ತದೆ.

 ಕೂರ್ಗ್ , ಕರ್ನಾಟಕ

ಕೂರ್ಗ್ , ಕರ್ನಾಟಕ

ಕರ್ನಾಟಕದ ಕೂರ್ಗ್ ದಕ್ಷಿಣಭಾರತದಲ್ಲಿ ಟ್ರಕ್ಕಿಂಗ್ ಪ್ರವಾಸ ಮಾಡುವವರು ಹೆಚ್ಚಿನ ಮಟ್ಟದಲ್ಲಿ ಆಯ್ಕೆ ಮಾಡುವ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಕೂರ್ಗ್, ಮಳೆಗಾಲದ ತಿಂಗಳುಗಳಾದ ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳ ಹೊರತಾಗಿ ಬೇರೆ ಸಮಯದಲ್ಲಿ ಅನುಕೂಲಕರ ಹವಾಮಾನವನ್ನು ಹೊಂದಿರುತ್ತದೆ. ಜನವರಿಯಿಂದ ಮಾರ್ಚ್ ವರೆಗಿನ ತಿಂಗಳುಗಳು ಇಲ್ಲಿಗೆ ಭೇಟಿಗೆ ಸೂಕ್ತವಾದಂತಹ ಸಮಯವಾಗಿರುತ್ತದೆ. ಬ್ರಹ್ಮಗಿರಿ ಶ್ರೇಣಿಗಳು ಮತ್ತು ಪುಷ್ಪಗಿರಿ ರಜಾದಿನಗಳಲ್ಲಿ ಟ್ರಕ್ಕಿಂಗ್ ಮಾಡಲು ಸೂಕ್ತವಾದ ಸ್ಥಳವಾಗಿದೆ. ಇರುಪ್ಪು ಜಲಪಾತಗಳು ಅಬ್ಬೇ ಜಲಪಾತಗಳು ತಾಡಿಯಾಂಡಮೋಲ್ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಇವೆಲ್ಲವೂ ಟ್ರಕ್ಕಿಂಗ್ ಗೆ ಸೂಕ್ತವಾದ ಸ್ಥಳಗಳಾಗಿವೆ. ಆದರೆ ಇಲ್ಲಿ ಟ್ರಕ್ಕಿಂಗ್ ಮಾಡುವಾಗ ಹವಾಮಾನ ಪರಿಸ್ಥಿತಿಗಳು ಮತ್ತು ವಿವಿಧ ಸರೀಸೃಪಗಳು ಮತ್ತು ಕೀಟಗಳ ದಾಳಿಯ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ.

ಪೀರ್ಮೆಡೆ, ಕೇರಳ

ಪೀರ್ಮೆಡೆ, ಕೇರಳ

ಪ್ರವಾಸಿಗರು ಪೀರ್ಮೆಡೆಯನ್ನು ಕೇವಲ ಆ ಸ್ಥಳದ ಸೌಂದರ್ಯತೆಯ ಅನ್ವೇಷಣೆಗೆ ಮಾತ್ರವಲ್ಲದೆ ಚಾರಣಕ್ಕಾಗಿಯೂ ಭೇಟಿ ಕೊಡುತ್ತಾರೆ. ಇಲ್ಲಿ ಇನ್ನಿತರ ಸಾಹಸಿ ಚಟುವಟಿಕೆಗಳಾದ ಪ್ಯಾರಾಗೈಡ್ಲಿಂಗ್, ಕುದುರೆ ಸವಾರಿ ಮತ್ತು ಸೈಕ್ಲಿಂಗ್ ಕೂಡಾ ಆನಂದಿಸಬಹುದಾಗಿದೆ. ಕುಟ್ಟಿಕನಮ್, ಕಲ್ಥೊಟ್ಟಿ ಮತ್ತು ವಾಗಮೊನ್ ಕೂಡಾ ಪೀರ್ಮಡೆಗೆ ಹತ್ತಿರವಿರುವ ರಜಾದಿನಗಳನ್ನು ಕಳೆಯುವ ಟ್ರಕ್ಕಿಂಗ್ ಸ್ಥಳವೆಂದು ಗುರುತಿಸಿಕೊಳ್ಳಬಹುದಾಗಿದೆ. ಪೀರ್ಮಡೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪೀರು ಬೆಟ್ಟಗಳು ಕೂಡಾ ಸಾಹಸ ಚಾರಣದ ತಾಣವಾಗಿದೆ. ಏಪ್ರಿಲ್-ಜೂನ್ ಮತ್ತು ಸೆಪ್ಟೆಂಬರ್-ನವೆಂಬರ್ ಈ ಟ್ರೆಕ್ಕಿಂಗ್ ಪ್ರವಾಸಕ್ಕೆ ಸೂಕ್ತ ಸಮಯ.

ಅನಂತಗಿರಿ ಬೆಟ್ಟಗಳು, ಆಂಧ್ರಪ್ರದೇಶ

ಅನಂತಗಿರಿ ಬೆಟ್ಟಗಳು, ಆಂಧ್ರಪ್ರದೇಶ

ವೈಜಾಗ್ ನಲ್ಲಿರುವ ಅನಂತಗಿರಿ ಬೆಟ್ಟಗಳು ಅನುಕೂಲಕರವಾದ ಹವಾಗುಣವನ್ನು ಹೊಂದಿದ್ದು ಟ್ರಕ್ಕಿಂಗ್ ರಜಾದಿನಗಳನ್ನು ಆನಂದಿಸಲು ಸೂಕ್ತವಾಗಿದೆ. ಚಿಕ್ಕ ಬೆಟ್ಟಗಳು ಮತ್ತು ಅರಣ್ಯವು ಅನಂತಗಿರಿ ಬೆಟ್ಟಗಳನ್ನು ಸುತ್ತುವರೆದಿದ್ದು, ಇದು ಚಾರಣಿಗರಿಗೆ ಅನ್ವೇಷಿಸಲು ವಿವಿಧ ಮಾರ್ಗಗಳನ್ನು ತೆರೆಯುತ್ತದೆ. ಇಲ್ಲಿನ ಕಾಡುಗಳು ಸಾಕಷ್ಟು ದಟ್ಟವಾಗಿಲ್ಲದಿರುವುದರಿಂದ ಚಾರಣ ಮಾಡಲು ಸುಲಭವಾಗಿದೆ. ಮೊದಲ ಬಾರಿಗೆ ಚಾರಣ ಮಾಡುವವರಿಗೆ ಇದು ಸೂಕ್ತವಾಗಿದೆ. ಈ ಟ್ರೆಕ್ಕಿಂಗ್ ಪ್ರವಾಸದಲ್ಲಿ ಟ್ರೆಕ್ಕಿಂಗ್ ಹೊರತುಪಡಿಸಿ, ಕಾಡಿನ ಸೌಂದರ್ಯವನ್ನು ಸಹ ಅನ್ವೇಷಿಸಬಹುದು

ಕೊಡಚಾದ್ರಿ, ಕರ್ನಾಟಕ

ಕೊಡಚಾದ್ರಿ, ಕರ್ನಾಟಕ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಕೊಡಚಾದ್ರಿಯು ದಕ್ಷಿಣಭಾರತದಲ್ಲಿಯ ಅತ್ಯಂತ ಸಾಹಸಿ ಚಾರಣ ಮಾರ್ಗವನ್ನು ಹೊಂದಿರುವ ಸ್ಥಳಗಳಲ್ಲೊಂದಾಗಿದೆ. ಇಲ್ಲಿ ಟ್ರಕ್ಕಿಂಗ್ ಮಾಡವವರು ಉತ್ತಮವಾಗಿ ಸದೃಡತೆಯನ್ನು ಹೊಂದಿರಬೇಕಾಗುತ್ತದೆ. ಅಕ್ಟೋಬರ್ - ಫೆಬ್ರವರಿ ಅವಧಿಯಲ್ಲಿ ಇಲ್ಲಿ ಟ್ರೆಕ್ಕಿಂಗ್ ಮಾಡಬಹುದು. ಕರಿಕಟ್ಟೆ ಗೇಟ್ ಕೊಡಚಾದ್ರಿಗೆ ಚಾರಣ ಮಾರ್ಗಗಳಲ್ಲಿ ಒಂದಾಗಿದೆ. ಒಟ್ಟು 12-14 ಕಿಮೀ ದೂರವನ್ನು 7-8 ಗಂಟೆಗಳ ಒಳಗೆ ಚಾರಣ ಮಾಡಬಹುದು. ಗಣೇಶ ಗುಹಾ, ಹಿಂಡ್ಲುಮನೆ ಜಲಪಾತ ಮತ್ತು ಬೆಳಕಲ್ಲು ತೀರ್ಥವನ್ನು ಚಾರಣ ಮಾಡುವಾಗ ವೀಕ್ಷಿಸಬಹುದು. ಅರಣ್ಯ ಇಲಾಖೆಯ ಸೂಕ್ತ ಅನುಮತಿಯೊಂದಿಗೆ, ಚಾರಣಿಗರು ಇಲ್ಲಿ ಟೆಂಟ್ ಗಳಲ್ಲಿ ತಂಗಬಹುದು.

 ಮುನ್ನಾರ್, ಕೇರಳ

ಮುನ್ನಾರ್, ಕೇರಳ

ಮುನ್ನಾರ್ ದಕ್ಷಿಣ ಭಾರತದ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದಾಗಿದ್ದು ಇದು ಕೇರಳದ ಅತ್ಯಂತ ಪ್ರಮುಖವಾದ ಟ್ರಕ್ಕಿಂಗ್ ತಾಣವಾಗಿದೆ. ಮುನ್ನಾರ್ ನ ಬೆಟ್ಟಗಳ ಒಂದು ಮಾರ್ಗದಿಂದ ಚಾರಣ ಮಾಡುತ್ತಾ ಇನ್ನೊಂದು ಕಡೆಯ ದೃಶ್ಯಗಳನ್ನು ತೆರೆದಿಡುತ್ತದೆ. ಅಂಕುಡೊಂಕಾದ ಮಾರ್ಗಗಳು ಮತ್ತು ಚಹಾ ತೋಟಗಳ ನಡುವೆ ಟ್ರೆಕ್ಕಿಂಗ್ ರಜಾದಿನಗಳು ಪ್ರವಾಸವನ್ನು ಸ್ಮರಣೀಯ ಅನುಭವವನ್ನು ನೀಡುತ್ತದೆ. ಅನಮುಂಡಿಯು ಮುನ್ನಾರ್‌ನ ಅತಿ ಎತ್ತರದ ಶಿಖರವಾಗಿದೆ ಮತ್ತು ಚಾರಣಿಗರು ಹೆಚ್ಚು ಆದ್ಯತೆ ನೀಡುವಂತಹ ತಾಣವಾಗಿದೆ. ಚಹಾ ತೋಟದ ನಡುವೆ ಟ್ರೆಕ್ಕಿಂಗ್ ರಜಾದಿನಗಳು ನಿಮಗೆ ಅವಿಸ್ಮರಣೀಯ ಅನುಭವವಾಗಿ ಉಳಿಯುತ್ತದೆ.

ಚೇಂಬ್ರಾ ಶ್ರೇಣಿ, ಕೇರಳ

ಚೇಂಬ್ರಾ ಶ್ರೇಣಿ, ಕೇರಳ

ಚೇಂಬ್ರಾ ಶ್ರೇಣಿಯು ವಯನಾಡಿನ ಅತ್ಯಂತ ಎತ್ತರದ ಪರ್ವತ ಶ್ರೇಣಿಯಾಗಿದ್ದು, ಇದು ದಕ್ಷಿಣ ಭಾರತದ ಅತ್ಯಂತ ಮೆಚ್ಚಿಗೆ ಪಡೆದಂತಹ ಟ್ರಕ್ಕಿಂಗ್ ತಾಣವಾಗಿದೆ. ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿಯಿಂದ ಟ್ರೆಕ್ಕಿಂಗ್ ಉಪಕರಣಗಳು ಲಭ್ಯವಿವೆ. ಶಿಖರದ ತುದಿಯನ್ನು ತಲುಪಿದಾಗ ಇಲ್ಲಿಯವರೆಗೂ ಎಂದಿಗೂ ಬತ್ತದೇ ಇರುವ ಹೃದಯ ಆಕಾರದ ಸರೋವರವನ್ನು ಕಾಣಬಹುದು. ಶಿಖರದ ತುದಿಯಿಂದ ಇಡೀ ವಯನಾಡ್ ಜಿಲ್ಲೆಯನ್ನು ನೋಡಬಹುದು ಹಾಗೂ ನಿಸರ್ಗ ಪ್ರೇಮಿಗಳು ಚೆಂಬ್ರಾ ಶಿಖರದ ಸುತ್ತ ಮನಮೋಹಕ ದೃಶ್ಯಾವಳಿಗಳನ್ನು ವೀಕ್ಷಿಸಬಹುದು.

ಪೈತಲಮಾಲ, ಕೇರಳ

ಪೈತಲಮಾಲ, ಕೇರಳ

ಕೇರಳದ ಕಣ್ಣೂರು ಜಿಲ್ಲೆಯಲ್ಲಿದೆ. ಪೈತಲಮಲ ಕರ್ನಾಟಕದ ಗಡಿಯನ್ನು ಹಂಚಿಕೊಂಡಿದೆ. ಪಶ್ಚಿಮ ಘಟ್ಟಗಳ ಭಾಗವಾಗಿರುವುದರಿಂದ, ಗುಡ್ಡಗಾಡು ಪ್ರದೇಶವು ಛಾಯಾಗ್ರಾಹಕರು, ಪ್ರಕೃತಿ ಪ್ರಿಯರು ಮತ್ತು ಚಾರಣಿಗರನ್ನು ಆಕರ್ಷಿಸುತ್ತದೆ. ಪ್ರಕೃತಿ ಪ್ರೇಮಿಗಳು ಹಾಗೂ ಚಾರಣಿಗರು. ಪೈತಾಲಮಾಲಾವನ್ನು ಜೂನ್-ಅಕ್ಟೋಬರ್ ಅಥವಾ ಜನವರಿ-ಮಾರ್ಚ್ ನಡುವೆ ಚಾರಣ ಮಾಡಬಹುದು. ಜಿಗಣೆಗಳು ಮತ್ತು ಆನೆಗಳು ಈ ಸ್ಥಳದ ಸಾಮಾನ್ಯವಾಗಿ. ಬೆಟ್ಟದ ತುದಿಯಲ್ಲಿರುವ ವೀಕ್ಷಣಾಲಯದ ಗೋಪುರವು ಕಣಿವೆಯ ಇಳಿಜಾರಿನ ವಿಹಂಗಮ ನೋಟವನ್ನು ನೀಡುತ್ತದೆ. ನೀವು ಗೋಪುರವನ್ನು ತಲುಪಿದ ನಂತರ ದಟ್ಟವಾದ ಕಾಡು ಪ್ರಾರಂಭವಾಗುತ್ತದೆ. ಪೈತಲ್ಮಲಾಗೆ ಟ್ರೆಕ್ಕಿಂಗ್ ಪ್ರವಾಸವನ್ನು ಯೋಜಿಸಲು ಮುಂಜಾನೆ ಸೂಕ್ತ ಸಮಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X