• Follow NativePlanet
Share
» »ಕರ್ನಾಟಕದ 7 ಪೂಜ್ಯ ತೀರ್ಥಕ್ಷೇತ್ರಗಳು

ಕರ್ನಾಟಕದ 7 ಪೂಜ್ಯ ತೀರ್ಥಕ್ಷೇತ್ರಗಳು

Posted By: Manjula Balaraj Tantry

ಶತಮಾನಗಳಿಂದಲೂ ಭಾರತದ ಜನರಿಂದ ವಿವಿಧ ಬಗೆಯ ಸಂಸ್ಕೃತಿ ಮತ್ತು ಸಂಪ್ರದಾಯಯಳನ್ನು ಆಚರಿಸುತ್ತಾ ಬಂದಿದೆ. ಇದು ಬೃಹತ್ ಉತ್ಸವಗಳ ರೂಪದಲ್ಲಾಗಲಿ ಅಥವಾ ದೇವಾಲಯಗಳನ್ನು ನಿರ್ಮಿಸುವುದಾಗಲಿ ಅಥವಾ ಇನ್ನಿತರ ಯಾವುದೇ ಧಾರ್ಮಿಕ ಮಹತ್ವವುಳ್ಳ ಸ್ಥಳಗಳಲ್ಲಾಗಿರಬಹುದು ಆಚರಣೆಗಳು ನಡೆಯುತ್ತಾ ಬಂದಿವೆ. ಆದುದರಿಂದ ಕೆಲವು ಸ್ಥಳಗಳು ಅನೇಕ ದೇವಾಲಯಗಳನ್ನೊಳಗೊಂಡು ಹೆಸರು ವಾಸಿಯಾಗಿದೆ.

ಕರ್ನಾಟಕವನ್ನು ಅನೇಕ ಬಲಶಾಲಿ ಮತ್ತು ಹೆಸರುವಾಸಿಯಾದ ರಾಜವಂಶದವರು ಆಳಿದ್ದರು ಅವರಲ್ಲಿ ಮೌರ್ಯರು, ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಇತ್ಯಾದಿ ಪ್ರಮುಖವಾದುದು. ಈ ಆಡಳಿತಗಾರರು ತಮ್ಮ ಹಿಂದೆ ತಾವು ಕಟ್ಟಿಸಿದ ಕೆಲವು ಸುಂದರವಾದ ವಾಸ್ತಿಶಿಲ್ಪಗಳನ್ನು ಬಿಟ್ಟು ಹೋಗಿದ್ದಾರೆ.

ಅವುಗಳು ಇಂದು ಪ್ರಸಿದ್ದ ಯಾತ್ರಾ ಸ್ಥಳಗಳಾಗಿ ಗುರುತಿಸಲ್ಪಡುತ್ತಿವೆ. ಪ್ರತೀ ವರ್ಷ ಸಾವಿರಾರು ಯಾತ್ರಿಗಳು ಇಂತಹ ಸ್ಥಳಗಳಿಗೆ ಭೇಟಿಕೊಡಲು ಯೋಜಿಸುತ್ತಾರೆ. ನಿಮ್ಮ ರಜಾದಿನಗಳಲ್ಲಿ ಆಧ್ಯಾತ್ಮಿಕ ಅನುಭವಕ್ಕಾಗಿ, ಕರ್ನಾಟಕದ ಈ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಿ.

ಧರ್ಮಸ್ಥಳ

ಧರ್ಮಸ್ಥಳ

ನೇತ್ರಾವತಿ ದಡದಲ್ಲಿ ನೆಲೆಸಿರುವ ಧರ್ಮಸ್ಥಳವು ಒಂದು ಪ್ರಸಿದ್ದ ದೇವಾಲಯವಾಗಿದೆ. ಇದು ಬೆಂಗಳೂರಿನಿಂದು ಸುಮಾರು 300 ಕಿ.ಮೀ ದೂರದಲ್ಲಿದ್ದು ಇಲ್ಲಿಯ ಧರ್ಮಸ್ಥಳ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ದೇವರುಗಳಾದ ಶಿವ ಚಂದ್ರನಾಥ ಮಂಜುನಾಥ ಇತ್ಯಾದಿ ದೇವರುಗಳಿಗೆ ಅರ್ಪಿತವಾಗಿದೆ.

ಧರ್ಮಸ್ಥಳಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ನವೆಂಬರ್ ನಿಂದ ಡಿಸೆಂಬರ್ ವರೆಗೆ ಈ ಸಮಯದಲ್ಲಿ ಇಲ್ಲಿ ಲಕ್ಷದೀಪೋತ್ಸವವೆಂಬ ದೊಡ್ಡ ವಾರ್ಷಿಕ ಉತ್ಸವವನ್ನು ನಡೆಸಲಾಗುತ್ತದೆ.

PC: Dinesh Kumar (DK)


ಪಟ್ಟದಕಲ್ಲು

ಪಟ್ಟದಕಲ್ಲು

ಪಟ್ಟದಕಲ್ಲು ಉತ್ತರ ಕರ್ನಾಟಕದಲ್ಲಿದೆ. ಈ ದೇವಾಲಯವು ಮಲಪ್ರಭಾ ನದಿಯ ದಡದಲ್ಲಿ ನೆಲೆಸಿದೆ. ಇಲ್ಲಿಯ ಸುಂದರವಾದ ವಾಸ್ತುಶಿಲ್ಪ ಶೈಲಿಯಿಂದಾಗಿ ಇದು ಯುನೆಸ್ಕೋದ ಪಾರಂಪರಿಕ ತಾಣವೆನಿಸಿದೆ. ಚಾಲುಕ್ಯ ರಾಜವಂಶದವರಿಂದ ನಿರ್ಮಿಸಲ್ಪಟ್ಟ ಈ ದೇವಲಯಗಳು ದ್ರಾವಿಡ ಹಾಗೂ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.

ಇಲ್ಲಿ ಒಟ್ಟು 10 ದೇವಾಲಯಗಳಿದ್ದು ಎಲ್ಲವೂ ಶಿವ ದೇವರಿಗೆ ಅರ್ಪಿತವಾದುದಾಗಿದೆ. ಗಲಗನಾಥ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಇತ್ಯಾದಿ ದೇವಾಲಯಗಳಿಗೆ ಭೇಟಿಕೊಡಿ. ಮತ್ತು ಈ ದೇವಾಲಯಗಳ ಮೇಲೆ ಕೆತ್ತನೆಗಳು ಮತ್ತು ವಿವರಗಳು ಪ್ರಶಂಸೆಗೆ ಯೋಗ್ಯವಾದುದಾಗಿದೆ.

PC: Mukul Banerjee


ಗೋಕರ್ಣ

ಗೋಕರ್ಣ

ಕರ್ನಾಟಕದ ಗಡಿ ಭಾಗದಲ್ಲಿ ನೆಲೆಗೊಂಡಿರುವ ಗೋಕರ್ಣ ಕರ್ನಾಟಕದ ಒಂದು ಪ್ರಸಿದ್ಧ ದೇವಾಲಯ ನಗರವಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ದೇವಾಲಯ ಮಾತ್ರವಲ್ಲದೆ ಇಲ್ಲಿನ ಸುಂದರ ಕಡಲ ತೀರಗಳಿಂದಾಗಿ ಇನ್ನೂ ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದೆ. ಇಲ್ಲಿ ಶಿವ ದೇವರಿಗೆ ಸಮರ್ಪಿತವಾದ ಮಹಾಬಲೇಶ್ವರ ದೇವಾಲಯವು ಮುಖ್ಯವಾದುದಾಗಿದೆ.

ಗೋಕರ್ಣಕ್ಕೆ ಭೇಟಿ ಕೊಡುವಾಗ ನೋಡಬಹುದಾದ ಇತರ ದೇವಾಲಯಗಳೆಂದರೆ ಭದ್ರಕಾಳಿ ದೇವಾಲಯ, ವೆಂಕಟರಮಣ ದೇವಾಲಯ, ಮಹಾ ಗಣಪತಿ ದೇವಾಲಯ ಇತ್ಯಾದಿಗಳು. ಅಲ್ಲದೆ ಗೋಕರ್ಣದಲ್ಲಿ ಓಂ ಬೀಚ್, ಕುಡ್ಲೆ ಬೀಚ್ ಮುಂತಾದ ಕಡೆ ನೀವು ಕಡಲ ಭೋರ್ಗರೆತ, ಜಿಗಿತಗಳಲ್ಪಾ
ಲ್ಗೊಳ್ಳಬಹುದು.

PC: Saransh Gupta

ಉಡುಪಿ

ಉಡುಪಿ

ಉಡುಪಿಯು ಕರಾವಳಿಯ ಒಂದು ಸುಂದರವಾದ ಪಟ್ಟಣವಾಗಿದ್ದು ಇದು ಇಲ್ಲಿಯ ದೇವಾಲಯಗಳು ಮತ್ತು ಅನನ್ಯ ಪಾಕ ಪದ್ದತಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ಹೆಸರುವಾಸಿಯಾದ ದೇವಾಲಯವೆಂದರೆ ಅದು ಕೃಷ್ಣದೇವಾಲಯ ಇದು ಉಡುಪಿ ಶ್ರೀ ಕೃಷ್ಣ ಮಠವೆಂದೂ ಕರೆಯಲ್ಪಡುತ್ತದೆ. ಇಲ್ಲಿಯ ದಿನ ನಿತ್ಯದ ಸೇವೆಯನ್ನು ಅಷ್ಟ ಮಠಗಳು ನಿರ್ವಹಿಸುತ್ತವೆ.

ದೈವಾರ್ಷಿಕ ಉತ್ಸವವಾದ ಪರ್ಯಾಯವು ಜನವರಿ ತಿಂಗಳಲ್ಲಿ ಇಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ಸಹರು ಜನ ಭಕ್ತರು ಇಲ್ಲಿ ಕಿಕ್ಕಿರಿದಿರುತ್ತಾರೆ. ಈ ಪಟ್ಟಣಕ್ಕೆ ಭೇಟಿಯ ಸಂಧರ್ಭದಲ್ಲಿ ಇಲ್ಲಿಯ ರುಚಿಕರವಾದ ತಿನಿಸುಗಳನ್ನು ಪ್ರಯತ್ನಿಸಿ ಮತ್ತು ಕಾಪು ಬೀಚ್, ಮಲ್ಪೆಬೀಚ್, ಸೈಂಟ್ ಮೇರೀಸ್ ದ್ವೀಪ ಮುಂತಾದ ಕಡೆ ಭೇಟಿ ನೀಡಿ.

PC: Rayabhari


ಶ್ರವಣಬೆಳಗೊಳ

ಶ್ರವಣಬೆಳಗೊಳ

ಶ್ರವಣಬೆಳಗೊಳವು ಒಂದು ಜೈನ ಯಾತ್ರಾ ಸ್ಥಳವಾಗಿದ್ದು ಇದು ಗೊಮ್ಮಟೇಶ್ವರ ವಿಗ್ರಹ ಇರುವ ಸ್ಥಳದ ನೆಲೆಯಾಗಿದೆ. ಈ ದೊಡ್ಡ ಏಕಶಿಲಾ ಮೂರ್ತಿಯು 57 ಅಡಿ ಎತ್ತರವಿದ್ದು ವಿಂದ್ಯಾಗಿರಿ ಬೆಟ್ಟದ ಮೇಲಿದೆ.

ಈ ಪ್ರತಮೆಯ ಪ್ರಮುಖ ಆಕರ್ಷಣೆಯೆಂದರೆ ಮಹಾಮಸ್ತಕಭಿಷೇಕ, ಇದು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಉತ್ಸವವಾಗಿದೆ. ಈ ಸಮಯದಲ್ಲಿ, ಗೊಮ್ಮಟೇಶ್ವರನ ಪ್ರತಿಮೆಯನ್ನು ಕೇಸರಿ, ತುಪ್ಪ, ಹಾಲು ಇತ್ಯಾದಿಗಳಿಂದ ತಾಜಾವಾಗಿಟ್ಟುಕೊಳ್ಳುವುದಕ್ಕಾಗಿ ಸ್ನಾನ ಮಾಡಿಸಲಾಗುತ್ತದೆ.ಮುಂಬರುವ ಅಭಿಷೇಕವು ಫೆಬ್ರವರಿ 2018 ರ ಸಮಯದಲ್ಲಿ ನಡೆಸಲಾಗುತ್ತದೆ.

PC: Ananth H V

ಶೃಂಗೇರಿ

ಶೃಂಗೇರಿ

ಪ್ರಸಿದ್ಧ ಹಿಂದೂ ದೇವತಾಶಾಸ್ತ್ರಜ್ಞ ಆದಿ ಶಂಕರರಿಂದ ಮೊದಲು ಸ್ಥಾಪಿಸಿದ ಸ್ಥಳವಾದ ಶೃಂಗೇರಿಯು ಪೂಜ್ಯ ಪಟ್ಟವಾಗಿದೆ.ಅವರು ಅದ್ವೈತ ವೇದಾಂತ ತತ್ತ್ವವನ್ನು ಸ್ಥಾಪಿಸಿದರು.

ಶೃಂಗೇರಿ ಯಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ವಿದ್ಯಾಶಂಕರ ದೇವಸ್ಥಾನ, ಶಾರದಾಂಬ ದೇವಸ್ಥಾನ, ಸಿರಿಮಾನೆ ಜಲಪಾತ ಇತ್ಯಾದಿಗಳು ಸೇರಿವೆ.ಇದು ಜೈನ ದೇವಾಲಯಕ್ಕೆ ನೆಲೆಯಾಗಿದೆ, ಇದು ಪಟ್ಟಣದ ಹೃದಯಭಾಗದಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ನೆಲೆಯಾಗಿದೆ.

PC: Amar8822


ಮುರುಡೇಶ್ವರ

ಮುರುಡೇಶ್ವರ

ಮುರುಡೇಶ್ವರವು ಅರಬ್ಬಿ ಸಮುದ್ರದ ಕರಾವಳಿಯಲ್ಲಿ ನೆಲೆಸಿದೆ.ಈ ಪಟ್ಟಣವು ಶಿವನ ಎರಡನೇ ಅತ್ಯಂತ ಎತ್ತರ ಪ್ರತಿಮೆಯ ನೆಲೆಯಾಗಿದೆ.ಈ ದೇವಸ್ಥಾನವು 123 ಅಡಿ ಎತ್ತರದಲ್ಲಿದೆ ಮತ್ತು 20 ಅಂತಸ್ತಿನ ಗೋಪುರವನ್ನು ನಿರ್ಮಿಸಿದೆ.ಕರ್ನಾಟಕ ಮತ್ತು ಕೇರಳದ ಪ್ರವಾಸಿಗರಿಗೆ ಇದೊಂದು ದೊಡ್ಡ ಪ್ರವಾಸಿ ತಾಣವಾಗಿದೆ.

ಮುರುಡೇಶ್ವರದಲ್ಲಿ ನೀವು ಭೇಟಿ ನೀಡಬೇಕಾದ ಕೆಲವು ಸ್ಥಳಗಳಲ್ಲಿ ಕೆಲವು ಪ್ರಶಾಂತ ಮುರುಡೇಶ್ವರ ಬೀಚ್, ನೇತ್ರನಿ ದ್ವೀಪ, ಮುರುಡೇಶ್ವರ ಕೋಟೆ, ಇತ್ಯಾದಿಗಳನ್ನು ಹೆಸರಿಸಬಹುದು.

PC: Sarangib


ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ