Search
  • Follow NativePlanet
Share
» »ನಿಮ್ಮ ಸಂಗಾತಿಯೊಂದಿಗೆ ಏಕಾಂತವಾಗಿ ಕಾಲ ಕಳೆಯಲು ಸೂಕ್ತವಾದ ಸ್ಥಳಗಳು

ನಿಮ್ಮ ಸಂಗಾತಿಯೊಂದಿಗೆ ಏಕಾಂತವಾಗಿ ಕಾಲ ಕಳೆಯಲು ಸೂಕ್ತವಾದ ಸ್ಥಳಗಳು

ನೀವು ನಿಮ್ಮ ಪ್ರೀತಿ ಪಾತ್ರದವರೊಂದಿಗೆ ಏಕಾಂತವಾಗಿ ಸಮಯ ಕಳೆಯಬೇಕು ಎಂದು ಇಷ್ಟಪಡುವುದು ಸಹಜ. ಬೆಂಗಳೂರಿನಂತಹ ನಗರದಲ್ಲಿ ಜನಸಂದಣಿಯ ಮಧ್ಯೆ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಆಗುತ್ತಿಲ್ಲ.

ನೀವು ನಿಮ್ಮ ಪ್ರೀತಿ ಪಾತ್ರದವರೊಂದಿಗೆ ಏಕಾಂತವಾಗಿ ಸಮಯ ಕಳೆಯಬೇಕು ಎಂದು ಇಷ್ಟಪಡುವುದು ಸಹಜ. ಬೆಂಗಳೂರಿನಂತಹ ನಗರದಲ್ಲಿ ಜನಸಂದಣಿಯ ಮಧ್ಯೆ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಆಗುತ್ತಿಲ್ಲ. ಒಂದು ಸುಂದರ ಪ್ರದೇಶಕ್ಕೆ ಹೋಗಿ ಅಮೂಲ್ಯ ಕ್ಷಣವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯಬೇಕು, ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭುತಿ ಪಡೆಯಬೇಕು ಎಂದು ನಿಮ್ಮ ಮನಸ್ಸು ಹಾತೊರೆಯುತ್ತಿರುತ್ತದೆ. ಶಾಂತವಾದ ವಾತಾವಣ, ಹಚ್ಚ ಹಸಿರಿನ ಸೌಂದರ್ಯ, ತಂಪಾದ ಗಾಳಿ ಇಂತಹ ಪ್ರಾಕೃತಿಕ ಸೊಬಗಿನ ಮಧ್ಯೆ ನಿಮ್ಮ ಸಂಗಾತಿಯೊಂದಿಗೆ ಇರಲು ಸ್ಥಳಗಳ ಅನ್ವೇಷಣೆ ಮಾಡುತ್ತಿದ್ದರೆ. ಅಂತಹ ಪ್ರದೇಶದ ಬಗ್ಗೆ ಪ್ರಸ್ತುತ ಲೇಖನದಲ್ಲಿ ನಿಮ್ಮ ಏಕಾಂತಕ್ಕೆ ಭಂಗ ಭಾರದಂತಹ ಕೆಲವು ಸ್ಥಳಗಳ ಬಗ್ಗೆ ತಿಳಿಯಿರಿ.

1.ಹೆಬ್ಬಾಳ ಸರೋವರ

ಹೆಬ್ಬಾಳ ಸರೋವರ

PC:कोल्हापुरी
ಹೆಬ್ಬಾಳದಲ್ಲಿ ಸುಂದರವಾದ ಸರೋವರವಿದೆ. ಈ ಸರೋವರಕ್ಕೆ ಹಲವಾರು ನವ ದಂಪತಿಗಳು, ಪ್ರೇಮಿಗಳು ಭೇಟಿ ನೀಡುತ್ತಿರುತ್ತಾರೆ. ಈ ಸರೋವರದಲ್ಲಿ ಹಲವಾರು ಬಗೆಯ ಪಕ್ಷಿಗಳನ್ನು ಕಾಣಬಹುದು. ಈ ಪಕ್ಷಿಗಳ ಇಂಪಾದ ಶಬ್ದ ನಿಮ್ಮನ್ನು ಮತ್ತಷ್ಟು ಆನಂದಮಯವಾಗಿರುವಂತೆ ಮಾಡುತ್ತದೆ. ಇಲ್ಲಿ ಹಚ್ಚ ಹಸಿರಿನ ಸೌಂದರ್ಯ, ಎತ್ತರವಾದ ಮರಗಳು, ಸರೋವರದ ನಿನಾದ, ಸೂರ್ಯನ ಸುಂದರ ಕಿರಣಗಳ ಮಧ್ಯೆ ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಕಾಲ ಕಳೆಯಲು ಉತ್ತಮವಾದ ಸ್ಥಳ ಇದಾಗಿದೆ. ಬೆಂಗಳೂರಿನಿಂದ ಈ ಸರೋವರಕ್ಕೆ ಕೇವಲ 12 ಕಿ,ಮೀ ಯಷ್ಟು ಅಂತರದಲ್ಲಿದೆ.

2. ನಂದಿ ಬೆಟ್ಟ

ನಂದಿ ಬೆಟ್ಟ

PC:.Ravikantibi67
ಅತ್ಯಂತ ರೋಮಾಂಚನಕಾರಿ ಸ್ಥಳದಲ್ಲಿ ನಂದಿಬೆಟ್ಟ ಆಗ್ರ ಸ್ಥಾನದಲ್ಲಿದೆ. ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುವ ಸುಂದರ ತಾಣ ಇದಾಗಿದೆ. ನವ ವಿವಾಹಿತರು, ಸ್ನೇಹಿತರು, ಪ್ರೇಮಿಗಳು ಈ ಬೆಟ್ಟಗಳಲ್ಲಿ ಅಡ್ಡಾಡಲು ಈ ನಂದಿ ಬೆಟ್ಟಕ್ಕೆ ಭೇಟಿ ಕೊಡುತ್ತಿರುತ್ತಾರೆ. ಈ ಪ್ರಕೃತಿಯ ಸೌಂದರ್ಯವು ದೇವರು ನೀಡಿರುವ ಬಳುವಳಿ. ನಿಮ್ಮ ಸಂಗಾತಿಯೊಂದಿಗೆ ಇಲ್ಲಿನ ಬೆಟ್ಟಗಳು, ಸುತ್ತಲೂ ಎತ್ತರದ ಮರಗಳು, ತಂಪಾದ ಗಾಳಿ ಸವಿಯುವ ಸದಾವಕಾಶ ನಿಮ್ಮದು ಮಾಡಿಕೊಳ್ಳಿ. ಬೆಂಗಳೂರಿನಿಂದ ಈ ಬೆಟ್ಟಕ್ಕೆ ಕೇವಲ 61 ಕಿ,ಮೀ ನಷ್ಟು ಅಂತರದಲ್ಲಿದೆ.

3.ಲುಂಬಿನಿ ಗಾರ್ಡನ್

ಲುಂಬಿನಿ ಗಾರ್ಡನ್

PC:Andy Kaye
ಲುಂಬಿನಿ ಗಾರ್ಡನ್ ಅತ್ಯಂತ ರಮಣೀಯವಾದ ಸ್ಥಳವಾಗಿದ್ದು, ನಿಮ್ಮ ಪ್ರೀತಿ ಪಾತ್ರದವರೊಂದಿಗೆ ಆನಂದಮಯ ಕ್ಷಣಗಳನ್ನು ಕಳೆಯಬುಹುದು. ಇಲ್ಲಿ ಪರಿಸರ ಸ್ನೇಹಿ, ಬೋಟಿಂಗ್ ಪಾರ್ಕ್, ಕೃತಕವಾಗಿ ನಿರ್ಮಾಣ ಮಾಡಲಾಗಿರುವ ಬೀಚ್‍ಗಳಿವೆ. ಹಲವು ಮನಂರಂಜನೆಗಳ ಹಬ್ಬ ಈ ಲುಂಬಿನಿ ಗಾರ್ಡನ್ ನಿಮಗೆ ಒದಗಿಸುತ್ತದೆ. ಈ ಎಲ್ಲಾ ಮನರಂಜನೆಯನ್ನು ಸವಿಯುತ್ತಾ ನಿಮ್ಮ ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ನಿಮ್ಮದಾಗಲಿ. ಈ ಲುಂಬಿನಿ ಗಾರ್ಡನ್ ಹೆಬ್ಬಾಳದ ಸಮೀಪದಲ್ಲಿದೆ. ಒಮ್ಮೆ ಹೋಗಿ ಬನ್ನಿ.

4.ತುಟ್ಟಿಕಲ್ಲು ಫಾಲ್ಸ್

.ತುಟ್ಟಿಕಲ್ಲು ಫಾಲ್ಸ್

PC:Manjukirans
ತುಟ್ಟಿಕಲ್ಲು ಫಾಲ್ಸ್‍ನ್ನು ಟಿ.ಕೆ ಫಾಲ್ಸ್ ಎಂದು ಸಹಾ ಕರೆಯುತ್ತಾರೆ. ಈ ಜಲಪಾತವು ಬೆಂಗಳೂರಿನ ಬಳಿ 25 ಕಿ,ಮೀನಷ್ಟು ಅಂತರದಲ್ಲಿ ಈ ತುಟ್ಟಿಕಲ್ಲು ಫಾಲ್ಸ್ ಇದೆ. ಈ ಜಲಪಾತಕ್ಕೆ ಭೇಟಿ ಕೊಡಲು ಮುಂಗಾರಿನ ಸಮಯ ಅತ್ಯಂತ ಪ್ರಶಸ್ತವಾದುದು. ಈ ಜಲಪಾತದಲ್ಲಿ ಸುತ್ತಲು ಹಸಿರಿನಿಂದ ಕೂಡಿದ ವಾತಾವಣವಿರುವುದರಿಂದ ಇವುಗಳ ಮಧ್ಯೆ ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಕಾಲ ಕಳೆಯಲು ಇದೊಂದು ಸುಯೊಗವೇ ಸರಿ.

5.ಲಾಲ್ ಭಾಗ್ ಗಾರ್ಡನ್

ಲಾಲ್ ಭಾಗ್ ಗಾರ್ಡನ್

PC:Melanie M
ಲಾಲ್ ಭಾಗ್ ಬೆಂಗಳೂರಿನಲ್ಲಿರುವ ಜನರಿಗೆ ಸಾಮಾನ್ಯವಾಗಿ ಗೊತ್ತೆ ಇರುತ್ತದೆ. ಈ ಲಾಲ್ ಭಾಗ್ ಬೆಂಗಳೂರಿನ ಒಂದು ಆಕರ್ಷಣೆಯ ತಾಣ. ಇಲ್ಲಿ ಗಾಜಿನ ಮನೆ ಅತ್ಯಂತ ಪ್ರಸಿದ್ದವಾದುದು. ಇಲ್ಲಿ ಹಲವಾರು ಬಗೆಯ ಮರಗಳು, ಸಸ್ಯಗಳು ಇದ್ದು ಮನಸ್ಸಿಗೆ ಮುದ ನೀಡುತ್ತದೆ. ಇಂತಹ ವಾತಾರಣದಲ್ಲಿ ಏಕಾಂತವಾಗಿ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಸೂಕ್ತವಾದ ಸ್ಥಳ ಬೇರೊಂದಿಲ್ಲ.

6.ಕಬ್ಬನ್ ಪಾರ್ಕ್

.ಕಬ್ಬನ್ ಪಾರ್ಕ್

PC:Kavya Bhat
ಕಬ್ಬನ್ ಪಾರ್ಕ್ ಕೂಡ ಬೆಂಗಳೂರಿನ ಮತ್ತೊಂದು ಆರ್ಕಷಣೀಯವಾದ ಸ್ಥಳ. ಇಲ್ಲಿಗೆ ಏಕಾಂತವಾಗಿ ಕಾಲ ಕಳೆಯಲು ಹಲವಾರು ಪ್ರೇಮಿಗಳು ದಿನನಿತ್ಯ ಕಾಣಬಹುದು. ಬೆಂಗಳೂರಿಗೆ ಇದು ಗಾರ್ಡನ್ ಸಿಟಿ. ಈ ಪಾರ್ಕ್‍ನಲ್ಲಿ ವಿಧವಿಧವಾದ ಸಸ್ಯಗಳು, ಮರಗಳ ತಂಪಾದ ಗಾಳಿಯ ಮಧ್ಯೆ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಸೂಕ್ತವಾದ ಸ್ಥಳ ಇದಾಗಿದೆ. ಬೆಂಗಳೂರಿನ ಕಸ್ತೂರಿ ಬಾ ರೋಡ್ ಸಂಪಂಗಿ ರಾಮ ನಗರದಲ್ಲಿ ಕಬ್ಬನ್ ಪಾರ್ಕ್ ಇದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಪ್ರವೇಶಕ್ಕೆ ಅನುಮತಿ ಇದೆ.

7.ಉಲ್‍ಸೂರ್ ಸರೋವರ

ಉಲ್‍ಸೂರ್ ಸರೋವರ

PC:Saad Faruque
ಉಲ್‍ಸೂರ್ ಸರೋವರವು ಅತ್ಯಂತ ಪ್ರಸಿದ್ದವಾದ ಪ್ರವಾಸಿ ತಾಣವಾಗಿದೆ. ಮುಖ್ಯವಾಗಿ ಜೋಡಿಗಳಿಗೆ. ಇಲ್ಲಿ ಹಲವಾರು ನೋಡಬೇಕಾಗಿರುವ ಸ್ಥಳಗಳಿದ್ದು ನಿಮ್ಮ ಸಂಗಾತಿಯೊಂದಿಗೆ ಸುತ್ತಾಡಬಹುದು. ಈ ಸರೋವರದ ಸಮೀಪ ಸುಬ್ರಮಣ್ಯನ ದೇವಾಲಯ, ಪಾರ್ಕ್‍ಗಳಿದ್ದು ಜೋಡಿಗಳಿಗೆ ಇದೊಂದು ಅದ್ಬುತವಾದ ಸ್ಥಳ. ಇಲ್ಲಿ ನಿಮ್ಮ ಸಂಗಾತಿಯೊಂದಿಗೆ ಬೋಟ್ ರೈಡ್ ಕೂಡ ಹೋಗಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X