Search
  • Follow NativePlanet
Share
» »ತಾಜ್ ಮಹಲ್ ಹೋಲುವ ಈ ಪ್ರತಿಕೃತಿಗಳನ್ನು ನೀವೂ ನೋಡಿದ್ದೀರಾ?

ತಾಜ್ ಮಹಲ್ ಹೋಲುವ ಈ ಪ್ರತಿಕೃತಿಗಳನ್ನು ನೀವೂ ನೋಡಿದ್ದೀರಾ?

ಮೊಘಲ್ ಚಕ್ರವರ್ತಿ ಷಹಜಹಾನ್ ಸಿಂಹಾಸನವೇರಿದ ನಾಲ್ಕೇ ವರ್ಷಗಳಲ್ಲಿ ಪತ್ನಿ ಮುಮ್ತಾಜ್ ನಿಧನರಾದರು. ಮುಮ್ತಾಜ್ ಸಾಯುವ ಕೊನೆಯ ಕ್ಷಣಗಳಲ್ಲಿ, ಜಗತ್ತಿನಲ್ಲಿ ಎಲ್ಲಿಯೂ ಇಲ್ಲದಂತಹ ಸುಂದರವಾದ ಅರಮನೆ ಮತ್ತು ಉದ್ಯಾನವನ್ನು ಕನಸಿನಲ್ಲಿ ನೋಡಿದ್ದೇನೆ ಎಂದು ಷಹಜಹಾನ್'ಗೆ ಹೇಳಿದರು.

ಹಾಗೆಯೇ ನನ್ನ ನೆನಪಿಗಾಗಿ ಅಂತಹ ಸಮಾಧಿಯನ್ನು ನಿರ್ಮಿಸಬೇಕೆಂದು ವಿನಂತಿಸಿಕೊಂಡರು. ಆ ನಂತರವೇ ತಾಜ್ ಮಹಲ್ ಅಡಿಪಾಯವನ್ನು ಹಾಕಲಾಯಿತು ಎಂದು ಮೂಲಗಳು ಹೇಳುತ್ತವೆ. ಷಹಜಹಾನ್‌'ನ ಹೆಸರು ಅನೇಕ ಮಹಿಳೆಯರೊಂದಿಗೆ ಕೇಳಿಬಂದರೂ, ಅವರು ಮುಮ್ತಾಜ್ ಅನ್ನು ಹೆಚ್ಚು ಪ್ರೀತಿಸುತ್ತಿದ್ದರು.

ಪ್ರೀತಿಯ ಸಂಕೇತವಾದ 'ತಾಜ್ ಮಹಲ್' ಅನ್ನು 17 ನೇ ಶತಮಾನದಲ್ಲಿ ಷಹ ಜಹಾನ್ ತನ್ನ ಹೆಂಡತಿ ಮುಮ್ತಾಜ್‌'ಗಾಗಿ ನಿರ್ಮಿಸಿದನು. ತಾಜ್ ಮಹಲ್ ನಿರ್ಮಿಸಲು ಸುಮಾರು 22 ವರ್ಷಗಳೇ ಬೇಕಾದವು. ಈಗ ಇದು ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದೆ. ಅಂದಹಾಗೆ 'ತಾಜ್ ಮಹಲ್' ಅನ್ನು ಹೋಲುವ ಪ್ರತಿಕೃತಿಗಳು ನಮ್ಮ ಭಾರತದಲ್ಲೂ ಇವೆ ಎಂಬ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಹೌದು, ಒಂದಲ್ಲ, ಎರಡಲ್ಲ 'ತಾಜ್ ಮಹಲ್' ಬಹು ಪ್ರತಿಕೃತಿಗಳು ನಮ್ಮ ದೇಶದ ವಿವಿಧ ಭಾಗಗಳಲ್ಲಿದ್ದು, ಅವುಗಳು ಎಲ್ಲೆಲ್ಲಿವೆ?, ಇತಿಹಾಸವೇನು? ಮುಂದೆ ತಿಳಿಯೋಣ ಬನ್ನಿ...

ಬೀಬಿ ಕಾ ಮಕ್ಬರಾ

ಬೀಬಿ ಕಾ ಮಕ್ಬರಾ

‘ಬೀಬಿ ಕಾ ಮಕ್ಬರಾ' ಔರಂಗಾಬಾದ್ ನಗರದ ಹೃದಯ ಭಾಗದಿಂದ ಸುಮಾರು 5 ಕಿಮೀ ದೂರದಲ್ಲಿದೆ. ಔರಂಗಾಬಾದ್‌'ನಲ್ಲಿ ರಾಜಕುಮಾರ ಅಜಮ್ ಷಾ ‘ಬೀಬಿ ಕಾ ಮಕ್ಬರಾ' ಅಥವಾ ‘ರಬಿಯಾ ದುರಾನಿ'ಯನ್ನು 1651-61 ರಲ್ಲಿ ನಿರ್ಮಿಸಿದನು. ಡೆಕ್ಕನ್‌'ನ ತಾಜ್ ಎಂದೂ ಕರೆಯಲ್ಪಡುವ ಇದನ್ನು ಔರಂಗಜೇಬನ ಹಿರಿಯ ಮಗನಾದ ಅಜಮ್ ಷಾ, ತನ್ನ ಪ್ರೀತಿಯ ತಾಯಿ ದಿಲ್ರಾಸ್ ಬಾನು ಬೇಗಂ ಅವರ ನೆನಪಿಗಾಗಿ ನಿರ್ಮಿಸಿದನು.

ಈ ಸ್ಮಾರಕವು ತಾಜ್ ಮಹಲ್ ಅನ್ನು ಹೋಲುತ್ತದೆ. ಕುತೂಹಲಕಾರಿ ವಿಷಯವೆಂದರೆ ಇದನ್ನು ತಾಜ್ ಮಹಲ್'ನ ಪ್ರಮುಖ ವಾಸ್ತುಶಿಲ್ಪಿ ಉಸ್ತಾದ್ ಅಹ್ಮದ್ ಲಹೌರಿ ಅವರ ಮಗ ನಿರ್ಮಿಸಿದ್ದಾನೆ. ಇಂದು ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳಲ್ಲಿ ಇದು ಒಂದಾಗಿದೆ. ಬೀಬಿ ಕಾ ಮಕ್ಬರಾಗೆ ಅಕ್ಟೋಬರ್ - ಮಾರ್ಚ್ ಭೇಟಿ ನೀಡಲು ಉತ್ತಮ ಸಮಯ.

ಮಿನಿ ತಾಜ್ ಮಹಲ್

ಮಿನಿ ತಾಜ್ ಮಹಲ್

ಇದು ಸೌಂದರ್ಯದಲ್ಲಿ ಮೂಲ ತಾಜ್ ಮಹಲ್‌ ಅನ್ನು ಹೋಲುವುದಿಲ್ಲ. ಆದರೆ ಕಟ್ಟಿಸಿರುವ ಉದ್ದೇಶ, ಭಾವನೆಗಳು ಹೋಲಿಕೆಯಾಗುತ್ತವೆ. ಹೌದು, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಮಿನಿ ತಾಜ್ ಮಹಲ್ ಅನ್ನು ಫೈಜುಲ್ ಹಸನ್ ಖಾದ್ರಿ ಎಂಬ 81 ವರ್ಷದ ನಿವೃತ್ತ ಪೋಸ್ಟ್‌ಮಾಸ್ಟರ್ 2011 ರಲ್ಲಿ ಕಟ್ಟಿಸಿದನು. ತನ್ನ ಪ್ರೀತಿಯ ಪತ್ನಿ ಕ್ಯಾನ್ಸರ್‌'ನಿಂದ ಮರಣಹೊಂದಿದಳು. ಆ ನಂತರ ಅವಳ ನೆನಪಿಗಾಗಿ ಈ ಮಹಲ್ ಅನ್ನು ಕಟ್ಟಿಸಲಾಯಿತು.

ಈ ಮಿನಿ ತಾಜ್ ಮಹಲ್ ಅನ್ನು ಕಟ್ಟಲು ಫೈಜುಲ್ ಹಸನ್ ಖಾದ್ರಿ ತನ್ನ ಉಳಿತಾಯದ ಹಣ ಮತ್ತು ಕುಟುಂಬದ ಚರಾಸ್ತಿಯನ್ನು ಖರ್ಚು ಮಾಡಿದ ಎನ್ನಲಾಗಿದೆ. 1953 ರಲ್ಲಿ ಖಾದ್ರಿ ವಿವಾಹವಾದರು. 2011 ರಲ್ಲಿ ಅವರ ಪತ್ನಿ ಗಂಟಲು ಕ್ಯಾನ್ಸರ್'ನಿಂದ ನಿಧನರಾದರು. ನಂತರ ಇವರು ತಮ್ಮ ಪ್ರೀತಿಯ ಹೆಂಡತಿಯ ಸ್ಮರಣೆಯನ್ನು ಸ್ಮಾರಕದ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸಲು ಮಿನಿ ತಾಜ್‌ ಕಟ್ಟಲು ನಿರ್ಧರಿಸಿದರು.

ಶಹಜಾದಿ ಕಾ ಮಕ್ಬರಾ

ಶಹಜಾದಿ ಕಾ ಮಕ್ಬರಾ

ಲಕ್ನೋದ ಚೋಟಾ ಇಮಾಂಬರಾ ಕಾಂಪ್ಲೆಕ್ಸ್'ನಲ್ಲಿರುವ ‘ಶಹಜಾದಿ ಕಾ ಮಕ್ಬರಾ'ವನ್ನು 1660 ರಲ್ಲಿ ನಿರ್ಮಿಸಲಾಯಿತು. ‘ಶಹಜಾದಿ ಕಾ ಮಕ್ಬರಾ' ಉತ್ತರ ಪ್ರದೇಶದ ಮತ್ತೊಂದು ತಾಜ್ ಮಹಲ್ ಪ್ರತಿಕೃತಿಯಾಗಿದ್ದು, ಇದು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇದು ಅವಧ್‌'ನ ಮೂರನೇ ರಾಜನಾಗಿದ್ದ ರಾಜ ಮೊಹಮ್ಮದ್ ಅಲಿ ಶಾ ಬಹದ್ದೂರ್ ಅವರ ಪುತ್ರಿ ರಾಜಕುಮಾರಿ ಜಿನಾತ್ ಆಸಿಯಾ ಅವರ ಸಮಾಧಿಯಾಗಿದೆ. ಇದು ಮೂಲ ಪ್ರತಿಕೃತಿಗಿಂತ ಚಿಕ್ಕದಾಗಿದೆ. ಹಾಗೆಯೇ ಅಮೃತಶಿಲೆಯಿಂದ ಮಾಡಲಾಗಿಲ್ಲ. ಬದಲಾಗಿ, ಇದನ್ನು ಇಟ್ಟಿಗೆಗಳಿಂದ ತಯಾರಿಸಲಾಗಿದೆ. ಪರಿಶುದ್ಧವಾದ ಬಿಳಿ ಪ್ಲಾಸ್ಟರ್'ನೊಂದಿಗೆ ಲೇಯರ್ ಮಾಡಲಾಗಿದೆ.

ಹುಮಾಯೂನ್ ಸಮಾಧಿ

ಹುಮಾಯೂನ್ ಸಮಾಧಿ

ಮಕ್ಬರಾ-ಎ-ಹುಮಾಯೂನ್ ಎಂದೂ ಕರೆಯಲ್ಪಡುವ ಹುಮಾಯೂನ್ ಸಮಾಧಿಯು ತಾಜ್ ಮಹಲ್‌'ಗಿಂತಲೂ ಹಳೆಯದಾಗಿದೆ. ಇದು ಮೊಘಲ್ ಚಕ್ರವರ್ತಿ ಹುಮಾಯೂನ್ ಸಮಾಧಿಯಾಗಿದೆ. ಹುಮಾಯೂನ್‌'ನ ಸಮಾಧಿಯನ್ನು ಹುಮಾಯೂನ್‌ನ ಮೊದಲ ಪತ್ನಿ ಬೇಗಾ ಬೇಗಂ ನಿರ್ಮಿಸಿದಳು. ಹುಮಾಯೂನ್ ಸಮಾಧಿಯನ್ನು 1993 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ. ತಾಜ್ ಮಹಲ್‌'ನ ರಚನೆಯು ಈ ಸ್ಮಾರಕದಿಂದ ಪ್ರೇರಿತವಾಗಿದೆ ಎಂದು ನಂಬಲಾಗಿದೆ. ನವದೆಹಲಿಯಲ್ಲಿರುವ ಇದನ್ನು ಅಕ್ಬರ್ ಕೆಂಪು ಮರಳುಗಲ್ಲಿನಲ್ಲಿ ನಿರ್ಮಿಸಿದ.

ಇದು ಭಾರತದಲ್ಲಿ ನಿರ್ಮಿಸಲಾದ ಮೊದಲ ಉದ್ಯಾನ ಸಮಾಧಿ. ಹುಮಾಯೂನ್ ಸಮಾಧಿ ಭಾರತದಲ್ಲಿ ಮೊಘಲ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಮೊದಲ ರಚನೆಯಾಗಿದೆ. ಹುಮಾಯೂನ್ ಸಮಾಧಿಯ ಕೆಲಸವು 1565 ರಲ್ಲಿ ಪ್ರಾರಂಭವಾಯಿತು ಮತ್ತು 1572 ರಲ್ಲಿ ಪೂರ್ಣಗೊಂಡಿತು. ಹುಮಾಯೂನ್ ಸಮಾಧಿಯು 47 ಮೀ ಎತ್ತರ ಮತ್ತು 91 ಮೀ ಅಗಲವಿದೆ, ಆದರೆ ಗುಮ್ಮಟಗಳು 42.5 ಮೀ ಎತ್ತರವನ್ನು ಹೊಂದಿವೆ.

ಕಪ್ಪು ತಾಜ್ ಮಹಲ್

ಕಪ್ಪು ತಾಜ್ ಮಹಲ್

ಈ ಸುಂದರವಾದ ಸ್ಮಾರಕವನ್ನು ತಾಜ್‌ ಮಹಲ್ ಆಕಾರದಲ್ಲಿ ನಿರ್ಮಿಸಲಾಗಿದೆ. ಆದರೂ ಗಾತ್ರ ಚಿಕ್ಕದಾಗಿದೆ. ಇದು ಮಧ್ಯಪ್ರದೇಶದ ಬುರ್ಹಾನ್‌'ಪುರ ರೈಲು ನಿಲ್ದಾಣದಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಇದನ್ನು 1622 ಮತ್ತು 1623 ಎಡಿ ನಡುವೆ ನಿರ್ಮಿಸಲಾಯಿತು. ಇದನ್ನು ಸ್ಥಳೀಯರು ಕಪ್ಪು ತಾಜ್ ಮಹಲ್ ಅಥವಾ ಕಾಲಾ ತಾಜ್ ಮಹಲ್ ಎಂದು ಕರೆಯುತ್ತಾರೆ. ಈ ರಚನೆಯನ್ನು ತಾಜ್ ಮಹಲ್ ನಂತರ ವಿನ್ಯಾಸಗೊಳಿಸಲಾಗಿದೆ. ಈ ಕಟ್ಟಡವನ್ನು ಸ್ಥಳೀಯವಾಗಿ ಸಿಗುವ ಕಪ್ಪು ಬಣ್ಣದ ಕಲ್ಲಿನಿಂದ ಮಾಡಲಾಗಿದೆ. ದಾಖಲೆಗಳ ಪ್ರಕಾರ, ಇದು ಶಾ ನವಾಜ್ ಖಾನ್ ಸಮಾಧಿ. ಇವರು 44 ನೇ ವಯಸ್ಸಿನಲ್ಲಿ ನಿಧನರಾದರು.

ನಂತರ ಬುರ್ಹಾನ್‌'ಪುರದ ಉಟವಾಲಿ ನದಿಯ ದಡದಲ್ಲಿ ಸಮಾಧಿ ಮಾಡಲಾಯಿತು. ಇಲ್ಲಿ ಷಾ ನವಾಜ್ ಖಾನ್ ಅವರ ಪತ್ನಿಯ ಸಮಾಧಿ ಸಹ ಇದೆ. ಸಮಾಧಿಯ ಕೆಳಗೆ ಶಾ ನವಾಜ್ ಖಾನ್ ಅವರ ನಿಜವಾದ ಸಮಾಧಿ ಇದೆ. ಸಣ್ಣ ಮೆಟ್ಟಿಲುಗಳ ಮೂಲಕ ಇಲ್ಲಿಗೆ ಪ್ರವೇಶಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X