Search
  • Follow NativePlanet
Share
» »ಸಮುದ್ರ ತೀರದ ತವರು ಕುಮಟಾ

ಸಮುದ್ರ ತೀರದ ತವರು ಕುಮಟಾ

By Divya

ಕುಮಟಾ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು. ಕಾರವಾರದಿಂದ 60 ಕಿ.ಮೀ. ದೂರ. ಹೊನ್ನಾವರದಿಂದ 20 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ನಾಲ್ಕು ಸಮುದ್ರ ತೀರಗಳನ್ನು ಒಳಗೊಂಡಿದೆ. ಕಡಿಮೆ ಜನ ಸಂದಣಿ, ಸಮುದ್ರ ತೀರ ಹಾಗೂ ದೇವಾಲಯಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವುದರಿಂದ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ.

ಬೆಂಗಳೂರಿನಿಂದ 466.7 ಕಿ.ಮೀ. ದೂರದಲ್ಲಿರುವುದರಿಂದ 7 ತಾಸುಗಳಲ್ಲಿ ಪ್ರಾಯಾಣ ಮಾಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ನ ವ್ಯವಸ್ಥೆ ಇರುವುದರಿಂದ ಸಂಜೆ ಬಸ್ ಹತ್ತಿದರೆ ಬೆಳಗ್ಗೆ ಕುಮಟಾಗೆ ಬಂದು ತಲುಪ ಬಹುದು. ವಾರದ ಎರಡು ದಿನ ರಜೆಯಲ್ಲಿಯೂ ಇಲ್ಲಿಗೆ ಬರಬಹುದು. ಕುಮಟಾ ಆವೃತ್ತದಲ್ಲೇ ಅನೇಕ ಪ್ರೇಕ್ಷಣೀಯ ಸ್ಥಳಗಳಿರುವುದರಿಂದ ಉತ್ತಮ ಗುಣ ಮಟ್ಟದ ಹೋಟೆಲ್‍ಗಳು ಹತ್ತಿರದಲ್ಲೇ ಇವೆ. ಹಾಗಾದರೆ ಬನ್ನಿ ಕುಮಟಾ ಹತ್ತಿರದ 6 ಆಕರ್ಷಕ ಸ್ಥಳಗಳ ಬಗ್ಗೆ ತಿಳಿಯೋಣ.

ನಿರ್ವಣಾ ಸಮುದ್ರ

ನಿರ್ವಣಾ ಸಮುದ್ರ

ಕುಮಟಾ ಸಿಟಿಯಿಂದ 10-15 ಕಿ.ಮೀ ದೂರ ಇರುವ ಈ ಸಮುದ್ರ ಜನ ಜಂಗುಳಿಯಿಂದ ದೂರ ಉಳಿದಿದೆ. ಹೆಚ್ಚು ಶುಭ್ರ ಹಾಗೂ ಸ್ವಚ್ಛವಾಗಿರುವ ಈ ಸಮುದ್ರದಲ್ಲಿ ಮನಸ್ಸಿಗೆ ಇಷ್ಟವಾಗುವಷ್ಟು ಸಮಯದವರೆಗೂ ಅಲ್ಲಿಯೇ ಕಾಲ ಕಳೆಯಬಹುದು. ಜೊತೆಯಲ್ಲೇ ಸ್ವಲ್ಪ ತಿಂಡಿ, ನೀರು ಮತ್ತು ಹಣ್ಣನ್ನು ಕೊಂಡೊಯ್ದರೆ ಅವುಗಳನ್ನು ಸವಿಯುತ್ತಾ, ನೀರಿನ ಅಲೆಯೊಂದಿಗೆ ಆಡಬಹುದು.

PC: wikipedia.org

ಮಹಾಲಸಾ ನಾರಾಯಣಿ

ಮಹಾಲಸಾ ನಾರಾಯಣಿ

ಕುಮಟಾ ಸಿಟಿಯೊಳಗೆ ಬರುವ ಈ ದೇವಾಲಯ 450 ವರ್ಷದಷ್ಟು ಹಳೆಯ ಇತಿಹಾಸವನ್ನು ಒಳಗೊಂಡಿದೆ. ಶ್ರಾವಣ ಮಾಸದಲ್ಲಿ ಪುಷ್ಪ ಪೂಜೆ, ನವರಾತ್ರೋತ್ಸವ, ಸುಗ್ಗಿ ಉತ್ಸವ ಸೇರಿದಂತೆ ವಿವಿಧ ಬಗೆಯ ಹಿಂದೂ ಶ್ರೇಷ್ಠ ಹಬ್ಬಗಳ ಆಚರಣೆಯನ್ನು ಮಾಡಲಾಗುತ್ತದೆ.

ಶಾಂತಿಕಾ ಪರಮೇಶ್ವರಿ ದೇವಸ್ಥಾನ

ಶಾಂತಿಕಾ ಪರಮೇಶ್ವರಿ ದೇವಸ್ಥಾನ

ಈ ದೇವಾಲಯವು ಕುಮಟಾ ಪಟ್ಟಣದಲ್ಲೇ ಬರುತ್ತದೆ. ಸಮುದ್ರ ತೀರಕ್ಕೆ ಹತ್ತಿರ ಇರುವ ಈ ದೇಗುಲದಲ್ಲಿ ಹಬ್ಬ ಹರಿದಿನಗಳ ಆಚರಣೆಯನ್ನು ಬಹಳ ನೇಮ-ನಿಷ್ಠೆಯಿಂದ ಆಚರಿಸಲಾಗುತ್ತದೆ. ಸಮುದ್ರದ ಬಳಿ ಇರುವುದರಿಂದ ಸಮುದ್ರ ತೀರದಲ್ಲೂ ಸ್ವಲ್ಪ ಸಮಯ ಕಳೆಯಬಹುದು.

ಹೆಡ್‍ಬಂದರ್ ಸಮುದ್ರ

ಹೆಡ್‍ಬಂದರ್ ಸಮುದ್ರ

ಕುಮಟಾ ಪಟ್ಟಣದ ಹತ್ತಿರದಲ್ಲೇ ಇರುವ ಈ ಸಮುದ್ರ ತೀರ ಪ್ರವಾಸಿಗರಿಗೊಂದು ಸುಂದರ ತಾಣ. ಇಲ್ಲಿ ಯಾವುದೇ ತೊಂದರೆ ಇಲ್ಲದೆ, ಜನರ ದಟ್ಟಣೆ ಇಲ್ಲದೆ, ಆರಾಮವಾಗಿ ಕಾಲ ಕಳೆಯಬಹುದು. ಆಂಗ್ಲರ ಆಳ್ವಿಕೆ ಇರುವಾಗ ಇದನ್ನು ಮುಖ್ಯ ಸೀ ಪೋರ್ಟ್ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.

ವಿಷ್ಣು ತೀರ್ಥ

ವಿಷ್ಣು ತೀರ್ಥ

ಕುಮಟಾ ಆವೃತ್ತಿಯಲ್ಲೇ ಬರುವ ವಿಷ್ಣು ತೀರ್ಥ ದೇಗುಲ ಬಹಳ ಪುರಾತನವಾದದ್ದು. ಹಚ್ಚ ಹಸಿರಿನ ನಡುವೆ ಈ ಪುಟ್ಟ ದೇಗುಲ, ಅದರ ಎದುರು ಚಿಕ್ಕದಾದ ಒಂದು ತೀರ್ಥ ಕೆರೆ ನೋಡಲು ನಯನ ಮನೋಹರವಾಗಿದೆ.

ಬಾಡ ಸಮುದ್ರ ತೀರ

ಬಾಡ ಸಮುದ್ರ ತೀರ

ಕುಮಟಾ ಪಟ್ಟಣಕ್ಕೆ ಹತ್ತಿರ ಇರುವ ಬಾಡ ಸಮುದ್ರ ತೀರ ಪ್ರವಾಸಿಗರಿಗೊಂದು ಆಕರ್ಷಕ ತಾಣ. ವಿಶಾಲವಾದ ಸಮುದ್ರ ತೀರ. ಹತ್ತಿರಲದಲೇ ಗುಡ್ಡಗಳ ಸಾಲು ಹಾಗೂ ಬಾಡ ಅಮ್ಮನವರ ದೇಗುಲ ಎಲ್ಲವೂ ಈ ಪ್ರದೇಶದ ಹಿರಿಮೆಯನ್ನು ಎತ್ತಿ ತೋರಿಸುತ್ತದೆ.

Read more about: uttara kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X