• Follow NativePlanet
Share
» »ಭಾರತದಲ್ಲಿದೆ ರಾವಣನ 6 ದೇವಾಲಯಗಳು

ಭಾರತದಲ್ಲಿದೆ ರಾವಣನ 6 ದೇವಾಲಯಗಳು

Written By:

ರಾವಣ ಯಾರಿಗೆ ಗೊತ್ತಿಲ್ಲ ಹೇಳಿ? ರಾವಣ ಒಬ್ಬ ರಾಮಾಯಣದ ಖಳನಾಯಕ ಎಂದು ಅಲ್ಲವೆ?. ಆದರೆ ಆ ರಾವಣ ಮಹಾ ಶಿವಭಕ್ತನಾಗಿದ್ದನು. ಆತನು ಅತ್ಯಂತ ಒಳ್ಳೆಯ ಮನಸ್ಸನ್ನು ಉಳ್ಳವನಾಗಿದ್ದನು. ಆತ ಮಾಡಿದ ಒಂದೇ ಒಂದು ತಪ್ಪು ಯಾವುದೆಂದರೆ ಸೀತಾ ಮಾತೆಯನ್ನು ಅಪಹರಿಸುವುದು. ಅದೇನೆ ಇರಲಿ ಶ್ರೀಲಂಕ ಎಂದು ನೆನಪಾದರೆ ಸಾಕು ರಾವಣನು ನೆನಪಾಗುತ್ತಾನೆ.

ನಮ್ಮ ಭಾರತ ದೇಶದಲ್ಲಿ ಪ್ರಾಣಿ, ಪಕ್ಷಿಗಳಿಂದ ಹಿಡಿದು ರಾಕ್ಷಸರಿಗೂ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಅಂತಹದರಲ್ಲಿ ಕೇಳಿ ರಾವಣ ದೇವಾಲಯವು ಕೂಡ ಇರುವುದನ್ನು ಕಾಣಬಹುದು.

ಏನು ರಾವಣನ ದೇವಾಲಯವೇ? ಎಲ್ಲಿ ಶ್ರೀಲಂಕದಲ್ಲಿಯೇ? ಎಂದೆಲ್ಲಾ ಪ್ರೆಶ್ನೆ ಏಳುತ್ತಿರಬಹುದಲ್ಲವೇ?. ಶ್ರೀಲಂಕದಲ್ಲಿ ಅಲ್ಲ ನಮ್ಮ ಭಾರತ ದೇಶದಲ್ಲಿಯೇ ರಾವಣನನ್ನು ದೇವತೆಯಾಗಿ ಪೂಜಿಸುವ ಬಹಳಷ್ಟು ಭಕ್ತರು ಇದ್ದಾರೆ ಹಾಗು ಸುಂದರವಾದ ದೇವಾಲಯಗಳು ಕೂಡ ಇವೆ.

ಪ್ರಸ್ತುತ ಲೇಖನದಲ್ಲಿ ದಶ ತಲೆಯನ್ನು ಹೊಂದಿರುವ ರಾವಣನ ದೇವಾಲಯಗಳು ಎಲ್ಲೆಲ್ಲಿ ಇವೆ? ಎಂಬುದನ್ನು ತಿಳಿಯೋಣ...

ಬಿಸ್ರಾಕ್, ಉತ್ತರ ಪ್ರದೇಶ

ಬಿಸ್ರಾಕ್, ಉತ್ತರ ಪ್ರದೇಶ

ಇದು ಅತ್ಯಂತ ಪ್ರಸಿದ್ಧವಾದ ರಾವಣನ ದೇವಾಲಯವಾಗಿದೆ. ರಾವಣನನ್ನು ಈ ಪ್ರದೇಶದಲ್ಲಿ ದೇವರಾಗಿ ಪೂಜಿಸಲಾಗುತ್ತದೆ. ಇಲ್ಲಿ ರಾವಣನ ಚಿತ್ರವನ್ನು ಸುಡುವ ಯಾವುದೇ ಕಾರಣದಿಂದಲೂ ದಸರಾ ಆಚರಿಸುವುದಿಲ್ಲ. ರಾವಣನನ್ನು ಪವಿತ್ರವಾದ ದೇವತಾ ಮೂರ್ತಿಯಾಗಿ ಇಲ್ಲಿನ ಭಕ್ತರು ಪೂಜಿಸುತ್ತಾರೆ.

ಬಿಸ್ರಾಕ್, ಉತ್ತರ ಪ್ರದೇಶ

ಬಿಸ್ರಾಕ್, ಉತ್ತರ ಪ್ರದೇಶ

ರಾವಣ ಒಮ್ಮೆ ಶ್ರೇಷ್ಟವಾದ ರಾಜನಾಗಿದ್ದನು ಎಂದು ಹಲವಾರು ಭಕ್ತರು ದುಃಖಿಸಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರಾವಣನಿಗೆ ಗೌರವ ಸೂಚಕವಾಗಿ ನವರಾತ್ರಿಯ ಸಮಯದಲ್ಲಿ ಹೋಮ ಹವನಗಳನ್ನು ಮಾಡುತ್ತಾರಂತೆ.

ಕಾಕಿನಾಡ, ಆಂಧ್ರ ಪ್ರದೇಶ

ಕಾಕಿನಾಡ, ಆಂಧ್ರ ಪ್ರದೇಶ

ಆಂಧ್ರ ಪ್ರದೇಶದಲ್ಲಿನ ಕಾಕಿನಾಡದಲ್ಲಿನ ರಾವಣನ ದೇವಾಲಯವು ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಾಲಯವನ್ನು ಸ್ವತಃ ರಾವಣನೇ ನಿರ್ಮಾಣ ಮಾಡಿದನು ಎಂದು ನಂಬಲಾಗಿದೆ. ರಾವಣನು ಶಿವ ದೇವಾಲಯವನ್ನು ಸ್ಥಳವನ್ನು ಆರಿಸಿಕೊಳ್ಳುತ್ತಿದ್ದನು.

ಕಾಕಿನಾಡ, ಆಂಧ್ರ ಪ್ರದೇಶ

ಕಾಕಿನಾಡ, ಆಂಧ್ರ ಪ್ರದೇಶ

ನಂತರ ಒಂದು ಶಿವಲಿಂಗದ ಸುತ್ತಲೂ ದೇವಾಲಯವನ್ನು ನಿರ್ಮಾಣ ಮಾಡಿದನು ಎಂದು ಹೇಳಲಾಗಿದೆ. ಈ ದೇವಾಲಯವು ಕಡಲ ತೀರಕ್ಕೆ ಸಮೀಪದಲ್ಲಿದೆ. ಇದೊಂದು ಸುಂದರವಾದ ದೇವಾಲಯವಾಗಿದ್ದು, ಭವ್ಯವಾದ ರಾವಣನ ಪ್ರತಿಮೆಯನ್ನು ಕಾಣಬಹುದಾಗಿದೆ. ಆಂಧ್ರದಲ್ಲಿ ರಾವಣನನ್ನು ಪೂಜಿಸುವ ಏಕೈಕ ದೇವಾಲಯ ಇದಾಗಿದೆ.

ಕಾನ್ಪೂರ್, ಉತ್ತರ ಪ್ರದೇಶ

ಕಾನ್ಪೂರ್, ಉತ್ತರ ಪ್ರದೇಶ

ಕಾನ್ಪೂರದ ರಾವಣನ ದೇವಾಲಯ ಮಾತ್ರ ವರ್ಷಕ್ಕೊಮ್ಮೆ ತೆರೆಯಲಾಗುತ್ತದೆ ಎಂತೆ. ಆ ಸಮಯ ಯಾವುದೆಂದರೆ ದಸರಾ ಹಬ್ಬದ ದಿನದಂದು ಮಾತ್ರ. ಈ ದೇವಾಲಯವನ್ನು ಶಿವನ ಭಕ್ತ ಶಿವ ಶಂಕರ್ ಮತ್ತು ರಾವಣನ ಶಕ್ತಿಯಲ್ಲಿ ನಂಬಿಕೆ ಇಟ್ಟವರು ನಿರ್ಮಾಣ ಮಾಡಿದರು ಎನ್ನಲಾಗಿದೆ.

ಕಾನ್ಪೂರ್, ಉತ್ತರ ಪ್ರದೇಶ

ಕಾನ್ಪೂರ್, ಉತ್ತರ ಪ್ರದೇಶ

ರಾವಣನನ್ನು ಇಲ್ಲಿ ದೇವರಾಗಿ ಪೂಜೆಗಳನ್ನು ಮಾಡಲಾಗುತ್ತದೆ. ಆದರೆ ಆತನ ರಾಕ್ಷಸತ್ವವನ್ನು ಮಾತ್ರ ಭಕ್ತರು ಪೂಜಿಸುವುದಿಲ್ಲ. ದೇವಾಯಲಯದಲ್ಲಿ ಕೇವಲ ರಾವಣನ ಜ್ಞಾನವನ್ನು, ಪ್ರತಿಭೆಯನ್ನು ಮತ್ತು ರಾಜನ ದಯೆ, ಕರುಣೆಯನ್ನು ಮಾತ್ರ ಭಕ್ತರು ಆಚರಿಸುತ್ತಾರೆ.

ವಿದಿಶಾ, ಮಧ್ಯ ಪ್ರದೇಶ

ವಿದಿಶಾ, ಮಧ್ಯ ಪ್ರದೇಶ

ವಿದಿಶಾ ರಾವಣನ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ರಾವಣನ ಹೆಸರಿನಲ್ಲಿ ವಿದಿಶಾದಲ್ಲಿ ರಾವಂಗ್ರಾಮ್ ಎಂಬ ಗ್ರಾಮ ಕೂಡ ಇದೆ. ಯಾವುದೇ ಮಂಗಳಕರವಾದ ಕಾರ್ಯಗಳಿಗಾಗಲೀ ಅಥವಾ ಯಾವುದೇ ಮಹತ್ವದ ದಿನಗಳೇ ಆಗಲಿ ಈ ರಾವಣನ ದೇವಾಲಯಕ್ಕೆ ಭೇಟಿ ನೀಡಿ ಆರ್ಶಿವಾದ ಪಡೆಯುತ್ತಾರೆ.

ವಿದಿಶಾ, ಮಧ್ಯ ಪ್ರದೇಶ

ವಿದಿಶಾ, ಮಧ್ಯ ಪ್ರದೇಶ

ವಿಶೇಷವೆನೆಂದರೆ ವಿದಿಶಾದ ಜನರು ರಾವಣನ ದೇವಾಲಯಕ್ಕೆ ಮದುವೆಯ ದಿನಗಳಲ್ಲಿ ಮತ್ತು ಇತರ ಪ್ರಮುಖ ಸಮಾರಂಭಗಳಲ್ಲಿ ಭೇಟಿ ನೀಡುತ್ತಾರೆ. ರಾವಣನ ಪತ್ನಿ ಮಂಡೋಧರಿ ವಿದಿಶಾ ಎಂದು ನಂಬಲಾಗಿದೆ.

ಮಂಡೌರ್ಸ್, ಮಧ್ಯ ಪ್ರದೇಶ

ಮಂಡೌರ್ಸ್, ಮಧ್ಯ ಪ್ರದೇಶ

ಮಧ್ಯ ಪ್ರದೇಶದಲ್ಲಿನ ರಾವಣನ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಮಂಡೋಧಾರಿಯನ್ನು ರಾವಣನು ಇಲ್ಲಿಯೇ ವಿವಾಹವಾದನು ಎಂದು ನಂಬಲಾಗಿದೆ. ಈ ದೇವಾಲಯವು ಬೃಹತ್ತಾಗಿದ್ದು, ಸುಂದರವಾಗಿದೆ.

ಮಂಡೌರ್ಸ್, ಮಧ್ಯ ಪ್ರದೇಶ

ಮಂಡೌರ್ಸ್, ಮಧ್ಯ ಪ್ರದೇಶ

ರಾವಣನ ಜೊತೆಗೆ ಇತರೆ ಸ್ತ್ರೀ ದೇವತೆಗಳನ್ನು ಕೂಡ ಇಲ್ಲಿ ಪೂಜಿಸಲಾಗುತ್ತದೆ. ಹರಪ್ಪನ ನಾಗರಿಕತೆಯ ಲಿಪಿಯಲ್ಲಿರುವ ಪಠ್ಯಗಳು ದೇವತೆಗಳ ಪಕ್ಕದಲ್ಲಿ ಕಾಣಬಹುದಾಗಿದೆ. ಹಾಗಾಗಿ ದೇವಾಲಯವು ಅತ್ಯಂತ ಪುರಾತನವಾದುದು ಎಂದು ನಂಬಲಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ