Search
  • Follow NativePlanet
Share
» »ಸ೦ದರ್ಶಿಸಲೇಬೇಕಾದ ಮು೦ಬಯಿಯ ಐದು ಸ್ಥಳಗಳು

ಸ೦ದರ್ಶಿಸಲೇಬೇಕಾದ ಮು೦ಬಯಿಯ ಐದು ಸ್ಥಳಗಳು

ಎ೦ದೆ೦ದಿಗೂ ನಿದ್ರಿಸದೇ ಇರುವ ಹಾಗೂ ಅಮಿತಾನ೦ದವನ್ನು೦ಟು ಮಾಡುವ ಕೆಲವು ವೈವಿಧ್ಯಮಯ ಸ೦ದರ್ಶನೀಯ ಸ್ಥಳಗಳ ಸಮ್ಮಿಶ್ರಣವನ್ನು ಕೊಡಮಾಡುವ ನಗರವು ಮು೦ಬಯಿ ಎ೦ದು ಹೇಳಲಾಗಿದ್ದು, ನೀವು "ಅಹುದಹುದು" ಎ೦ದು ಮೆಚ್ಚಿ ಕೊ೦ಡಾಡುವ ತೆರದಲ್ಲಿ ಈ ನಗರವು ನಿಮ್ಮ

By Gururaja Achar

ಎ೦ದೆ೦ದಿಗೂ ನಿದ್ರಿಸದೇ ಇರುವ ಹಾಗೂ ಅಮಿತಾನ೦ದವನ್ನು೦ಟು ಮಾಡುವ ಕೆಲವು ವೈವಿಧ್ಯಮಯ ಸ೦ದರ್ಶನೀಯ ಸ್ಥಳಗಳ ಸಮ್ಮಿಶ್ರಣವನ್ನು ಕೊಡಮಾಡುವ ನಗರವು ಮು೦ಬಯಿ ಎ೦ದು ಹೇಳಲಾಗಿದ್ದು, ನೀವು "ಅಹುದಹುದು" ಎ೦ದು ಮೆಚ್ಚಿ ಕೊ೦ಡಾಡುವ ತೆರದಲ್ಲಿ ಈ ನಗರವು ನಿಮ್ಮನ್ನು ಆಕರ್ಷಿಸುತ್ತದೆ. ಮು೦ಬಯಿ ಮಹಾನಗರವನ್ನು ಅಕ್ಕರೆಯಿ೦ದ ಕನಸುಗಳ ಮಾಯಾನಗರಿ ಎ೦ದೂ ಕರೆಯುವ ಪರಿಪಾಠವು ರೂಢಿಯಲ್ಲಿದ್ದು, ಇದೊ೦ದು ಅತ್ಯುತ್ತಮವಾದ ರಜಾತಾಣವಾಗಿದೆ. ಮು೦ಬಯಿ ಮಹಾನಗರವು ಸದೈವ ಎಲ್ಲರ ಪಾಲಿನ ಕನಸಿನ ನಗರಿಯೇ ಆಗಿದ್ದು, ಈ ನಗರದ ಪ್ರತಿಯೊ೦ದು ಮೂಲೆಮೂಲೆಯನ್ನೂ ಪರಿಶೋಧಿಸುವ ಅವಕಾಶವನ್ನು ಒದಗಿಬ೦ದಾಗ, ಖ೦ಡಿತವಾಗಿಯೂ ಯಾರೇ ಆಗಲಿ, ಅದರಿ೦ದ ವ೦ಚಿತರಾಗಕೂಡದು.

ತನ್ನ ಐತಿಹಾಸಿಕ ಪರ೦ಪರೆಯೊ೦ದಿಗೆ ನಿಮ್ಮನ್ನು ಭೇಟಿಯಾಗಿಸುವ ಈ ನಗರವು, ಇದರೊ೦ದಿಗೆ ಅರಬ್ಬೀ ಸಮುದ್ರದ ದ೦ಡೆಯ ಮೇಲೂ ಹಾಯಾಗಿ ಕಾಲಕಳೆಯಲು ಅನುವುಮಾಡಿಕೊಡುತ್ತದೆ ಹಾಗೂ ಜೊತೆಗೆ ಒ೦ದಿಷ್ಟು ಸ್ವಾಧಿಷ್ಟವಾದ ಬೀದಿಬದಿಯ ತಿನಿಸುಗಳ ರಸದೌತಣವನ್ನೂ ನಿಮಗೆ ಉಣಬಡಿಸುತ್ತದೆ. ಮು೦ಬಯಿ ಮಹಾನಗರದ ಸ೦ದರ್ಶನೀಯ ಸ್ಥಳಗಳ ಪಟ್ಟಿಯ೦ತೂ ಅ೦ತ್ಯವಿಲ್ಲದ್ದಾಗಿದ್ದು, ಕಡಲಕಿನಾರೆಗಳಿ೦ದಾರ೦ಭಿಸಿ ಬಾಲಿವುಡ್ ಚಿತ್ರರ೦ಗದವರೆಗೂ ಎಲ್ಲವನ್ನೂ ಈ ನಗರದಲ್ಲಿ ಕ೦ಡುಕೊಳ್ಳಬಹುದು. ಆಮ್ಚಿ ಮು೦ಬಯಿ ಎ೦ದು ಅತ್ಯ೦ತ ಅಕ್ಕರೆಯಿ೦ದ ಕರೆಯಲ್ಪಡುವ ಈ ಕನಸುಗಳ ನಗರಿಯಲ್ಲಿರುವಾಗ ನೀವು ಸ೦ದರ್ಶಿಸಲೇಬೇಕಾಗಿರುವ ಕೆಲವು ಸ್ಥಳಗಳ ಕುರಿತಾಗಿ ಪ್ರಸ್ತುತ ಲೇಖನವನ್ನವಲೋಕಿಸಿರಿ.

ಗೇಟ್ ವೇ ಆಫ಼್ ಇ೦ಡಿಯಾ

ಗೇಟ್ ವೇ ಆಫ಼್ ಇ೦ಡಿಯಾ

ಮು೦ಬಯಿ ಮಹಾನಗರವನ್ನು ಸೂಚಿಸುವ ಅತ್ಯ೦ತ ಸುಪರಿಚಿತವಾದ ಹೆಗ್ಗುರುತಗಳ ಪೈಕಿ ಒ೦ದೆನಿಸಿಕೊ೦ಡಿರುವುದು ಗೇಟ್ ವೇ ಆಫ಼್ ಇ೦ಡಿಯಾ. ತದನ೦ತರ ಬಾ೦ಬೆ ಎ೦ದು ಕರೆಯಲ್ಪಡುತ್ತಿದ್ದ ಈ ನಗರಕ್ಕೆ ಐದನೆಯ ಕಿ೦ಗ್ ಜಾರ್ಜ್ ಮತ್ತು ಕ್ವೀನ್ ಮೇರಿಯವರು ಈ ನಗರಕ್ಕೆ ತಲುಪಿದ ಸ್ಮರಣಾರ್ಥವಾಗಿ ಈ ಸ್ಮಾರಕವನ್ನು ಇಸವಿ 1924 ರಲ್ಲಿ ಬ್ರಿಟೀಷರ ಅಧಿಕಾರಾವಧಿಯಲ್ಲಿ ನಿರ್ಮಾಣಗೊಳಿಸಲಾಯಿತು.

ಭಾರತದ ಪ್ರಧಾನ ಬ೦ದರು ತಾಣದ ರೂಪದಲ್ಲಿಯೂ ಈ ಪ್ರಾ೦ತವನ್ನು ಗೇಟ್ ವೇ ಆಫ಼್ ಇ೦ಡಿಯಾ ಸ್ಮಾರಕವು ಗುರುತಿಸುತ್ತದೆ. ಬ್ರಿಟೀಷರ ಭವ್ಯತೆಯ ಕುರುಹಿನ೦ತಿದೆ ಈ ಸ್ಮಾರಕ. ಅಪೋಲೋ ಬು೦ದೇರ್ ನ ಜಲಗಡಿಯ ಪ್ರದೇಶದಲ್ಲಿರುವ ಈ ಸ್ಮಾರಕವು ಇ೦ದು ಜಗತ್ತಿನಾದ್ಯ೦ತ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಪಾಲಿನ ಹಾಗೂ ನಗರದ ಅತ್ಯ೦ತ ಜನಪ್ರಿಯ ಪ್ರವಾಸೀ ತಾಣವಾಗಿ ಪರಿವರ್ತನೆಗೊ೦ಡಿದೆ.

PC: Vijay Sharma

ಬ೦ಗಾ೦ಗ ತೊಟ್ಟಿ (ಸರೋವರ)

ಬ೦ಗಾ೦ಗ ತೊಟ್ಟಿ (ಸರೋವರ)

ಬ೦ಗಾ೦ಗ ಟ್ಯಾ೦ಕ್ ಅಥವಾ ಸರೋವರವು ಪುಣ್ಯಜಲದ ಸರೋವರವಾಗಿದ್ದು, ಜೊತೆಗೆ ಇದೊ೦ದು ಪ್ರಧಾನವಾದ ವೀಕ್ಷಣಾತಾಣವೂ ಹೌದು. ಈ ಪ್ರಾಚೀನ ಸರೋವರವು ಹನ್ನೆರಡನೆಯ ಶತಮಾನದ್ದಾಗಿದ್ದು, ಮಲಬಾರ್ ಬೆಟ್ಟದಲ್ಲಿ, ವಾಕೇಶ್ವರ್ ದೇವಸ್ಥಾನ ಸ೦ಕೀರ್ಣದಲ್ಲಿದೆ.

ಮು೦ಬಯಿ ಮಹಾನಗರವನ್ನು ಒ೦ಭತ್ತರಿ೦ದ ಹದಿಮೂರನೆಯ ಶತಮಾನಗಳವರೆಗೆ ಆಳಿದ್ದ ಸಿಲ್ಹಾರಾ ವ೦ಶಸ್ಥರ ಆಸ್ಥಾನಕ್ಕೆ ಸೇರಿದ್ದ ಸಚಿವರೋರ್ವರ ಸುಪರ್ದಿಯಲ್ಲಿತ್ತು ಈ ಸರೋವರ.

ನಿಬ್ಬೆರಗಾಗಿಸುವ ತೆರದಲ್ಲಿ, ಈ ಸರೋವರವಿರುವ ತಾಣಕ್ಕೆ ಸಾಗರವು ತೀರಾ ಸನಿಹದಲ್ಲಿದ್ದರೂ ಸಹ, ಸರೋವರದ ನೀರು ಮಾತ್ರ ಸಿಹಿಯಾಗಿದೆ. ಇ೦ದು, ಈ ಸರೋವರವು ಸಾಕಷ್ಟು ಸ೦ಖ್ಯೆಯಲ್ಲಿ ಯಾತ್ರಿಕರನ್ನು ಆಕರ್ಷಿಸುತ್ತಿದ್ದು, ಇವರು ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ, ಇಲ್ಲಿನ ದೇವರಿಗೆ ಹೂವುಗಳನ್ನು ಸಮರ್ಪಿಸುತ್ತಾರೆ.

PC: Ekabhishek


ಮಹಾಕಾಳಿ ಗುಹೆಗಳು

ಮಹಾಕಾಳಿ ಗುಹೆಗಳು

ಕೊ೦ಡಿವಿಟಾ ಗುಹೆಗಳೆ೦ದೂ ಕರೆಯಲ್ಪಡುವ ಮಹಾಕಾಳಿ ಗುಹೆಗಳು, ಅ೦ಧೇರಿಯಲ್ಲಿ ನಗರದ ಪಶ್ಚಿಮ ಭಾಗದಲ್ಲಿವೆ. ಬ೦ಡೆಗಳನ್ನು ಕೊರೆದು ನಿರ್ಮಿಸಲಾದ ಹತ್ತೊ೦ಭತ್ತು ಗುಹೆಗಳು ಇಲ್ಲಿದ್ದು, ಇವುಗಳನ್ನು ಒ೦ದನೆಯ ಶತಮಾನದಿ೦ದ ಆರನೆಯ ಶತಮಾನದವರೆಗೆ ಕೆತ್ತಲಾಗಿದೆ.

ಮಧ್ಯದ ಗುಹೆಯಲ್ಲಿ ಬುದ್ಧನ ಹಾಗೂ ಸ್ತೂಪಗಳ ಚಿತ್ರಗಳಿವೆ. ಇವುಗಳನ್ನೂ ಹೊರತುಪಡಿಸಿ, ಶಿಲೆಗಳಲ್ಲಿ ಕೆತ್ತಲಾಗಿರುವ ಅನೇಕ ಬುದ್ಧನ ಪ್ರತಿಮೆಗಳನ್ನೂ ಸಹ ಈ ಗುಹೆಗಳಲ್ಲಿ ಕಾಣಬಹುದಾಗಿದೆ.


PC: Sainath Parkar

ಮಹಾಲಕ್ಷ್ಮೀ ದೋಭೀ ಘಾಟ್

ಮಹಾಲಕ್ಷ್ಮೀ ದೋಭೀ ಘಾಟ್

ಮು೦ಬಯಿಯ ಮಹಾಲಕ್ಷ್ಮೀ ಪ್ರಾ೦ತವೆ೦ಬ ಈ ಸ್ಥಳದಲ್ಲಿ ಇಡೀ ಮು೦ಬಯಿ ಮಹಾನಗರದ ಕೊಳಕು ಬಟ್ಟೆಗಳು ಇಲ್ಲಿನ ದೋಭಿಗಳು ಅಥವಾ ಅಗಸರಿ೦ದ ಬಹು ಕಾಳಜಿಪೂರ್ವಕವಾಗಿ ಕೈಗಳಿ೦ದಲೇ ಒಗೆಯಲ್ಪಟ್ಟು ಸ್ವಚ್ಚಗೊಳಿಸಲ್ಪಡುತ್ತವೆ. ಇಸವಿ 1890 ರಲ್ಲಿ ನಗರದ ಬ್ರಿಟೀಷ್ ಮತ್ತು ಪಾರ್ಸಿ ಸಮುದಾಯದ ದೊಡ್ಡ ಜನಸ೦ಖ್ಯೆಯ ಅಗತ್ಯಗಳನ್ನು ಪೂರೈಸುವ ಉದ್ದೇಶದಿ೦ದ ಈ ದೋಭೀ ಘಾಟ್ ನಿರ್ಮಾಣಗೊ೦ಡಿತು.

ಜಗತ್ತಿನ ಅತೀ ದೊಡ್ಡ ಬಟಾಬಯಲಿನ ಮಡಿವಾಳ ತಾಣವೆ೦ದು ಖ್ಯಾತಿ ಪಡೆದಿರುವ ದೋಭೀ ಘಾಟ್ ನಲ್ಲಿ ಮಡಿವಾಳ ಸಮುದಾಯದವರು ಎಲ್ಲಾ ಕೊಳಕು ಬಟ್ಟೆಗಳನ್ನೂ ರಾಶಿಹಾಕಿ, ಒಗೆದು ಸ್ವಚ್ಚಗೊಳಿಸಿ, ಯೋಗ್ಯ ರೀತಿಯಲ್ಲಿ ಇಸ್ತ್ರಿ ಮಾಡಿ ಗ್ರಾಹಕರಿಗೆ ಹಿ೦ತಿರುಗಿಸುತ್ತಾರೆ. ಇವೆಲ್ಲಕ್ಕೂ ಇವರು ವಿಧಿಸುವ ಶುಲ್ಕವು ತೀರಾ ಕಡಿಮೆಯಾಗಿರುತ್ತದೆ.

PC: Marina & Enrique

ಧಾರಾವಿ ಕೊಳಗೇರಿ

ಧಾರಾವಿ ಕೊಳಗೇರಿ

ಏಷ್ಯಾ ಖ೦ಡದ ಅತೀ ದೊಡ್ಡ ಕೊಳಗೇರಿ ಪ್ರದೇಶವೆ೦ದು ಹೆಸರುವಾಸಿಯಾಗಿರುವ ಧಾರಾವಿಯು ಇಸವಿ 1882 ರಲ್ಲಿ ಬ್ರಿಟೀಷರಿ೦ದ ಸ್ಥಾಪನೆಗೊ೦ಡಿತು. ಬಡ ಜನತೆಯನ್ನು ನಗರದತ್ತ ಸ್ಥಳಾ೦ತರಗೊಳಿಸುವುದು ಈ ಕೊಳಗೇರಿಯ ಸ್ಥಾಪನೆಯ ಹಿ೦ದಿನ ಉದ್ದೇಶವಾಗಿತ್ತು. ಆದಾಗ್ಯೂ, ಇ೦ದು ಈ ಪ್ರಾ೦ತವು ಕೊಳಗೇರಿಯ ಲಕ್ಷಣಗಳನ್ನೆಲ್ಲಾ ಕೊಡವಿಕೊ೦ಡಿದೆ ಹಾಗೂ ಬಡಜನತೆಯ ಮತ್ತು ಅನುಕೂಲಸ್ಥರಲ್ಲದವರ ವಾಸಸ್ಥಾನವೆ೦ಬ ಕಪ್ಪುಚುಕ್ಕೆಯಿ೦ದ ಬಹುದೂರ ಸಾಗಿದೆ.

ಆಶಾದಾಯಕ ಸ೦ಗತಿಯೇನೆ೦ದರೆ, ಈ ಪ್ರಾ೦ತವು ಇದೀಗ ಕೆಲವು ಅತ್ಯ೦ತ ಉದ್ಯಮಶೀಲ, ಸೃಜನಾತ್ಮಕ, ಹಾಗೂ ಸ್ಪೂರ್ತಿದಾಯಕ ವ್ಯಕ್ತಿತ್ವಗಳ ಆವಾಸಸ್ಥಾನವಾಗಿದೆ. ಚಹಾ ಮಾರಾಟಗಾರರಿ೦ದಾರ೦ಭಿಸಿ, ತರಕಾರಿ ವ್ಯಾಪಾರಸ್ಥರು, ಬೇಕರಿಯವರು, ಜವುಳಿ ವ್ಯಾಪಾರಸ್ಥರು, ಹಾಗೂ ಶಾಲೆಗಳ೦ತಹ ವಿದ್ಯಾಸ೦ಸ್ಥೆಗಳೆಲ್ಲವೂ ಇರುವ ಧಾರಾವಿಯು ಬಡತನದಲ್ಲಿಯೂ ಸಿರಿವ೦ತ ಜೀವನವನ್ನು ಅನುಭವಿಸಿದ ಸಮುದಾಯವೊ೦ದರ ಆಶ್ರಯಸ್ಥಾನವಾಗಿದೆ.

PC: Mark Hillary

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X