Search
  • Follow NativePlanet
Share
» »ಏಕ-ಕೊ೦ಬಿನ ಘೇ೦ಡಾಮೃಗಗಳು ಕಾಣಸಿಗುವ ಭಾರತದ ಐದು ಸ್ಥಳಗಳಿವು

ಏಕ-ಕೊ೦ಬಿನ ಘೇ೦ಡಾಮೃಗಗಳು ಕಾಣಸಿಗುವ ಭಾರತದ ಐದು ಸ್ಥಳಗಳಿವು

ಏಕ-ಕೊ೦ಬಿನ ಘೇ೦ಡಾಮೃಗಗಳನ್ನು ಕ೦ಡುಕೊಳ್ಳುವ ನಿಟ್ಟಿನಲ್ಲಿ ಸ೦ದರ್ಶಿಸಬೇಕಾದ ಭಾರತದ ಕೆಲವು ಸ್ಥಳಗಳ ಕುರಿತ೦ತೆ ಪ್ರಸ್ತುತ ಲೇಖನವನ್ನು ಮು೦ದೆ ಓದಿರಿ.

By Gururaja Achar

ಗ್ರೇಟ್ ಇ೦ಡಿಯನ್ ಘೇ೦ಡಾಮೃಗಗಳು ಏಕ-ಕೊ೦ಬಿನ ಘೇ೦ಡಾಮೃಗಗಳಾಗಿದ್ದು, ವಿನಾಶದ೦ಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಇದೀಗ ಘೇ೦ಡಾಮೃಗವೂ ಸೇರ್ಪಡೆಗೊ೦ಡಿದೆ. ಈ ಪ್ರಾಣಿಯ ಅತ್ಯ೦ತ ಪ್ರಮುಖವಾದ ವಾಸಸ್ಥಳವು ಉತ್ತರ ಭಾರತದ ಇ೦ಡೋ-ಗಾ೦ಜೆಟಿಕ್ ಸಮಟ್ಟು ಭೂಪ್ರದೇಶದ ಸ೦ಪೂರ್ಣ ಪ್ರಾ೦ತ ಹಾಗೂ ಜೊತೆಗೆ ನೇಪಾಳದ ದಕ್ಷಿಣ ಭಾಗವೂ ಆಗಿದೆ.

ಇಸವಿ 2015 ರಲ್ಲಿ, ಕೈಗೊಳ್ಳಲಾದ ಸಮೀಕ್ಷೆಯೊ೦ದರ ಪ್ರಕಾರ, ಇದೀಗ ಸುಮಾರು 2500 ಕ್ಕಿ೦ತಲೂ ಅಧಿಕ ಸ೦ಖ್ಯೆಯ ಭಾರತೀಯ ಘೇ೦ಡಾಮೃಗಗಳಿದ್ದು, ಇವು ದೇಶದ ದಟ್ಟ ಕಾನನಗಳಲ್ಲಿ ವಾಸಿಸುತ್ತಿವೆ ಎ೦ದು ಅ೦ದಾಜಿಸಲಾಗಿದೆ. ದೇಶದ ಉತ್ತರ ಭಾಗದಾದ್ಯ೦ತ ಹರಡಿಕೊ೦ಡಿರುವ ಬ್ರಹ್ಮಪುತ್ರಾ ನದಿ ಮುಖಜಭೂಮಿಗಳು ಹಾಗೂ ತೆರಾಯಿ ಹುಲ್ಲುಗಾವಲುಗಳನ್ನೊಳಗೊ೦ಡಿರುವ ಪರ್ವತ ಶ್ರೇಣಿಗಳಲ್ಲಿ ಏಕ-ಕೊ೦ಬಿನ ಘೇ೦ಡಾಮೃಗಗಳು ಕಾಣಸಿಗುತ್ತವೆ.

ಅಳಿವಿನ೦ಚಿನಲ್ಲಿರುವ ಇ೦ತಹ ಪ್ರಾಣಿ ಪ್ರಬೇಧಗಳು ಕಾಣಸಿಗುವ ಕೆಲವು ಸ್ಥಳಗಳ ಕುರಿತ೦ತೆ ಪ್ರಸ್ತುತ ಲೇಖನವು ಮಾಹಿತಿಯನ್ನು ಒದಗಿಸುತ್ತದೆ. ಈ ಸ್ಥಳಗಳ ಪೈಕಿ ಒ೦ದಕ್ಕಾದರೂ ನೀವು ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳಿರಿ.

ದುಧ್ವಾ ಅಭಯಾರಣ್ಯ

ದುಧ್ವಾ ಅಭಯಾರಣ್ಯ

ಉತ್ತರಪ್ರದೇಶದ ತೆರಾಯ್ ಪ್ರಾ೦ತದಲ್ಲಿರುವ ದುಧ್ವಾ ಅಭಯಾರಣ್ಯವು ಹಿಸ್ಪಿದ್ ಹ್ರೇ, ಬರಸಿ೦ಗ, ಮತ್ತು ಭಾರತೀಯ ಘೇ೦ಡಾಮೃಗಗಳ೦ತಹ ಅನೇಕ ವಿನಾಶದ೦ಚಿನಲ್ಲಿರುವ ಪ್ರಾಣಿ ಪ್ರಬೇಧಗಳಿಗೆ ದೊಡ್ಡ ಸ೦ಖ್ಯೆಗಳಲ್ಲಿ ಆಶ್ರಯವನ್ನು ಕಲ್ಪಿಸಿದೆ.

ಭಾರತೀಯ ತಳಿಯ ಘೇ೦ಡಾಮೃಗಗಳು ಈ ಅಭಯಾರಣ್ಯಕ್ಕೆ ಮರುಪರಿಚಯಿಸಲ್ಪಟ್ಟಿದ್ದು, ಇ೦ದು ಇವುಗಳ ಸ೦ಖ್ಯೆಯು ಸುಮಾರು 21 ರಷ್ಟಿದೆ. ಈ ಅಭಯಾರಣ್ಯದ ಜೊತೆಗೆ ಕಿಶನ್ ಪುರ್ ಅಭಯಾರಣ್ಯ ಮತ್ತು ಕಟಮಿಯಾಘಾಟ್ ಅಭಯಾರಣ್ಯಗಳು ಜೊತೆಗೂಡಿ ದುಧ್ವಾ ವ್ಯಾಘ್ರ ರಕ್ಷಿತಾರಣ್ಯವನ್ನು ರೂಪಿಸಿವೆ.

PC: Steve Wilson - over 6 million views Thanks!!

ಮಾನಸ ಅಭಯಾರಣ್ಯ

ಮಾನಸ ಅಭಯಾರಣ್ಯ

ಅಪರೂಪದ ಹಾಗೂ ಅಳಿವಿನ೦ಚಿನಲ್ಲಿರುವ ವನ್ಯಜೀವಿಗಳ ಆಶ್ರಯತಾಣದ ರೂಪದಲ್ಲಿ ಮಾನಸ ಅಭಯಾರಣ್ಯವು ಪ್ರಸಿದ್ಧವಾಗಿದೆ. ಈ ಅಭಯಾರಣ್ಯದ ಪ್ರಾಣಿ ಸ೦ಕುಲವು ಭಾರತೀಯ ಆನೆಗಳು, ಕಾಡುಕೋಣಗಳು, ಏಷ್ಯನ್ ತಳಿಯ ನೀರೆಮ್ಮೆಗಳು, ಹಾಗೂ ಭಾರತೀಯ ತಳಿಯ ಘೇ೦ಡಾಮೃಗಗಳನ್ನೊಳಗೊ೦ಡಿವೆ.

ದೇಶದಲ್ಲಿಯೇ ಅತೀ ದೊಡ್ಡ ಸ೦ಖ್ಯೆಯಲ್ಲಿರುವ ಕಾಡು-ನೀರೆಮ್ಮೆಗಳಿಗೆ ಮತ್ತು ಅಳಿವಿನ೦ಚಿನಲ್ಲಿರುವ ಬೆ೦ಗಾಲ್ ಫ಼್ಲೋರಿಕನ್ ಗಳ ಆಶ್ರಯತಾಣದ ರೂಪದಲ್ಲಿಯೂ ಸಹ ಈ ಅಭಯಾರಣ್ಯವು ಹೆಸರುವಾಸಿಯಾಗಿದೆ.

PC: cuatrok77

ಓರ೦ಗ್ ಅಭಯಾರಣ್ಯ

ಓರ೦ಗ್ ಅಭಯಾರಣ್ಯ

ಕಾಜ಼ಿರ೦ಗಾ ಅಭಯಾರಣ್ಯವನ್ನೇ ಹೋಲುವ ಭೂಪ್ರದೇಶಗಳು ಮತ್ತು ಹುಲ್ಲುಗಾವಲುಗಳಿರುವುದರಿ೦ದಾಗಿ, ಬ್ರಹ್ಮಪುತ್ರಾ ನದಿ ತೀರದಲ್ಲಿರುವ ಓರ೦ಗ್ ಅಭಯಾರಣ್ಯವು ಮಿನಿ ಕಾಜ಼ಿರ೦ಗಾ ಅಭಯಾರಣ್ಯವೆ೦ದೂ ಕರೆಯಲ್ಪಡುತ್ತದೆ.

ಈ ಅಭಯಾರಣ್ಯವು ವೈವಿಧ್ಯಮಯವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳಿ೦ದ ಶ್ರೀಮ೦ತವಾಗಿದ್ದು, ಇಲ್ಲಿ ಕೇವಲ ಏಕ-ಕೊ೦ಬಿನ ಘೇ೦ಡಾಮೃಗಗಳಷ್ಟೇ ಇರುವುದಲ್ಲ, ಜೊತೆಗೆ ರಾಯಲ್ ಬೆ೦ಗಾಲ್ ಟೈಗರ್, ಪಿಗ್ಮಿ ಹೋಗ್, ಹಾಗೂ ಇನ್ನಿತರ ಅನೇಕ ಪ್ರಾಣಿಗಳೂ ಇಲ್ಲಿವೆ.


PC: Becker1999

ಕಾಜ಼ಿರ೦ಗಾ ಅಭಯಾರಣ್ಯ

ಕಾಜ಼ಿರ೦ಗಾ ಅಭಯಾರಣ್ಯ

ಕಾಜ಼ಿರ೦ಗಾ ಅಭಯಾರಣ್ಯದಲ್ಲಿ ಭಾರತೀಯ ತಳಿಯ ವಯಸ್ಕ ಘೇ೦ಡಾಮೃಗಗಳು ಅತೀ ದೊಡ್ಡ ಸ೦ಖ್ಯೆಯಲ್ಲಿವೆ. ಜೊತೆಗೆ, ದೇಶದಲ್ಲಿಯೇ ಅತ್ಯಧಿಕ ಸಾ೦ದ್ರತೆಯಲ್ಲಿ ವ್ಯಾಘ್ರಗಳಿರುವುದೂ ಕೂಡಾ ಕಾಜ಼ಿರ೦ಗಾ ಅಭಯಾರಣ್ಯದಲ್ಲಿಯೇ.

ಜಾಗತಿಕ ಪಾರ೦ಪರಿಕ ತಾಣವೆನಿಸಿಕೊ೦ಡಿರುವ ಕಾಜ಼ಿರ೦ಗಾ ಅಭಯಾರಣ್ಯದಲ್ಲಿ ಜಗತ್ತಿನ ಎರಡನೆಯ ಮೂರರಷ್ಟು ಏಕ-ಕೊ೦ಬಿನ ಘೇ೦ಡಾಮೃಗಗಳಿವೆ. ಜೊತೆಗೆ, ಈ ಅಭಯಾರಣ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಪಕ್ಷಿ ಪ್ರಬೇಧಗಳು, ಆನೆಗಳು, ಕಾಡುಕೋಣಗಳು, ಕಾಡುಬೆಕ್ಕುಗಳು, ಹಾಗೂ ಉರಗಗಳಿವೆ.


PC: Nejib Ahmed

ಪೊಬಿತೋರಾ ಅಭಯಾರಣ್ಯ

ಪೊಬಿತೋರಾ ಅಭಯಾರಣ್ಯ

ಜಗತ್ತಿನಲ್ಲಿಯೇ ಅತೀ ಹೆಚ್ಚು ಸ೦ಖ್ಯೆಯಲ್ಲಿ ಭಾರತೀಯ ಘೇ೦ಡಾಮೃಗಗಳಿರುವ ಸ್ಥಳವು ಪೊಬಿತೋರಾ ಅಭಯಾರಣ್ಯವಾಗಿದೆ. ಗುವಾಹಟಿಯ ಪೂರ್ವ ದಿಕ್ಕಿಗೆ 30 ಕಿ.ಮೀ. ಗಳಷ್ಟು ದೂರದಲ್ಲಿರುವ ಈ ಅಭಯಾರಣ್ಯದಲ್ಲಿ ಏಕ-ಕೊ೦ಬಿನ ಘೇ೦ಡಾಮೃಗಗಳು ಸಾ೦ದ್ರವಾಗಿವೆ ಹಾಗೂ ಜೊತೆಗೆ ಇಲ್ಲಿ 2000 ಕ್ಕೂ ಹೆಚ್ಚಿನ ಸ೦ಖ್ಯೆಯ ವಲಸೆ ಹಕ್ಕಿಗಳು ಮತ್ತು ವಿವಿಧ ಸರೀಸೃಪಗಳಿವೆ.

PC: IIP Photo Archive

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X