Search
  • Follow NativePlanet
Share
» »ಗಾಡ್ಸ್ ಓನ್ ಕಂಟ್ರಿಯಲ್ಲಿ ಇವೆಲ್ಲಾ ಪ್ರಸಿದ್ಧ ಸ್ಥಳಗಳು..

ಗಾಡ್ಸ್ ಓನ್ ಕಂಟ್ರಿಯಲ್ಲಿ ಇವೆಲ್ಲಾ ಪ್ರಸಿದ್ಧ ಸ್ಥಳಗಳು..

ಕೇರಳವನ್ನು "ಗಾಡ್ಸ್ ಓನ್ ಕಂಟ್ರಿ" ಎಂದು ಕರೆಯುತ್ತಾರೆ. ತನ್ನದೇ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ನಾಡು ಎಂದೇ ಹೇಳಬಹುದು. ಕೇರಳದ ಕೊಚ್ಚಿಯಲ್ಲಿ ಅರಬ್ಬರ, ಡಚ್ಚರ, ಚೀನಿಯರ, ಪೋರ್ಚುಗೀಸರ ಹಾಗು ಬ್ರಿಟೀಷರ ಪರಂಪರೆ ಹಾಗು ಸಾಂಸ್

By Sowmyabhai

ಕೇರಳವನ್ನು "ಗಾಡ್ಸ್ ಓನ್ ಕಂಟ್ರಿ" ಎಂದು ಕರೆಯುತ್ತಾರೆ. ತನ್ನದೇ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ನಾಡು ಎಂದೇ ಹೇಳಬಹುದು. ಕೇರಳದ ಕೊಚ್ಚಿಯಲ್ಲಿ ಅರಬ್ಬರ, ಡಚ್ಚರ, ಚೀನಿಯರ, ಪೋರ್ಚುಗೀಸರ ಹಾಗು ಬ್ರಿಟೀಷರ ಪರಂಪರೆ ಹಾಗು ಸಾಂಸ್ಕøತಿಕ ಮುದ್ರಣವನ್ನು ಇಲ್ಲಿ ಕಾಣಬಹುದು.

ಇಲ್ಲಿ ಪಾಮ್ ಮರಗಳು, ಸಮುದ್ರದ ಸುಂದರವಾದ ಅಲೆಗಳು, ಆಕರ್ಷಕವಾದ ಮರಳಿನ ತೀರಗಳು ಪ್ರವಾಸಿಗರನ್ನು ಆಕರ್ಷಿಸದೇ ಇರದು. ಇಲ್ಲಿನ ಆಹ್ಲಾದಕರವಾದ ಪ್ರಯಾಣವು ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ. ಕೊಚ್ಚಿನ್‍ನಲ್ಲಿ ಅನೇಕ ಪ್ರವಾಸಿ ತಾಣಗಳಿವೆ.

ಕೊಚ್ಚಿ ಪ್ರವಾಸೋದ್ಯಮಕ್ಕೆ ಭೇಟಿ ನೀಡುವ ಸಮಯದಲ್ಲಿ ಒಮ್ಮೆ ಈ ಎಲ್ಲಾ ಸ್ಥಳಕ್ಕೆ ಭೇಟಿ ನೀಡಿ ಬನ್ನಿ.

1.ಕೊಚ್ಚಿಯಲ್ಲಿ ಮೀನುಗಾರಿಕೆ ಫೋರ್ಟ್

1.ಕೊಚ್ಚಿಯಲ್ಲಿ ಮೀನುಗಾರಿಕೆ ಫೋರ್ಟ್

PC:Jorge Royan

ಕೊಚ್ಚಿಯನ್ನು ಪ್ರತಿನಿಧಿಸುವ ಚೀನಿ ಮೀನುಗಾರಿಕೆ ಪರದೆಗಳು ಕೊಚ್ಚಿ ಫೋರ್ಟ್‍ನಲ್ಲಿ ಮಾತ್ರವೇ ಕಾಣಬಹುದು. ಕೊಚ್ಚಿಯ ಅತ್ಯಂತ ಅದ್ಭುತವಾದ ಸೊಬಗು ಹಾಗು 14 ನೇ ಶತಮಾನಕ್ಕಿಂತ ಹಿಂದೆ ಇದ್ದ ಸಾಂಪ್ರದಾಯಿಕ ಚೀನಿ ಮೀನುಗಾರಿಕೆಯ ಸೆಟ್‍ಗಳನ್ನು ಇಲ್ಲಿ ಕಾಣಬಹುದು.

ಸ್ಥಳೀಯ ಮೀನುಗಾರರು ನಿಮಗೆ ಮೀನಿನ ಪರದೆಯಿಂದ ಹೇಗೆ ಮೀನುಗಳನ್ನು ಸೆರೆ ಹಿಡಿಯುತ್ತಾರೆ ಎಂಬ ದೃಶ್ಯವನ್ನು ಕಂಡು ಆನಂದಿಸಬಹುದು. ನೀವೂ ಜೀವನದಲ್ಲಿ ಎಂದೂ ಕಾಣದ ಅನುಭೂತಿಯನ್ನು ಪಡೆಯಬೇಕಾದರೆ ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು. ಇದು ಕೊಚ್ಚಿಯ ಅತಿ ಮುಖ್ಯ ಪ್ರವಾಸಿ ಆಕರ್ಷಣೆ.

2.ಹಿಲ್ ಪ್ಯಾಲೆಸ್

2.ಹಿಲ್ ಪ್ಯಾಲೆಸ್

ಇದು ಕೊಚ್ಚಿಯ ಮಹಾರಾಜನಿಗೆ ಅರ್ಪಿತವಾದ ಒಂದು ಪರಂಪರೆಯ ಮ್ಯೂಸಿಯಂ. ಇದೊಂದು ವಸ್ತು ಸಂಗ್ರಹಾಲವಾಗಿದ್ದು, ಕೊಚ್ಚಿಯ ಮಹಾರಾಜನ ಅನೇಕ ಪುರಾತತ್ತ್ವ ಶಾಸ್ತ್ರದ ಅವಶೇಷಗಳನ್ನು ಮತ್ತು ಸಾಮ್ರಾಜ್ಯದ ಸಾಮಾಗ್ರಿಗಳನ್ನು ಹೊಂದಿದೆ. ಈ ಅರಮನೆಯನ್ನು 1865 ರಲ್ಲಿ ನಿರ್ಮಿಸಲಾಯಿತು. ಇದು ಒಟ್ಟು 49 ಕಟ್ಟಡಗಳು ಹೊಂದಿದೆ. ಅಷ್ಟೇ ಅಲ್ಲ, ಸುಂದರವಾದ ಉದ್ಯಾನವನಗಳು ಹಾಗು ಮ್ಯೂಸಿಯಂ ಕೂಡ ಇದೆ. ಕೊಚ್ಚಿಗೆ ಭೇಟಿ ನೀಡಿದಾಗ ತಪ್ಪದೇ ಹಿಲ್ ಪ್ಯಾಲೆಸ್‍ಗೆ ಭೇಟಿ ನೀಡಿ ಬನ್ನಿ.

ಪ್ರವೇಶ ಸಮಯ: ಬೆಳಗ್ಗೆ 9 ರಿಂದ 12 ಮಧ್ಯಾಹ್ನ ಹಾಗು 2 ರಿಂದ 4;30ರವರೆಗೆ. ಮಕ್ಕಳಿಗೆಂದೇ ಮೀಸಲಾದ ಪಾರ್ಕ್ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ. ಸೋಮವಾರದಂದು ಅರಮನೆಯ ಒಳಗೆ ಪ್ರವಾಸಿಗರಿಗೆ ಪ್ರವೇಶವನ್ನು ನೀಡುವುದಿಲ್ಲ.

ಪ್ರವೇಶ ಶುಲ್ಕ: ಈ ಸುಂದರವಾದ ಹಿಲ್ ಅರಮನೆಗೆ ಪ್ರವೇಶ ಪಡೆಯಲು ಒಬ್ಬರಿಗೆ 30 ರೂಪಾಯಿ ಪಾವತಿಸಬೇಕಾಗುತ್ತದೆ.

3.ವಿಂಗ್ ಲ್ಯಾಂಡ್

3.ವಿಂಗ್ ಲ್ಯಾಂಡ್

PC: Offical Site

ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಂಗ್ ಲ್ಯಾಂಡ್ ದೇಶದ ಮೊದಲ ಥೀಮ್ ಪಾರ್ಕ್ ಎಂದು ಹೆಸರುವಾಸಿಯಾಗಿದೆ. ಕೊಚ್ಚಿಗೆ ಭೇಟಿ ನೀಡುವ ಅತಿ ಹೆಚ್ಚು ಸ್ಥಳಗಳಲ್ಲಿ ಇದು ಕೂಡ ಒಂದು. ಬೆಟ್ಟದ ತುದಿಯಲ್ಲಿರುವ ವೀಗ್ ಲ್ಯಾಂಡ್ ರೋಮಾಂಚಕ ಮತ್ತು ವಿನೋದ ತುಂಬಿದ ಸವಾರಿಗಳಿಗೆ ಪ್ರಸಿದ್ಧಿ ಎಂದೇ ಹೇಳಬಹುದು. ಕುಟುಂಬ ಸಮೇತರಾಗಿ, ಮಕ್ಕಳೊಂದಿಗೆ ತಮ್ಮ ಸುಂದರವಾದ ಕಾಲವನ್ನು ಕಳೆಯಬೇಕು ಎಂದು ಅಂದುಕೊಂಡಿರುವವರು ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು.

ಇಲ್ಲಿ ಜಲ ಕ್ರೀಡೆಗಳು, ಆಟಿಕೆ ರೈಲು, ಬಲೂನ್ ಗೋಪುರ, ಅದ್ಭುತವಾದ ಸ್ಪ್ಲಾಶ್, ಬಂಪಿಂಗ್ ಕಾರುಗಳು, ಡ್ಯಾನ್ಸ್ ಕಾರುಗಳು, ಸಂಗೀತದ ಕಾರಂಜಿ ಇನ್ನು ಹಲವಾರು. ವಾರದ ದಿನಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೆ ಮತ್ತು ವಾರಾಂತ್ಯ ಮತ್ತು ರಜಾದಿನಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರವೇಶವಿರುತ್ತದೆ.

ಪ್ರವೇಶ ಶುಲ್ಕ: ವಾರದ ದಿನಗಳಲ್ಲಿ ಒಬ್ಬರಿಗೆ 500 ರೂ, ವಾರಾಂತ್ಯದ ದಿನಗಳಲ್ಲಿ ಹಾಗು ರಜಾದಿನಗಳಲ್ಲಿ ಬೆಲೆ ಹೆಚ್ಚಾಗುತ್ತದೆ.

4.ಮಂಗಲವಣಂ ಪಕ್ಷಿಧಾಮ

4.ಮಂಗಲವಣಂ ಪಕ್ಷಿಧಾಮ

PC:itslife

ಪ್ರಕೃತಿ ಉತ್ಸಾಹಿಗಳಿಗೆ ಮತ್ತು ಪಕ್ಷಿ ಪ್ರೇಮಿಗಳಿಗೆ ಇದೊಂದು ಸ್ವರ್ಗವಿದ್ದಂತೆ. ಇಲ್ಲಿ ಅಳಿವಿನಂಚಿನಲ್ಲಿರುವ, ಸ್ಥಳೀಯ ಹಾಗು ವಲಸೆ ಹಕ್ಕಿಗಳನ್ನು ಕಾಣಬಹುದು. ಕೊಚ್ಚಿಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಮಂಗಲವಣಂ ಪಕ್ಷಿಧಾಮಕ್ಕೆ ತಪ್ಪದೇ ಭೇಟಿ ನೀಡುತ್ತಾರೆ. ಈ ಪಕ್ಷಿಧಾಮದಲ್ಲಿ 32 ಜಾತಿಯ ಪಕ್ಷಿಗಳನ್ನು ಕಾಣಬಹುದು. ಈ ಸುಂದರವಾದ ಪಕ್ಷಿ ಧಾಮವು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಪ್ರವೇಶವನ್ನು ನೀಡುತ್ತಾರೆ. ಯಾವುದೇ ಪ್ರವೇಶ ಶುಲ್ಕವಿಲ್ಲ.

5.ಶಿವ ದೇವಾಲಯ (ಎರ್ನಾಕುಲತಪ್ಪನ್ ದೇವಾಲಯ)

5.ಶಿವ ದೇವಾಲಯ (ಎರ್ನಾಕುಲತಪ್ಪನ್ ದೇವಾಲಯ)

PC:Dileep Kumar

ಈ ದೇವಾಲಯವು ಕೊಚ್ಚಿಯಲ್ಲಿರುವ 7 ರಾಜಮನೆತನದ ದೇವಾಲಯಗಳಲ್ಲಿ ಒಂದಾಗಿದೆ. ಕೊಚ್ಚಿನ್ ನಗರದ ಮಧ್ಯ ಭಾಗದಲ್ಲಿರುವ ಈ ಶಿವನ ದೇವಾಲಯವು ಎರ್ನಾಕುಲತಪ್ಪನ್ ದೇವಾಲಯ ಎಂದು ಕರೆಯಲ್ಪಡುತ್ತದೆ. ಆ ಪರಮೇಶ್ವರನು ನಗರವನ್ನು ರಕ್ಷಿಸುತ್ತಿದ್ದಾನೆ ಎಂದು ನಂಬಲಾಗಿದೆ. ಈ ಪ್ರಸಿದ್ಧವಾದ ದೇವಾಲಯವು ಕೊಚ್ಚಿನ್‍ನಲ್ಲಿ ಜನಪ್ರಿಯ ಪ್ರವಾಸಿ ತಾಣವಾಗಿದೆ.

ಹಾಗಾಗಿಯೇ ನೂರಾರು ಮಂದಿ ಪ್ರವಾಸಿಗರು ಹಾಗು ಭಕ್ತರು ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ. ಕೇವಲ ಕೇರಳದ ಭಕ್ತರೇ ಅಲ್ಲದೇ ಇತರ ರಾಜ್ಯಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಅತ್ಯಂತ ಹಳೆಯದಾದ ಸಾಂಪ್ರದಾಯಿಕ ಪರಂಪರೆಯನ್ನು ಈ ದೇವಾಲಯದ ರಚನೆ ಹೊಂದಿದೆ. ಸುಂದರವಾದ ದ್ವಾರಗಳು, ಸರಳವಾಗಿ ಕೆತ್ತನೆ ಮಾಡಿರುವ ಗರ್ಭಗುಡಿ ಇವೆಲ್ಲಾ ಪರಮೇಶ್ವರನ ಸ್ಥಾನ ಮತ್ತಷ್ಟು ಅದ್ಭುತವಾಗಿ ಕಾನುತ್ತದೆ. ಯಾವುದೇ ಪ್ರವೇಶ ಶುಲ್ಕವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X