Search
  • Follow NativePlanet
Share
» »ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಆಚರಣೆಯನ್ನು ಎಲ್ಲಾ ಧರ್ಮದವರು ಕೂಡ ಆಚರಿಸುತ್ತಾರೆ. ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ವಿಹಾರಕ್ಕೆ ತೆರಳುವುದು ಸಾಮಾನ್ಯವಾದುದು. ನೀವು ಜನಪ್ರಿಯ ಪ್ರವಾಸಕ್ಕೆ ತೆರಳಬೇಕು ಎಂದು ಯೋಜನೆ ಹಾಕಿದ್ದರೆ ಒಮ್ಮ

ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಆಚರಣೆಯನ್ನು ಎಲ್ಲಾ ಧರ್ಮದವರು ಕೂಡ ಆಚರಿಸುತ್ತಾರೆ. ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ವಿಹಾರಕ್ಕೆ ತೆರಳುವುದು ಸಾಮಾನ್ಯವಾದುದು. ನೀವು ಜನಪ್ರಿಯ ಪ್ರವಾಸಕ್ಕೆ ತೆರಳಬೇಕು ಎಂದು ಯೋಜನೆ ಹಾಕಿದ್ದರೆ ಒಮ್ಮೆ ಲೇಖನದಲ್ಲಿ ಹೇಳುವ ಸ್ಥಳಗಳಿಗೆ ಭೇಟಿ ನೀಡಿ ಬನ್ನಿ. ಈ ಸಂದರ್ಭದಲ್ಲಿ ಗೋವಾ, ಮನಾಲಿ ಮತ್ತು ಶಿಮ್ಲಾಗೆ ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ. ಇಂತಹ ತಾಣಗಳಿಗೆ ಭೇಟಿ ನೀಡಿ ದುಬಾರಿ ಖರ್ಚು ಮಾಡುವ ಬದಲು ಅಗ್ಗದ ಖರ್ಚು ಮಾಡಿ ದುಪ್ಪಟ್ಟು ಆನಂದ ಪಡೆಯಬೇಕು ಎನ್ನುವವರಿಗೆ ಈ ತಾಣಗಳಿಗೆ ಭೇಟಿ ನೀಡಲೇಬೇಕು.

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಗೋಕರ್ಣ
ಗೋಕರ್ಣವು ಒಂದು ಸಣ್ಣ ಪ್ರವಾಸೋದ್ಯಮ ಪಟ್ಟಣವಾಗಿದ್ದು, ಭಾರತೀಯ ಪ್ರವಾಸಿಗರೇ ಅಲ್ಲದೇ ಬಹಳಷ್ಟು ಯುರೋಪಿಯನ್ನರು ಮತ್ತು ರಷ್ಯನ್ನರು ಕೂಡ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಗೋಕರ್ಣ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್ ಮತ್ತು ಪ್ಯಾರಡೈಸ್ ಬೀಚ್ ಇನ್ನು ಹಲವಾರು ಬೀಚ್‍ಗಳು ಇಲ್ಲಿವೆ. ಇವೆಲ್ಲವೂ ಸಾಕಷ್ಟು ನೆಮ್ಮದಿಯಿಂದ ಕೂಡಿರುತ್ತದೆ. ಇಲ್ಲಿ ಮಹಾಬಲೇಶ್ವರ ದೇವಾಲಯ, ಮಹಾ ಗಣಪತಿ ದೇವಾಲಯ, ಉಮಾ ಮಹೇಶ್ವರ ದೇವಾಲಯ, ಭದ್ರಕಾಳಿ ದೇವಾಲಯ ಇನ್ನು ಹಲವಾರು ಆಕರ್ಷಣೆಗಳನ್ನು ಇಲ್ಲಿವೆ. ಇಲ್ಲಿ ಹೊಸವರ್ಷ ಆಚರಿಸಲು ಅತ್ಯುತ್ತಮವಾದ ಸ್ಥಳವೆಂದೇ ಹೇಳಬಹುದು.

PC: Abhijit Shylanath

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಶಿಲ್ಲಾಂಗ್
ಮೇಘಾಯಲದ ಶಿಲ್ಲಾಂಗ್‍ನಲ್ಲಿ ಅನೇಕ ಆಕರ್ಷಣೀಯ ಜಲಪಾತಗಳು ಇವೆ. ಇಲ್ಲಿ ಸುಂದರವಾದ ಪರ್ವತಗಳ ಹಾಗು ಪ್ರಕೃತಿಕ ಸೊಬಗನ್ನು ಕಣ್ಣು ತುಂಬಿಕೊಳ್ಳಬಹುದು. ಸುತ್ತಲಿನ ಸೌಂದರ್ಯ ಮಂತ್ರಮುಗ್ಧರನ್ನಾಗಿಸದೇ ಬಿಡದು. ಇದು ಪ್ರಕೃತಿ ಪ್ರೇಮಿಗಳಿಗೆ ಹಾಗು ಛಾಯಾ ಗ್ರಹಕರಿಗೆ ಸ್ವರ್ಗವಾಗಿದೆ. ಇಲ್ಲಿ ನೀವು ಹೊಸವರ್ಷ ಮತ್ತು ಕ್ರಿಸ್‍ಮಸ್ ಅನ್ನು ಆಚರಿಸಬಹುದು. ಶಿಲ್ಲಾಂಗ್‍ಗೆ ಭೇಟಿ ನೀಡಲು ಹಲವಾರು ಸ್ಥಳಗಳಿವೆ.

PC: OML

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಪಾಂಡಿಚೆರಿ
ಪೂರ್ವದ ಫ್ರೆಂಚ್ ರಿವೇರಿಯಾ ಎಂದು ಕರೆಯಲ್ಪಡುವ ಪಾಂಡಿಚೆರಿ, ಈಗ ಪುದುಚೆರಿ ಎಂದು ಕರೆಯಲಾಗುತ್ತಿದೆ. ಇದು ಭಾರತದ ಪೂರ್ವ ಕರಾವಳಿಯಲ್ಲಿದೆ. ಚೆನ್ನೈನಿಂದ ದಕ್ಷಿಣಕ್ಕೆ ಸುಮಾರು 135 ಕಿ.ಮೀ ದೂರದಲ್ಲಿದೆ. ಇಲ್ಲಿ ಹೊಸವರ್ಷ ಆಚರಣೆ ಮತ್ತು ಕ್ರಿಸ್ ಮಸ್ ಆಚರಣೆ ಮಾಡಲು ಅತ್ಯುತ್ತಮವಾದ ಸ್ಥಳವೆಂದೇ ಹೇಳಬಹುದು. ಇಲ್ಲಿಯೂ ಕೂಡ ಅನೇಕ ಪ್ರವಾಸಿ ತಾಣಗಳಿವೆ.

PC:BishkekRocks

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಕೊಡೈಕೆನಾಲ್
ಕೊಡೈಕೆನಾಲ್ ತಮಿಳುನಾಡಿನ ಅತ್ಯಂತ ಜನಪ್ರಿಯವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 7,200 ಅಡಿ ಎತ್ತರದಲ್ಲಿದೆ. ಇದನ್ನು "ಹಿಲ್ ಸ್ಟೇಷನ್‍ನ ರಾಜಕುಮಾರಿ" ಎಂದು ಕರೆಯುತ್ತಾರೆ. ಕೊಡೈಕೆನಾಲ್‍ನಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಹೇರಳವಾಗಿ ಪ್ರವಾಸಿಗರು ಸವಿಯಬಹುದು. ಇಲ್ಲಿ ಟ್ರೆಕ್ಕಿಂಗ್, ಸೈಕ್ಲಿಂಗ್, ಬಲೂನ್ ಶೂಟಿಂಗ್, ಕುದುರೆ ಸವಾರಿ, ದೋಣಿ ವಿಹಾರ ಮತ್ತು ಕೊಡೈಕೆನಾಲ್‍ನಲ್ಲಿ ಇತರ ಸಾಹಸ ಚಟುವಟಿಕೆಗಳನ್ನು ಕೂಡ ಆನಂದಿಸಬಹುದು. ಇಲ್ಲಿ ಕ್ರಿಸ್‍ಮಸ್ ಹಾಗು ಹೊಸವರ್ಷವನ್ನು ಆಚರಿಸಲು ಸೂಕ್ತವಾದ ಪ್ರದೇಶವೆಂದೇ ಹೇಳಬಹುದು.

PC:: Aruna

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ಕ್ರಿಸ್‍ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...

ತಾರ್ಕಾಲಿ
ತಾರ್ಕಾಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಒಂದು ಹಳ್ಳಿಯಾಗಿದೆ. ಭಾರತದ ರಾಜಧಾನಿಯಾದ ಗೋವಾದಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ಅದರ ಪ್ರಾಚೀನ ಮರಳು ಕಡಲುತೀರಗಳಿಗೆ ಈ ತಾಣವು ಹೆಸರುವಾಸಿಯಾಗಿದೆ, ಇಲ್ಲಿಯೂ ಕೂಡ ಹೊಸವರ್ಷವನ್ನು ಹಾಗು ಕ್ರಿಸ್‍ಮಸ್ ಅನ್ನು ಆಚರಿಸಲು ಸೂಕ್ತವಾದ ಸ್ಥಳವೆಂದೇ ಹೇಳಬಹುದು. ಇಲ್ಲಿ ಸಮುದ್ರದ ತಿನಿಸುಗಳು ತುಂಭ ಪ್ರಸಿದ್ಧಿ. ಇಲ್ಲಿಯೂ ಕೂಡ ಅನೇಕ ಪ್ರವಾಸಿ ತಾಣಗಳಿವೆ. ಒಮ್ಮೆ ಹೊಸವರ್ಷಕ್ಕೆ ಹಾಗು ಕ್ರಿಸ್‍ಮಸ್ ಆಚರಣೆಗೆ ಭೇಟಿ ನೀಡಿ ಬನ್ನಿ.

PC: Rohit Keluskar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X