Search
  • Follow NativePlanet
Share
» »ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಣೆಯು ಕೇವಲ ಕ್ರೈಸ್ತರಿಗೆ ಮಾತ್ರವಲ್ಲದೇ ಎಲ್ಲಾ ಧರ್ಮದವರು ಕೂಡ ಇತ್ತೀಚೆಗೆ ಆಚರಿಸುತ್ತಾರೆ. ಕ್ರಿಸ್‍ಮಸ್ ಬಂತು ಎಂದರೆ ಮತ್ತೇನೂ ಹೊಸ ವರ್ಷ ಬಂತು ಎಂದ ಹಾಗೆಯೇ ಅಲ್ಲವೇ? ಈ ಹಬ್ಬವು ಮುಖ್ಯವಾಗಿ ಕ್ಷಮೆ ಮತ್ತು ಪ್ರೀತಿಯನ್ನು ಪ್ರ

ಕ್ರಿಸ್‍ಮಸ್ ಆಚರಣೆಯು ಕೇವಲ ಕ್ರೈಸ್ತರಿಗೆ ಮಾತ್ರವಲ್ಲದೇ ಎಲ್ಲಾ ಧರ್ಮದವರು ಕೂಡ ಇತ್ತೀಚೆಗೆ ಆಚರಿಸುತ್ತಾರೆ. ಕ್ರಿಸ್‍ಮಸ್ ಬಂತು ಎಂದರೆ ಮತ್ತೇನೂ ಹೊಸ ವರ್ಷ ಬಂತು ಎಂದ ಹಾಗೆಯೇ ಅಲ್ಲವೇ? ಈ ಹಬ್ಬವು ಮುಖ್ಯವಾಗಿ ಕ್ಷಮೆ ಮತ್ತು ಪ್ರೀತಿಯನ್ನು ಪ್ರೋತ್ಸಾಹಿಸುವ ಸುಂದರವಾದ ಆಚರಣೆಯಾಗಿದೆ. ಇದು ದೇಶದ ಅನೇಕ ಭಾಗಗಳಲ್ಲಿಯೂ ಕೂಡ ಪ್ರಭಾವವನ್ನು ಬೀರುತ್ತದೆ. ಇದು ತನ್ನದೇ ಆದ ವೈಭವ ಪೂರ್ಣ ಸಂಭ್ರಮ, ಪ್ರದರ್ಶನ, ಉತ್ಸಾಹದಿಂದ ಆಚರಿಸಲಾಗುತ್ತದೆ. ಕ್ರಿಸ್‍ಮಸ್ ಅನ್ನು ಸಾಮಾನ್ಯವಾಗಿ ಎಲ್ಲರೂ ಆಚರಿಸುವುದರಿಂದ ಲೇಖನದಲ್ಲಿ ಕ್ರಿಸ್‍ಮಸ್ ಸಂಭ್ರಮವನ್ನು ಸಂಭ್ರಮಿಸಲು ಸೂಕ್ತವಾದ ಸ್ಥಳಗಳ ಪಟ್ಟಿ ಇಲ್ಲಿವೆ.

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಗೋವಾ
ಗೋವಾದಲ್ಲಿ ಎಲ್ಲಾ ರೀತಿಯ ಸಂಭ್ರಮ ಆಚರಣೆಗಳನ್ನು ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ಹೊಸ ವರ್ಷ ಆಚರಣೆ, ಕ್ರಿಸ್‍ಮಸ್, ನೈಟ್ ಪಾರ್ಟಿಗಳು ಹೆಚ್ಚು. ಇಲ್ಲಿನ ವಿಶೇಷವೆನೆಂದರೆ ಪೋರ್ಚುಗೀಸರ ಪರಂಪರೆಯನ್ನು ಮರೆಯಲಾಗದ ಮತ್ತು ಗಣನೀಯವಾದ ರೋಮನ್ ಕ್ಯಾಥೋಲಿಕ್ ಜನರೊಂದಿಗೆ ಗೋವಾದಲ್ಲಿ ಕ್ರಿಸ್‍ಮಸ್ ಆಚರಿಸಲಾಗುತ್ತದೆ. ಇಲ್ಲಿನ ವಾತಾವರಣವು ಅತ್ಯಂತ ಉತ್ಸಾಹದಿಂದ ಕೂಡಿರುತ್ತದೆ. ಹಾಗೆಯೇ ಇಲ್ಲಿ ಪ್ರದರ್ಶನ ಸಮಾರಂಭ ಕೂಡ ಮಾಡುತ್ತಾರೆ. ಇಡೀ ನಗರವನ್ನು ಹೂವು ಹಾಗು ದೀಪಗಳಿಂದ ಅಲಂಕಾರ ಮಾಡಿರುತ್ತಾರೆ. ಮುಖ್ಯವಾಗಿ ಅಂಜುನಾ, ಮಾಪುಸಾ ಮತ್ತು ಕ್ಯಾಂಡೋಲಿಮ್ ನಂತಹ ಬೀಚ್‍ಗಳಲ್ಲಿ ಎಲ್ಲಾ ರಾತ್ರಿಯ ಸ್ವಾಧಿಷ್ಟ ಆಹಾರಗಳನ್ನು ಆಯೋಜಿಸುತ್ತಾರೆ.

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಪುದುಚೆರಿ
ಪುದುಚೆರಿಯಲ್ಲಿ ಫ್ರೆಂಚ್ ಪ್ರಭಾವವು ನಿಜಕ್ಕೂ ರೊಮಾಂಚನವಾಗದೇ ಇರದು ನೀವು ಶಾಂತಿಯುತವಾದ ಉತ್ಸಾಹಭರಿತವಾದ ಕ್ರಿಸ್‍ಮಸ್ ಆಚರಣೆಯನ್ನು ಬಯಸುತ್ತಿದ್ದರು. ಪುದುಚೆರಿಯಲ್ಲಿ ಗೋವಾದಂತೆಯೇ ರೋಮನ್ ಹಾಗು ಕ್ಯಾಥೋಲಿಕ್ ಜನಸಂಖ್ಯೆ ಹೆಚ್ಚಾಗಿಯೇ ಇದೆ. ಕ್ರಿಸ್‍ಮಸ್‍ನಲ್ಲಿ ಪುದುಚೆರಿ ಅತ್ಯಂತ ಪ್ರಕಾಶಮಾನವಾಗಿ ಕಾಣುತ್ತದೆ. ಇಲ್ಲಿ ಅನೇಕ ಸುಂದರವಾದ ಚರ್ಚ್‍ಗಳಿವೆ. ನೀವು ಪುದುಚೆರಿಗೆ ಭೇಟಿ ನೀಡಿದಾಗ ಒಮ್ಮೆ ಕ್ರಿಸ್‍ಮಸ್ ಸಮಾರಂಭಕ್ಕೆ ಪಾಲ್ಗೊಳ್ಳಿ.

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕೇರಳ
ಕೇರಳ ಅನೇಕ ಚರ್ಚ್‍ಗಳ ನೆಲೆಯಾಗಿದೆ. ಇದು ಕ್ರಿಸ್‍ಮಸ್ ಆಚರಿಸಲು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಬಹುದೆಂದು ಊಹಿಸಬಹುದು. ಪ್ರತಿಯೊಂದು ಬೀದಿಯನ್ನು ಅಲಂಕರಿಸಲಾಗುತ್ತದೆ. ರಾತ್ರಿಯ ಸಮಯದಲ್ಲಿ ಬೀದಿಗಳು ಇನ್ನು ಸುಂದರವಾಗಿ ಕಾಣುತ್ತದೆ. ಈ ಸಮಯದಲ್ಲಿ ರೆಸ್ಟೋರೆಂಟ್‍ಗಳು ಆಹಾರ ಮತ್ತು ಪಾನೀಯದ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತದೆ. ಇಲ್ಲಿನ ಬೀಚ್‍ಗಳು ಮತ್ತು ಪ್ರಶಾಂತವಾದ ಹಿನ್ನೀರುಗಳು ಮತ್ತಷ್ಟು ರೊಮಾಂಚನಕಾರಿ ಅನುಭೂತಿಯನ್ನು ಉಂಟು ಮಾಡುತ್ತದೆ.

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಮುಂಬೈ
ಮುಂಬೈ ಭಾರತದಲ್ಲಿ ಸಂಭ್ರಮ ಆಚರಿಸುವುದರಲ್ಲಿ ಅಗ್ರಸ್ಥಾನದಲ್ಲಿದೆ. ಬೇಕರಿಗಳಲ್ಲಿ ಬಗೆ ಬಗೆಯಾದ ಕೇಕ್‍ಗಳನ್ನು ಇಲ್ಲಿ ತಯಾರಿಸುತ್ತಾರೆ. ಈ ಪ್ರದೇಶವು ಹೆಚ್ಚಾಗಿ ಕ್ಯಾಥೋಲಿಕ್‍ಗಳು ವಾಸವಾಗಿದ್ದು, ಮನೆಗಳು, ಬೀದಿಗಳನ್ನು ದೀಪದಿಂದ, ಕ್ರಿಸ್‍ಮಸ್ ಮರಗಳಿಂದ ಅಲಂಕರಿಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಹೋಲಿ ನೇಮ್ ಕ್ಯಾಥೆಡ್ರಲ್, ಸೇಂಟ್ ಥಾಮಸ್ ಕ್ಯಾಥೆಡ್ರಲ್, ಗ್ಲೋರಿಯಾ ಚರ್ಚ್, ಸೇಂಟ್ ಮೈಕೆಲ್ ಚರ್ಚ್, ಮೌಂಟ್ ಮೇರಿಸ್ ಬೆಸಿಲಿಕಾ ಇನ್ನು ಹಲವಾರು ಚರ್ಚ್‍ಗಳು ಇಲ್ಲಿವೆ. ಮುಂಬೈನಲ್ಲಿ ಬಹಳಷ್ಟು ಕ್ರಿಸ್‍ಮಸ್ ಈವ್ ಪಾರ್ಟಿಗಳನ್ನು ನಿರೀಕ್ಷಿಸಬಹುದು.

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಕ್ರಿಸ್‍ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು

ಬೆಂಗಳೂರು
ಕ್ರಿಸ್‍ಮಸ್ ಬೆಂಗಳೂರಿನಲ್ಲಿ ಉತ್ಸಾಹಭರಿತವಾಗಿ ಆಚರಿಸಲಾಗುತ್ತದೆ. ಮುಂಬರುವ ವರ್ಷಗಳಲ್ಲಿ ಮಾಲ್‍ಗಳು, ಮಾರುಕಟ್ಟೆಗಳು ಮತ್ತು ರೆಸ್ಟೋರೆಂಟ್‍ಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಕೇವಲ ಕ್ರಿಶ್ಚಿಯನ್ನರೇ ಅಲ್ಲದೇ ಬೇರೆ ಧರ್ಮದವರು ಕೂಡ ಭೇಟಿ ನೀಡುತ್ತಿರುತ್ತಾರೆ. ಕ್ರಿಸ್‍ಮಸ್‍ನಲ್ಲಿ ಹೆಚ್ಚು ಆಕರ್ಷಣಿಯುತವಾದ ಮತ್ತು ವಿನೋದಯುತವಾದ ವಾತಾವರಣಕ್ಕೆ ಒಮ್ಮೆ ಬೆಂಗಳೂರಿನ ಅನೇಕ ಚರ್ಚ್‍ಗಳಿಗೆ ಭೇಟಿ ನೀಡಲೇಬೇಕು. ಇಲ್ಲಿ ಮುಖ್ಯವಾಗಿ ಸೇಂಟ್ ಮೇರಿಸ್, ಬೆಸಿಲಿಕಾ, ಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್ ಮತ್ತು ಸಿಟಿ ಹಾರ್ವೆಸ್ಟ್ ಚರ್ಚ್‍ಗಳು ಮಧ್ಯರಾತ್ರಿಯವರೆವಿಗೂ ತೆರೆದಿರಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X