Search
  • Follow NativePlanet
Share
» »ಬಿಜಾಪುರದಲ್ಲಿನ ಚಾರಿತ್ರಿಕ ಪ್ರವಾಸಿತಾಣಗಳು

ಬಿಜಾಪುರದಲ್ಲಿನ ಚಾರಿತ್ರಿಕ ಪ್ರವಾಸಿತಾಣಗಳು

ಬಿಜಾಪುರ ನಮ್ಮ ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಿಜಾಪುರವನ್ನು ವಿಜಯಪುರ ಎಂದೂ ಸಹ ಕರೆಯುತ್ತಾರೆ. ಇಲ್ಲಿ ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪ ಮತ್ತು ಶಿಲ್ಪಕಲೆಗಳಿಗೆ ಬಿಜಾಪುರ ಒಂದು ಒಳ್ಳೆಯ ನಿರ್ದಶನವಾಗಿದೆ. ಇಲ್ಲಿ ಮಸೀ

ಬಿಜಾಪುರ ನಮ್ಮ ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬಿಜಾಪುರವನ್ನು ವಿಜಯಪುರ ಎಂದೂ ಸಹ ಕರೆಯುತ್ತಾರೆ. ಇಲ್ಲಿ ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪ ಮತ್ತು ಶಿಲ್ಪಕಲೆಗಳಿಗೆ ಬಿಜಾಪುರ ಒಂದು ಒಳ್ಳೆಯ ನಿರ್ದಶನವಾಗಿದೆ. ಇಲ್ಲಿ ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆಗಳು ಎಂದು 4 ವಿಭಾಗವಾಗಿ ವಿಭಾಗಿಸಬಹುದು.

ಬಿಜಾಪುರದ ಕೋಟೆಯು ಭಾರತದ ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಒಂದೊಂದು ಕೋಟೆಯು ಸುಮಾರು 50 ಅಡಿ ದಪ್ಪವಾಗಿರುತ್ತದೆ. ಅವುಗಳ ಎತ್ತರ ಸುಮಾರು 20-30 ಅಡಿಗಳಷ್ಟು ಇರುತ್ತದೆ. ಬಿಜಾಪುರದ ಚಾರಿತ್ರಿಕ ಮಹತ್ವದ ಬಗ್ಗೆ ಇನ್ನೂ ಆನೇಕ ಸಂಗತಿಗಳಿವೆ. ಬಿಜಾಪುರದಲ್ಲಿ ಸುಮಾರು 70 ಪ್ರವಾಸಿತಾಣಗಳು ಇವೆ.

ಅವುಗಳ ಬಗ್ಗೆ ಲೇಖನದ ಮೂಲಕ ಬಿಜಾಪುರದಲ್ಲಿನ ಪ್ರಸಿದ್ಧ 5 ತಾಣಗಳ ಬಗ್ಗೆ ತಿಳಿಯೋಣ.

ಗೋಲ್ ಗುಂಬಜ್

ಗೋಲ್ ಗುಂಬಜ್

ಗೋಲ್ ಗುಂಬಜ್ ಬಿಜಾಪುರದಲ್ಲಿನ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದನ್ನು 1490 ಮತ್ತು 1696ರ ನಡುವೆ ಆದಿಲ್ ಶಾಹಿ ರಾಜವಂಶವನ್ನು ಆಳ್ವಿಕೆ ಮಾಡಿದ ಮುಹಮ್ಮದ್ ಆದಿಲ್ ಷಾನ ಸಮಾಧಿಯಾಗಿದೆ. ಸುಮಾರು 124 ಅಡಿ ವ್ಯಾಸದ ಇಲ್ಲಿನ ಸ್ತಂಭ ಯಾವುದೇ ಬೆಂಬಲವಿಲ್ಲದೇ ನಿಲ್ಲುತ್ತದೆ. ಆಶ್ಚರ್ಯವೆನೆಂದರೆ ಇದು ವಿಶ್ವದಲ್ಲೇ ಎರಡನೆಯ ಅತಿ ದೊಡ್ಡದಾಗಿದೆ.

PC:Ashwath

ಗೋಲ್ ಗುಂಬಜ್

ಗೋಲ್ ಗುಂಬಜ್

ಈ ಗೋಲ್ ಗುಂಬಜ್ ಕಟ್ಟಡವು 8 ಅಂತಸ್ತುಗಳನ್ನು ಒಳಗೊಂಡಿದೆ. ಗುಮ್ಮಟದ ಒಳಭಾಗದಲ್ಲಿ ಸುತ್ತಲೂ ವೃತ್ತಾಕಾರವಾಗಿರುವ ಬಾಲ್ಕಿನಿ ಇದೆ. 1700 ಚದರ ಮೀ ಪ್ರದೇಶವನ್ನು ಹೊರತು ಪಡಿಸಿ ಸಮಾಧಿಯು 38 ಮೀಟರ್ ವಿಸ್ತೀರ್ಣ ಹೊಂದಿದೆ. ಇದು ಸುಮಾರು 51 ಮೀಟರ್ ಎತ್ತರದಲ್ಲಿದೆ. ಈ ಸುಂದರವಾದ ಗೋಲ್ ಗುಂಬಜ್ ಕಾಣಲು ಹಲವಾರು ಸ್ಥಳಗಳಿಂದ ಭೇಟಿ ನೀಡುತ್ತಾರೆ.


PC:Meesanjay

ಮಲಿಕ್-ಇ-ಮೈದಾನ್

ಮಲಿಕ್-ಇ-ಮೈದಾನ್

ಮಲಿಕ್-ಇ-ಮೈದಾನ್ ಪ್ರಪಂಚದ ಅತಿದೊಡ್ಡ ಬೆಲ್ ಮೆಟಲ್ ಗನ್ ಎಂದು ಪರಿಗಣಿಸಲಾಗಿದೆ. ಈ ಮಲಿಕ್-ಇ-ಮೈದಾನ್ ಇರುವುದು ಬಿಜಾಪುರ ಜಿಲ್ಲೆಯಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಇದರ ಅರ್ಥ "ದಿ ಮೊನಾರ್ಕ್ ಆಫ್ ದಿ ಪ್ಲೇನ್ಸ್" ಆಗಿದೆ. ಇದನ್ನು 1549 ರಲ್ಲಿ ಅಲಿ ಆದಿಲ್ ಶಾಹಿ ಅವರು ನಿರ್ಮಿಸಿದರು.


PC:IndianCow

ಮಲಿಕ್-ಇ-ಮೈದಾನ್

ಮಲಿಕ್-ಇ-ಮೈದಾನ್

ಆಶ್ಚರ್ಯವೆನೆಂದರೆ ಇದನ್ನು ಯುದ್ಧದ ಟ್ರೋಫಿ ಎಂದು ಪರಿಗಣಿಸಲಾಗಿದೆ. ಮಲಿಕ್-ಇ-ಮೈದಾನ್ 4.45 ಮೀಟರ್ ಉದ್ದ ಹಾಗು 1.5 ಮೀಟರ್ ಎತ್ತರವನ್ನು ಹೊಂದಿದೆ. ಇದು ಸುಮಾರು 55 ಟನ್ ಭಾರವಿದೆಯಂತೆ. ಈ ಫಿರಂಗಿಯ ಕೊನೆಯ ಭಾಗದಲ್ಲಿ ಸಿಂಹದ ತಲೆಯ ಆಕಾರದಲ್ಲಿದೆ. ಫಿರಂಗಿಯ ಮೇಲೆ ಔರಂಗಜೇಬ್ ನಿಯೋಜಿಸಿದ ಶಾಸನವನ್ನು ಕೂಡ ಇಲ್ಲಿ ಕಾಣಬಹುದಾಗಿದೆ.

PC:Santoshsmalagi

ಇಬ್ರಾಹಿಂ ರೌಝಾ

ಇಬ್ರಾಹಿಂ ರೌಝಾ

ಅತ್ಯಂತ ಸುಂದರವಾಗಿರುವ ಈ ಇಬ್ರಾಹಿಂ ರೌಝಾ ಬಿಜಾಪುರದ ಮತ್ತೊಂದು ಅದ್ಭುತವಾದ ಐತಿಹಾಸಿಕವಾದ ತಾಣವಾಗಿದೆ. ಇದನ್ನು "ಡೆಕ್ಕನ್ ತಾಜ್ ಮಹಲ್" ಎಂದು ಉಲ್ಲೇಖಿಸಲಾಗುತ್ತದೆ. ಈ ಇಬ್ರಾಹಿಂ ರೌಝಾ ಅನ್ನು ಮಲ್ಲಿಕ್ ಸ್ಯಾಂಡಲ್ ಎಂಬ ವಾಸ್ತುಶಿಲ್ಪಿಯು ವಿನ್ಯಾಸಗೊಳಿಸಿದನು. ಇಲ್ಲಿ ಸಮಾಧಿಗಳನ್ನು ಕಾಣಬಹುದಾಗಿದೆ.

PC:Rahul240488

ಇಬ್ರಾಹಿಂ ರೌಝಾ

ಇಬ್ರಾಹಿಂ ರೌಝಾ

ಇಲ್ಲಿ 2 ನೇ ಇಬ್ರಾಹಿಂ ಆದಿಲ್ ಷಾ ಮತ್ತು ಅತನ ಪತ್ನಿ ತಾಜ್ ಸುಲ್ತಾನ್ ಅವಶೇಷಗಳನ್ನು ಇಲ್ಲಿ ಇವೆ. ಇಲ್ಲಿ ಗೋಳಾಕಾರದ ಗುಮ್ಮಟವನ್ನು ದೊಡ್ಡ ದೊಡ್ಡ ದಳಗಳಿಂದ ಅಲಂಕರಿಸಿಲ್ಪಟ್ಟಿದೆ. ಮಸೀದಿ ಮತ್ತು ಸಮಾಧಿಗಳೆರಡೂ ಸುಂದರವಾದ ಉದ್ಯಾನವನದ ಮಧ್ಯೆ ಇದೆ.

PC:Aanand

ಬಾರಾ ಕಮಾನು

ಬಾರಾ ಕಮಾನು

ಕರ್ನಾಟಕದ ಬಿಜಾಪುರದಲ್ಲಿ 2 ನೇ ಆದಿಲ್ ಷಾರವರ ಅಪೂರ್ಣವಾದ ಸಮಾಧಿಯಾಗಿದೆ. ವಿಶೇಷವಾಗಿ ಆದಿಲ್ ಷಾಹಿ ರಾಜವಂಶದ ಆಡಳಿತಗಾರನಾದ ಅಲಿ ಆದಿಲ್ ಷಾ ಅಸಾಧಾರಣ ಗುಣಮಟ್ಟದ ಸಮಾಧಿಯನ್ನು ನಿರ್ಮಾಣ ಮಾಡಲು ಬಯಸಿದ್ದನು. ಯೋಜನೆಯ ಪ್ರಕಾರ, ಸಮಾಧಿಯ ಸುತ್ತ ಲಂಬವಾಗಿ ಮತ್ತು ಅಡ್ಡವಾಗಿ 12 ಕಮಾನುಗಳನ್ನು ಇರಿಸಲಾಗಿದೆ.

PC:Ksprabhukumar37

ಬಾರಾ ಕಮಾನು

ಬಾರಾ ಕಮಾನು

ಆದರೆ ಕೆಲವು ಕಾರಣಗಳಿಂದಾಗಿ, ಕೆಲಸ ಅಪೂರ್ಣವಾಗಿ ಉಳಿದಿದೆ. ಪ್ರಸ್ತುತ ಈ ಬಾರಾ ಕಮಾನುಗಳನ್ನು ಭಾರತದ ಪುರಾತತ್ವ ಸಮೀಕ್ಷೆಯು ನಿರ್ವಹಿಸುತ್ತಿದೆ. ಇದೊಂದು ಅದ್ಭುತವಾದ ಕಮಾನಾಗಿದೆ. ಬಾರ ಎಂದರೆ 12 ಎಂಬ ಅರ್ಥವಾಗಿದೆ.

PC:Ramnath Bhat

ಜುಮ್ಮ ಮಸೀದಿ

ಜುಮ್ಮ ಮಸೀದಿ

ಜುಮ್ಮ ಮಸೀದಿ ಅತ್ಯಂತ ಸುಂದರವಾದ ಸ್ಮಾರಕ ಕಟ್ಟಡವಾಗಿದೆ. ಇದನ್ನು ತಾಳಿಕೋಟಾ ಕದನದಲ್ಲಿ ವಿಜಯವನ್ನು ಆಚರಿಸಲು ಆದಿಲ್ ಷಾಹಿ ಸಾಮ್ರಾಜ್ಯದ ಆಡಳಿತಗಾರ 1 ನೇ ಅಲಿ ಆದಿಲ್ ಷಾ (1557-1580) ರಲ್ಲಿ ಜುಮ್ಮ ಮಸೀದಿಯನ್ನು ನಿರ್ಮಾಣ ಮಾಡಲಾಯಿತು.

PC:Prahaladhan

ಜುಮ್ಮ ಮಸೀದಿ

ಜುಮ್ಮ ಮಸೀದಿ

ಇದು ಸುಮಾರು 10,810 ಚದರ ಮೀ ವಿಸ್ತೀರ್ಣದಲ್ಲಿ ಹರಡಿದೆ. ಇದು ಸುಂದರವಾದ ಕಮಾನುಗಳನ್ನು, ಉತ್ತಮ ಗುಣಮಟ್ಟ ಮತ್ತು ದೊಡ್ಡ ಆಂತರಿಕ ಅಂಗಳವನ್ನು ಹೊಂದಿದೆ. ಇದು ಭಾರತದಲ್ಲಿನ ಮೊದಲ ಮಸೀದಿಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಹಾಗೆಯೇ ಈ ಪ್ರದೇಶದಲ್ಲಿಯೇ ಅತ್ಯಂತ ದೊಡ್ಡದಾದ ಮಸೀದಿ ಇದಾಗಿದೆ.


PC:Prahaladhan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X