Search
  • Follow NativePlanet
Share
» »ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೊಸವರ್ಷವು ಒಂದು ದೊಡ್ಡ ಸಂಭ್ರಮ ಆಚರಣೆ ಎಂದೇ ಹೇಳಬಹುದು. ಹೀಗಿರುವಾಗ ಒಂದು ಸುಂದರವಾದ ಸ್ಥಳಕ್ಕೆ ತೆರಳಿ ಅಲ್ಲಿ ಹೊಸ ವರ್ಷವನ್ನು ಆಚರಿಸಬೇಕು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಇರುವ ಬಯಕೆಯೇ ಆಗಿದೆ

ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೊಸವರ್ಷವು ಒಂದು ದೊಡ್ಡ ಸಂಭ್ರಮ ಆಚರಣೆ ಎಂದೇ ಹೇಳಬಹುದು. ಹೀಗಿರುವಾಗ ಒಂದು ಸುಂದರವಾದ ಸ್ಥಳಕ್ಕೆ ತೆರಳಿ ಅಲ್ಲಿ ಹೊಸ ವರ್ಷವನ್ನು ಆಚರಿಸಬೇಕು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಇರುವ ಬಯಕೆಯೇ ಆಗಿದೆ. ಇಲ್ಲಿ ಅನೇಕ ತಾಣಗಳಿವೆ 2018ರ ಹೊಸವರ್ಷದ ಆಚರಣೆಯನ್ನು ಆಚರಿಸಿದರೆ ಜೀವನದಲ್ಲಿ ಎಂದಿಗೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ. ಕೇವಲ ವಿದೇಶದಲ್ಲಿಯೇ ಅಲ್ಲ, ನಮ್ಮ ಭಾರತ ದೇಶದಲ್ಲಿಯೂ ಅದ್ಭುತವಾದ ಹಾಗು ಮನರಂಜನೆಯನ್ನು ಒದಗಿಸುವ ಸ್ಥಳಗಳಿವೆ. ಹಾಗಾದರೆ ಬನ್ನಿ ಹೊಸವರ್ಷವನ್ನು ಎಲ್ಲಿ ಆಚರಿಸಿದರೆ ಉತ್ತಮವಾಗಿರುತ್ತದೆ ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಗೋವಾ
ಮನರಂಜನೆ ಅಥವಾ ಏಂಜಾಯ್ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಗೋವಾ. ಗೋವಾದಲ್ಲಿ ಅನೇಕ ಸುಂದರವಾದ ಬೀಚ್‍ಗಳು, ಷಾಪಿಂಗ್ ಸೆಂಟರ್‍ಗಳು, ಕೋಟೆಗಳು, ನೈಟ್ ಪಾರ್ಟಿಗಳು ಕೂಡ ಆನಂದಿಸಬಹುದು. ಹೊಸ ವರ್ಷವನ್ನು ಗೋವಾದಲ್ಲಿ ಅತ್ಯಂತ ವಿಜೃಂಬಣೆಯಿಂದ ಆಚರಿಸುತ್ತಾರೆ. ಇಲ್ಲಿ ಕ್ರಿಸ್ ಮಸ್, ಹಾಗು ಹೊಸವರ್ಷಕ್ಕೆ ಎಂದೇ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಹೀಗಾಗಿಯೇ ಸಾವಿರಾರು ಮಂದಿ ಪ್ರವಾಸಿಗರು ಗೋವಾಗೆ ಭೇಟಿ ನೀಡುತ್ತಿರುತ್ತಾರೆ.

PC: Dey.sandip


ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಲಕ್ಷದೀಪ್
ಲಕ್ಷದೀಪ್ ಒಂದು ಸುಂದರವಾದ ತಾಣವೇ ಆಗಿದೆ. ಇಲ್ಲಿ ಹೊಸವರ್ಷವನ್ನು ಸಂಭ್ರಮ-ಸಡಗರದಿಂದ ಆಚರಿಸಬಹುದಾಗಿದೆ. ಸುಮಾರು 36 ದ್ವೀಪಗಳಲ್ಲಿ ಕೇವಲ 10 ದ್ವೀಪಗಳಲ್ಲಿ ಮಾತ್ರ ವಾಸಿಸುತ್ತಾರೆ. ಅದರಲ್ಲಿ ಇದು ಕೂಡ ಒಂದು. ಇಲ್ಲಿ ಅನೇಕ ಮಂದಿ ಪ್ರವಾಸಿಗರು ಸಂಭ್ರಮಿಸಲು ಭೇಟಿ ನೀಡುತ್ತಿರುತ್ತಾರೆ. ಸ್ಕೂಬಾ ಡೈವಿಂಗ್, ಸ್ನೋರ್ಕೆಲಿಂಗ್ ಇನ್ನು ಹಲವಾರು ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದವರು ಇಲ್ಲಿಗೆ ಒಮ್ಮೆ ತೆರಳಬಹುದು. ಇದು ಅಂಡರ್ ವಾಟರ್ ಸ್ವರ್ಗವಾಗಿರುವ ಹವಳದ ದಿಬ್ಬಗಳ ಪ್ರಮುಖವಾದ ಆಕರ್ಷಣೆಗಳೇ ಆಗಿವೆ. ಇಲ್ಲಿಯೂ ಕೂಡ ಅನೇಕ ಪ್ರವಾಸಿ ತಾಣಗಳಿವೆ. ಒಮ್ಮೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಬನ್ನಿ.

PC:: Vaikoovery

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಗ್ಯಾಂಗ್ಟಾಕ್, ಸಿಕ್ಕಿಂ
5410 ಅಡಿ ಎತ್ತರದಲ್ಲಿರುವ ಈ ಸುಂದರವಾದ ಗ್ಯಾಂಗ್ಟಾಕ್ ಒಂದು ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಇಲ್ಲಿ ಸುಂದರವಾದ ಸೂರ್ಯಾಸ್ತ ಹಾಗು ಸೂರ್ಯೋದಯದ ವೀಕ್ಷಣೆಯನ್ನು ಕಣ್ಣುತುಂಬಿಕೊಳ್ಳಬಹುದು. ಈ ಅದ್ಭುತವಾದ ಪಟ್ಟಣವನ್ನು "ಪೂರ್ವದ ಸ್ವಿಟ್ಜರ್ಲೆಂಡ್" ಎಂದೂ ಕೂಡ ಕರೆಯುತ್ತಾರೆ. ಇಲ್ಲಿ ಟ್ರೆಕ್ಕಿಂಗ್ ಪ್ರಿಯರು ಟ್ರೆಕ್ಕಿಂಗ್ ಮಾಡಬಹುದಾಗಿದೆ. ಜಗತ್ತಿನ 3 ನೇ ಅತ್ಯುನ್ನತವಾದ ಶಿಖರವಾದ ಕಾಂಚನ ಗಂಗವನ್ನು ಇಲ್ಲಿ ಕಣ್ಣುತುಂಬಿಕೊಳ್ಳಬಹುದಾಗಿದೆ. ಇಷ್ಟು ಸೊಬಗು ಇರುವ ತಾಣದಲ್ಲಿ ಹೊಸವರ್ಷ ಆಚರಣೆ ಮಾಡಿದರೆ ಹೇಗಿರುತ್ತದೆ ಅಲ್ಲವೇ?


PC: Indrajit Das

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಮನಾಲಿ, ಹಿಮಾಚಲ ಪ್ರದೇಶ
ಹಿಮಪಾತಗಳು ಮತ್ತು ವೀಕ್ಷಣೆಗೆ ಮನಾಲಿ ಸುಂದರವಾದ ಸ್ಥಳವಾಗಿದೆ. ಈ ಅದ್ಭುತವಾದ ಸ್ಥಳಕ್ಕೆ ಕೇವಲ ದೇಶದ ಮೂಲೆ-ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಹೆಚ್ಚಾಗಿ ಪೈನ್ ಮರಗಳು, ಹಣ್ಣಿನ ಮರಗಳಿಂದ ತುಂಬಿದೆ. ಇದು ವರ್ಷದ ಅಂತ್ಯಕ್ಕೆ ಸೂಕ್ತವಾದ ಸ್ಥಳಗಳಲ್ಲಿ ಇದು ಕೂಡ ಒಂದು. ಇಲ್ಲಿ ಅನೇಕ ಪ್ರವಾಸಿ ತಾಣಗಳು ಇದ್ದು, ಮನಾಲಿ-ಲೇಹ್ ಹೆದ್ದಾರಿಯಲ್ಲಿ ಸವಾರಿ ಮಾಡಿ ಅಥವಾ ಹತ್ತಿರದ ಚಳಿಗಾಲದ ಸ್ಥಳಗಳಿಗೆಲ್ಲಾ ಭೇಟಿ ನೀಡಿ ಬನ್ನಿ. ಇಲ್ಲಿ ನೈಸರ್ಗಿಕವಾದ ಸೌಂದರ್ಯವು ನಿಮಗೆ ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅನಮಾನವೇ ಇಲ್ಲ.

PC : Raman Virdi

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಕೊಡಗು,ಕರ್ನಾಟಕ
ಕೊಡಗು ಕರ್ನಾಟಕ ರಾಜ್ಯದ ಒಂದು ಅದ್ಭುತವಾದ ಸ್ಥಳವೇ ಆಗಿದೆ. ಇಲ್ಲಿನ ಸೌಂದರ್ಯಕ್ಕೆ ಯಾರೇ ಆಗಲಿ ಬೆರಗಾಗಲೇಬೇಕು. ಇಲ್ಲಿ ಶಾಂತವಾದ ಹಾಗು ತಂಪಾದ ವಾತಾವರಣವು ಮನಸ್ಸಿಗೆ ಉಲ್ಲಾಸ ಮೂಡಿಸುತ್ತದೆ. ಇಲ್ಲಿ ಅನೇಕ ಟೀ ಎಸ್ಟೇಟ್‍ಗಳು, ಕಾಫಿ ಎಸ್ಟೇಟ್‍ಗಳು ಇವೆ. ಪ್ರಕೃತಿಯ ಸೌಂದರ್ಯವೇ ನಾಚುವಂತೆ ಇರುವ ಇಲ್ಲಿನ ರಮಣೀಯತೆಯನ್ನು ಸವಿಯಲು ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ವಿದೇಶಗಳಿಗೆ ಹೋಗಿ ಹೊಸ ವರ್ಷದ ಸಂಭ್ರಮವನ್ನು ಆಚರಿಸುವ ಬದಲಿಗೆ ಕರ್ನಾಟಕದಲ್ಲಿಯೇ ಇರುವ ಕೂರ್ಗ್‍ಗೆ ಹೋಗಿ ಭೇಟಿ ನೀಡಬಹುದಾಗಿದೆ ಎಂದೇ ಹೇಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X