Search
  • Follow NativePlanet
Share
» » ಗಂಗಾ ಆರತಿಯ ಸಂದರ್ಭ ಈ ಕೆಲಸವನ್ನು ಮಾಡಬೇಡಿ

ಗಂಗಾ ಆರತಿಯ ಸಂದರ್ಭ ಈ ಕೆಲಸವನ್ನು ಮಾಡಬೇಡಿ

ಉತ್ತರ ಪ್ರದೇಶ ಧಾರ್ಮಿಕ ನಗರಿ ಎಂದೇ ಹೇಳಲಾಗುವ ವಾರಣಾಸಿ ಇಡೀ ಭಾರತದಲ್ಲೇ ಅತ್ಯದ್ಭುತ ಪರ್ಯಾಟನಾ ಸ್ಥಳವಾಗಿದೆ. ಕಾಶಿಯಿಂದಾಗಿ ವಾರಣಾಸಿ ಸಖತ್ ಫೇಮಸ್ ಆಗಿದೆ . ಇದು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ವಾರಣಾಸಿಯಲ್ಲಿ ಪ್ರವಾಸಿಗರಿಗೆ ಸುತ್ತಾಡಲು ಅನೇಕ ಮಂದಿರಗಳಿವೆ. ಅಷ್ಟೇ ಅಲ್ಲದೆ ಇಲ್ಲಿನ ಗಂಗಾ ಆರತಿಯು ಬಹಳ ಫೇಮಸ್ ಆಗಿದೆ.

ಗುರುವಾಯೂರಪ್ಪನ ಸನ್ನಿಧಿಯಲ್ಲಿ ಅನ್ಯಧರ್ಮಿಯರಿಗಿಲ್ಲ ಪ್ರವೇಶ...ಗುರುವಾಯೂರಪ್ಪನ ಸನ್ನಿಧಿಯಲ್ಲಿ ಅನ್ಯಧರ್ಮಿಯರಿಗಿಲ್ಲ ಪ್ರವೇಶ...

 ಗಂಗಾ ಆರತಿ ಹೇಗೆ ಮಾಡಲಾಗುತ್ತದೆ?

ಗಂಗಾ ಆರತಿ ಹೇಗೆ ಮಾಡಲಾಗುತ್ತದೆ?

Pc: Arian Zwegers

ಗಂಗಾ ನದಿಯ ಘಾಟ್‍ನಲ್ಲಿ ಗಂಗಾ ಆರತಿಯನ್ನು ಆಯೋಜಿಸಲಾಗುತ್ತದೆ. ಆರತಿಯ ಸಂದರ್ಭದಲ್ಲಿ ಒಂದು ದೀಪವನ್ನು ಅಲ್ಲಿನ ಪಂಡಿತರು ಸುತ್ತಲೂ ತಿರುಗಿಸುತ್ತಾರೆ. ಡೋಲು ಬಡಿಯಲಾಗುತ್ತದೆ. ಆರತಿ ಮುಗಿದ ನಂತರ ಭಕ್ತರು ಆರತಿ ತೆಗೆದುಕೊಂಡು ಆಶೀರ್ವಾದ ಪಡೆಯುತ್ತಾರೆ. ಆರತಿಯು 40 ನಿಮಿಷಗಳ ಕಾಲ ನಡೆಯಲಿದೆ. ಇಲ್ಲಿನ ಆರತಿಗಾಗಿ ದೂರ ದೂರದ ಊರುಗಳಿಂದ ಜನರು ಆಗಮಿಸುತ್ತಾರೆ.

ಆರತಿ ಆರಂಭವಾಗುವುದಕ್ಕೂ ಮುನ್ನ ತಮ್ಮ ಸ್ಥಳದಲ್ಲಿ ಕುಳಿತುಕೊಳ್ಳಿ

ಆರತಿ ಆರಂಭವಾಗುವುದಕ್ಕೂ ಮುನ್ನ ತಮ್ಮ ಸ್ಥಳದಲ್ಲಿ ಕುಳಿತುಕೊಳ್ಳಿ

Pc:Rudolph.A.furtado

ಗಂಗಾ ಆರತಿಯು ವಾರಣಾಸಿಯ ಪ್ರಮುಖ ಆಕರ್ಷಣೆಗಳಲ್ಲೊಂದು. ಇದನ್ನು ಯಾರೂ ಕೂಡಾ ಮಿಸ್ ಮಾಡಲು ಬಯಸೋದಿಲ್ಲ. ಒಂದು ವೇಳೆ ನೀವು ಆರತಿಯಲ್ಲಿ ಪಾಲ್ಗೊಳ್ಳಬೇಕೆಂದಿದ್ದರೆ ಕಾಲ್ತುಳಿತಕ್ಕೆ ಒಳಗಾಗುವುದು ಖಂಡಿತಾ, ಹಾಗಾಗಿ ಗಂಗಾ ಆರತಿ ನೋಡಲು ಗಂಗಾ ಘಾಟ್‍ನಲ್ಲಿ ಸಂಜೆ 5ರಿಂದ 6.30 ಒಳಗಾಗಿ ತಮ್ಮ ಸ್ಥಾನ ಗ್ರಹಣ ಮಾಡುವುದು ಒಳ್ಳೆಯದು. ಬೇಗ ಹೋದರೆ ಸೀಟ್ ಸಿಗುತ್ತದೆ.

ಬೋಟಿಂಗ್ ಮಜಾ

ಬೋಟಿಂಗ್ ಮಜಾ

ನೀವು ಗಂಗಾ ಘಾಟ್‍ಗೆ ಬೇಗನೆ ತಲುಪಲು ಸಾಧ್ಯವಾಗದಿದ್ದಲ್ಲಿ. ಅಥವಾ ಜನಸಂದಣೀ ಮಧ್ಯೆ ಕುಳಿತುಕೊಳ್ಳಲು ಇಷ್ಟಪಡೋದಿಲ್ಲವೆಂದಾದಲ್ಲಿ ನೀವು ಒಂದು ಬೋಟ್‍ನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ನಡೆಯು ಗಂಗಾ ಆರತಿಯನ್ನು ಆನಂದಿಸಬಹುದು. ಇಲ್ಲಿ ಬೋಟ್‍ನ್ನು 500 ರೂ. ಕೊಟ್ಟರೆ 2-3 ಗಂಟೆಗಳ ಕಾಲ ಬೋಟಿಂಗ್ ನಡೆಸುತ್ತಾರೆ.

ವಾರಾಂತ್ಯದಲ್ಲಿ ಹೋಗಬೇಡಿ

ವಾರಾಂತ್ಯದಲ್ಲಿ ಹೋಗಬೇಡಿ

Pc: Arian Zwegers

ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ವಾರಾಂತ್ಯಕ್ಕೆ ಹೋಗೋದೇ ಬೇಡ. ಆಗ ನೂಕುನುಗ್ಗಲು ನಡೆಯುತ್ತದೆ. ಹಾಗಾಗಿ ಕಾಲ್ತುಳಿಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಇದೆ.

ರೂಫ್ ಟಾಪ್ ಕೆಫೆ

ರೂಫ್ ಟಾಪ್ ಕೆಫೆ

ಗಂಗಾ ಘಾಟ್‍ನ ಪಕ್ಕದಲ್ಲೇ ಇರುವ ರೂಫ್ ಟಾಪ್ ಕೆಫೆಯನ್ನೊಮ್ಮೆ ಭೇಟಿ ನೀಡಿ. ಇಲ್ಲಿ ಗಂಗಾ ಆರತಿ ನಡೆಯುವಾಗ ಚಹಾವನ್ನು ಕುಡಿಯತ್ತಾ ಆನಂದ ಪಡೆಯಬಹುದು. ಇಲ್ಲವಾದಲ್ಲಿ 50-100 ರಊ. ಕೊಟ್ಟು ಮೇಲಿನಿಂದ ಅರತಿಯನ್ನು ನೋಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X