Search
  • Follow NativePlanet
Share
» »ಮಂಗಳೂರಿನಲ್ಲಿರುವ ಈ ಪ್ರಸಿದ್ಧ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ...

ಮಂಗಳೂರಿನಲ್ಲಿರುವ ಈ ಪ್ರಸಿದ್ಧ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ...

ಮಂಗಳೂರು ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದು. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಇದು ಕರ್ನಾಟಕದ ಮುಖ್ಯ ಬಂದರು. ಮಂಗಳೂರು ತನ್ನ ಸುಂದರವಾದ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗು ಕೈಗಾರಿಕೆಗಳಿಗೆ ತುಂಬಾ ಹೆಸರ

By Sowmyabhai

ಮಂಗಳೂರು ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದು. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಇದು ಕರ್ನಾಟಕದ ಮುಖ್ಯ ಬಂದರು. ಮಂಗಳೂರು ತನ್ನ ಸುಂದರವಾದ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗು ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯನ್ನು ಪಡೆದಿದೆ. ಮಂಗಳೂರು ಎಂದಾಕ್ಷಣ ಎತ್ತರದ ಪರ್ವತ ಶ್ರೇಣಿಗಳು, ಮುಗಿಲೆತ್ತರದ ತೆಂಗಿನ ಮರಗಳು, ಸಮುದ್ರಗಳು, ಹಂಚಿನ ಛಾವಣಿಗಳನ್ನು ಹೊಂದಿರುವ ಕಟ್ಟಡಗಳು ನೆನಪಾಗುತ್ತವೆ ಅಲ್ಲವೇ?

ಸ್ಥಳೀಯ ದಂತಕಥೆಯ ಪ್ರಕಾರ ಹಿಂದೂ ದೇವತೆಯಾದ ಮಂಗಳಾದೇವಿಯಿಂದ ಮಂಗಳೂರು ಎಂಬ ಹೆಸರನ್ನು ಪಡೆದುಕೊಂಡಿದೆ. ಹಿಂದೂ ಪುರಾಣಗಳ ಪ್ರಕಾರ ಈಗಿನ ಮಂಗಳೂರು ಪ್ರದೇಶವು ಪರಶುರಾಮ ಸೃಷ್ಟಿಯ ಒಂದು ಭಾಗ ಎಂದು ಹೇಳಲಾಗಿದೆ. ಈ ಪುರಾತನವಾದ ನಗರವು ಅನೇಕ ದೇವಾಲಯಗಳನ್ನು ಹೊಂದಿದೆ. ಇಲ್ಲಿನ ಅದ್ಭುತವಾದ ತಾಣವು ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ನೀವು ಮಂಗಳೂರಿನ ಪ್ರವಾಸವನ್ನು ಕೈಗೊಂಡರೆ ಒಮ್ಮೆ ಲೇಖನದಲ್ಲಿ ತಿಳಿಸಲಾಗುವ ಈ ಸುಂದರವಾದ ದೇವಾಲಯಗಳಿಗೆ ಒಮ್ಮೆ ಭೇಟಿ ನೀಡಿ.

1.ಶ್ರೀ ಮಂಗಳ ದೇವಿ ದೇವಾಲಯ

1.ಶ್ರೀ ಮಂಗಳ ದೇವಿ ದೇವಾಲಯ

PC: Bluestar

ಶ್ರೀ ಮಂಗಳ ದೇವಿ ದೇವಾಲಯವು ಅತ್ಯಂತ ಶಕ್ತಿ ದೇವತೆ ಎಂದು ನಂಬಲಾಗಿದೆ. ಮಂಗಳೂರು ಎಂಬ ಹೆಸರು ಈ ಮಂಗಳ ದೇವಿಯ ಹೆಸರಿನಿಂದಲೇ ಬಂದಿರುವುದು ವಿಶೇಷ. ಈ ತಾಯಿಯ ದೇವಾಲಯವನ್ನು 9 ನೇ ಶತಮಾನಕ್ಕಿಂತ ಹಿಂದೆ ನಿರ್ಮಾಣ ಮಾಡಲ್ಪಟ್ಟ ಪುರಾತನವಾದ ದೇವಾಲಯ ಎಂದು ನಂಬಲಾಗಿದೆ. ಈ ಮಹಿಮಾನ್ವಿತವಾದ ದೇವಾಲಯವು ಬೋಲಾರಾ ಎಂಬಲ್ಲಿ ಇದೆ. ಇದು ನಗರ ಕೇಂದ್ರದ ನೈಋತ್ಯಕ್ಕೆ ಸುಮಾರು 3 ಕಿ.ಮೀ ದೂರದಲ್ಲಿದೆ.

ಈ ದೇವಾಲಯದಲ್ಲಿ ಒಟ್ಟು 4 ಪ್ರತಿಮೆಗಳು ಇದ್ದು, ಹಬ್ಬ-ಹರಿದಿನಗಳ ಸಮಯದಲ್ಲಿ ಅತ್ಯಂತ ವಿಜೃಂಬಣೆಯಿಂದ ಪೂಜೆಗಳನ್ನು ಆಚರಿಸಲಾಗುತ್ತದೆ. ಈ ತಾಯಿಯ ದರ್ಶನದ ಸಲುವಾಗಿ ಅನೇಕ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ವಿಶೇಷವಾಗಿ ನವರಾತ್ರಿಯ ಹಬ್ಬದ ಸಮಯದಲ್ಲಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.

ದೇವಾಲಯವು ವಾರದ ಎಲ್ಲಾ ದಿನಗಳಲ್ಲಿಯೂ ತೆರೆದಿರುತ್ತಾರೆ. ಭಕ್ತರಿಗೆ ಪ್ರವೇಶ ಸಮಯವಾಗಿ, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗು ಸಂಜೆ 4 ಗಂಟೆಯಿಂದ ರಾತ್ರಿ 8:30 ರವರೆಗೆ ದೇವಾಲಯವು ತೆರೆದಿರುತ್ತದೆ.

2.ಕದ್ರಿ ಮಂಜುನಾಥ ಸ್ವಾಮಿ ದೇವಾಲಯ

2.ಕದ್ರಿ ಮಂಜುನಾಥ ಸ್ವಾಮಿ ದೇವಾಲಯ

PC:Vaikoovery

ಕದ್ರಿ ಮಂಜುನಾಥ ದೇವಾಲಯ ಅಥವಾ ಕದ್ರಿ ಮಂಜುನಾಥೇಶ್ವರ ದೇವಾಲಯವು ಶಿವನಿಗೆ ಅರ್ಪಿತವಾದ ಮಂದಿರವಾಗಿದೆ. ಇದು ಕರ್ನಾಟಕದಲ್ಲಿನ ಶಿವನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 10 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು ಎಂದು ತಿಳಿದುಬಂದಿದೆ. ಇದು ಕದ್ರಿ ಬೆಟ್ಟದ ಮೇಲೆ ಇದೆ. ಇಲ್ಲಿ ನೀವು ಶಿವನ 4 ಅಡಿ ಎತ್ತರದ ಕಂಚಿನ ವಿಗ್ರಹವನ್ನು ದರ್ಶಿಸಬಹುದು. ಆ ಪವಿತ್ರವಾದ ವಿಗ್ರಹವನ್ನು ಪದ್ಮಾಸನಸ್ಥ ಲೋಕೇಶ್ವರ ಅಥವಾ ಅವಲೋಕಿತೇಶ್ವರ ಎಂದು ಉಲ್ಲೇಖಿಸಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ಈ ದೇವಾಲಯವು ಬೌದ್ಧ ಧರ್ಮದ ಪೂಜಾ ಸ್ಥಳವಾಗಿತ್ತು. ತದನಂತರದ ಕಾಲದಲ್ಲಿ ಹಿಂದೂ ದೇವಾಲಯವಾಗಿ ಪರಿರ್ವತನೆಯಾಯಿತು. ದೇವಾಲಯದ ಪ್ರಾಂಗಣದಲ್ಲಿ ದುರ್ಗಾ ಮತ್ತು ಗಣೇಶನಿಗೆ ಅರ್ಪಿತವಾದ ದೇವಾಲಯಗಳು ಕೂಡ ಇವೆ.

ದೇವಾಲಯದ ಸಮಯ: ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ. ಪ್ರವೇಶ ಸಮಯ ಬೆಳಗ್ಗೆ 6 ರಿಂದ 1 ಗಂಟೆಯವರೆಗೆ ಹಾಗು ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

3.ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

3.ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

PC:Image source

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಶಿವನ ಪುತ್ರನಾದ ಕಾರ್ತಿಕೇಯನಿಗೆ ಅರ್ಪಿತವಾದ ಪವಿತ್ರವಾದ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿ ಎಲ್ಲಾ ಸರ್ಪಗಳ ಅಧಿಪತಿಯಾದ ಸುಬ್ರಹ್ಮಣ್ಯನನ್ನು ಪೂಜಿಸಲಾಗುತ್ತದೆ. ಸರ್ಪ ದೋಷಗಳನ್ನು ಪರಿಹರಿಸುವ ಪುಣ್ಯ ಕ್ಷೇತ್ರವಾಗಿ ಹೆಸರುವಾಸಿ ಪಡೆದಿದೆ. ದೇಶ-ವಿದೇಶದಿಂದ ಈ ದೇವಾಲಯಕ್ಕೆ ಭೇಟಿ ನೀಡಿ, ತಮ್ಮ ಸರ್ಪ ದೋಷಗಳನ್ನು ಪರಿಹರಿಸಿಕೊಳ್ಳುತ್ತಾರೆ. ಈ ದೇವಾಲಯವು ನಗರ ಕೇಂದ್ರದಿಂದ ಸುಮಾರು 104 ಕಿ.ಮೀ ದೂರದಲ್ಲಿರುವ ಸುಬ್ರಹ್ಮಣ್ಯ ಹಳ್ಳಿಯಲ್ಲಿದೆ.

ಇಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಸರ್ಪಗಳ ರಾಜ ವಾಸುಕಿಯ ವಿಗ್ರಹಗಳನ್ನು ಹೊಂದಿರುವ ದೊಡ್ಡದಾದ ರಚನೆಯನ್ನು ನೀವು ಕಾಣಬಹುದು. ಅಷ್ಟೇ ಅಲ್ಲ, ಕುಕ್ಕೆ ಎಂದು ಕರೆಯಲ್ಪಡುವ ಶಿವಲಿಂಗಗಳ ಗುಂಪನ್ನು ದರ್ಶಿಸಬಹುದು.

ದೇವಾಲಯದ ಸಮಯ: ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ. ಪ್ರವೇಶ ಸಮಯ, ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗು ಸಂಜೆ 3:30 ರಿಂದ ರಾತ್ರಿ 9:30 ರವರೆಗೆ.

4.ಧರ್ಮಸ್ಥಳ ಮಂಜುನಾಥ ದೇವಾಲಯ

4.ಧರ್ಮಸ್ಥಳ ಮಂಜುನಾಥ ದೇವಾಲಯ

PC: B.yathish6

ಧರ್ಮಸ್ಥಳ ಮಂಜುನಾಥ ದೇವಾಲಯವು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಿದೆ. ಈ ದೇವಾಲಯದಲ್ಲಿ ಮಹಾಶಿವನು ಮಂಜುನಾಥ ಸ್ವಾಮಿಯಾಗಿ ದರ್ಶನವನ್ನು ನೀಡುತ್ತಾನೆ. ಶೈವೈಟ್ ತೀರ್ಥಕ್ಷೇತ್ರವು ಮಠದಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಧರ್ಮಸ್ಥಳ ದೇವಾಲಯವು ನೇತ್ರಾವತಿ ನದಿಯ ದಡದಲ್ಲಿದೆ. ಈ ದೇವಾಲಯವು ಸುಮಾರು 800 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯವು ಅತ್ಯಂತ ದೊಡ್ಡದಾಗಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತ ಜನಸಾಗರವು ದಿನನಿತ್ಯ ಹರಿದು ಬರುತ್ತಿರುತ್ತದೆ. ಇಲ್ಲಿ ಮುಖ್ಯವಾಗಿ "ಲಕ್ಷ ದೀಪೋತ್ಸವ" ದ ವಾರ್ಷಿಕ ಹಬ್ಬವನ್ನು ಪ್ರತಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ವಿಜೃಸಸಸಂಬಣೆಯಿಂದ ಆಚರಿಸಲಾಗುತ್ತದೆ.

ದೇವಾಲಯದ ಸಮಯ: ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ. ಪ್ರವೇಶ ಸಮಯ, ಬೆಳಗ್ಗೆ 6:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗು ಸಂಜೆ 7 ಗಂಟೆಯಿಂದ ರಾತ್ರಿ 8;30 ರವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X