Search
  • Follow NativePlanet
Share
» »ಹಂಪಿಯಲ್ಲಿ ಈ ಸ್ಥಳಗಳನ್ನು ನೋಡದೇ ಇದ್ದರೆ ನಿಮ್ಮ ಪ್ರವಾಸ ಅಪೂರ್ಣ...

ಹಂಪಿಯಲ್ಲಿ ಈ ಸ್ಥಳಗಳನ್ನು ನೋಡದೇ ಇದ್ದರೆ ನಿಮ್ಮ ಪ್ರವಾಸ ಅಪೂರ್ಣ...

By Sowmyabhai

ಹಂಪಿ ಅಥವಾ ಹಂಪೆ ನಮ್ಮ ಕರ್ನಾಟಕದಲ್ಲಿನ ಅತ್ಯಂತ ಸುಂದರ ಐತಿಹಾಸಿಕ ಸ್ಥಳ. ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿಯಲ್ಲಿದೆ. ಹಂಪಿ 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪೆಯನ್ನು ಒಂದು ಕಾಲದಲ್ಲಿ "ಪಂಪಾ" ಎಂದು ಕರೆಯುತ್ತಿದ್ದರು. ಕಾಲನಂತರ ವಿಜಯನಗರ ಮತ್ತು ವಿರೂಪಾಕ್ಷಪುರ ಎಂದು ಕರೆಯಲ್ಪಟ್ಟಿತ್ತು.

ಕರ್ನಾಟಕದಲ್ಲಿನ ಈ ಸುಂದರವಾದ ಸ್ಥಳವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಇಲ್ಲಿಯೂ ಅನೇಕ ಪ್ರವಾಸಿತಾಣಗಳು ಇವೆ. ಅವುಗಳೆಂದರೆ ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಾಲಯ, ಸಪ್ತಸ್ವರ ಸಂಗೀತ ನುಡಿಸುವ ಕಲ್ಲಿನ ಸ್ತಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಸಾಸಿವೆ ಕಾಳು ಗಣಪತಿ, ಕಮಲ ಮಹಲ್, ಇನನು ಅನೇಕ ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ಕಾಣಬಹುದಾಗಿದೆ.

ಹಾಗಾದರೆ ಬನ್ನಿ ಹಂಪಿಗೆ ಭೇಟಿ ನೀಡಿದರೆ ಯಾವೆಲ್ಲಾ ಸ್ಥಳಗಳಿಗೆಲ್ಲಾ ಭೇಟಿ ನೀಡಬೇಕು ಎಂಬುದನ್ನು ಸಂಕ್ಷೀಪ್ತವಾಗಿ ನೇಟಿವ್ ಪ್ಲಾನೆಟ್‍ನ ಮೂಲಕ ಮಾಹಿತಿಯನ್ನು ಪಡೆಯೋಣ.

1.ಹನುಮಾನ್ ದೇವಾಲಯ

1.ಹನುಮಾನ್ ದೇವಾಲಯ

PC:YOUTUBE

ಹಂಪಿಯು ರಾಮಾಯಣ ಘಟನೆಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ. ಆ ಸಾಕ್ಷ್ಯಕ್ಕೆ ಆಧಾರವೇ ಹನುಮಾನ್ ದೇವಾಲಯ. ಈ ದೇವಾಲಯವು ಆನೆಗುಂಡಿಯ ಅಂಜನಾದ್ರಿ ಬೆಟ್ಟದ ಒಂದು ಪ್ರಶಾಂತವಾದ ಸ್ಥಳದಲ್ಲಿದೆ. ಹಂಪಿಯಿಂದ ಕೇವಲ 4 ಕಿ.ಮೀ ದೂರದಲ್ಲಿದೆ.

ನಿಮಗೆ ಗೊತ್ತೆ? ಆಂಜನೇಯನ ಜನ್ಮ ಸ್ಥಳವೇ ಈ ಹನುಮಾನ್ ದೇವಾಲಯ ಎಂದು ನಂಬಲಾಗಿದೆ. ಈ ಮಂಕಿ ಮಂದಿರ ಅಥವಾ ಹನುಮಾನ್ ದೇವಾಲಯವು ಮೂಲತಃ ಒಂದು ಸಣ್ಣ ಕಾಂಕ್ರೀಟ್ ರಚನೆಯನ್ನು ಹೊಂದಿದೆ. ಈ ದೇವಾಲಯದಲ್ಲಿ ಹನುಮಂತನ ಜೊತೆ-ಜೊತೆಗೆ ಶ್ರೀ ರಾಮ ಹಾಗು ಸೀತಾ ಮಾತೆಯ ಪ್ರತಿಮೆ ಕೂಡ ಇದೆ. ಇಲ್ಲಿ ನೀವು ಸಾಕಷ್ಟು ಕೋತಿಗಳನ್ನು ಕಾಣಬಹುದು. ಈ ದೇವಾಲಯವು ಬೆಟ್ಟದಲ್ಲಿರುವ ಕಾರಣ, ಹಂಪಿಯ ಸುಂದರವಾದ ನೋಟವನ್ನು ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಒದಗಿಸುತ್ತದೆ.

ಇದರ ಜೊತೆಗೆ ಸೂರ್ಯೋದಯ ಹಾಗು ಸೂರ್ಯಾಸ್ತದ ಸುಂದರ ನೋಟವನ್ನು ಕಾಣಬಹುದು. ಈ ಮಂಕಿ ದೇವಾಲಯದ ಬಳಿ ಪಂಪಾ ಸರೋವರ ಲಕ್ಷ್ಮೀ ದೇವಾಲಯ, ರಿಷಿಮುಖ ಸರೋವರಕ್ಕೂ ಭೇಟಿ ನೀಡಿ ಬನ್ನಿ.

2.ಹಂಪಿ ಬಜಾರ್

2.ಹಂಪಿ ಬಜಾರ್

PC:YOUTUBE

ವಿರೂಪಾಕ್ಷ ಬಜಾರ್ ಎಂದು ಕರೆಯಲ್ಪಡುವ ಹಂಪಿ ಬಜಾರ್ ಒಂದು ಅತ್ಯುತ್ತಮವಾದ ತಾಣವಾಗಿದೆ. ವಿರೂಪಾಕ್ಷ ದೇವಾಲಯದ ಮುಂದೆ ಇರುವ ಮಾತಂಗ ಬೆಟ್ಟದ ತಪ್ಪಲಿನಲ್ಲಿ ಒಂದು ಕಿ.ಮೀ ಉದ್ದ ರಸ್ತೆ ಇದೆ. ಬೀದಿಯ ಎರಡೂ ಬದಿಗಳಲ್ಲಿ ಒಂದು ಶ್ರೇಣಿ ಇವೆ. ಅವುಗಳು ಅಭಿವೃದ್ದಿ ಹೊಂದುತ್ತಿರುವ ಮಾರುಕಟ್ಟೆಯ ಭಾಗವಾಗಿದ್ದವು. ಹಾಗೆಯೇ ಶ್ರೀಮಂತರ ನಿವಾಸ ಕೂಡ ಆಗಿತ್ತು.

ಇಲ್ಲೊಂದು ನರ್ಸರಿ ಶಾಲೆ ಇದೆ. ಆ ನರ್ಸರಿ ಶಾಲೆ ಪ್ರಪಂಚದ ಅತ್ಯಂತ ಹಳೆಯ ಕಟ್ಟಡವಾಗಿದೆ. ಪ್ರವಾಸಿಗರು ಪ್ರಯಾಣಿಸಲು ಅಥವಾ ಬೈಸಿಕಲ್ ಸವಾರಿಗಾಗಿ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.

3.ಪುರಾತನ ಅರಮನೆ ಅಥವಾ ಗಗನ್ ಮಹಲ್

3.ಪುರಾತನ ಅರಮನೆ ಅಥವಾ ಗಗನ್ ಮಹಲ್

PC:SOURCE

ಹಂಪಿಯಲ್ಲಿನ ಗಗನ್ ಮಹಲ್ ಅಥವಾ ಪುರಾತನ ಅರಮನೆಯು ಅತ್ಯಂತ ಸುಂದರವಾದ ಪ್ರವಾಸಿತಾಣವಾಗಿದೆ. ಈ ಅರಮನೆಯು ಐತಿಹಾಸಿಕವಾದ ಮಹತ್ವವನ್ನು ಹೊಂದಿದೆ. ಏಕೆಂದರೆ ವಿಜಯನಗರ ಸಾಮ್ಯಾಜ್ಯದ ಆಳ್ವಿಕೆಯ ಸಮಯದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಹೊಂದಿದ್ದ ಸ್ಥಳ ಇದಾಗಿತ್ತು. ಹಂಪಿಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಸ್ಥಳವೆಂದರೆ ಅದು ಗಗನ್ ಮಹಲ್.

ಈ ಸುಂದರವಾದ ಮಹಲ್ ಅನ್ನು 16 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತು ಎಂದು ಪರಿಗಣಿಸಲಾಗಿದೆ. ಹಳದಿ ಬಣ್ಣದಿಂದ ಕೂಡಿರುವ ಈ ಅರಮನೆಯು ಸುಂದರವಾಗಿ ಅಲಂಕರಿಸಲ್ಪಟ್ಟ ಕಿಟಕಿಗಳು ಹಾಗು ನಾಲ್ಕು ಅದ್ಭುತವಾದ ಗೋಪುರಗಳನ್ನು ಒಳಗೊಂಡಿದೆ.

ಗಗನ್ ಮಹಲ್‍ನ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಅಲ್ಲಿನ ಸ್ಥಳೀಯ ಮಾರ್ಗದರ್ಶಕರ ಮೂಲಕ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯಬಹುದು. ಈ ಪ್ರದೇಶದಲ್ಲಿರುವ ಅಂಜಯನಾದ್ರಿ ಬೆಟ್ಟ, ಪಂಪಾ ಸರೋವರ ಲಕ್ಷ್ಮೀ ದೇವಾಲಯ, ಸಬರಿ ಗುಹೆ, ಶ್ರೀ ಕೃಷ್ಣದೇವರಾಯನ ಸಮಾಧಿ ಮತ್ತು ನವ ಬೃಂದಾವನ ಸೇರಿದಂತೆ ಅನೇಕ ಅದ್ಭುತವಾದ ಸ್ಥಳಗಳಿಗೂ ಭೇಟಿ ನೀಡಬಹುದಾಗಿದೆ.

4.ದರೋಜಿ ಕರಡಿ ಅಭಯಾರಣ್ಯ

4.ದರೋಜಿ ಕರಡಿ ಅಭಯಾರಣ್ಯ

PC: Malene

ನೀವು ಪ್ರಾಣಿ ಪ್ರೀಯರಾಗಿದ್ದರೆ ಒಮ್ಮೆ ಹಂಪಿಯ ಬಳಿ ಇರುವ ದರೋಜಿ ಕರಡಿ ಅಭಯಾರಣ್ಯಕ್ಕೆ ಭೇಟಿ ನೀಡಿ. ಈ ಅಭಯಾರಣ್ಯದಲ್ಲಿ ಅನೇಕ ಕರಡಿಗಳನ್ನು ಕಾಣಬಹುದು. ಹಚ್ಚ-ಹಸಿರಿನಿಂದ ಕೂಡಿದ ಸುಂದರ ನೈಸರ್ಗಿಕವಾದ ಪರಿಸರದಲ್ಲಿದೆ ಈ ಅಭಯಾರಣ್ಯ.

ಇಲ್ಲಿ ಕೇವಲ ಕರಡಿಗಳೇ ಅಲ್ಲದೇ ಅನೇಕ ಪ್ರಾಣಿಗಳಿವೆ, ಚಿರತೆಗಳು, ಹೈನಾ ಜ್ಯಾಕಲ್ಸ್, ಅನೇಕ ಪಕ್ಷಿಗಳು ಕೂಡ ಇವೆ. ಈ ಅಭಯಾರಣ್ಯದಲ್ಲಿ ಸುಮಾರು 120 ಕರಡಿಗಳು, 90 ಜಾತಿಯ ಹಕ್ಕಿಗಳು, 27 ಬಗೆಯ ಚಿಟ್ಟೆಗಳನ್ನು ಕಾಣಬಹುದು. ಕರಡಿಗಳ ಸ್ವಾಭಾವಿಕ ಚಟುವಟಿಕೆಗಳನ್ನು ಕಣ್ಣಾರೆ ಕಂಡು ಆನಂದಿಸಬೇಕು ಎಂದಾದರೆ ಒಮ್ಮೆ ವಾರಾಂತ್ಯದ ಸಮಯದಲ್ಲಿ ಭೇಟಿ ನೀಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more