Search
  • Follow NativePlanet
Share
» »ಮಳೆಯನ್ನು ಆಸ್ವಾದಿಸಲು ಉತ್ತರಾಖಂಡದ ಅಸಾಧಾರಣ ಸ್ಥಳಗಳು

ಮಳೆಯನ್ನು ಆಸ್ವಾದಿಸಲು ಉತ್ತರಾಖಂಡದ ಅಸಾಧಾರಣ ಸ್ಥಳಗಳು

By Manjula Balaraj Tantry

ಮಳೆಗಾಲವು ಶುರುವಾಯಿತೆಂದರೆ ಸಾಕು ಮಾನ್ಸೂನ್ ಮಳೆಗಾಲದ ಪ್ರಯಾಣವು ಪ್ರಾರಂಭವಾಗುತ್ತದೆ. ನೀವು ಹೊರಗಡೆ ವೀಕ್ಷಣೆಯನ್ನು ಪ್ರಾರಂಭಿಸುವ ಕಾಲವೆನ್ನಬಹುದು ಅದು ಮಳೆಯೊಂದಿಗೆ ಮನೆಯ ಕಿಟಕಿಯಿಂದ ಹೊರಗೆ ಮಳೆಯನ್ನು ವೀಕ್ಷಣೆ ಮಾಡುವುದಾದರೂ ಸರಿ ನಮ್ಮಲ್ಲಿ ಕೆಲವರು ಮಳೆಯಲ್ಲಿ ನೆನೆಯಲು ಇಷ್ಟ ಪಡುವವರಿದ್ದಾರೆ ಮತ್ತು ಪ್ರಕೃತಿಯ ಮಡಿಲಲ್ಲಿ ಹುದುಗಿರುವ ಮಳೆಯಿಂದ ತೆರೆಯಲ್ಪಟ್ಟ ಕೆಲವು ಅಮೂಲ್ಯ ರತ್ನಗಳನ್ನು ಅನ್ವೇಷಣೆ ಮಾಡಬಹುದಾಗಿದೆ.

ಇಡೀ ದೇಶವೇ ಈ ಮಳೆಗಾಲದ ಸಮಯದಲ್ಲಿ ಸುಂದರ ಸ್ವರ್ಗದ ಅನುಭವವನ್ನು ನೀಡುತ್ತದೆ. ನಾವು ಈ ದೇಶದಲ್ಲಿರುವ ಎತ್ತರವಾದ ಮತ್ತು ಸುಂದರವಾದ ಭೂದೃಶ್ಯಗಳನ್ನು ಹೊಂದಿರುವುದಕ್ಕೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.
ಅಂತಹುಗಳಲ್ಲಿ ಉತ್ತರಾಖಂಡವು ಕೆಲವು ಅತ್ಯಂತ ಸುಂದರವಾದ ಮಳೆಗಾಲದ ಭೂದೃಶ್ಯಗಳನ್ನು ಹೊಂದಿದೆ, ಇಂತಹ ಒಂದು ಪ್ರದೇಶದಲ್ಲಿಯ ಕೆಲವು ಸ್ಥಳಗಳ ವಿವರಣೆಯನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದ್ದೇವೆ.

ಮಸ್ಸೂರಿ

ಮಸ್ಸೂರಿ

Ayusheseth336

ಪರ್ವತದ ಮೇಲೆ ನೆಲೆಸಿರುವ ಸುಂದರವಾದ ಈ ಗಿರಿಧಾಮವು ಮಳೆಗಾಲವನ್ನು ಇಷ್ಟ ಪಡುವವರನ್ನು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಆಕರ್ಷಿಸುತ್ತದೆ. ಮಸ್ಸೂರಿ ಒಂದು ನೈಸರ್ಗಿಕತೆಯ ಸ್ವರ್ಗವೆನ್ನಬಹುದು. ಮಾನ್ಸೂನ್ ಮಳೆಗಾಲ ಸಮೀಪಿಸುತ್ತಿದ್ದಂತೆಯೇ ಇಲ್ಲಿಯ ಬೀದಿಗಳು ಹೆಚ್ಚು ಜೀವಂತವಾಗಿಕಾಣಿಸುತ್ತವೆ. ಇಲ್ಲಿಯ ತೇವಭರಿತ ಹಾಗೂ ನೀರಿನಲ್ಲಿ ತೇಲುತ್ತಿರುವಂತೆ ಕಾಣುವ ಬೀದಿಗಳು ಇವೆಲ್ಲವೂ ಸೇರಿ ಜಾಜ್ ಸಂಗೀತ ಚಲನಚಿತ್ರದಂತೆ ಇಲ್ಲಿಯ ಪ್ರಕೃತಿಯೂ ಕೂಡಾ ಯಾವಾಗಲೂ ನಿರಂತರ ಸಂಗೀತ ಹಾಡುವಂತೆ ಕಾಣುತ್ತವೆ. ಸುಂದರವಾದ ವಿಸ್ಟಾಗಳು, ರೋಲಿಂಗ್ ವರ್ಡಾಂಟ್ ಬೆಟ್ಟಗಳು ಮತ್ತು ಕೆಫೇಗಳು ಅತ್ಯಂತ ಆಕರ್ಷಕವಾಗಿ ಕಾಣುತ್ತವೆ.

ನಗರದ ಅಪಾರ್ಟ್ ಮೆಂಟ್ ನ ಮೂಲಕ ಮಳೆಯನ್ನು ವೀಕ್ಷಿಸುವುದು ಒಂದು ವಿಧವಾದರೆ ಮತ್ತು ಬೆಟ್ಟದ ಮೇಲಿನಿಂದ ಬೃಹತ್ ಭೂದೃಶ್ಯವನ್ನು ಮಳೆಯ ನೀರು ತೊಳೆಯುತ್ತಿರುವುದನ್ನು ಬೆಟ್ಟದ ಮೇಲಿನಿಂದ ನೋಡುವುದು ಇನ್ನೊಂದು ರೀತಿಯ ಸಂತೋಷವನ್ನು ಕೊಡುತ್ತದೆ. ಈ ಸುಂದರ ನಗರವು ತನ್ನ ಸುತ್ತಲೂ ಒಂದು ರೀತಿಯ ಹೊಸ ಜೀವವನ್ನು ಪಡೆದು ಉಸಿರಾಡುತ್ತಿರುವಂತೆ ಕಾಣುತ್ತದೆ. ಇದಕ್ಕೆ ಸಾಕ್ಷಿಯಾಗಿ ಮರಳಿ ಮಿನುಗುತ್ತಿರುವ ಮರಗಳು ನೀರಿನಿಂದ ತೊಳೆದಂತಿರುವ ರಸ್ತೆಗಳು ಮತ್ತು ತೊಳೆದಂತಿರುವ ಹೊಳೆಯುತ್ತಿರುವ ಎಲೆಗಳು ಇತ್ಯಾದಿಗಳು ಈ ಸಮಯದಲ್ಲಿ ಎಲ್ಲವೂ ತಾಜಾತನದಿಂದ ಕೂಡಿದಂತೆ ಕಾಣುತ್ತದೆ

ಈ ಪೂರ್ತಿ ಭೂಭಾಗವು ಒಂದು ಸಣ್ಣ ಸ್ವರ್ಗವನ್ನು ನೆನಪಿಸುತ್ತದೆ ಮತ್ತು ಇದಲ್ಲದೆ ಇಲ್ಲಿ ಕೆಫೆಗಳು ಇಲ್ಲಿಗೆ ಬರುವ ಸಂದರ್ಶಕರಿಗಾಗಿ ತಮ್ಮ ಬಾಗಿಲನ್ನು ತೆರೆದು ಬಿಸಿ ಬಿಸಿಯಾದ ಉಪಹಾರ ಮತ್ತು ಬಿಸಿ ಚಾಕೋಲೇಟ್ ಗಳನ್ನು ಒದಗಿಸಿಕೊಡುತ್ತವೆ. ಮಸ್ಸೂರಿಯ ಹೆಸರಾಂತ ಬೇಕರಿಗಳು ನೀವು ನಿಮ್ಮ ಸುತ್ತಮುತ್ತಲಿನ ಮಳೆಯನ್ನು ಗಮನಿಸುತ್ತಿರುವಾಗ ಯಾವಾಗಲೂ ತಾಜಾವಾಗಿ ತಯಾರಿಸಲ್ಪಟ್ಟ ಕೇಕ್ ಗಳ ತುಂಡನ್ನು ನಿಮಗಾಗಿ ಒದಗಿಸುತ್ತವೆ.

ಮಸ್ಸೂರಿಗೆ ತಲುಪುವುದು ಹೇಗೆ?

ಮಸ್ಸೂರಿಗೆ ತಲುಪುವುದು ಹೇಗೆ?

Shajidsaifi

ವಾಯುಮಾರ್ಗದ ಮೂಲಕ : ಡೆಹರಾಡೂನ್ ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಮಸ್ಸೂರಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ. ದೆಹಲಿಯಿಂದ ಮತ್ತು ಮುಂಬೈ ಯಿಂದ ಇಲ್ಲಿಗೆ ನೇರವಾಗಿ ವಿಮಾನದ ಮೂಲಕ ಇಲ್ಲಿಗೆ ಪ್ರಯಾಣ ಮಾಡಬಹುದಾಗಿದೆ.

ರಸ್ತೆ ಮೂಲಕ ಪ್ರಯಾಣ : ರಸ್ತೆ ಮೂಲಕ ಇಲ್ಲಿಗೆ ಸಂಪರ್ಕವು ಉತ್ತಮವಾಗಿದೆ. ಇಲ್ಲಿ ನೀವು ಅನೇಕ ಸಂಖ್ಯೆಯಲ್ಲಿ ರಾಜ್ಯ ಸಾರಿಗೆ ಮತ್ತು ಖಾಸಗಿ ಬಸ್ಸುಗಳು ಮಸ್ಸೂರಿಗೆ ಸಂಚಾರ ಮಾಡುವ ಬಸ್ಸುಗಳನ್ನು ಕಾಣಬಹುದಾಗಿದೆ. ಮಸ್ಸೂರಿಯ ರಸ್ತೆಗಳು ದೆಹಲಿ ಡೆಹರಾಡೂನ್ ಮುಂತಾದ ಕಡೆಗೆ ರಸ್ತೆಗಳ ಮೂಲಕ ಸಂಪರ್ಕವು ಉತ್ತಮವಾಗಿದೆ. ಇಲ್ಲಿಂದ ಮಸ್ಸೂರಿಗೆ ಪ್ರತಿನಿತ್ಯ ಬಸ್ಸುಗಳು ಓಡಾಡುತ್ತವೆ

ರೈಲು ಮಾರ್ಗ ಮೂಲಕ : ಮಸ್ಸೂರಿಗೆ ಹತ್ತಿರದ ಡೆಹ್ರಾಡೂನ್ ರೈಲ್ವೇ ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಇದು 36 ಕಿ.ಮೀ ದೂರದಲ್ಲಿದೆ. ದೆಹಲಿ ಕೊಲ್ಕತ್ತಾ, ಜಮ್ಮು ಮತ್ತು ಅಮೃತಸರದಿಂದ ಹಲವಾರು ರೈಲುಗಳು ಇಲ್ಲಿಗೆ ಓಡಾಡುತ್ತವೆ.

ಲಾನ್ಸ್ ಡೌನ್

ಲಾನ್ಸ್ ಡೌನ್

Smallbones

ಯಾವುದೇ ಅಪಾಯವಿಲ್ಲದ ಮತ್ತು ಯಾವುದೇ ಹಾನಿಗೊಳಗಾಗದ ಗಿರಿಧಾಮವು ಇನ್ನೂ ಏಕಾಂತ ಸೌಂದರ್ಯವನ್ನು ಉಳಿಸಿಕೊಂಡಿದೆ ಎಂದರೆ ಅಚ್ಚರಿ ಪಡಬೇಕಾದ ಸಂಗತಿಯೇ ಸರಿ. ವಾಣಿಜ್ಯೀಕರಣದಿಂದ ಮತ್ತು ಪ್ರವಾಸಿಗರ ಸದ್ದುಗದ್ದಲಗಳಿಂದ ದೂರವಿರುವ ಲಾನ್ಸ್ ಡೌನ್ -ಮಾಜಿ ಸೇನಾ ಶಿಬಿರವಾಗಿತ್ತು ಮತ್ತು ಅತ್ಯಂತ ಸುಂದರವಾದ ಭೂದೃಶ್ಯವನ್ನು ತನ್ನಲ್ಲಿ ಹೊಂದಿದೆ ಮತ್ತು ಸಾರ್ವಜನಿಕ ಸ್ಥಳವನ್ನು ಸುಸಜ್ಜಿತವಾಗಿ ನಿರ್ವಹಿಸಲ್ಪಡುವ ಸ್ಥಳವೆನಿಸಿದೆ. ಲಾನ್ಸ್ ಡೌನ್ ತನ್ನ ವಸಾಹತು ಶಾಹಿ ಕಾಲದಿಂದಲೂ ಜನಪ್ರಿಯತೆಯನ್ನು ಗಳಿಸಿಕೊಂಡು ಬಂದಿದ್ದರೂ ಕೂಡ ಈ ಪ್ರದೇಶವು ಹೆಚ್ಚಿ ಏಕಾಂತ ಸ್ಥಳವಾಗಿ ಮಾರ್ಪಟ್ಟಿರುವುದರಿಂದ ಉತ್ತರ ಭಾರತದ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದಾಗಿ ಗುರುತಿಸಲ್ಪಡುತ್ತದೆ.

ಮನ್ಸೂನ್ ಮಳೆಗಾಲದ ಸಮಯದಲ್ಲಿ ಈ ಸ್ಥಳವು ದೊಡ್ಡ ದೊಡ್ಡ ಬೆಟ್ಟಗಳ ನಯನ ಮನೋಹರ ದೃಶ್ಯಗಳ ಕಣ್ಸೆಳೆಯುವಂತೆ ಮಾಡುತ್ತದೆ. ನೀವು ವಿಭಿನ್ನ ರೀತಿಯಲ್ಲಿ ಛಾಯಗ್ರಹಣ ಮಾಡುವವರಾಗಿದ್ದಲ್ಲಿ, ಲಾನ್ಸ್ ಡೌನ್ ನಿಮಗೆ ಉತ್ತಮವಾದ ಒಂದು ದೃಶ್ಯವನ್ನು ಒದಗಿಸಿ ನಿಮ್ಮ ಅಭಿರುಚಿಯನ್ನು ಇನ್ನೂ ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ಲಾನ್ಸ್ ಡೌನ್ ಗೆ ತಲುಪುವುದು ಹೇಗೆ?

ಲಾನ್ಸ್ ಡೌನ್ ಗೆ ತಲುಪುವುದು ಹೇಗೆ?

Tafyrn & Seamora Palecloud

ವಾಯು ಮಾರ್ಗ ಮೂಲಕ : ಇದು 1700 ಮೀಟರ್ ಎತ್ತರದ ಪ್ರದೇಶದಲ್ಲಿ ನೆಲೆಸಿರುವುದರಿಂದ ಇಲ್ಲಿಗೆ ವಾಯು ಮಾರ್ಗದ ಮೂಲಕ ಸಂಪರ್ಕವು ಅಷ್ಟೊಂದು ಉತ್ತಮವಾಗಿಲ್ಲ ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು ಡೆಹರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ನೀವು ಡೆಹರಾಡೂನ್ ನಿಂದ ಲಾನ್ಸ್ ಡೌನ್ ಗೆ ಬಾಡಿಗೆ ಟ್ಯಾಕ್ಸಿ ಮೂಲಕ ಪ್ರಯಾಣ ಮಾಡಬಹುದಾಗಿದೆ. ಇದು 158 ಕಿ.ಮೀ ಅಂತರದಲ್ಲಿದ್ದು ಇಲ್ಲಿಗೆ ತಲುಪಲು ಸುಮಾರು 4-5 ಗಂಟೆಗಳು ಬೇಕಾಗುವುದು.

ರಸ್ತೆ ಮೂಲಕ ಹೇಗೆ ತಲುಪುವುದು: ಈ ಸ್ಥಳವು ಎತ್ತರವಾದ ಪ್ರದೇಶದಲ್ಲಿರುವ ಕಾರಣದಿಂದಾಗಿ ರಸ್ತೆಯ ಮೂಲಕ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಈ ಸ್ಥಳವು ದೆಹಲಿಯಿಂದ 250 ಕಿ.ಮೀ ಅಂತರದಲ್ಲಿದೆ. ಇಲ್ಲಿಯ ಪ್ರಯಾಣವು ಅತ್ಯಂತ ಸುಂದರವಾಗಿರುವುದರಿಂದ ಇಲ್ಲಿಗೆ ಹೆಚ್ಚಿನ ಜನರು ಡ್ರೈವಿಂಗ್ ಮಾಡಿಕೊಂಡು ಹೋಗಲು ಇಚ್ಚಿಸುತ್ತಾರೆ. ಇಲ್ಲಿಗೆ ಅನೇಕ ಸಾರ್ವಜನಿಕ ಮತ್ತು ಖಾಸಗಿ ಬಸ್ಸುಗಳು ನಿರಂತರವಾಗಿ ಸಿಗುತ್ತವೆ. ಕೋಟ್ವಾರ್ ನಿಂದ ಲಾನ್ಸ್ ಡೌನ್ ಗೆ ರಸ್ತೆ ಮೂಲಕ ಪ್ರಯಾಣ ಅತ್ಯಂತ ಸುಂದರ ಮತ್ತು ನಯನ ಮನೋಹರವಾಗಿದೆ.

ರೈಲಿನ ಮೂಲಕ ಹೇಗೆ ತಲುಪುವುದು : ಕೋಟ್ವಾರ್ ರೈಲ್ವೇ ನಿಲ್ದಾಣವು ಇಲ್ಲಿಗೆ ಹತ್ತಿರವಾದುದಾಗಿದ್ದು ಇದು ಸುಮಾರು 41 ಕಿ.ಮೀ ಅಂತರದಲ್ಲಿದೆ. ಮತ್ತೊಮ್ಮೆ ಇಲ್ಲಿಗೆ ರೈಲ್ವೇ ಸಂಚಾರವು ಅಷೊಂದು ಸುಗಮವಾಗಿ ಇರುವುದಿಲ್ಲ ವಾದ ಕಾರಣ ಈ ಆಯ್ಕೆಯನ್ನು ಪರಿಗಣಿಸದೇ ಇರುವುದು ಒಳಿತು. ನಿಮಗೆ ಭೇಟಿ ಕೊಡುವ ಕಾಲಾವಕಾಶವು ಕನಿಷ್ಟ ವಾಗಿರುವುದಾದಲ್ಲಿ ರೈಲಿನಲ್ಲಿ ಪ್ರಯಾಣವು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ ಈ ಪ್ರಯಾಣವನ್ನು ಆಯ್ಕೆ ಮಾಡದಿರುವುದೇ ಒಳಿತು.

ಅಲ್ಮೋರಾ

ಅಲ್ಮೋರಾ

rrdarvesh

ಇದೊಂದು ಸಣ್ಣ ತಾಣವಾಗಿದ್ದು ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದು ಗುರುತಿಸಲ್ಪಡುತ್ತದೆ. ಇದು ಉತ್ತರಾಖಂಡ್ ನ ಕುಮಾನ್ ಪ್ರಾಂತ್ಯದಲ್ಲಿ ನೆಲೆಸಿದೆ. ಈ ಸ್ಥಳವು ಬೃಹತ್ ಹಿಮಾಲಯದ ನಯನ ಮನೋಹರ ನೋಟವನ್ನು ಒದಗಿಸಿಕೊಡುತ್ತದೆ. ಪೈನ್ ಕಾಡುಗಳು ಈ ಪ್ರದೇಶದ ಅತ್ಯಂತ ಆಕರ್ಷಕ ಭಾಗವಾಗಿದೆ. ಅದರಲ್ಲೂ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಈ ಸ್ಥಳವು ಅತ್ಯಂತ ಜೀವಂತವಾಗಿ ಮತ್ತು ಆಹ್ಲಾದಕರವಾಗಿ ಕಾಣುತ್ತದೆ.

ಈ ಪ್ರದೇಶದಲ್ಲಿ ಅನೇಕ ವಿಧದ ಸಸ್ಯಗಳು ಮತ್ತು ಪ್ರಾಣಿ ವರ್ಗಗಳನ್ನು ಶೋಧಿಸಬಹುದಾಗಿದೆ. ಇಲ್ಲಿಯ ಪ್ರಕೃತಿಯ ವಿಷಯವನ್ನು ತೆಗೆದುಕೊಂಡರೆ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಅತ್ಯಂತ ಆಕರ್ಷಕ ವೈವಿಧ್ಯತೆಗಳನ್ನು ಒದಗಿಸಿಕೊಡುತ್ತದೆ ಅವುಗಳಲ್ಲಿ ಸುಂದರವಾದ ಭೂ ಪ್ರದೇಶಗಳು, ವೈವಿಧ್ಯಮಯ ವನ್ಯಜೀವಿಗಳು ಮತ್ತು ಪೈನ್ ಅರಣ್ಯಪ್ರದೇಶಗಳು ಇತ್ಯಾದಿಗಳು ಒಳಗೊಂಡಿವೆ. ಉತ್ತರಾಖಂಡ್ ನ ಅಲ್ಮೋರಾದಲ್ಲಿ ಮಳೆಗಾಲದಲ್ಲಿ ಕಾಣಸಿಗುವ ಜೀವಂತಮಯ ಇರಿಸಿಕೊಂಡಿರುವ ಸೌಂದರ್ಯವನ್ನು ಬೇರೆಲ್ಲೂ ನೋಡಿರಲು ಸಾಧ್ಯವಿಲ್ಲ.

ಅಲ್ಮೋರಾವನ್ನು ತಲುಪುವುದು ಹೇಗೆ?

ಅಲ್ಮೋರಾವನ್ನು ತಲುಪುವುದು ಹೇಗೆ?

rrdarvesh

ವಾಯುಮಾರ್ಗ ದ ಮೂಲಕ : ಇದು ಎತ್ತರ ಪ್ರದೇಶದಲ್ಲಿರುವುದರಿಂದ ಅಲ್ಮೋರ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ 173 ಕಿ.ಮೀ ಅಂತರದಲ್ಲಿರುವ ಡೆಹರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ

ರಸ್ತೆ ಮೂಲಕ ತಲುಪುವುದು ಹೇಗೆ : ರಸ್ತೆ ಮೂಲಕ ಇಲ್ಲಿಗೆ ಸಂಪರ್ಕವು ಅತ್ಯಂತ ಉತ್ತಮವಾದ ಚಟುವಟಿಕೆಯಿಂದ ಕೂಡಿದೆ. ಅನೇಕ ಪ್ರಮುಖ ನಗರಗಳಿಂದ ಇಲ್ಲಿಗೆ ಬಸ್ಸುಗಳು ದಿನನಿತ್ಯ ಓಡಾಡುತ್ತಿರುತ್ತವೆ. ನೀವು ದೆಹಲಿಯಿಂದ ಅಥವಾ ಡೆಹರಾಡೂನ್ ನಿಂದ ಈ ಸ್ಥಳಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ಅಥವಾ ನೀವು ನಿಮ್ಮ ಸ್ವಂತ ವಾಹನದಲ್ಲಿ ಅಥವಾ ಬಾಡಿಗೆ ಟ್ಯಾಕ್ಸಿಯಲ್ಲಿಯೂ ಕೂಡಾ ಡೆಹರಾಡೂನ್ ಅಥವಾ ದೆಹಲಿಯಿಂದ ಈ ಸ್ಥಳಕ್ಕೆ ಪ್ರಯಾಣ ಮಾಡಬಹುದಾಗಿದೆ.

ರೈಲಿನ ಮೂಲಕ ತಲುಪುವುದು ಹೇಗೆ : ಅಲ್ಮೋರಾದಿಂದ 38 ಕಿ.ಮೀ ದೂರದಲ್ಲಿರುವ ಕಾಥ್ಗೋಡಮ್ ಹತ್ತಿರದ ರೈಲು ನಿಲ್ದಾಣವಾಗಿದೆ. ಇತರ ಪಟ್ಟಣಗಳಿಂದ ಕಾಥ್ಗೋಡಮ್ ಗೆ ನಿಯಮಿತ ರೈಲುಗಳು ಇವೆ.

ಹೂವುಗಳ ಕಣಿವೆ (ವ್ಯಾಲಿ ಆಫ್ ಪ್ಲವರ್ಸ್)

ಹೂವುಗಳ ಕಣಿವೆ (ವ್ಯಾಲಿ ಆಫ್ ಪ್ಲವರ್ಸ್)

Pankaj Says So

ಬೃಹತ್ ಹಿಮಾಲಯ ಪ್ರದೇಶದಲ್ಲಿ ಹೂ ಬಿಡುವ ಹೂವಿನ ಕಣಿವೆಯು ಜೀವವಿಜ್ಞಾನಿಗಳು, ಪ್ರಾಣಿಶಾಸ್ತ್ರಜ್ಞರು, ಪ್ರಕೃತಿ ಪ್ರೇಮಿಗಳು ಮತ್ತು, ಮುಖ್ಯವಾಗಿ, ಮಾನ್ಸೂನ್ ಪ್ರೇಮಿಗಳ ಒಂದು ಕಾಲ್ಪನಿಕ ಸ್ಥಳವಾಗಿದೆ. ಸುಮಾರು 87 ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಪ್ರದೇಶವು ವಿಶಾಲ ಶ್ರೇಣಿಯಲ್ಲಿ ಸುಂದರವಾದ ಹೂವುಗಳು ಮತ್ತು ಮರಗಳನ್ನು ಹೊಂದಿವೆ. ಪ್ರಾಯಶ: ಇದು ಉತ್ತರಭಾರತದ ಅತ್ಯಂತ ಸುಂದರವಾದ ಸ್ಥಳವಾಗಿದೆ ಎನ್ನಬಹುದು. ಮಾನ್ಸೂನ್ ಮಳೆಗಾಲದಲ್ಲಿ ಈ ಪ್ರದೇಶವು ಜೀವಂತಿಕೆಯಿಂದ ಕಾಣುತ್ತದೆ ಮತ್ತು ಈ ಸಮಯದಲ್ಲಿ ಇಲ್ಲಿ ಅನೇಕ ವಿಧದ ಹೂವುಗಳು ಅರಳುವುದನ್ನು ಕಂಡು ಸಂತೋಷ ಪಡಬಹುದಾಗಿದೆ.

ಮಳೆಯಿಂದಾಗಿ ಧೂಳಿನಿಂದ ಕೂಡಿರುವ ಭೂಭಾಗವು ಸ್ವಚ್ಚಗೊಳ್ಳುತ್ತದೆ ಮತ್ತು ಕಣಿವೆಗೆ ಒಂದು ಹೊಸ ಜೀವವನ್ನು ತಂದು ಕೊಡುತ್ತದೆ. ಈ ಸಲ ನೀವು ಇಲ್ಲಿ ಅನೇಕ ಜಾತಿಯ ಸುಂದರ ಹೂವುಗಳನ್ನು ಕಾಣಬಹುದಾಗಿದೆ. ಈ ಹೂವಿನ ಕಣಿವೆಯ ಒಂದು ಸುಂದರ ಅನುಭವವನ್ನು ನೀಡುತ್ತದೆ ಎಂಬುದನ್ನು ನೀವು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಹೂಗಳ ಕಣಿವೆಗೆ ತಲುಪುವುದು ಹೇಗೆ?

ಹೂಗಳ ಕಣಿವೆಗೆ ತಲುಪುವುದು ಹೇಗೆ?

Rashmigspai

ವಾಯು ಮಾರ್ಗ ಮೂಲಕ : ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಡೆಹರಾಡೂನ್ ನ ಜಾಲಿಗ್ರಾಂಟ್ ವಿಮಾನ ನಿಲ್ದಾಣ ವಾಗಿದೆ. ನೀವು ಡೆಹರಾಡೂನ್ ಗೆ ಮೆಟ್ರೋ ನಗರಗಳಾದ ಮುಂಬೈ ಮತ್ತು ದೆಹಲಿಯಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ಮತ್ತು ಡೆಹರಾಡೂನ್ ನಿಂದ ಈ ಹೂಗಳ ಕಣಿವೆಗೆ ಪ್ರಯಾಣ ಬೆಳೆಸಬಹುದು . ಇದು ವಿಮಾನ ನಿಲ್ದಾಣದಿಂದ ಸುಮಾರು 295 ಕಿ.ಮೀ ಅಂತರದಲ್ಲಿದೆ. ನೀವು ಇಲ್ಲಿ ಹೆಲಿಕಾಪ್ಟರ್ ಸೇವೆಯನ್ನೂ ಕೂಡಾ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ರಸ್ತೆ ಮೂಲಕ ಇಲ್ಲಿಗೆ ತಲುಪುವುದು ಹೇಗೆ : ಇಲ್ಲಿಗೆ ಹತ್ತಿರವಿರುವ ರೈಲ್ವೇ ನಿಲ್ದಾಣವೆಂದರೆ ಅದು ರಿಷಿಕೇಶದ ನಿಲ್ದಾಣವಾಗಿದೆ. ಇದು 273 ಕಿ.ಮಿ ಅಂತರದಲ್ಲಿದೆ ರಿಷಿಕೇಶ್ ಗೆ ನಿರಂತರವಾಗಿ ರೈಲು ಗಳು ಓಡಾಡುತ್ತವೆ.

ರಸ್ತೆ ಮೂಲಕ ಪ್ರಯಾಣ :ಹೂವಿನ ಕಣಿವೆಗೆ ತಲುಪಲು ಅತ್ಯಂತ ಅನುಕೂಲಕರವಾದ ಮಾರ್ಗವೆಂದರೆ ರಸ್ತೆ ಮೂಲಕ.ರಸ್ತೆಗಳು ಕೇವಲ ಗೋವಿಂದಘಾಟ್ಗೆ ಸಂಪರ್ಕ ಕಲ್ಪಿಸುತ್ತವೆ ಅದರ ನಂತರ, ನೀವು ಚಾರಣ ಮಾಡಬೇಕು. ಇದು ಪೌಲ್ನಾ ಹಳ್ಳಿಗೆ ಕೂಡಾ ಸಂಪರ್ಕಿಸುತ್ತದೆ. ನೀವು ಟ್ಯಾಕ್ಸಿ ಮೂಲಕ ಪ್ರಯಾಣ ಮಾಡಬಹುದು ಅಥವಾ ದೆಹಲಿ ಅಥವಾ ಡೆಹರಾಡೂನ್ ನಿಂದ ನಿಮ್ಮ ಸ್ವಂತ ಕಾರಿನೊಂದಿಗೆ ಪ್ರಯಾಣಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X