Search
  • Follow NativePlanet
Share
» »ಹೆಚ್ಚಾಗಿ ಪ್ರವಾಸಿಗರು ಟ್ರೆಕ್ಕಿಂಗ್ ತೆರಳುವ ಪರ್ವತಗಳು

ಹೆಚ್ಚಾಗಿ ಪ್ರವಾಸಿಗರು ಟ್ರೆಕ್ಕಿಂಗ್ ತೆರಳುವ ಪರ್ವತಗಳು

ಭಾರತವು ಎತ್ತರವಾದ ಶಿಖರಗಳನ್ನು ಹೊಂದಿದ್ದು ಪ್ರವಾಸಿಗರಿಗೆ ಅತ್ಯುತ್ತಮವಾದ ಅನುಭವವನ್ನು ಉಂಟು ಮಾಡುತ್ತದೆ. ಈ ಸುಂದರವಾದ ಗಿರಿ ಶಿಖರಗಳ ಮೇಲೆ ಟ್ರೆಕ್ಕಿಂಗ್ ಮಾಡಲು ಪ್ರವಾಸಿಗರು ಬಯಸುತ್ತಾರೆ. ವೈಯಕ್ತಿಕವಾಗಿ ಅವುಗಳನ್ನು ಅನ್ವೇಷಿಸುವ ಮೂಲಕ ಭೂ

ಭಾರತವು ಎತ್ತರವಾದ ಶಿಖರಗಳನ್ನು ಹೊಂದಿದ್ದು ಪ್ರವಾಸಿಗರಿಗೆ ಅತ್ಯುತ್ತಮವಾದ ಅನುಭವವನ್ನು ಉಂಟು ಮಾಡುತ್ತದೆ. ಈ ಸುಂದರವಾದ ಗಿರಿ ಶಿಖರಗಳ ಮೇಲೆ ಟ್ರೆಕ್ಕಿಂಗ್ ಮಾಡಲು ಪ್ರವಾಸಿಗರು ಬಯಸುತ್ತಾರೆ. ವೈಯಕ್ತಿಕವಾಗಿ ಅವುಗಳನ್ನು ಅನ್ವೇಷಿಸುವ ಮೂಲಕ ಭೂಮಿಯ ರಹಸ್ಯಗಳನ್ನು ಭೇಧಿಸುವುದರಲ್ಲಿ ಪ್ರವಾಸಿಗರು ಸದಾ ಆಸಕ್ತರಾಗಿರುತ್ತಾರೆ.

ಟ್ರೆಕ್ಕಿಂಗ್ ಕೇವಲ ಒಂದು ಚಟುವಟಿಕೆಯಲ್ಲ ಬದಲಾಗಿ ಯಾವುದಾದರೂ ರಹಸ್ಯವನ್ನು ಹಾಗೂ ಸ್ಥಳೀಯರನ್ನು ಅರ್ಥ ಮಾಡಿಕೊಳ್ಳಲು ಅವರ ಜೀವನ ಶೈಲಿ, ಸಂಪ್ರದಾಯಗಳ ಬಗ್ಗೆ ಮತ್ತಷ್ಟು ತಿಳಿಯುವ ಹಂಬಲವೇ ಟ್ರೆಕ್ಕಿಂಗ್.

ಭಾರತದ ಟ್ರೆಕ್ಕಿಂಗ್ ಕೇವಲ ಒಂದು ಅನುಭವಕ್ಕಿಂತ ಹೆಚ್ಚು. ಭವ್ಯವಾದ ಪರ್ವತಗಳಿಂದ ಸುತ್ತುವರಿಯಲ್ಪಟ್ಟ ಅದ್ಭುತ ಅನುಭವ. ಭಾರತದ ಅತ್ಯಂತ ಪ್ರವೇಶಿಸಲಾಗದ ಪರ್ವತಗಳ ಮೇಲೆ ನಿಮ್ಮ ನಡಿಗೆಯನ್ನು ಸಿದ್ಧಪಡಿಸುವುದು.

ಪ್ರಸ್ತುತ ಲೇಖನದಲ್ಲಿ ಹೆಚ್ಚಾಗಿ ಪ್ರವಾಸಿಗರು ಟ್ರೆಕ್ಕಿಂಗ್ ತೆರಳುವ ಪರ್ವತಗಳ ಬಗ್ಗೆ ತಿಳಿಯೋಣ.

ಪಿನ್ ಪಾರ್ವತಿ ವ್ಯಾಲಿ ಟ್ರೆಕ್

ಪಿನ್ ಪಾರ್ವತಿ ವ್ಯಾಲಿ ಟ್ರೆಕ್

ಪಿನ್ ಪಾರ್ವತಿ ವ್ಯಾಲಿ ಟ್ರೆಕ್ ಹಿಮಾಚಲ ಪ್ರದೇಶದಲ್ಲಿದೆ. ಇದು ಕುಲುವಿನ ಪಾರ್ವತಿ ಕಣಿವೆಯು ಪಿನ್ ಪಾರ್ವತಿ ವ್ಯಾಲಿಗೆ ಸಂಪರ್ಕಿಸುತ್ತದೆ. ಇಲ್ಲಿ ಹಚ್ಚ ಹಸಿರಿನಿಂದ ಹಾಗೂ ಮುಸುಕಾದ ಭೂದೃಶ್ಯವನ್ನು ಹೊಂದಿ ಸೌಂದರ್ಯಯುತವಾಗಿದೆ. ಹೆಚ್ಚಾಗಿ ಬಂಜರು ಭೂಮಿ ಮತ್ತು ಸಸ್ಯವರ್ಗದ ಸಂಪತ್ತಿನಿಂದ ಕೂಡಿದೆ. ಈ ಭಾಗದಲ್ಲಿ ಪ್ರಧಾನವಾಗಿ ಹಿಂದೂಗಳಿದ್ದರೂ ಕೂಡ ಹೆಚ್ಚಾಗಿ ಬೌದ್ಧ ಧರ್ಮದ ಅನುಯಾಯಿಗಳಾಗಿದ್ದಾರೆ. ಅಂದರೆ ಇಲ್ಲಿ ಬೌದ್ಧ ಧರ್ಮ ಪ್ರಭಾವ ಹೆಚ್ಚಾಗಿದೆ.


PC:Slopetrotter -

ಪಿನ್ ಪಾರ್ವತಿ ವ್ಯಾಲಿ ಟ್ರೆಕ್

ಪಿನ್ ಪಾರ್ವತಿ ವ್ಯಾಲಿ ಟ್ರೆಕ್

ಪಿನ್ ಪಾರ್ವತಿ ಕಣಿವೆಯು ಒಂದು ಜನಪ್ರಿಯವಾದ ಚಾರಣ ತಾಣವಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಶುದ್ಧವಾದ ಮತ್ತು ಮೂಲ ರೂಪದ ಚಿತ್ರವನ್ನು ಒದಗಿಸುತ್ತದೆ. ಭಾರತದ ಟ್ರೆಕ್ಕಿಂಗ್ ಪ್ರೇಮಿಗಳು ಹೆಚ್ಚಾಗಿ ಭೇಟಿ ನೀಡುವ ತಾಣದಲ್ಲಿ ಇದು ಒಂದಾಗಿದೆ. ಪಿನ್ ಪಾರ್ವತಿ ಕಣಿವೆಯು ಸಮುದ್ರ ಮಟ್ಟದಿಂದ ಸುಮಾರು 4900 ಮೀಟರ್ ಎತ್ತರದಲ್ಲಿದೆ. ಪಿನ್ ಪಾರ್ವತಿ ಕಣಿವೆಯನ್ನು ದೇವತೆಯ ಕಣಿವೆ ಎಂದೂ ಸಹ ಕರೆಯುತ್ತಾರೆ.

PC : Sudhanshu Gupta

ಪಿನ್ ಪಾರ್ವತಿ ವ್ಯಾಲಿ ಟ್ರೆಕ್

ಪಿನ್ ಪಾರ್ವತಿ ವ್ಯಾಲಿ ಟ್ರೆಕ್

ಈ ಸುಂದರವಾದ ಕಣಿವೆಯ ಪ್ರಯಾಣವು ಮನಾಲಿಯಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿಂದ ನಿಮ್ಮನ್ನು ಹಚ್ಚ ಹಸಿರಿನ ಕಾಡುಗಳು, ಸರೋವರಗಳು, ಕಾಡು ಹೂವಿನ ಪರಿಮಳ, ಭವ್ಯವಾದ ಶಿಖರಗಳು ಇತ್ಯಾದಿ ಮೂಲಕ ನಿಮ್ಮನ್ನು ಸ್ವಾಗತಿಸುತ್ತದೆ. ಈ ಶಿಖರಕ್ಕೆ ಟ್ರೆಕ್ಕಿಂಗ್‍ಗೆ ಹೋಗಲು ಸೂಕ್ತವಾದ ಸಮಯವೆಂದರೆ ಅದು ಮೇ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಒಮ್ಮೆ ಈ ಸುಂದರವಾದ ಸ್ಥಳಕ್ಕೆ ಭೇಟಿ ಕೊಡಿ.

PC : wikimedia.org

ಹೆಮಕುಂಡ್ ಮತ್ತು ವ್ಯಾಲಿ ಆಫ್ ಫ್ಲವರ್ಸ್ ಟ್ರೆಕ್

ಹೆಮಕುಂಡ್ ಮತ್ತು ವ್ಯಾಲಿ ಆಫ್ ಫ್ಲವರ್ಸ್ ಟ್ರೆಕ್

ಹೆಸರೇ ಸೂಚಿಸುವಂತೆ, ಈ ಸ್ಥಳವು ಭೂಮಿಯ ಮೆಲಿನ ಸ್ವರ್ಗವಾಗಿದೆ. ಈ ಸ್ಥಳವು ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಅಸಂಖ್ಯಾತ ಹೂವುಗಳಿಂದ ಕಂಗೋಳಿಸುತ್ತಿರುತ್ತದೆ. ನಂದಾ ದೇವಿ ಜೀವಗೋಳ ಮೀಸಲು ಪ್ರದೇಶದ ಎರಡನೇ ಪ್ರಮುಖ ವಲಯವು ವ್ಯಾಲಿ ಆಫ್ ಫ್ಲವರ್ಸ್ ಆಗಿದೆ. ಮುಖ್ಯವಾಗಿ ವಿಶ್ವ ಪರಂಪರೆಯ ತಾಣವೆಂದು ಹೆಮಕುಂಡ್ ಮತ್ತು ವ್ಯಾಲಿ ಆಫ್ ಫ್ಲವರ್ಸ್ ಟ್ರೆಕ್‍ವನ್ನು ಘೋಷಿಸಲಾಗಿದೆ. ವರ್ಷವಿಡೀ ಹಲವಾರು ಪ್ರವಾಸಿಗರು, ಸಸ್ಯ ವಿಜ್ಞಾನಿಗಳು ಮತ್ತು ಚಾರಣಿಗರು ಬರುತ್ತಿರುತ್ತಾರೆ.


PC : Lhoon

ಹೆಮಕುಂಡ್ ಮತ್ತು ವ್ಯಾಲಿ ಆಫ್ ಫ್ಲವರ್ಸ್ ಟ್ರೆಕ್

ಹೆಮಕುಂಡ್ ಮತ್ತು ವ್ಯಾಲಿ ಆಫ್ ಫ್ಲವರ್ಸ್ ಟ್ರೆಕ್

ಈ ಸ್ಥಳವು ಟ್ರೆಕ್ಕಿಂಗ್‍ಗೆ ಸೂಕ್ತವಾದ ಸ್ಥಳವಾಗಿದ್ದು, ಗಡ್ವಾಲ್ನಲ್ಲಿ ಹತ್ತಿರದ ಜೋಶಿಮಠದಿಂದ ಸುಮಾರು 17 ಕಿ,ಮೀ ದೂರದಲ್ಲಿ ಈ ಸುಂದರವಾದ ಶಿಖರವಿದೆ. ಈ ಕಣಿವೆಯು ಸಮುದ್ರ ಮಟ್ಟದಿಂದ ಸುಮಾರು 3650 ಮೀಟರ್ ಎತ್ತರದಲ್ಲಿದೆ. ಹೂಗಳಿಂದ ಅವೃತ್ತವಾದ ಈ ಕಣಿವೆಗೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಅದು ಜುಲೈ ಮಧ್ಯೆದಲ್ಲಿ ಹಾಗೂ ಆಗಸ್ಟ್ ತಿಂಗಳ ಮಧ್ಯೆದಲ್ಲಿ. ಹೂವಿನ ಕಣಿವೆಗೆ ಚಾರಣ ಮಾಡುವುದು ಬಹಳ ಸುಲಭ ಮತ್ತು ಚಾರಣದ ಅನುಭವವಿಲ್ಲದ ಜನರಿಂದ ಕೈಗೊಳ್ಳಬಹುದಾದ ಸೂಕ್ತ ಸ್ಥಳವಾಗಿದೆ.


PC : Divyansh Vardhan

ಕಿನ್ನರ್ ಕೈಲಾಶ್ ಸಕ್ರ್ಯೂಟ್ ಟ್ರೆಕ್

ಕಿನ್ನರ್ ಕೈಲಾಶ್ ಸಕ್ರ್ಯೂಟ್ ಟ್ರೆಕ್

ಹಿಮಾಚಲ ಪ್ರದೇಶದ ಸುಂದರವಾದ ರಾಜ್ಯದಲ್ಲಿರುವ ಕಿನ್ನೌರ್ ಒಂದು ಸುಂದರವಾದ ಜಿಲ್ಲೆಯಾಗಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ ಸುಮಾರು 5242 ಎತ್ತರದಲ್ಲಿದೆ. ಪ್ರಾಚೀನವಾದ ಮತ್ತು ಪ್ರಶಾಂತವಾದ ಕಿನ್ನೌರ್ ಉತ್ತರದಲ್ಲಿ ಸ್ಪಿತಿ ಕಣಿವೆ, ದಕ್ಷಿಣದ ಗಡ್ವಾಲ್ ಹಿಮಾಲಯಗಳು, ಪೂರ್ವದಲ್ಲಿ ಟಿಬೆಟ್ ಮತ್ತು ಪಶ್ಚಿಮದಲ್ಲಿ ಕುಲ್ಲುನಿಂದ ಅವೃತ್ತಗೊಂಡಿದೆ. ಪ್ರಕೃತಿಯ ಪ್ರೀತಿಯ ಜೊತೆಗೆ ಕಿನ್ನರ್ ಕೈಲಾಶ್ ಸಕ್ರ್ಯೂಟ್ ದೇಶದಾದಂತ್ಯ ಮತ್ತು ದೊಡ್ಡ ಸಂಖ್ಯೆಯ ಚಾರಣಿಗರನ್ನು ಆಕರ್ಷಿಸುತ್ತದೆ. ಕಿನ್ನೌರ್ ಕೂಡಾ ಟಿಬೆಟ್ಗೆ ಅಮೀಪದಲ್ಲಿರುವುದರಿಂದ ಬೌದ್ಧರ ಪ್ರಭಾವ ಮತ್ತು ಬೌದ್ಧ ಸಂಸ್ಕøತಿ ಅವರ ಪರಂಪರೆಯನ್ನು ಅಧ್ಯಯನ ಮಾಡಲು ಅಸಕ್ತಿ ಹೊಂದಿದ್ದಾರೆ.


PC : Sanchitgarg888

ಕಿನ್ನರ್ ಕೈಲಾಶ್ ಸಕ್ರ್ಯೂಟ್ ಟ್ರೆಕ್

ಕಿನ್ನರ್ ಕೈಲಾಶ್ ಸಕ್ರ್ಯೂಟ್ ಟ್ರೆಕ್

ಈ ಟ್ರೆಕ್ಕಿಂಗ್ ಮಾಡುವಾಗ ಚಾರಣವು ಒಂದು ಆಸಕ್ತಿದಾಯಕ ಮತ್ತು ಜೀವನದಲ್ಲಿ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ. ನೀವು ಚಾರಂಗ್ ಎಂಬ ದೇವಾಲಯವನ್ನು ಅನ್ವೇಷಿಸಬಹುದು ಮತ್ತು ಸರ್ಟಿಂಗ್ಗೆ ಹೋಗಬಹುದು. ಮುಂದೆ ಸಾಗುತ್ತಿದ್ದಂತೆ ಹಿಮಾವೃತವಾದ ಹೊಳೆಗಳನ್ನು ದಾಟವುದು ಹಾಗೂ ಬಂಡೆಗಳನ್ನು ಹತ್ತುವುದು ಮಾಡಬೇಕಾಗುತ್ತದೆ. ಇಲ್ಲಿನ ನೈಸರ್ಗಿಕವಾದ ಸೌಂದರ್ಯ ನಿಮ್ಮನ್ನು ಬೆರಗಾಗಿಸದೇ ಬಿಡದು.

PC : Gupta.aayush22

ಕಿನ್ನರ್ ಕೈಲಾಶ್ ಸಕ್ರ್ಯೂಟ್ ಟ್ರೆಕ್

ಕಿನ್ನರ್ ಕೈಲಾಶ್ ಸಕ್ರ್ಯೂಟ್ ಟ್ರೆಕ್

ಈ ಕಿನ್ನರ್ ಕೈಲಾಶ್ ಸಕ್ರ್ಯೂಟ್ ಶಿವಲಿಂಗವನ್ನು ಹೋಲುವಂತೆ ಇದ್ದು, ಹಿಂದೂಗಳಿಗೆ ಹೆಚ್ಚು ಧಾರ್ಮಿಕ ಮಹತ್ವವಾದ ಸ್ಥಳವಾಗಿದೆ. ಇದು ಶಿವನ ಪೌರಣಿಕ ನಿವಾಸಗಳಲ್ಲಿ ಇದೂ ಒಂದು ಎಂದೂ ಸಹ ನಂಬಾಲಾಗಿದೆ. ದೇಶ ವಿದೇಶಗಳಿಂದ ಭಕ್ತರು ಹಾಗೂ ಪ್ರವಾಸಿಗರು ಈ ದೇವಾಲಯಕ್ಕೆ ಬರುತ್ತಾರೆ. ಈ ರಮಣೀಯ ಹಾಗೂ ಧಾರ್ಮಿಕ ಸ್ಥಳಕ್ಕೆ ಚಾರಣ ಕೈಗೊಳ್ಳಲು ಸೂಕ್ತವಾದ ಸಮಯವೆಂದರೆ ಮೇ ತಿಂಗಳನಿಂದ ಸೆಪ್ಟೆಂಬರ್ ತಿಂಗಳವರೆಗೆ ತೆರಳುವುದು ಸೂಕ್ತ.

PC : wikimedia.org

 ಕುವಾರಿ ಪಾಸ್ ಟ್ರೆಕ್

ಕುವಾರಿ ಪಾಸ್ ಟ್ರೆಕ್

ಕುವಾರಿ ಶಿಖರವು ಸಮುದ್ರ ಮಟ್ಟದಿಂದ ಸುಮಾರು 4,264 ಮೀಟರ್ ಎತ್ತರದಲ್ಲಿದೆ. ಜೋಶಿ ಮಠದಿಂದ ಪ್ರಾರಂಭವಾಗುವ ಟ್ರೆಕ್ಕಿಂಗ್ ಜಾಡು ಮೂಲಕ ತಲುಪಬಹುದಾಗಿದೆ. ಕುವಾರಿ ಪಾಸ್ ಚಾರಣವು ಈ ಪರ್ವತಗಳ ಉಸಿರಾಟದ ವಿಕ್ಷೇಣೆಗಳನ್ನು ಆನಂದಿಸಲು ಅದ್ಭುತವಾದ ಆವಕಾಶವನ್ನು ನೀಡುತ್ತದೆ. ಭಾರತದಲ್ಲಿನ ಎತ್ತರವಾದ ಟ್ರೆಕ್ಕಿಂಗ್‍ಗಳಿಗೆ ಹೋಲಿಸಿದರೆ ಈ ಟ್ರೆಕ್ಕಿಂಗ್ ಅತ್ಯಂತ ಸುಲಭವಾಗಿದೆ.


PC : Zoeacs

ಕುವಾರಿ ಪಾಸ್ ಟ್ರೆಕ್

ಕುವಾರಿ ಪಾಸ್ ಟ್ರೆಕ್

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಜೋಶಿಮಠದಲ್ಲಿ ಚಾರಣ ಆರಂಭವಾಗುತ್ತದೆ. ನಂದಕಿನಿ, ಪಿಂಡರ್, ಕಾಲಿಗಂಗಾ, ಧೌಲಿ ಗಂಗಾ ಮತ್ತು ಬೈರೇಹಿಂಗಾ ನದಿಗಳ ಸಂಗಮಗಳಿಂದಾಗಿ ರೂಪುಗೊಂಡ ಪಂಚ ಪ್ರೇಗ್ ಕಾರಣದಿಂದಾಗಿ ಚಮೋಲಿ ಜಿಲ್ಲೆಯು ದೇಶದ ಹಿಂದೂಗಳಿಗೆ ಹೆಚ್ಚಿನ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.


PC : Zoeacs

ಕುವಾರಿ ಪಾಸ್ ಟ್ರೆಕ್

ಕುವಾರಿ ಪಾಸ್ ಟ್ರೆಕ್

ಮಂಜಿನಿಂದ ಅವೃತ್ತವಾದ ಪರ್ವತ ಶಿಖರಗಳು ಹಾಗೂ ಭಯಭೀತಗೊಳಿಸುವ ಗಾತ್ರವನ್ನು ಹೊಂದಿದ್ದು ಅತ್ಯಂತ ಅದ್ಭುತವಾಗಿದೆ. ಈ ಚಾರಣದ ಸಮಯದಲ್ಲಿ ನೀವು ಓಕ್ ಮತ್ತು ದೇವದಾರು ಕಾಡುಗಳ ಮೂಲಕ ಹಾದು ಹೋಗುತ್ತೀರಿ. ಈ ಕಾಡಿನಲ್ಲಿ ಸಸ್ಯ ಮತ್ತು ಪ್ರಾಣಿಗಳು ಸಮೃದ್ಧವಾಗಿದ್ದು ಇಲ್ಲಿನ ವಿಶಿಷ್ಟವಾದ ಕೆಂಪು ಹೂವು ಕೂಡ ಕಾಣಬಹುದು. ಈ ಪರ್ವತವು ಸಮುದ್ರ ಮಟ್ಟದಿಂದ ಸುಮಾರು 4,264 ಮೀಟರ್ ಎತ್ತರದಲ್ಲಿದೆ. ಈ ಪರ್ವತಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಡಿಸೆಂಬರ್ ತಿಂಗಳಿಂದ ಜನವರಿಯವರೆಗೆ.

PC : Alok Kumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X