Search
  • Follow NativePlanet
Share
» »3000 ಮಿಲಿಯನ್ ವರ್ಷ ಹಳೆಯ ಬಂಡೆ ಬೆಂಗಳೂರಿನಲ್ಲಿದೆಯಂತೆ, ಅದು ಎಲ್ಲಿದೆ ಗೊತ್ತಾ?

3000 ಮಿಲಿಯನ್ ವರ್ಷ ಹಳೆಯ ಬಂಡೆ ಬೆಂಗಳೂರಿನಲ್ಲಿದೆಯಂತೆ, ಅದು ಎಲ್ಲಿದೆ ಗೊತ್ತಾ?

ಸುಮಾರು 3000 ಮಿಲಿಯನ್ ವರ್ಷಗಳಷ್ಟು ಪುರಾತನ ಬಂಡೆಗಳು ಕರ್ನಾಟದಲ್ಲಿದೆಯಂತೆ. ಈ ಬಂಡೆಗಳು ಪೆನಿನ್ಸುಲಾರ್‌ನೆಸ್ಸ್‌ ರಚನೆಯಾಗಿದ್ದು ಇಡೀ ಭಾರತದಲ್ಲಿ ಇಂತಹ ರಚನೆಗಳು ಕೇವಲ 26 ಮಾತ್ರ ಇದೆ. ಅವುಗಳಲ್ಲಿ ಎರಡು ಕರ್ನಾಟಕದಲ್ಲೇ ಇದೆ ಎನ್ನುವುದು ವಿಶೇಷ. ಆ ಸ್ಥಳಗಳು ಈಗ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಹಾಗಾದ್ರೆ ಆ 3000 ಮಿಲಿಯನ್ ವರ್ಷ ಹಳೆಯ ಎರಡು ಬಂಡೆಗಳು ಎಲ್ಲಿವೆ ಎನ್ನುವುದನ್ನು ತಿಳಿಯೋಣ.

ಬಸವನ ಗುಡಿ

ಬಸವನ ಗುಡಿ

PC: Rkrish67

ಬೆಂಗಳೂರಿನಲ್ಲಿರುವವರೆಲ್ಲರೂ ಬಸವನಗುಡಿಯನ್ನು ನೋಡಿಯೇ ಇರುತ್ತೀರಾ. ಬಸವನ ಗುಡಿ ಬೆಂಗಳೂರಿನ ಹೃದಯ ಭಾಗದಲ್ಲಿದೆ. ಬೆಂಗಳೂರಿನಲ್ಲಿರುವ ಪ್ರಮುಖ ಧಾರ್ಮೀಕ ಸ್ಥಳಗಳಲ್ಲಿ ಇದೂ ಒಂದು. ಏಕಶಿಲೆಯಲ್ಲಿ ಕೆತ್ತಲಾದ ಬಸವನ ಪ್ರತಿಮೆ ಹಾಗೂ ದೊಡ್ಡ ಗಣಪತಿ ದೇವಸ್ಥಾನವು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ನಾರ್ತ್ ಇಂಡಿಯಾ ಸೌತ್‌ ಇಂಡಿಯಾ ಬಿಡಿ ಈ ಥಾಲಿ ಟೇಸ್ಟ್ ಮಾಡಿನಾರ್ತ್ ಇಂಡಿಯಾ ಸೌತ್‌ ಇಂಡಿಯಾ ಬಿಡಿ ಈ ಥಾಲಿ ಟೇಸ್ಟ್ ಮಾಡಿ

ಬ್ಯುಗಲ್ ರಾಕ್ಸ್‌ ಉದ್ಯಾನ

ಬ್ಯುಗಲ್ ರಾಕ್ಸ್‌ ಉದ್ಯಾನ

PC: Sarvagnya

ದೊಡ್ಡಬಸವನಗುಡಿಯು ಸಣ್ಣ ಬೆಟ್ಟವೊಂದರ ಮೇಲೆ ಸ್ಥಾಪಿತವಾಗಿದೆ. ಆ ಬೆಟ್ಟವೇ ಪೆನಿನ್ಸುಲಾ ನೆಸ್‌ ರಚನೆ. ಭೂಮಿ ರೂಪುಗೊಂಡ ಸಮಯದಲ್ಲಿ ನಿರ್ಮಿತವಾದ ಅತೀ ಪುರಾತನ ಶಿಲಾ ರಚನೆಗಳಲ್ಲಿ ಇದು ಒಂದಾಗಿದೆ. ಇಂದು ಆ ಬೆಟ್ಟವಿರುವ ಜಾಗದಲ್ಲಿ ಬ್ಯುಗಲ್ ರಾಕ್ಸ್‌ ಎನ್ನುವ ಉದ್ಯಾನವನ್ನು ನಿರ್ಮಿಸಲಾಗಿದೆ.

ಬಸವನ ಮೂರ್ತಿ

ಬಸವನ ಮೂರ್ತಿ

PC:Sarvagnya

ಹಿಂದೆ ಆ ಮಂದಿರದ ಸುತ್ತಮುತ್ತಲೂ ಕಡಲೇ ಕಾಯಿ ಹೊಲಗಳಿದ್ದವಂತೆ. ಅಲ್ಲಿ ಎತ್ತುಗಳು ಕಡಲೆ ಹೊಲದ ಮೇಲೆ ದಾಳಿ ಮಾಡಿ ಬೆಳೆಯನ್ನು ನಾಶಮಾಡುತ್ತಿದ್ದವಂತೆ ಹಾಗಾಗಿ ಜನರು ಅಲ್ಲೊಂದು ಬಸವನ ಪ್ರತಿಮೆಯನ್ನು ತಯಾರಿಸಿ ಪೂಜಿಸಿದರು. ಆ ನಂತರ ಎತ್ತುಗಳ ಹಾವಳಿ ಕಡಿಮೆಯಾಯಿತು ಎನ್ನಲಾಗುತ್ತದೆ.

ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !

ಹಿಂದಿನ ಕಥೆ

ಹಿಂದಿನ ಕಥೆ

PC: Sarvagnya

ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದಾಗ ಈ ಬಂಡೆಯ ಮೇಲೆ ವೀಕ್ಷಣಾ ಗೋಪುರವೊಂದನ್ನು ನಿರ್ಮಿಸಿ ಕಹಳೆ ಹಿಡಿದಿರುವ ಕಾವಲುಗಾರನನ್ನು ನೇಮಿಸಿದ್ದರು. ಶತ್ರುಗಳು ದಂಡೆತ್ತಿದ್ದಾಗ ಮುನ್ನೆಚ್ಚರಿಕೆಯಾಗಿ ಈ ಕಾವಲುಗಾರ ಕಹಳೆಯನ್ನೂದಿ ಎಚ್ಚರಿಕೆ ನೀಡುತ್ತಿದ್ದನು. ಕ್ರಮೇಣ ಇದು ಕಹಳೆ ಊದುವ ಬಂಡೆಯಾಗಿದೆ ಅದನ್ನು ಬ್ಯೂಗಲ್‌ ರಾಕ್ಸ್‌ ಎಂದು ಕರೆಯಲಾಯಿತು.

ಇನ್ನೊಂದು ಬಂಡೆ

ಇನ್ನೊಂದು ಬಂಡೆ

PC: Stephane Viau

ಇನ್ನೊಂದು ಪೆನಿನ್ಸುಲಾರ್‌ನೆಸ್ಸ್‌ ಬಂಡೆಯು ಲಾಲ್‌ಬಾಗ್‌ನಲ್ಲಿದೆ. ಲಾಲ್‌ಬಾಗ್‌ ಉದ್ಯಾನವನದ ನಡುವೆ ಇದೆ. ಪೆನಿನ್ಸುಲರ್ ಗ್ನೈಸ್ ಎಂಬ ಪದವು ಗ್ರಾನೈಟ್ ಶಿಲೆಗಳ ಮಿಶ್ರಣವಾಗಿದ್ದು, ಇವುಗಳು ದಕ್ಷಿಣ ಭಾರತದ ಪ್ರಸ್ಥಭೂಮಿಯ ಸುತ್ತ ವ್ಯಾಪಕವಾಗಿ ಹರಡಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X