Search
  • Follow NativePlanet
Share
» »ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ದಕ್ಷಿಣ ಭಾರತದ ಗಿರಿಧಾಮಗಳಿವು

ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ದಕ್ಷಿಣ ಭಾರತದ ಗಿರಿಧಾಮಗಳಿವು

By Manjula Balaraj Tantry

ಬಿಸಿಲು ಮತ್ತು ಮಳೆಯಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗುವುದು ಎಂದು ಆಶ್ಚರ್ಯ ಪಡುವಿರಾ? ಒಂದು ಪುನಶ್ಚೇತನ ಗೊಳಿಸುವಂತಹ ಪ್ರಯಾಣದ ಆಯ್ಕೆಗಾಗಿ ಹುಡುಕುತ್ತಿರುವಿರಾ?ಈ ಸಮಯದಲ್ಲಿ ಮಕ್ಕಳಿಗೂ ರಜಾ ಕೊಡಲಾಗುತ್ತದೆ. ಆದುದರಿಂದ ಒಂದು ಕುಟುಂಬ ಪ್ರವಾಸಕ್ಕೆ ಈ ಸಮಯ ಸೂಕ್ತವಾಗಿರುತ್ತದೆ. ಅದರಲ್ಲೂ ಬೆಟ್ಟಗಳ ಮೇಲೆ ಹರಡಿರುವ ಪ್ರಕೃತಿಯ ಸ್ಥಳಗಳು ಒಂದು ಉತ್ತಮವಾದ ಪ್ರವಾಸಿ ತಾಣವಾಗುತ್ತದೆ. ಕರ್ನಾಟಕದ ಕಾಶ್ಮೀರಕ್ಕೋಂದು ಪ್ರಯಾಣ...

ದಕ್ಷಿಣ ಭಾರತದಲ್ಲಿ ಕೆಲವೇ ಕೆಲವು ಗಿರಿಧಾಮಗಳಿವೆ. ಅವುಗಳಲ್ಲಿ ಆಗುಂಬೆ, ಯೆರ್ಕಾಡ್, ಮುನ್ನಾರ್, ಕೊಲ್ಲಿ ಬೆಟ್ಟಗಳು ಪ್ರಮುಖವಾದವುಗಳು. ಈ ಎಲ್ಲಾ ಗಿರಿಧಾಮಗಳು ಸೆರೆಹಿಡಿಯುವಂತಹ ಪರಿಸರವನ್ನು ಹೊಂದಿದೆ. ಇನ್ನೊಂದು ಪ್ರಮುಖವಾದ ವಿಷಯವೆಂದರೆ ಈ ಗಿರಿಧಾಮಗಳಿಗೆ ಪ್ರವಾಸ ಮಾಡುವುದು ಹೆಚ್ಚು ವೆಚ್ಚದ್ದು ಆಗಿರದೇ ಇರುವಂತದ್ದು. ಆದುದರಿಂದ ದಕ್ಷಿಣ ಭಾರತದ ಈ ಗಿರಿಧಾಮಗಳಿಗೆ ಒಮ್ಮೆ ಭೇಟಿ ಕೊಡೋಣ. ವರ್ಷದಲ್ಲಿ ಕೇವಲ 5 ದಿನ ಮಾತ್ರ ತೆರೆದಿರುತ್ತೆ ಈ ಶಿವಾಲಯ

ಆಗುಂಬೆ

ಆಗುಂಬೆ

PC :Karunakar Rayker

ದಕ್ಷಿಣ ಭಾರತದ ಒಂದು ಅತ್ಯಂತ ಸುಂದರವಾದ ಗಿರಿಧಾಮಗಳಲ್ಲೊಂದು ಎಂದರೆ ಅದು ಆಗುಂಬೆ, ಇದು ಕರ್ನಾಟಕದಲ್ಲಿದೆ. ಇದು ಸುಂದರವಾದ ದೃಶ್ಯಗಳಿಗೆ ಜನಪ್ರಿಯವಾಗಿದ್ದು ಇಲ್ಲಿಂದ ಅರಬ್ಬೀ ಸಮುದ್ರದಲ್ಲಿ ಸೂರ್ಯಾಸ್ತವಾಗುವ ದೃಶ್ಯವನ್ನು ನೋಡಬಹುದಾಗಿದೆ. ಇದು ಪ್ರಕೃತಿ ಪ್ರೇಮಿಗಳ ಸ್ವರ್ಗವೆನಿಸಿದ್ದು, ದೂರ ದೂರದಿಂದ ಎಲ್ಲಾ ಕಡೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಈ ಗಿರಿಧಾಮದಲ್ಲಿಯ ಅನೇಕ ಆಕರ್ಷಣೆಗಳನ್ನು ಅನ್ವೇಷಣೆ ಮಾಡುತ್ತಾರೆ.

ಚಿಕ್ಕಮಗಳೂರು

ಚಿಕ್ಕಮಗಳೂರು

PC:Premnath Thirumalaisamy

ದಕ್ಷಿಣ ಭಾರತದಲ್ಲಿಯ ಅತ್ಯುತ್ತಮವಾದ ಗಿರಿಧಾಮವೆಂದರೆ ಅದು ಚಿಕ್ಕಮಗಳೂರು ಇದು ಇಂಗ್ಲೀಷ್ ನಲ್ಲಿ ಇದನ್ನು " ದ ಲ್ಯಾಂಡ್ ಆಫ್ ಯಂಗ್ ಡಾಟರ್ " ಎಂದು ಅರ್ಥೈಸಬಹುದಾಗಿದೆ. ಈ ಗಿರಿಧಾಮವು ವಿಶ್ರಾಂತಿಗೆ ಸೂಕ್ತವಾದ ಸ್ಥಳವಾಗಿದೆ. ಈ ಸ್ಥಳವು ಅನೇಕ ಕಾಫೀ ಎಸ್ಟೇಟ್ ಗಳಿಗೆ ಹೆಸರುವಾಸಿಯಾಗಿದೆ, ಆದುದರಿಂದ ಚಿಕ್ಕಮಗಳೂರನ್ನು ಕರ್ನಾಟಕದ ಕಾಫಿಯ ರಾಜಧಾನಿ ಎಂದು ಕರೆಯಲಾಗುತ್ತದೆ.

ಕೆಮ್ಮಣ್ಣುಗುಂಡಿ

ಕೆಮ್ಮಣ್ಣುಗುಂಡಿ

ಚಿಕ್ಕಮಗಳೂರಿನ ಹಚ್ಚ ಹಸಿರು ಭೂಭಾಗದ ಮಧ್ಯೆ ನೆಲೆಗೊಂಡಿರುವ ಕೆಮ್ಮಣ್ಣುಗುಂಡಿ ದಕ್ಷಿಣಭಾರತದ ಒಂದು ಮಾಂತ್ರಿಕ ಮೋಡಿಗೊಳಿಸುವಂತಹ ಗಿರಿಧಾಮವೆನಿಸಿದೆ. ಅಲ್ಲದೆ ಇದು ತನ್ನಲ್ಲಿಯ ನೈಸರ್ಗಿಕ ಸೌಂದರ್ಯತೆ ಮತ್ತು ಸುಂದರ ದೃಶ್ಯಕ್ಕಾಗಿ ಹೆಸರುವಾಸಿಯಾಗಿದೆ. ಇದರ ತಾಜಾ ವಾತಾವರಣ, ನಯನ ಮನೋಹರ ಜಲಪಾತಗಳು ಮತ್ತು ಗುಡ್ಡಗಾಡು ಪ್ರದೇಶಗಳು, ಇಲ್ಲಿ ಹತ್ತಿರದಲ್ಲಿ ವಾಸಿಸುವವರಿಗೆ ಒಂದು ಉತ್ತಮವಾದ ವಾರಾಂತ್ಯದ ರಜಾತಾಣವೆಂದು ಸಾಬೀತಾಗಿದೆ.

ಕುದುರೆಮುಖ

ಕುದುರೆಮುಖ

PC:Karunakar Rayker

ಕುದುರೆಮುಖ ಒಂದು ಸುಂದರವಾದ ಗಿರಿಧಾಮವಾಗಿದ್ದು, ಇದು ಪಶ್ಚಿಮಘಟ್ಟಗಳ ಒಂದು ಭಾಗವಾಗಿದೆ. ಇದರ ಹಚ್ಚ ಹಸಿರು ಹುಲ್ಲುಗಾವಲುಗಳು ಮತ್ತು ದಟ್ಟವಾದ ಕಾಡುಗಳು ಈ ಪ್ರದೇಶವನ್ನು ಕರ್ನಾಟಕದಲ್ಲಿಯ ಅತ್ಯಂತ ಪ್ರಮುಖವಾದ ಜೀವವೈವಿಧ್ಯವನ್ನು ಒಳಗೊಂಡಿರುವ ಕೇಂದ್ರವನ್ನಾಗಿಸಿದೆ. ಇಲ್ಲಿಗೆ ಬರುವ ಪ್ರವಾಸಿಗಳು ಇಲ್ಲಿರುವ ಇನ್ನಿತರ ಆಕರ್ಷಣೀಯ ಪ್ರದೇಶಗಳಿಗೆ ಭೇಟಿಕೊಡುವುದರ ಮೂಲಕವೂ ತಮ್ಮನ್ನು ತಾವು ಸಂತೋಷಗೊಳಿಸಬಹುದಾಗಿದೆ. ಕುದುರೆಮುಖಕ್ಕೆ ಹತ್ತಿರದ ಸ್ಥಳಗಳಲ್ಲಿ ನೀವು ವಾಸಮಾಡುವವರಾದಲ್ಲಿ ಇಲ್ಲಿಗೆ ನಿಮ್ಮ ಕುಟುಂಬದ ಜೊತೆ ಪಿಕ್ನಿಕ್ ಗೆ ಕೂಡಾ ಹೋಗಬಹುದಾಗಿದೆ.

ನಂದಿ ಬೆಟ್ಟ

ನಂದಿ ಬೆಟ್ಟ

PC:Ritesh Niranjan

ದಕ್ಷಿಣ ಭಾರತದ ಇನ್ನೊಂದು ಸುಂದರವಾದ ಗಿರಿಧಾಮವೆಂದರೆ ಅದು ನಂದಿಬೆಟ್ಟ. ಇಲ್ಲಿ ಜನಪ್ರೀಯವಾಗಿರುವ ಟಿಪ್ಪುಡ್ರಾಪ್ ಗೆ ಭೇಟಿ ಕೊಡಲು ಪ್ರವಾಸಿಗರು ಬರುತ್ತಾರೆ. ಇಲ್ಲಿ ಅನೇಕ ಸುಂದರವಾದ ದೇವಾಲಯಗಳಿವೆ. ಅಲ್ಲದೆ ಇದು ಪ್ಯಾರಾ ಗೈಡ್ಲಿಂಗ್, ಸೈಕ್ಲಿಂಗ್,ಮುಂತಾದ ಕ್ರೀಡೆಗಳನ್ನು ಇಷ್ಟಪಡುವವರಿಗೆ ಕೇಂದ್ರಬಿಂದುವಾಗಿದೆ. ಇಲ್ಲಿಯ ಪ್ರಶಾಂತವಾದ ನೈಸರ್ಗಿಕ ಪರಿಸರದ ಮಧ್ಯೆ ಆನಂದಿಸಲು ಇಲ್ಲಿಗೆ ಪ್ರವಾಸಿಗರು ಬರುತ್ತಾರೆ

ಕುನೂರ್

ಕುನೂರ್

PC:Thangaraj Kumarave

ಕುನೂರ್ ದಕ್ಷಿಣ ಭಾರತದ ಒಂದು ಮನಮೋಹಕ ಗಿರಿಧಾಮವಾಗಿದ್ದು ಕುನೂರ್ ದಕ್ಷಿಣ ಭಾರತದ ಒಂದು ನಯನ ಮನೋಹರವಾದ ಗಿರಿಧಾಮವಾಗಿದ್ದು,ಇಲ್ಲಿ ಕಾಣುವ ಪ್ರಕೃತಿ ಸೌಂದರ್ಯ ಪ್ರವಾಸಿಗರ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ. ಪ್ರವಾಸಿಗರು ರೈಲಿನ ಮೂಲಕ ಈ ಸ್ಥಳಕ್ಕೆ ಪ್ರಯಾಣಿಸಿದರೆ ಇಲ್ಲಿಯ ಪ್ರದೇಶಗಳ ಅನೇಕ ಸುಂದರವಾದ ದೃಶ್ಯಗಳನ್ನು ನೋಡಬಹುದಾಗಿದೆ. ನಿಮ್ಮನ್ನು ಪುನಶ್ಚೇತನಗೊಳಿಸಲು ಇದೊಂದು ಸೂಕ್ತವಾದ ಸ್ಥಳವಾಗಿದೆ.

ಕೊಡೈಕೆನಾಲ್

ಕೊಡೈಕೆನಾಲ್

PC: netlancer2006

ಪಶ್ಚಿಮ ಘಟ್ಟಗಳ ಪಳನಿ ಬೆಟ್ಟಗಳಲ್ಲಿರುವ ಕೊಡೈಕೆನಾಲ್ ದಕ್ಷಿಣ ಭಾರತದ ಒಂದು ಸುಂದರವಾದ ಗಿರಿಧಾಮವಾಗಿದೆ. ಇದರ ಸುಂದರವಾದ ದೃಶ್ಯಾವಳಿಗಳ ಕಾರಣದಿಂದಾಗಿ ಇದನ್ನು " ಬೆಟ್ಟಗಳ ರಾಣಿ " ಎಂದು ಕರೆಯಲಾಗುತ್ತದೆ. ಇಲ್ಲಿ ಬರುವ ಪ್ರವಾಸಿಗರು ತಮ್ಮ ಕ್ಯಾನ್ವಾಸ್ ನಲ್ಲಿ ಈ ಸುಂದರವಾದ ಸ್ಥಳದ ವಿವರಣೆಯನ್ನು ತಮ್ಮ ಚಿತ್ರಕಲೆಯಲ್ಲಿ ಬಿಡಿಸಬೇಕು ಎಂಬ ಪ್ರತಿಜ್ಞೆ ಮಾಡುತ್ತಾರೆ. ಇಲ್ಲಿ ಪ್ರವಾಸಿಗರಿಗೆ ಅನ್ವೇಷಣೆ ಮಾಡಲು ಬೇಕಾದ ಆಕರ್ಷಣೆಗಳನ್ನು ಈ ಸ್ಥಳವು ಅನುಕೂಲ ಮಾಡಿ ಕೊಡುತ್ತದೆ.

ಕೊಲ್ಲಿ ಬೆಟ್ಟಗಳು

ಕೊಲ್ಲಿ ಬೆಟ್ಟಗಳು

PC:Prabu Thayalan

ಕೊಲ್ಲಿ ಬೆಟ್ಟಗಳು ಒಂದು ಪರ್ವತ ಶ್ರೇಣಿಯಾಗಿದ್ದು ಇದು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿದ್ದು ಇದು ಪೂರ್ವ ಘಟ್ಟಗಳ ಒಂದು ಭಾಗವಾಗಿದೆ. ಕೊಲ್ಲಿ ಬೆಟ್ಟಗಳು ಮಾನವ ಚಟುವಟಿಕೆಗಳಿಂದ, ವಾಣಿಜ್ಯೀಕರಣಗಳ ಶೋಷಣೆಯಿಂದ ಹೆಚ್ಚಿನ ಭಾಗ ಹೊರಗುಳಿದಿರುವುದರಿಂದ ತನ್ನ ನೈಸರ್ಗಿಕ ಸೌಂದರ್ಯತೆಯನ್ನು ಉಳಿಸಿಕೊಂಡಿದೆ. ರಸೀಪುರಂನಲ್ಲಿರುವ ಭಗವಾನ್ ಶಿವ ದೇವಸ್ಥಾನಕ್ಕೆ ರಹಸ್ಯ ಮಾರ್ಗವನ್ನು ಹೊಂದಿರುವ ಅರಪಲೇಶ್ವರರ್ ದೇವಾಲಯದಿಂದಾಗಿಈ ಬೆಟ್ಟಗಳು ಯಾತ್ರೀ ಸ್ಥಳವೆಂದು ಪರಿಗಣಿಸಲ್ಪಟ್ಟಿವೆ. ಈ ದೇವಾಲಯವು ವರ್ಷಪೂರ್ತಿ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ.

ಯೆಳಗಿರಿ

ಯೆಳಗಿರಿ

PC:Ashwin Kumar

ಯೆಲಗಿರಿಯನ್ನು ಎಲಗಿರಿ ಎಂದೂ ಉಚ್ಚರಿಸಲಾಗುತ್ತದೆ ಇದೊಂದು ದಕ್ಷಿಣ ಭಾರತದ ಸಣ್ಣ ಗಿರಿಧಾಮವಾಗಿದ್ದು ಚಾರುಣಿಗರಿಗೆ ಸ್ವರ್ಗವಾಗಿದೆ. ಸಮುದ್ರ ಮಟ್ಟದಿಂದ 1048 ಮೀಟರ್ ಎತ್ತರದಲ್ಲಿರುವ ಯಳಗಿರಿ ಗಿರಿಧಾಮವು ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ 14 ಗುಡ್ದಗಳ ಒಂದು ಗುಂಪಾಗಿದೆ. ಯೆಳಗಿರಿ ಬೆಟ್ಟಗಳು ಸಾಹಸಿ ಕ್ರೀಡೆಗಳನ್ನು ಇಷ್ಟ ಪಡುವವರಲ್ಲಿ ಜನಪ್ರಿಯವಾಗಿದೆ.

ಯೆರ್ಕಾಡ್

ಯೆರ್ಕಾಡ್

PC:Thangaraj Kumaravel

ತಮಿಳುನಾಡಿನ ಶೇವರೋಯ್ ಬೆಟ್ಟದಲ್ಲಿರುವ ಯೆರ್ಕಾಡ್ ಪೂರ್ವ ಘಟ್ಟಗಳಲ್ಲಿರುವ ಒಂದು ಗಿರಿಧಾಮವಾಗಿದೆ. ಇದು ಸುಮಾರು 1515 ಮೀಟರ್ ಎತ್ತರದಲ್ಲಿದೆ. ಇಲ್ಲಿನ ಸೌಂದರ್ಯ ಮತ್ತು ಆಹ್ಲಾದಕರ ವಾತಾವರಣವು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಯೆರ್ಕಾಡ್ ಕಾಫಿ ಕಿತ್ತಳೆ, ಹಲಸಿನ ಹಣ್ಣು, ಪೇರಳೆ ಹಣ್ಣು, ಏಲಕ್ಕಿ ಮತ್ತು ಕಪ್ಪು ಕಾಳುಮೆಣಸಿನ ಬೆಳೆಗೆ ಪ್ರಸಿದ್ದಿಯನ್ನು ಹೊಂದಿದೆ. ಯೆರ್ಕಾಡ್ ನ ಕಾಡುಗಳಲ್ಲಿ ಹೇರಳವಾದ ಗಂಧದ ಮರಗಳು, ತೇಗ ಮತ್ತು ಸಿಲ್ವರ್ ಓಕ್ ಮರಗಳಿವೆ. ಕಾಡು ಪ್ರಾಣಿಗಳಾದ ಕಾಡೆಮ್ಮೆ, ಜಿಂಕೆ, ನರಿಗಳು, ಮುಂಗುಸಿಗಳು, ಹಾವುಗಳು, ಬುಲ್ ಬುಲ್ ಗಳು,ಕೈಟ್ ಗಳು, ಗುಬ್ಬಚ್ಚಿಗಳು ಮತ್ತು ಗುಬ್ಬಚ್ಚಿಗಳು ಮತ್ತು ಅಳಿಲುಗಳು ಈ ಕಾಡುಗಳಲ್ಲಿ ಕಂಡುಬರುತ್ತವೆ. ಇದು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ.

ಮುನ್ನಾರ್

ಮುನ್ನಾರ್

PC: Amrita Bhattacharyya

ಮುನ್ನಾರ್ ಒಂದು ಶಾಂತಿಯುತವಾದ ಸ್ಥಳವಾಗಿದ್ದು ಇಲ್ಲಿ ವೈವಿಧ್ಯಮಯವಾದ ಸಸ್ಯ ಮತ್ತು ಪ್ರಾಣಿ ವರ್ಗಗಳಿವೆ. ಜಲಪಾತಗಳು, ಚಹಾ ತೋಟಗಳು ಮತ್ತು ಚಾರಣಕ್ಕೆ ಬೇಕಾದ ದಾರಿಗಳಿವೆ. ಇಲ್ಲಿಯ ಪ್ರಮುಖ ಪವಾಸಿ ಆಕರ್ಷಣೆಗಳಲ್ಲಿ ಎರಾವಿಕುಲಮ್ ರಾಷ್ಟ್ರೀಯ ಉದ್ಯಾನವನ, ಅಟ್ಟುಕಲ್ ಜಲಪಾತ ಎಲಿಫೆಂಟ್ ಸರೋವರ, ಇತ್ಯಾದಿಗಳು ಕೇರಳದ ಜನರಿಗೆ ಇದೊಂದು ವಾರಾಂತ್ಯದ ರಜಾದಿನಗಳನ್ನು ಕಳೆಯುವ ತಾಣವಾಗಿದೆ. ಇದು ಆಹ್ಲಾದಕರವಾಗಿರಲು ಮತ್ತು ಮುಕ್ತವಾಗಿರಲು ಒಂದು ಸ್ಥಳವಾಗಿದೆ.

ದೇವಿಕುಲಮ್

ದೇವಿಕುಲಮ್

PC:Kerala Tourism

ದಕ್ಷಿಣಭಾರತದ ಇನ್ನೊಂದು ಮಾಂತ್ರಿಕ ಮೋಡಿ ಮಾಡುವ ಗಿರಿಧಾಮವೆಂದರೆ ಅದು ದೇವಿಕುಲಮ್ ಇದು ದೇವರ ಸ್ವಂತ ನಾಡೆನಿಸಿದ ಕೇರಳದಲ್ಲಿದೆ. ಬಂಡೆಗಳ ತೀಕ್ಷ್ಣವಾದ ಬದಿಗಳಲ್ಲಿ ಭಾಗವಾಗಿರುವ ಜಲಪಾತಗಳು ಮತ್ತು ಸಮೃದ್ಧವಾದ ಹಸಿರಿನಿಂದ ಆವೃತವಾಗಿರುವ ಗುಡ್ಡಗಳು ಮೃದುವಾಗಿರುವ ಹುಲ್ಲುಗಾವಲುಗಳು ಜಲಪಾತಗಳು ಇವೆಲ್ಲವನ್ನು ಹೊಂದಿರುವ ಇದು ಒಂದು ಸುಂದರವಾದ ಸ್ಥಳವಾಗಿದೆ. ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳನ್ನು ಪ್ರಶಂಸಿಸಲು ಮತ್ತು ಅಧ್ಯಯನ ಮಾಡಲು ಪ್ರಕೃತಿ ಪ್ರೇಮಿಗಳು ಇಲ್ಲಿಗೆ ಬರುತ್ತಾರೆ. ಇದು ಚಾರುಣಿಗರಿಗೆ ಸಂತೋಷಗೊಳಿಸುವ ಸ್ಥಳವಾಗಿದ್ದು ಇವರಿಗೆ ಕೆಂಪು ಅಂಟಿನ ಮರಗಳ ಮೂಲಕ ವಿಹಾರಕ್ಕೆ ಅನುವು ಮಾಡಿಕೊಡುತ್ತದೆ. ಇಲ್ಲಿ ಒಂದು ಮೋಡಿ ಮಾಡುವ ಅನುಭವವನ್ನು ಹೊಂದಬಹುದಾಗಿದೆ.

ವಾಗಮಾನ್

ವಾಗಮಾನ್

ವ್ಯಾಗಮಾನ್ ಒಂದು ಗಿರಿಧಾಮವಾಗಿದ್ದು ಇದು ಕೊಟ್ಟಾಯಂನ ಗಡಿ ಪ್ರದೇಶದಲ್ಲಿದ್ದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಇಲ್ಲಿಯ ದಟ್ಟವಾದ ಹಸಿರು, ನೀಲಿಗಿರಿಗಳು, ಹರಿಯುವ ನದಿಗಳು, ಭೋರ್ಗರೆಯುವ ಜಲಪಾತಗಳು ತಾಜಾ ಮತ್ತು ತಂಪಾದ ಗಾಳಿ ಮತ್ತು ದಟ್ಟವಾದ ಪೈನ್ ಕಾಡುಗಳು ಇವೆಲ್ಲವನ್ನು ಹೊಂದಿರುವ ಈ ಸ್ಥಳವು ಪ್ರವಾಸಿಗರ ಮುಖ್ಯ ಕೇಂದ್ರವೆನಿಸಿದೆ. ತಂಗಾಳ್ ಬೆಟ್ಟ, ಮುರುಗನ್ ಬೆಟ್ಟ, ಮತ್ತು ಕೃಷಿ ಮಾಲಾ ಒರಂಟೆ ಇದು ಸಣ್ಣ ಪಟ್ಟಣವಾಗಿದ್ದು ನೈಸರ್ಗಿಕ ಸೌಂದರ್ಯತೆಯನ್ನು ಒಳಗೊಂಡಿದೆ.

ತೆನ್ಮಾಲಾ

ತೆನ್ಮಾಲಾ

PC:Akhil S Unnithan

ತೆನ್ಮಾಲಾ ದಕ್ಷಿಣ ಭಾರತದ ಒಂದು ಪ್ರಸಿದ್ದ ಗಿರಿ ಧಾಮವಾಗಿದೆ. ಇದು ಪರಿಸರ ಸ್ನೇಹಿ ಪ್ರವಾಸೋದ್ಯಮದ ಕೇಂದ್ರವೆಂದು ಪ್ರಸಿದ್ದಿಯಾಗಿದೆ. ಇದನ್ನು " ಜೇನಿನ ಬೆಟ್ಟ" ವೆಂದು ಕರೆಯಲಾಗುತ್ತದೆ. ಈ ಜಾಗವು ಜೇನುತುಪ್ಪಕ್ಕೆ ಹೆಸರುವಾಸಿಯಾಗಿದೆ ಮತ್ತು ಇಲ್ಲಿಯ ಜೇನುತುಪ್ಪವು ವೈದ್ಯಕೀಯ ಅಂಶಗಳನ್ನು ಒಳಗೊಂಡಿದೆ ಎಂದು ನಂಬಲಾಗುತ್ತದೆ. ತೆನ್ಮಾಲಾ ಪ್ರದೇಶದ ಕಲ್ಲಡಾ ನದಿಗೆ ಕಟ್ಟಲಾದ ಅಣೆಕಟ್ಟು ಇಲ್ಲಿಯ ಆಕರ್ಷಣೆಗಳಲ್ಲಿ ಪ್ರಮುಖವಾದುದಾಗಿದೆ. ಪಲಾರುವಿ ಜಲಪಾತವು ತೆನ್ಮಾಲವನ್ನು ಒಂದು ಪಿಕ್ನಿಕ್ ಮತ್ತು ಮಧುಚಂದ್ರದ ತಾಣವನ್ನಾಗಿಸಿದೆ. ಇಲ್ಲಿರುವ ಜಿಂಕೆ ಉದ್ಯಾನವನ ಇನ್ನೊಂದು ನೋಡಲೇ ಬೇಕಾದ ಆಕರ್ಷಣೆಯಾಗಿದೆ. ಇದು ಅನೇಕ ತಳಿಯ ಜಿಂಕೆಗಳಿಗೆ ನೆಲೆಯಾಗಿದೆ. ಈ ಉದ್ಯಾನವನದಲ್ಲಿ ಕಟ್ಟಲಾಗಿರುವ ಮರದಲ್ಲಿಯ ಮನೆಗಳು ಉದ್ಯಾನವನಕ್ಕೆ ಒಂದು ವಿಭಿನ್ನತೆಯನ್ನು ಕೊಡುತ್ತದೆ ಅಲ್ಲದೆ ರಜಾದಿನಗಳನ್ನು ಇಲ್ಲಿ ಕಳೆಯಬಹುದು.

ಪೊನ್ಮುಡಿ

ಪೊನ್ಮುಡಿ

PC:Girish...


ಪೊನ್ಮುಡಿ ಅಂದರೆ ಬಂಗಾರದ ಶ್ರೇಣಿ ಎಂದು ಅರ್ಥೈಸುತ್ತದೆ. ಮತ್ತು ಇದು ಜನಪ್ರಿಯವಾದ ಗಿರಿಧಾಮವಾಗಿದೆ ಇದು ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿದೆ. ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿದೆ, ಇದು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಭಾಗವಾಗಿದೆ. ಆಹ್ಲಾದಕರ ವಾತಾವರಣ ಮತ್ತು ಸುಂದರವಾದ ವಾತಾವರಣವು ಈ ಸ್ಥಳವನ್ನು ಆದರ್ಶ ರಜಾದಿನದ ತಾಣವಾಗಿ ಮಾಡುತ್ತದೆ. ಈ ಗುಡ್ಡಗಾಡು ಪ್ರದೇಶದ ದೃಶ್ಯವೀಕ್ಷಣೆಯ ಆಯ್ಕೆಗಳೆಂದರೆ ಕಣಿವೆಗಳು, ಸರೋವರಗಳು ಮತ್ತು ತೋಟಗಳು. ಮಳೆಗಾಲದಲ್ಲಿ ದಟ್ಟವಾದ ಹಸಿರು ಪ್ರಕೃತಿಯು ತನ್ನಲ್ಲಿ ಸಣ್ಣ ಜಲಪಾತಗಳ ಮೂಲಕ ತನ್ನ ತನವನ್ನು ತೋರಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X