Search
  • Follow NativePlanet
Share
» »ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-2

ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-2

ದೀಪಾವಳಿ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂಬುದಕ್ಕೆ ಈಗಾಗಲೇ 6 ವಿವಿಧ ರೋಚಕ ಪುರಾಣ ಕತೆಗಳನ್ನು ನಾವು ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇನ್ನು ಉಳಿದ 6 ಕಥೆಗಳನ್ನು ಲೇಖನದ ಮೂಲಕ ತಿಳಿಯೋಣ. ಕಳೆದ ಲೇಖನದಲ್ಲಿ ಲಕ್ಷ್ಮೀ ದೇವತೆ

ದೀಪಾವಳಿ ಹಬ್ಬವನ್ನು ಏಕೆ ಆಚರಿಸುತ್ತಾರೆ ಎಂಬುದಕ್ಕೆ ಈಗಾಗಲೇ 6 ವಿವಿಧ ರೋಚಕ ಪುರಾಣ ಕತೆಗಳನ್ನು ನಾವು ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇನ್ನು ಉಳಿದ 6 ಕಥೆಗಳನ್ನು ಲೇಖನದ ಮೂಲಕ ತಿಳಿಯೋಣ. ಕಳೆದ ಲೇಖನದಲ್ಲಿ ಲಕ್ಷ್ಮೀ ದೇವತೆಯ ಹುಟ್ಟುಹಬ್ಬದ ದಿನದಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಒಂದು ಕಥೆಯಾದರೆ. 2 ನೇ ಕಥೆ ಮಹಾಬಲೀ ರಕ್ಷಸನಿಂದ ಮಹಾಲಕ್ಷ್ಮೀಯನ್ನು ವಿಷ್ಣು ಮೂರ್ತಿ ಮುಕ್ತಳಾಗಿ ಮಾಡಿದ್ದರಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು. 3 ನೇ ಕಥೆಯ ಪ್ರಕಾರ ನರಕಾಸುರನನ್ನು ಸಂಹಾರ ಮಾಡಿದ ದಿನವಾದ್ದರಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು.

4 ನೇ ಕಥೆಯ ಪ್ರಕಾರ ಪಾಂಡವರು ತನ್ನ 12 ವರ್ಷಗಳ ಅಜ್ಞಾತವಾಸದಿಂದ ಮರಳಿದ ದಿನವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು. 5 ನೇ ಕಥೆಯ ಪ್ರಕಾರ ರಾವಣಾಸುರನನ್ನು ಕೊಂದು, ರಾಮನು ತನ್ನ 14 ವರ್ಷಗಳ ವನವಾಸದಿಂದ ಆಯೋಧ್ಯೆಗೆ ಹಿಂದಿರುಗಿದ್ದರಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು. 6 ನೇ ಕಥೆಯ ಪ್ರಕಾರ ವಿಕ್ರಮಾದಿತ್ಯನ ಪಟ್ಟಾಭಿಷೇಕದ ದಿನವಾಗಿ ದೀಪಾವಳಿಯನ್ನು ಆಚರಣೆ ಮಾಡುತ್ತಾರೆ ಎಂದು ಈಗಾಗಲೇ ಕಳೆದ ಲೇಖನದಲ್ಲಿ ತಿಳಿದುಕೊಂಡಿದ್ದೀರಾ.

ಕಾಳಿ ದೇವತೆ

ಕಾಳಿ ದೇವತೆ

ಕಾಳಿ ದೇವತೆಯನ್ನು ಶ್ಯಾಮ ಕಾಳಿ ಎಂದು ಕೂಡ ಕರೆಯುತ್ತಾರೆ. ಕಾಳಿಯ 10 ಅವತಾರಗಳಲ್ಲಿ ಈ ಅವತಾರ ಮೊದಲನೆಯದು. ಪಾರ್ವತಿಯ ಸ್ವರೂಪವಾದ ಕಾಳಿಯು ಸ್ವರ್ಗ ಹಾಗು ಭೂಮಿಯ ಮೇಲೆ ಇರುವ ದುಷ್ಟರನ್ನು ಸಂಹಾರ ಮಾಡಲು ಜನಿಸಿದವಳು. ಈಕೆಯು ಕ್ರೌಯದಿಂದ ಮೆರೆಯುತ್ತಿದ್ದ ರಾಕ್ಷಸರನ್ನು ಕೊಂದ ನಂತರ ತನ್ನ ಕೋಪದ ನಿಯಂತ್ರಣ ಕಳೆದುಕೊಳ್ಳುತ್ತಾಳೆ. ತನ್ನ ದಾರಿಗೆ ಅಡ್ಡ ಬಂದವರನ್ನು ನಾಶ ಮಾಡುತ್ತಾ ಇರುತ್ತಾಳೆ ಆ ಸಮದಲ್ಲಿ ಮಹಾ ಶಿವನು ಅಡ್ಡ ಹೋಗುತ್ತಾನೆ. ಆಕೆಯ ಕಾಲಿನ ಕೆಳಗೆ ಶಿವನು ಇರುತ್ತಾನೆ. ಇದನ್ನು ನೆನೆಪಿಸಿಕೊಳ್ಳುವ ಸಲುವಾಗಿಯೇ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ಕೂಡ ಹೇಳುತ್ತಾರೆ.

ಸುಗ್ಗಿ

ಸುಗ್ಗಿ

ಈ ದೀಪಾವಳಿಯು ಬೇಳೆಗಳ ಸಮಯದಲ್ಲಿ ಬರುವುದರಿಂದ ಶ್ರೀಮಂತವಾದ ಅಕ್ಕಿ ಸಾಗುವಳಿಗಳನ್ನು ನೀಡಿ ಅದರ ಫಲವನ್ನು ನೀಡುತ್ತದೆ. ಭಾರತವು ಕೃಷಿ-ಆರ್ಥಿಕ ಸಮಾಜವಾಗಿದ್ದು, ಸುಗ್ಗಿಯ ಮಹತ್ವವನ್ನು ನೀಡಿ ಆಚರಣೆ ಮಾಡುತ್ತದೆ ಎಂದೇ ಆಗಿದೆ. ಹಾಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಹೊಸ ವರ್ಷ

ಹೊಸ ವರ್ಷ

ಹಿಂದೂ ಧರ್ಮ ಪ್ರಪಂಚದ ಮೂರನೆಯ ದೊಡ್ಡ ಧರ್ಮವಾಗಿದೆ. ಈ ಸಮಯದಲ್ಲಿ ಹಿಂದೂ ಉದ್ಯಮಿಗಳು ಪೂಜೆಗಳನ್ನು ಮಾಡುತ್ತಾರೆ. ಇದರ ಸಂಕೇತ ಹಿಂದು ಧರ್ಮದ ಹೊಸ ವರ್ಷ ಪ್ರಾರಂಭವಾಗಿದೆ ಎಂದೇ ಆಗಿದೆ. ಹಾಗಾಗಿಯೇ ದೀಪಗಳನ್ನು ಬೆಳಗಿ ದೀಪಾವಳಿ ಹಬ್ಬದಂದು ಹೊಸವರ್ಷವನ್ನು ಆಚರಿಸುತ್ತಾರೆ ಎಂದು ಹೇಳಲಾಗಿದೆ.

ಸಿಖ್‍ರಿಗೆ ವಿಶೇಷವಾದ ದಿನ

ಸಿಖ್‍ರಿಗೆ ವಿಶೇಷವಾದ ದಿನ

ಸಿಖ್‍ರಿಗೆ ದೀಪಾವಳಿ ಅತ್ಯಂತ ವಿಶೇಷವಾದ ದಿನವೆಂದು ಮಹತ್ವವನ್ನು ಪಡೆದಿದೆ. 3 ನೇ ಸಿಖ್ ಗುರುವಾದ ಅಮರ್‍ದಾಸ್ ಎಲ್ಲಾ ಸಿಖ್ ಗುರುಗಳ ಆಶೀರ್ವಾದಗಳನ್ನು ಪಡೆದುಕೊಳ್ಳಲು ಸಂಧಿಸುವ ಸಂದರ್ಭದಲ್ಲಿ ದೀಪಗಳ ಉತ್ಸವವನ್ನು ಸ್ಥಾಪಿಸಿದರು. ಅಮೃತಸರದ ಗೋಲ್ಡನ್ ಟೆಂಪಲ್ ಅಡಿಪಾಯವನ್ನು 1577 ರಲ್ಲಿ ದೀಪಾವಳಿದಿನದಂದು ಹಾಕಲಾಯಿತು.

ವರ್ಧಮಾನ ಮಹಾವೀರ ಜ್ಞಾನೋದಯ

ವರ್ಧಮಾನ ಮಹಾವೀರ ಜ್ಞಾನೋದಯ

ಜೈನರಿಗೆ ದೀಪಾವಳಿ ಹಬ್ಬವು 15,527 ಬಿ.ಸಿಯಲ್ಲಿಯೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಜೈನರ 24 ಮತ್ತು ಕೊನೆಯ ತೀರ್ಥಂಕರರು ಮತ್ತು ಆಥುನಿಕ ಜೈನ ಧರ್ಮದ ಸ್ಥಾಪಕನ ಜ್ಞಾನೋದಯವನ್ನು ನೆನಪಿಸುತ್ತದೆ.

ಸ್ವಾಮಿ ದಯಾನಂದ ಸರಸ್ವತಿ ಜ್ಞಾನೋದಯ

ಸ್ವಾಮಿ ದಯಾನಂದ ಸರಸ್ವತಿ ಜ್ಞಾನೋದಯ

ಕಾರ್ತಿಕ ದೀಪಾವಳಿ ದಿನದಂದು ಹಿಂದೂ ಧರ್ಮದ ಶ್ರೇಷ್ಠ ಸುಧಾರಣಾಧಿಕಾರಿಗಳಾದ ಸ್ವಾಮಿ ದಯಾನಂದ ಸರಸ್ವತಿಯವರು ಜ್ಞಾನೋದಯ ಪಡೆದಿದ್ದರಿಂದ ಆ ಮಹತ್ವಾಕಾಂಕ್ಷೆಯ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. 1857 ರಲ್ಲಿ ಹಿಂದೂ ಧರ್ಮವನ್ನು ಶುದ್ಧಿಕರಿಸಲು ಹಿಂದೂ ಸುಧಾರಣಾ ಚಳುವಳಿ "ಸೊಸೈಟಿ ಆಫ್ ನೊಬೆಲ್ಸ್" ಎಂಬ ಆರ್ಯ ಸಮಾಜವನ್ನು ಸ್ಥಾಪನೆ ಮಾಡಿದರು. ಪ್ರತಿ ದೀಪಾವಳಿಯಂದು ಈ ಮಹಾನ್ ಸುಧಾರಕರನ್ನು ಹಿಂದೂಗಳು ನೆನಪಿಸಿಕೊಳ್ಳುತ್ತಾರೆ.

Narendra Modi

<strong></strong>ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-1ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-1

ಈ 5 ಸ್ಥಳಗಳಲ್ಲಿ ನಡೆಯುತ್ತದೆ ಅದ್ಭುತವಾದ ದೀಪಾವಳಿ ಸಂಭ್ರಮ..ಈ 5 ಸ್ಥಳಗಳಲ್ಲಿ ನಡೆಯುತ್ತದೆ ಅದ್ಭುತವಾದ ದೀಪಾವಳಿ ಸಂಭ್ರಮ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X