Search
  • Follow NativePlanet
Share
» »ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-1

ಭಾರತದಲ್ಲಿ ದೀಪಾವಳಿ ಆಚರಿಸಲು ಕಾರಣವೇನು ಗೊತ್ತ? ಭಾಗ-1

ದೀಪಾವಳಿ ಹಬ್ಬ ಎಲ್ಲರಿಗೂ ಅಚ್ಚು ಮೆಚ್ಚು. ದೀಪಾವಳಿ ಹಬ್ಬ ಬಂತು ಎಂದರೆ ಪಟಾಕಿಗಳು ಬೇಕೆ ಬೇಕು ಎಂದು ಹಟ ಹಿಡಿಯುವ ಮಕ್ಕಳು, ಹೊಸ ಬಟ್ಟೆಗಳು, ದೇವಾಲಯದಲ್ಲಿನ ದೇವರ ನಾಮಗಳು, ವಿವಿಧ ದೀಪಗಳಿಂದ ಅಲಕಂಕರಿಲ್ಪಟ್ಟ ಬೀದಿಗಳು, ಘಮ ಘಮಿಸುವ ಕಜ್ಜಯಗಳು

ದೀಪಾವಳಿ ಹಬ್ಬ ಎಲ್ಲರಿಗೂ ಅಚ್ಚು ಮೆಚ್ಚು. ದೀಪಾವಳಿ ಹಬ್ಬ ಬಂತು ಎಂದರೆ ಪಟಾಕಿಗಳು ಬೇಕೆ ಬೇಕು ಎಂದು ಹಟ ಹಿಡಿಯುವ ಮಕ್ಕಳು, ಹೊಸ ಬಟ್ಟೆಗಳು, ದೇವಾಲಯದಲ್ಲಿನ ದೇವರ ನಾಮಗಳು, ವಿವಿಧ ದೀಪಗಳಿಂದ ಅಲಕಂಕರಿಲ್ಪಟ್ಟ ಬೀದಿಗಳು, ಘಮ ಘಮಿಸುವ ಕಜ್ಜಯಗಳು ಅಹಾ...! ಎನ್ನುವಂತೆ ಇರಲಾರದು.

ನಮ್ಮ ದೇಶದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಹಾಗೆಯೇ ಕೆಲವರು ಪರಿಸರ ಸ್ನೇಹಿ ದೀಪಾವಳಿ ಆಚರಿಸಿದರೆ, ಕೆಲವರು ಪಟಾಕಿಗಳನ್ನು ಹಚ್ಚುವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ಹಬ್ಬ ಏಕೆ ಆಚರಿಸುತ್ತಾರೆ? ಇದಕ್ಕೆ ಕಾರಣವೇನು? ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಹಾಗಾದರೆ ಲೇಖನದ ಮೂಲಕ ಸ್ವಾರಸ್ಯಕರವಾದ ಪುರಾಣ ಕಥೆಗಳನ್ನು ತಿಳಿದುಕೊಳ್ಳಿ.

ದೀಪಾವಳಿಯ ಆಚರಣೆಗೆ 12 ವಿವಿಧ ಕಾರಣಗಳು ಇವೆ. ಆದರೆ ಆ ಎಲ್ಲಾ ಕಾರಣಗಳು ಅತ್ಯಂತ ರೋಚಕವಾದ ದೇವತೆಗಳ ಹಾಗು ರಾಜರ ಕಥೆಗಳನ್ನು ಆಧರಿಸಿದೆ. ಅದರಲ್ಲಿ 6 ಕಥಾ ಭಾಗವನ್ನು ಈ ಲೇಖನದಲ್ಲಿ ಹಾಗು ಉಳಿದ 6 ಕಥಾ ಭಾಗವನ್ನು ಮತ್ತೊಂದು ಲೇಖನದಲ್ಲಿ ತಿಳಿಸಲಾಗುತ್ತದೆ.

ಪ್ರಸ್ತುತ ಲೇಖನದಲ್ಲಿ ನಮ್ಮ ಭಾರತ ದೇಶದಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಲು ಮುಖ್ಯವಾದ ಕಾರಣವೇನು? ಎಂಬದನ್ನು ಸಂಕ್ಷೀಪ್ತವಾಗಿ ತಿಳಿಯೋಣ ಬನ್ನಿ.

ಲಕ್ಷ್ಮೀ ದೇವತೆಯ ಹುಟ್ಟುಹಬ್ಬ

ಲಕ್ಷ್ಮೀ ದೇವತೆಯ ಹುಟ್ಟುಹಬ್ಬ

ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವತೆಯ ಹುಟ್ಟು ಹಬ್ಬವೇ ನಾವು ಆಚರಿಸುವ ದೀಪಾವಳಿ. ಕ್ಷುಲ್ಲಕ ಸಮುದ್ರದ ಅರಸನ ಮಗಳು ಲಕ್ಷ್ಮೀ ದೇವತೆಯಾಗಿದ್ದಾಳೆ. ಈಕೆಯು ಕಾರ್ತಿಕ ತಿಂಗಳ ಅಮಾವಾಸ್ಯೆಯ ದಿನದಂದು ಹುಟ್ಟಿದರು. ತದನಂತರ ಲಕ್ಷ್ಮೀಯು ವರ್ಷದ ಅದೇ ರಾತ್ರಿಯಲ್ಲಿ ವಿಷ್ಣುವಿನೊಂದಿಗೆ ವಿವಾಹವಾದಳು. ಅಂದು ಅದ್ಭುತವಾದ ದೀಪಾಲಂಕಾರ ಮಾಡಲಾಯಿತು. ಹಾಗಾಗಿಯೇ ದೀಪಾವಳಿಯ ಹಬ್ಬದ ದಿನದಂದು ದೀಪಗಳೊಂದಿಗೆ ಲಕ್ಷ್ಮೀ ದೇವಿಯನ್ನು ತಮ್ಮ ತಮ್ಮ ಮನೆಗಳಿಗೆ ಬರಮಾಡಿಕೊಳ್ಳುತ್ತಾರೆ.

ಭಾಗವತ ಪುರಾಣದ ಪ್ರಕಾರ

ಭಾಗವತ ಪುರಾಣದ ಪ್ರಕಾರ

ಅತ್ಯಂತ ಪವಿತ್ರವಾದ ಭಾಗವತ ಪುರಾಣದ ಪ್ರಕಾರ ವಿಷ್ಣುವಿನ 5 ನೇ ಅವತಾರವೇ ವಾಮನ ಅವತಾರ. ಭೂಮಿಯ ಪಾಲನೆ ಮಾಡುತ್ತಿದ್ದ ರಾಕ್ಷಸ ಮಹಾಬಲೀಯು ಭಗವಾನ್ ಬ್ರಹ್ಮನಿಂದ ವರವನ್ನು ಪಡೆಯುತ್ತಾನೆ. ಆತನು ದೇವತೆಗಳನ್ನು ಹಿಂಸಿಸುತ್ತಿದ್ದನು. ಹೀಗಾಗಿ ವಿಷ್ಣುವು ಚಿಕ್ಕ ಬ್ರಾಹ್ಮಣನಂತೆ ವೇಷ ಧರಿಸಿ ಮಹಾಬಲೀಯನ್ನು ಭೇಟಿಯಾದನು.

ಮಹಾಬಲೀಗೆ ಆ ಬ್ರಾಹ್ಮಣ(ವಿಷ್ಣು) ತನ್ನ ರಾಜಸತ್ವವನ್ನು ಹಾಗು ಸಂಪತ್ತನ್ನು ತ್ಯಜಿಸುವಂತೆ ಹೇಳುತ್ತಾನೆ. ಅದಕ್ಕೆ ಒಪ್ಪಿದ ಮಹಾಬಲೀಯು ತನ್ನ ರಾಜ ಪದವಿಯನ್ನು ಮತ್ತು ಆತನಲ್ಲಿದ್ದ ಸಂಪತ್ತನ್ನು ತ್ಯಜಿಸುತ್ತಾನೆ. ಇದರಿಂದ ಲಕ್ಷ್ಮೀ ದೇವಿಯು ಮುಕ್ತಳಾಗುತ್ತಾಳೆ. ಅಸುರನಿಂದ ಮುಕ್ತಳಾದ ಲಕ್ಷ್ಮೀ ದೇವಿಯನ್ನು ಆರಾಧಿಸುವುದಕ್ಕೋಸ್ಕರವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ಭಾಗವತದಲ್ಲಿ ಇದೆ.

ನರಕಾಸುರನ ಸಂಹಾರ

ನರಕಾಸುರನ ಸಂಹಾರ

ಭಾಗವತದಲ್ಲಿ ದುಷ್ಟ ರಾಜನಾದ ನರಕಾಸುರನ ಬಗ್ಗೆ ತಿಳಿಸುತ್ತದೆ. ನರಕಾಸುರನು ಅತ್ಯಂತ ಶಕ್ತಿಶಾಲಿಯಾಗಿದ್ದನು. ಹೀಗಾಗಿ ಆತನ ಪರಾಕ್ರಮದಿಂದ ಸ್ವರ್ಗ ಹಾಗು ನರಕ ಎರಡನ್ನು ವಶಪಡಿಸಿಕೊಂಡನು. ಹಾಗೆಯೇ ಎಲ್ಲರನ್ನು ಸಹ ಹಿಂಸಿಸುತ್ತಿದ್ದನು. ಇದರಿಂದ ಕೋಪಗೊಂಡ ದೇವತೆಗಳು ಒಂದು ದಿನ ಕೃಷ್ಣನು ನರಕಾಸುರನನ್ನು ಕೊಂದನು.

ಆ ದಿನವೇ ನಾವು ಆಚರಣೆ ಮಾಡುವ ದೀಪಾವಳಿಯ ದಿನ. ತದನಂತರ ನರಕಾಸುರ ಬಂಧಿಖಾನೆಯಲ್ಲಿದ್ದ 16,000 ಮಹಿಳೆಯರನ್ನು ಕೃಷ್ಣನು ರಕ್ಷಣೆ ಮಾಡಿದನಂತೆ. ನರಕಾಸುರನನ್ನು ಶ್ರೀ ಕೃಷ್ಣನು ಕೊಂದ ಕಾರಣವೇ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಪಾಂಡವರು ಹಿಂದಿರುಗುವಿಕೆ

ಪಾಂಡವರು ಹಿಂದಿರುಗುವಿಕೆ

ಮಹಾಭಾರತದ ಪ್ರಕಾರ ಪಾಂಡವರು ಕೌರವರೊಂದಿಗೆ ಸೋಲುತ್ತಾರೆ. ಇದರ ಪ್ರತಿಯಾಗಿ ಪಂಚ ಪಾಂಡವರಿಗೆ 12 ವರ್ಷಗಳ ಕಾಲ ಬಹಿಷ್ಕಾರ ಮಾಡಲಾಗುತ್ತದೆ. 12 ವರ್ಷಗಳ ಕಾಲ ಯಾವುದೇ ಆಧಾರವಿಲ್ಲದೇ ಸಾಮಾನ್ಯರಂತೆ ಜೀವನ ಸಾಗಿಸುತ್ತಾರೆ. ತದನಂತರ ತಮ್ಮ 12 ವರ್ಷಗಳ ಬಹಿಷ್ಕಾರದಿಂದ ವಿಮುಕ್ತರಾಗಿದ್ದು, ಕಾರ್ತಿಕ ಅಮಾವಾಸ್ಯೆಯಂದು ಹಾಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.

ರಾಮನ ಜಯ

ರಾಮನ ಜಯ

ಶ್ರೇಷ್ಟ ಹಿಂದೂ ಮಹಾಕಾವ್ಯ "ರಾಮಾಯಣ"ದ ಪ್ರಕಾರ, ದುಷ್ಟ ರಾಜನಾದ ರಾವಣನು ಸೀತೆಯನ್ನು ಅಪಹರಿಸಿರುತ್ತಾನೆ. ಹಾಗಾಗಿ ರಾವಣನನ್ನು ರಾಮನು ಕೊಂದು ತನ್ನ 14 ವರ್ಷಗಳ ವನವಾಸದ ನಂತರ ತಮ್ಮ ರಾಜಧಾನಿ ಅಯೋಧ್ಯಾಗೆ ಮರಳುತ್ತಾರೆ. ಆ ದಿನವು ಕಾರ್ತಿಕ ಅಮಾವಸ್ಯೆ ದಿನವಾಗಿರುತ್ತದೆ.

ತಮ್ಮ ಅಚ್ಚುಮೆಚ್ಚಿನ ಅರಸನ ಮರಳುವಿಕೆಯಿಂದ ಜನರು ಮಣ್ಣಿನಿಂದ ದೀಪಗಳನ್ನು ಬೆಳಗಿಸಿ ಇಡೀ ನಗರವನ್ನೇ ಭವ್ಯವಾದ ರೀತಿಯಲ್ಲಿ ಅಲಂಕರ ಮಾಡಿ ಸ್ವಾಗತಿಸುತ್ತಾರೆ. ಹೀಗಾಗಿಯೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ರಾಮಾಯಣದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ವಿಕ್ರಮಾದಿತ್ಯನ ಪಟ್ಟಾಭಿಷೇಕ

ವಿಕ್ರಮಾದಿತ್ಯನ ಪಟ್ಟಾಭಿಷೇಕ

ವಿಕ್ರಮಾದಿತ್ಯನ ಅಸಾಮಾನ್ಯವಾದ ಬುದ್ಧಿವಂತಿಕೆ, ಶೌರ್ಯ ಮತ್ತು ವೈಭವದಿಂದ ಪ್ರಸಿದ್ಧ ಭಾರತೀಯ ರಾಜನಾಗಿದ್ದಾನೆ. ಇದನ್ನು ವಾರ್ಷಿಕವಾಗಿ ಆಚರಣೆ ಮಾಡುವ ಮೂಲಕ ಗುರುತಿಸಲಾಗುತ್ತದೆ.
ಶ್ರೇಷ್ಟ ಹಿಂದೂ ರಾಜರಲ್ಲಿ ಒಬ್ಬನಾದ ವಿಕ್ರಮಾದಿತ್ಯನು ಪೂರ್ವದ ಆಧುನಿಕ ಥೈಲ್ಯಾಂಡ್‍ನ ಪಶ್ಚಿಮದ ಆಥುನಿಕ ಸೌದಿ ಅರೇಬಿಯಾದ ಗಡಿಯವರೆವಿಗೂ ವಿಕ್ರಮಾದಿತ್ಯನು ಸಾಮ್ರಾಜ್ಯವನ್ನು ವಿಸ್ತರಿಸಿ ಆಳಿದನು. ಹೀಗಾಗಿ ದೀಪಾವಳಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಒಂದು ಧಾರ್ಮಿಕವಾದ ಉತ್ಸವೇ ಅಲ್ಲದೇ ಒಂದು ಐತಿಹಾಸಿಕವಾದ ಸಹಭಾಗಿತ್ವವನ್ನು ಕೂಡ ದೀಪಾವಳಿ ಹಬ್ಬ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X