Search
  • Follow NativePlanet
Share
» »ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು

ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು

ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರಡಬಹುದಾದ ಕೆಲವು ವಿಹಾರ ಸ್ಥಳಗಳಿಗೆ ಭೇಟಿ ಕೊಟ್ಟು ನಿಮ್ಮನ್ನು ನೀವು ಆನಂದ ಪಡಿಸಿಕೊಂಡು ವಿಶ್ರಾಂತಿ ಹಾಗೂ ಪುನಸ್ಚೇತನಗೊಳಿಸಿಕೊಳ್ಳಿ. ಸಾಹಸ, ವಿಶ್ರಾಂತಿ, ವನ್ಯಜೀವಿ, ಪರಂಪರೆ ಮತ್ತು ಇನ್ನೂ ಅನೇಕ ಅದ್ಬುತವಾದ ಅನ್ವೇಷಣೆ ಮಾಡಬಹುದಾದ ತಾಣಗಳಿಂದ ಹಿಡಿದು ಬೆಂಗಳೂರಿನಲ್ಲಿ ವಾರಾಂತ್ಯಗಳಲ್ಲಿ ಕುಟುಂಬದವರು, ಸ್ನೇಹಿತರು ಅಥವಾ ಏಕಾಂಗಿಯಾಗಿ ಪ್ರಯಾಣಿಸ ಬಹುದಾದಂತಹ ಹಲವಾರು ಸ್ಥಳಗಳ ಪಟ್ಟಿ ಮಾಡಬಹುದಾಗಿದೆ.

ರಾಮನಗರ - ಬೆಂಗಳೂರಿನಿಂದ ದೂರ - 55 ಕಿ.ಮೀ

ರಾಮನಗರ - ಬೆಂಗಳೂರಿನಿಂದ ದೂರ - 55 ಕಿ.ಮೀ

1970ರ ದಶಕದ ಬ್ಲಾಕ್ ಬಸ್ಟರ್ ಸಿನೆಮಾವಾಗಿದ್ದ ಶೋಲೆಯ ಖಳನಾಯಕ ಗಬ್ಬರ್ ಸಿಂಗ್ ಅಡಗಿದ್ದ ಹೆಸರಾಂತ ಸ್ಥಳವಾದ ರಾಮನಗರವು ಉದ್ಯಾನ ನಗರಿ ಬೆಂಗಳೂರಿಗೆ ಹತ್ತಿರದಲ್ಲಿದೆ. ನಗರದ ಸದ್ದುಗದ್ದಲದ ಜೀವನದಿಂದ ಹೊರಬರಲು ಸೂಕ್ತವಾದ ಸ್ಥಳವಾದ ರಾಮನಗರವು ಟ್ರಕ್ಕಿಂಗ್ ಹಾಗೂ ಸಾಹಸ ಪ್ರಿಯರಿಗೂ ಅಚ್ಚುಮೆಚ್ಚಿನ ಸ್ಥಳವೆನಿಸಿದೆ. ದೊಡ್ಡ ದೊಡ್ಡ ಬಂಡೆಗಳ ಮೇಲೆ ರಾಕ್ ಕ್ಲೈಂಬಿಗ್ ಕೂಡಾ ಮಾಡಬಹುದಾಗಿದ್ದು ಅದಕ್ಕಾಗಿ ರಾಮದೇವರ ಬೆಟ್ಟಕ್ಕೆ ಭೇಟಿ ಕೊಡಬಹುದಾಗಿದೆ. ಸ್ವಲ್ಪ ಮಾದಕತೆಗಾಗಿ, ಹೆರಿಟೇಜ್ ವೈನರಿಯಲ್ಲಿ ವೈನ್ ಪ್ರವಾಸವನ್ನು ಆನಂದಿಸಿ

 ಮದ್ದೂರು - ಬೆಂಗಳೂರಿನಿಂದ ದೂರ: 86.9 ಕಿ.ಮೀ

ಮದ್ದೂರು - ಬೆಂಗಳೂರಿನಿಂದ ದೂರ: 86.9 ಕಿ.ಮೀ

ನೈಸ್ ರಸ್ತೆಯಲ್ಲಿ ಆರಾಮವಾಗಿ ಡ್ರೈವ್ ಮಾಡುತ್ತಾ ನಗರದಿಂದ ನಿರ್ಗಮಿಸಿ. 24/7 ಕೆಫೆ ಕಾಫಿ ಡೇಯಲ್ಲಿ ಬಿಸಿ ಕಾಫಿಯ ಕಪ್ಪು ಹೀರುತ್ತಾ ಅದರ ಜೊತೆಗೆ ಅತ್ಯಂತ ರುಚಿಕರವಾದ ಕುರುಕಲು ತಿಂಡಿಯಾದ- ಪ್ರಸಿದ್ಧ 'ಮದ್ದೂರು ವಡೆ' ಯ ರುಚಿಯನ್ನು ಸವಿಯುವ ಒಂದು ಯೋಜನೆಯನ್ನು ಹಾಕಿಕೊಳ್ಳಿ. ಹೀಗೆ, ಬೆಂಗಳೂರಿನಿಂದ ಮದ್ದೂರಿಗೆ ಈ ವಾರಾಂತ್ಯದ ವಿಹಾರಕ್ಕಾಗಿ ಪ್ರಯಾಣವನು ಆಯೋಜಿಸಿ!

ಚೆನ್ನಪಟ್ಟಣ - ಬೆಂಗಳೂರಿನಿಂದ ದೂರ: 66.7 ಕಿ.ಮೀ

ಚೆನ್ನಪಟ್ಟಣ - ಬೆಂಗಳೂರಿನಿಂದ ದೂರ: 66.7 ಕಿ.ಮೀ

ನಿಮ್ಮ ಒಳಗಿರುವ ಮಗುವನ್ನು ಜಾಗೃತಗೊಳಿಸಿಕೊಳ್ಳಲು ಮತ್ತು ನಿಮ್ಮ ಮಕ್ಕಳು ಮತ್ತು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಏಕಕಾಲದಲ್ಲಿ ಭೇಟಿಕೊಡಬಹುದಾದ ಉತ್ತಮ ಮಾರ್ಗವೆಂದರೆ ಕರ್ನಾಟಕದ ಆಟಿಕೆ ಪಟ್ಟಣವಾದ ಚನ್ನಪಟ್ಟಣಕ್ಕೆ ಭೇಟಿ ನೀಡುವುದು. ಈ ವರ್ಣರಂಜಿತ ಮತ್ತು ಉಲ್ಲಾಸಭರಿತ ಆಟಿಕೆ ಪಟ್ಟಣಕ್ಕೆ ಪ್ರೀತಿ ಪಾತ್ರರೊಂದಿಗೆ ರೋಮ್ಯಾಂಟಿಕ್ ಲಾಂಗ್ ಡ್ರೈವ್ ಮಾಡಿಕೊಂಡು ಹೋಗಲು ಸೂಕ್ತವಾದ ಸ್ಥಳವಾಗಿದೆ. ನಿಮ್ಮ ಮಕ್ಕಳೊಂದಿಗೆ ಕೆಲವು ವಿಶಿಷ್ಟವಾದ ಮಕ್ಕಳ-ಸುರಕ್ಷಿತ ಆಟಿಕೆಗಳಿಗಾಗಿ ಶಾಪಿಂಗ್ ಮಾಡುತ್ತಾ ಗುಣಮಟ್ಟದ ಸಮಯವನ್ನು ಕಳೆಯಿರಿ. ಶಾಂತಿ ಮತ್ತು ನೆಮ್ಮದಿಗಾಗಿ, ಚನ್ನಪಟ್ಟಣದ ಸುತ್ತಮುತ್ತಲಿನ ಆಧ್ಯಾತ್ಮಿಕ ಸ್ಥಳಗಳಿಗೆ ಹೋಗಿ.

ಮಾಲೂರು ಬೆಂಗಳೂರಿನಿಂದ 55.3 ಕಿ.ಮೀ

ಮಾಲೂರು ಬೆಂಗಳೂರಿನಿಂದ 55.3 ಕಿ.ಮೀ

ನಗರದ ಕಲುಶಿತ ಗಾಳಿ ಮತ್ತು ಧೂಳಿನಿ ಬದಲಾಗಿ ಮಾಲೂರಿನ ಮಲ್ಲಿಗೆ ಗುಲಾಬಿ ಮತ್ತು ನೀಲಗಿರಿಯ ಪರಿಮಳಗಳನ್ನು ತೆಗೆದುಕೊಳ್ಳುತ್ತಾ ನಿಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಿಕೊಳ್ಳಿ. ಹೌದು ಬೆಂಗಳೂರು ಸಮೀಪದ ಮಾಲೂರು ಪಟ್ಟಣವು ಪುಷ್ಪ ಕೃಷಿಗೆ ಮತ್ತು ತಾಜಾ ತರಕಾರಿ ಬೆಳೆಗೆ ಹೆಸರುವಾಸಿಯಾಗಿದೆ. ಪ್ರಸಿದ್ದ ಚಿಕ್ಕತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ಇದು ಹೆಚ್ಚು ಪ್ರಯಾಣಿಸದೇ ಮೂಲ ತಿರುಪತಿ ದೇವಾಲಯಕ್ಕೆ ಭೇಟಿ ಕೊಟ್ಟ ಅನುಭವವನ್ನು ಕೊಡುತ್ತದೆ.

ಭೀಮೇಶ್ವರಿ - ಬೆಂಗಳೂರಿನಿಂದ 100 ಕಿ.ಮೀ

ಭೀಮೇಶ್ವರಿ - ಬೆಂಗಳೂರಿನಿಂದ 100 ಕಿ.ಮೀ

ಬೆಂಗಳೂರಿನಿಂದ ಕೇವಲ 100 ಕಿ.ಮೀ ದೂರದಲ್ಲಿರುವ ಭೀಮೇಶ್ವರಿ ಪ್ರಕೃತಿಯ ಪರಿಪೂರ್ಣ ಸಾರವನ್ನು ಒದಗಿಸಿಕೊಡುತ್ತದೆ ಮತ್ತು ಸಾಹಸವು ಇಲ್ಲಿ ಸುಲಭವಾಗಿ ಪ್ರವೇಶಿಸಬಹುದಾಗಿದೆ ಅಲ್ಲದೆ ವಿರಾಮಕ್ಕಾಗಿ ಹಂಬಲಿಸುತ್ತಿರುವವರಿಗಾಗಿ ಇದು ಸೂಕ್ತವಾದ ಸ್ಥಳವಾಗಿದೆ. ಟ್ರೆಕ್ಕಿಂಗ್, ರಾಫ್ಟಿಂಗ್, ಕಯಾಕಿಂಗ್ ಅಥವಾ ಜಿಪ್ಲೈನಿಂಗ್ ಆಗಿರಲಿ ಸಾಹಸ ಉತ್ಸಾಹಿಗಳಿಗೆ ಆಯ್ಕೆಗಳ ಕೊರತೆಯಿಲ್ಲ - ಭೀಮೇಶ್ವರಿಯು ಎಲ್ಲವನ್ನೂ ಹೊಂದಿದೆ.ಪ್ರಕೃತಿ ಮತ್ತು ವನ್ಯಜೀವಿ ಪ್ರೇಮಿಗಳು ಪಕ್ಷಿವೀಕ್ಷಣೆಗೆ ಹೋಗಬಹುದು ಅಥವಾ ಕಾಡಿನಲ್ಲಿ ಅಡ್ಡಾಡಬಹುದು ಅಥವಾ ತೀಕ್ಷ್ಣವಾದ ಕಾವೇರಿಯ ಮೇಲೆ ಆರಾಮವಾಗಿ ಕೊರಾಕಲ್ ಸವಾರಿಗಳನ್ನು ತೆಗೆದುಕೊಳ್ಳಬಹುದು. ಭೀಮೇಶ್ವರಿ ಮೀನುಗಾರಿಕೆ ಮತ್ತು ಆಂಗ್ಲಿಂಗ್ ಶಿಬಿರಗಳಿಗೆ ಹೆಸರುವಾಸಿಯಾಗಿದೆ.

ಮಧುಗಿರಿ

ಮಧುಗಿರಿ

1000 ಮೀಟರ್ ಗಳಿಗಿಂತಲೂ ಎತ್ತರದಲ್ಲಿರುವ ಮಧುಗಿರಿ ಬೆಟ್ಟವು ಏಷ್ಯಾದ ಎರಡನೆ ದೊಡ್ಡ ಏಕಶಿಲಾ ಬೆಟ್ಟವೆಂಬ ಖ್ಯಾತಿಗೆ ಒಳಪಟ್ಟಿದೆ. ಈ ದೊಡ್ಡದಾದ ಏಕಶಿಲೆಯು ಟ್ರಕ್ಕಿಂಗ್ ಮಾಡುವವರಿಗೆ, ಸಾಹಸಿಗಳು ಅಥವಾ ಏಕಾಂತವನ್ನು ಬಯಸುವವರಿಗಾಗಿ ನಿಜವಾಗಿಯೂ ಸ್ವರ್ಗದಂತಿದೆ. ಅದರ ಕಡಿದಾದ ಇಳಿಜಾರುಗಳನ್ನು ಏರುವಾಗ ಮತ್ತು ಶಿಖರವನ್ನು ತಲುಪುವಾಗ ಒಬ್ಬರು ಅನುಭವಿಸುವ ಆನಂದವನ್ನು ಹೇಳಲಾಗದು. ಈ ಬೆಟ್ಟದ ಪ್ರಮುಖ ಭಾಗಗಳಲ್ಲಿ ಒಂದು ಕಾಲದಲ್ಲಿ ಜೇನುನೊಣಗಳು ಗೂಡುಕಟ್ಟಿಕೊಂಡು ನೆಲೆಸುತ್ತಿದ್ದರಿಂದ ಈ ಸ್ಥಳಕ್ಕೆ ಮಧುಗಿರಿ ಎಂಬ ಹೆಸರು ಬಂದಿದೆ.

 ತಲಕಾಡು ಬೆಂಗಳೂರಿನಿಂದ 134 ಕಿ.ಮೀ ಅಂತರ

ತಲಕಾಡು ಬೆಂಗಳೂರಿನಿಂದ 134 ಕಿ.ಮೀ ಅಂತರ

ಜನಪದ ಕಥೆಗಳ ಪ್ರಕಾರ ಒಂದು ಕಾಲದಲ್ಲಿ ಕಾವೇರಿ ನದಿ ದಡದಲ್ಲಿರುವ ಒಂದೊಮ್ಮೆ ಈ ಸ್ಥಳವು ಸಂಪೂರ್ಣವಾಗಿ ಮರಳಿನಿಂದ ಆವೃತವಾಗಿತ್ತು ಎಂದು ಹೇಳಲಾಗುತ್ತದೆ. ತಲಕಾಡಿನಲ್ಲಿ ಒಂದೊಮ್ಮೆ 30 ದೇವಾಲಯಗಳಿದ್ದವು ಎಂದೂ ಹೇಳಲಾಗುತ್ತಿದ್ದು ಅವುಗಳಲ್ಲಿ ಹೆಚ್ಚಿನವುಗಳನ್ನು ಉತ್ಖನನ ಮಾಡಲಾಗಿದ್ದು, ಇನ್ನೂ ಹಲವಾರು ಮರಳಿನ ಅಡಿಯಲ್ಲಿ ಹೂಳಲ್ಪಟ್ಟಿವೆ. ಈ ಐತಿಹಾಸಿಕ ದೇವಾಲಯಗಳ ಪಟ್ಟಣವು ಖಂಡಿತವಾಗಿಯೂ ಹಲವಾರು ಶ್ರೀಮಂತ ಕುಟುಂಬಗಳ ಆಸಕ್ತಿದಾಯಕ ಕಥೆಗಳು ಮತ್ತು ದುರಂತಗಳು, ಶಾಪಗಳು ಮತ್ತು ಪಿತೂರಿಗಳನ್ನು ಒಳಗೊಂಡಿದೆ. ಇಲ್ಲಿಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನದ ಮಂಗಳಕರ ಮತ್ತು ಅಪರೂಪದ ವಿಷಯವು ಇಲ್ಲಿ ಪ್ರಸಿದ್ದವಾಗಿದೆ. ನಕ್ಷತ್ರಗಳು ಮತ್ತು ಗ್ರಹಗಳ ಚಲನೆಯ ಆಧಾರದ ಮೇಲೆ ನಿರ್ದಿಷ್ಟ ದಿನದಂದು ಅವನ ಐದು ಅವತಾರಗಳನ್ನು ಸಂಕೇತಿಸುವ ಐದು ಶಿವ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿಯ ಭವ್ಯತೆಗೆ ಸಾಕ್ಷಿಯಾಗಿ.

ಶಿವನ ಸಮುದ್ರ - ಬೆಂಗಳೂರಿನಿಂದ 135.5ಕಿಮೀ ಅಂತರ

ಶಿವನ ಸಮುದ್ರ - ಬೆಂಗಳೂರಿನಿಂದ 135.5ಕಿಮೀ ಅಂತರ

ಕರ್ನಾಟಕದ ಈ ಮನಮೋಹಕ ದ್ವೀಪ ಪಟ್ಟಣವು ಇಲ್ಲಿಯ ಭವ್ಯ ಜಲಪಾತಗಳಿಗಾಗಿ ಹೆಸರು ಪಡೆದಿದೆ. ಶಿವನ ಸಮುದ್ರ ವೆಂದರೆ ಶಿವನಿಗೆ ಅರ್ಪಿತವಾದ ಸಮುದ್ರವೆಂದು ಅರ್ಥೈಸುತ್ತದೆ. ಇದು ಜಗತ್ತಿನ ನೂರು ಅತ್ಯಂತ ಉತ್ತಮ ಜಲಪಾತಗಳಲ್ಲಿ ಸೇರಿರುವ ಖ್ಯಾತಿಗೆ ಒಳಗಾಗ್ದ ಪ್ರಸಿದ್ದ ಗಗನ ಚುಕ್ಕಿ ಮತ್ತು ಬರಚುಕ್ಕಿ ಜಲಪಾತಗಳ ನೆಲೆಯಾಗಿ. ಇಲ್ಲಿ ಕಾವೇರಿ ನದಿಯ ಭವ್ಯತೆಯನ್ನು ನೀವು ಇಲ್ಲಿ ವೀಕ್ಷಿಸಬಹುದು, ಇದು ಆಳವಾದ ಕಮರಿಗಳ ಮೂಲಕ ಹರಿಯುತ್ತದೆ ಮತ್ತು ಬೀಳುತ್ತಾ ಅದ್ಭುತವಾದ ಜಲಪಾತವನ್ನು ರೂಪಿಸುತ್ತದೆ. ಅದರ ಪುರಾತನ ದೇವಾಲಯಗಳೊಂದಿಗೆ, ಶಿವನಸಮುದ್ರವು ಇತಿಹಾಸ ಮತ್ತು ವಾಸ್ತುಶಿಲ್ಪದ ಉತ್ಸಾಹಿಗಳಿಗೆ ಸೂಕ್ತವಾದ ಸ್ಥಳವಾಗಿದೆ.

ಚಿಕ್ಕಮಗಳೂರು - ಬೆಂಗಳೂರಿನಿಂದ 242.8 ಕಿ.ಮೀ ಅಂತರವಿದೆ.

ಚಿಕ್ಕಮಗಳೂರು - ಬೆಂಗಳೂರಿನಿಂದ 242.8 ಕಿ.ಮೀ ಅಂತರವಿದೆ.

ಮುಳ್ಳಯ್ಯನಗಿರಿ ಬೆಟ್ಟದ ತಪ್ಪಲಿಗೆ ಭೇಟಿ ಕೊಟ್ಟು ಕರ್ನಾಟಕದ ಅತ್ಯಂತ ಎತ್ತರದ ಶಿಖರವಾಗಿದ್ದು, ಚಿಕ್ಕಮಗಳೂರು ದಕ್ಷಿಣ ಭಾರತದ ಅತ್ಯಂತ ರಮಣೀಯವಾದ ಸ್ಥಳವಾಗಿದೆ. ಚಿಕ್ಕಮಗಳೂರು ಎಲ್ಲಾ ತರಹದ ಪ್ರವಾಸಿಗರಿಗೆ ಬೇಕಾದುದನ್ನು ಒದಗಿಸುವ ತಾಣವೆಂದು ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿಯ ಆಹ್ಲಾದಕರ ಹವಾಮಾನ, ಶ್ರೀಮಂತ ವನ್ಯಜೀವಿ, ರೋಚಕ ಟ್ರಕ್ಕಿಂಗ್ ಸ್ಥಳಗಳು, ಮತ್ತು ಮಾರ್ಗಗಳು, ಜಲಪಾತಗಳು, ಕಾಫಿ, ಮತ್ತು ಇನ್ನೂ ಅನೇಕ ವಿಷಯಗಳನ್ನೊಳಗೊಂಡಿದ್ದು ಹೆಸರುವಾಸಿಯಾಗಿದೆ. ಬೇರೆ ಸ್ಥಳಗಳಿಗಿಂತ ಇಲ್ಲಿಯ ಉಷ್ಣಾಂಶವು ಹಲವಾರು ಡಿಗ್ರಿ ಕೆಳಗೆ ಇರುತ್ತದೆ ಬೇಸಿಗೆಯಲ್ಲಿ ಇಲ್ಲಿ ತಾಪಮಾನ ಸ್ವಲ್ಪ ಜಾಸ್ತಿ ಇದ್ದರೂ ಸಹ ಕೆಲವರಿಗೆ ಇದು ಬೇಸಿಗೆಗೆ ಮೆಚ್ಚಿನ ತಾಣವಾಗಿದೆ.

ದೂದ್ ಸಾಗರ್ ಜಲಪಾತ ಬೆಂಗಳೂರಿನಿಂದ 547.8 ಕಿ.ಮೀ

ದೂದ್ ಸಾಗರ್ ಜಲಪಾತ ಬೆಂಗಳೂರಿನಿಂದ 547.8 ಕಿ.ಮೀ

ದೂಧಸಾಗರ ಜಲಪಾತವು ಸಾಹಸಿಗಳು ಮತ್ತು ಚಾರಣಿಗ ಸಮುದಾಯದ ನೆಚ್ಚಿನ ತಾಣವಾಗಿದೆ. ದೂಧಸಾಗರ ಜಲಪಾತದ ಚಾರಣವನ್ನು ಅತ್ಯಂತ ರೋಮಾಂಚನಕಾರಿ ಎಂದು ಪರಿಗಣಿಸಲಾಗಿದೆ. ಮಾಂಡೋವಿ ನದಿಯ ಮೇಲಿರುವ ಈ ನಾಲ್ಕು ಹಂತದ ಜಲಪಾತವು ಗೋವಾ ಮತ್ತು ಕರ್ನಾಟಕದ ಗಡಿಯಲ್ಲಿದೆ. 1017 ಅಡಿ ಎತ್ತರದಿಂದ ಬೀಳುವ, ಹಸಿರು ಕಾಡುಗಳು ಮತ್ತು ಬೆಟ್ಟಗಳಿಂದ ಸುತ್ತುವರೆದಿರುವ ಈ ಅದ್ಭುತವಾದ ಜಲಪಾತವು ಅತ್ಯಂತ ಸೌಂದರ್ಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X