Search
  • Follow NativePlanet
Share
ಮುಖಪುಟ » ಸ್ಥಳಗಳು» ತರಂಗಂಬಾಡಿ

ತರಂಗಂಬಾಡಿ - ಕೊನೆಯಿಲ್ಲದ ಅಲೆಗಳ ನಾದ

7

ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ಟ್ರಾನ್ಕ್ವಿಬಾರ್ ಅಥವ ತರಂಗಂಬಾಡಿಯಿದೆ. ಇದರರ್ಥ ‘ಹಾಡುವ ಅಲೆಗಳ ನಾಡು’. ಇದು ಮೊದಲಿಗೆ 1620-1845 ರವರೆಗೆ ಡೆನಿಷ್ ಕಾಲೋನಿಯಾಗಿತ್ತು. ಡೆನಿಷ್ನಲ್ಲಿ ಟ್ರಾನ್ಕ್ವಿಬಾರ್ ಎಂದು ಕರೆಯುತ್ತಾರೆ.

ಟ್ರಾನ್ಕ್ವಿಬಾರ್ 17 ರಿಂದ 19ನೇ ಶತಮಾನದ ಮಧ್ಯದವರೆಗೆ ಡೆನಿಷ್ಷರ ಅಧೀನದಲ್ಲಿದ್ದ ಮುಖ್ಯ ಬಂದರಾಗಿತ್ತು. ಅದು ಇದರ ಸುವರ್ಣಯುಗವಾಗಿತ್ತು. ಯೂರೋಪಿನಲ್ಲಿ ನಡೆದ ನೆಪೋಲಿಯನ್ನ ಯುದ್ಧದ ಪರಿಣಾಮವಾಗಿ ಈ ಪ್ರದೇಶವು ಬ್ರೀಟೀಷ್ ಅಧೀನದಲ್ಲಿ 1808 ರಿಂದ 1814 ರ ವರೆಗಿತ್ತಾದರೂ ಕೀಯ್ಲ್ ಒಪ್ಪಂದದನ್ವಯ ಮತ್ತೆ ಡ್ಯಾನಿಷ್ಷರಿಗೆ ಮರಳಿಸಲಾಯಿತು . ಕೊನೆಗೆ 1845 ರಲ್ಲಿ ಇದನ್ನು ಸಂಪೂರ್ಣವಾಗಿ ಬ್ರಿಟೀಷರಿಗೆ ಮಾರಲಾಯಿತು. ನಾಗಪಟ್ಟಣಂಗೆ ರೈಲು ಬಂದ ನಂತರ ಈ ಬಂದರಿನ ಮಹತ್ವ ಇನ್ನಷ್ಟು ಕಡಿಮೆಯಾಯಿತು.

ಟ್ರಾನ್ಕ್ವಿಬಾರಿನ ಸುತ್ತಮುತ್ತಲ ಪ್ರವಾಸಿ ಸ್ಥಳಗಳು

ಇಂದು ಟ್ರಾನ್ಕ್ವಿಬಾರ್ ಸಮುದ್ರದ ಎದುರಿನ ದಂಡೆಯಲ್ಲಿದೆ. ಸಮುದ್ರದ ನಿರಂತರ ಗಾನದ ನಡುವೆ ಇಲ್ಲಿ ಸಮಯ ನಿಧಾನವಾಗಿ ಸರಿಯುತ್ತಿರುವಂತೆ ಭಾಸವಾಗುತ್ತದೆ. ತಮಿಳು ನಾಡಿನ ಈ ಸಮುದ್ರತೀರ ಪ್ರದೇಶ ಇನ್ನೂ ಹೆಚ್ಚು ಪ್ರಸಿದ್ಧಿಗೆ ಬಂದಿಲ್ಲ.

ಡೆನಿಷ್ ವಾಸ್ತುಶಿಲ್ಪ ಕಲೆಯನ್ನು ತಿಳಿಯಲು ಇಲ್ಲಿಗೆ ಭೇಟಿ ನೀಡಬೇಕು. ಇಲ್ಲಿನ ಡೆನಿಷ್ ಕೋಟೆ ಇದಕ್ಕೆ ಉತ್ತಮ ಉದಾಹರಣೆ. ಇದು  ಭಾರತದ ಉಳಿದ ಭಾಗಗಳಲ್ಲಿ ನೋಡಲು ಸಿಗುವುದು ವಿರಳ.

ಹಲವು ಕ್ರೈಸ್ತ ಮಿಷನರಿಗಳು ಟ್ರಾನ್ಕ್ವಿಬಾರ್ನಲ್ಲಿ ತಳಊರಿದ ಪರಿಣಾಮವಾಗಿ ಇಲ್ಲಿ ಚರ್ಚುಗಳಿವೆ. ಇಲ್ಲಿನ ಇತರ ಆಕರ್ಷಣೆಗಳೆಂದರೆ ಡೆನಿಷ್ ಮ್ಯೂಸಿಯಂ ಮತ್ತು ಟ್ರಾನ್ಕ್ವಿಬಾರ್ ಸಮುದ್ರತೀರ.

ಹೋಗುವುದು ಹೇಗೆ?

ಈ ಪಟ್ಟಣವು ಚೆನ್ನೈಗೆ ಸಮೀಪದಲ್ಲಿದೆ ಮತ್ತು ಉತ್ತಮ ಸಂಪರ್ಕವನ್ನು ಹೊಂದಿದೆ.

ಟ್ರಾನ್ಕ್ವಿಬಾರ್ನ ಹವಾಮಾನ

ತಮಿಳು ನಾಡಿನ ಉಳಿದ ಭಾಗಗಳಲ್ಲಿಯಂತೆ ಇಲ್ಲಿ ಕೂಡ ಧಗೆ ಮತ್ತು ಉಷ್ಣತೆ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಸ್ವಲ್ಪಮಟ್ಟಿಗೆ ಉಷ್ಣತೆ ಕಡಿಮೆಯಾಗುತ್ತದೆ.

ತರಂಗಂಬಾಡಿ ಪ್ರಸಿದ್ಧವಾಗಿದೆ

ತರಂಗಂಬಾಡಿ ಹವಾಮಾನ

ಉತ್ತಮ ಸಮಯ ತರಂಗಂಬಾಡಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತರಂಗಂಬಾಡಿ

  • ರಸ್ತೆಯ ಮೂಲಕ
    ತರಂಗಂಬಾಡಿಯು ಪಾಂಡಿಚೆರಿಯಲ್ಲಿ ಬರುವ ಕಾರೈಕಾಲ್ ಪಟ್ಟಣಕ್ಕೆ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಕಾರೈಕಾಲ್, ಚೆನ್ನೈ, ತಂಜಾವೂರು, ಪಾಂಡಿಚೆರಿ ಮುಂತಾದ ಪಟ್ಟಣಗಳಿಂದ ತರಂಗಂಬಾಡಿಗೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚಿದಂಬರಂ ಹಾಗೂ ನಾಗಪಟ್ಟಿನಂ ತರಂಗಂಬಾಡಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣಗಳಾಗಿವೆ. ಈ ಎರಡೂ ಪಟ್ಟಣಗಳು ರಾಜ್ಯದ ಸಾಕಷ್ಟು ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತರಂಗಂಬಾಡಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಟ್ಯಾಕ್ಸಿ ಹಾಗೂ ಬಸ್ಸುಗಳು ತರಂಗಂಬಾಡಿಗೆ ತೆರಳಲು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed