Search
 • Follow NativePlanet
Share
ಮುಖಪುಟ » ಸ್ಥಳಗಳು » ತಿರುಪತಿ » ಆಕರ್ಷಣೆಗಳು
 • 01ಬಾಲಾಜಿ ದೇವಸ್ಥಾನ

  ಶ್ರೀ ವೆಂಕಟೇಶ್ವರ ದೇವಾಲಯ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಧಾರ್ಮಿಕ ಕೇಂದ್ರ. ಇದು ವೆಂಕಟಾ ತಿರುಮಲ ಗುಡ್ಡದ ಏಳನೆ ತುದಿಯಲ್ಲಿದೆ. ಸ್ವಾಮಿ ಪುಷ್ಕರಣಿ ನದಿಯ ದಕ್ಷಿಣಕ್ಕಿದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಮಾದರಿಯಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯದ ಒಟ್ಟು ವ್ಯಾಪ್ತಿ 2.2 ಎಕರೆಯಷ್ಟಿದೆ. ಇಲ್ಲಿ...

  + ಹೆಚ್ಚಿಗೆ ಓದಿ
 • 02ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯ

  ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯ

  ತಿರುಪತಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಅಪ್ಪಲಾಲಯಗುಂಟ ಬಳಿ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯ ಇದೆ. ದೇವ ವೆಂಕಟೇಶ್ವರನ ವಿಶ್ರಾಂತಿಯ ತಾಣ ಇದು ಎಂದು ನಂಬಲಾಗುತ್ತದೆ. ತಿರುಮಲದಿಂದ ಹಿಂತಿರುಗಿದ ನಂತರ ವೆಂಕಟೇಶ್ವರನು ಇಲ್ಲಿಯೇ ಇದ್ದರು ಎನ್ನಲಾಗುತ್ತದೆ.

  ಶ್ರೀ ಪದ್ಮಾವತಿ ಅಮ್ಮನವರೊಂದಿಗೆ...

  + ಹೆಚ್ಚಿಗೆ ಓದಿ
 • 03ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ

  ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ

  ತಿರುಪತಿಯಿಂದ 48 ಕಿ.ಮೀ. ದೂರದಲ್ಲಿರುವ ಕರವೆತ್ತಿನಗರಂ ಸೀಪ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಇದೆ. ಈ ದೇವಾಲಯ 14 ನೇ ಶತಮಾನದ್ದೆಂದು ನಂಬಲಾಗಿದೆ. ಶ್ರೀ ರಾಮಾನುಜಾಚಾರ್ಯರಿಂದ ಈ ದೇವಾಲಯ ನಿರ್ಮಾಣವಾಯಿತೆಂದು ನಂಬಲಾಗಿದೆ. ಶ್ರೀ ವೇಣುಗೋಪಾಲಸ್ವಾಮಿಯ ಆಕರ್ಷಕ ವಿಗ್ರಹ ಇಲ್ಲಿದೆ.

  ಈ ದೇವಾಲಯದಲ್ಲಿ ಇದಲ್ಲದೇ ಶ್ರೀ...

  + ಹೆಚ್ಚಿಗೆ ಓದಿ
 • 04ತಿರುಮಲ

  ತಿರುಮಲ

  ತಿರುಪತಿಗೆ ಅತ್ಯಂತ ಸಮೀಪವಾಗಿರುವ ತಿರುಮಲ ಗುಡ್ಡಗಾಡು ಪ್ರದೇಶ ವ್ಯಾಪ್ತಿಗೆ ಬರುತ್ತದೆ. ಅತ್ಯಂತ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಇಲ್ಲಿದೆ. ಸಮುದ್ರ ಮಟ್ಟದಿಂದ ಈ ದೇವಾಲಯವಿರುವ ಗುಡ್ಡ  3200 ಅಡಿ ಎತ್ತರವಿದ್ದು ಏಳು ಶೃಂಗಗಳನ್ನು ಒಳಗೊಂಡಿದೆ. ಈ ಏಳು ಗುಡ್ಡದ ತುದಿಗಳು ಆದಿಶೇಷನ ಏಳು ಹೆಡೆಯನ್ನು...

  + ಹೆಚ್ಚಿಗೆ ಓದಿ
 • 05ಇಸ್ಕಾನ್‌ ಶ್ರೀ ಕೃಷ್ಣ ದೇವಾಲಯ

  ತಿರುಪತಿಯಲ್ಲಿರುವ ಇಸ್ಕಾನ್‌ ಶ್ರೀ ಕೃಷ್ಣ ದೇವಾಲಯವು ತಿರುಮಲ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸಿಗುತ್ತದೆ. ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ವಿನ್ಯಾಸವನ್ನು ಇದು ಒಳಗೊಂಡಿದೆ. ಅಲ್ಲದೇ ಇದು ಶಿಖರ ಮಾದರಿಯಲ್ಲಿದೆ. ಬಿಳಿ ಹಾಗೂ ಚಿನ್ನದ ಬಣ್ಣ ಹೊಂದಿದೆ. ಇಲ್ಲಿ ಶ್ರೀ ನರಸಿಂಹಸ್ವಾಮಿ, ಶ್ರೀಕೃಷ್ಣ, ಕೃಷ್ಣಲೀಲೆ ಹಾಗೂ...

  + ಹೆಚ್ಚಿಗೆ ಓದಿ
 • 06ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್

  ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್

  ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್ 1987ರ ಸೆಪ್ಟೆಂಬರ್‌ 29ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಯಿತು. 5,532 ಎಕರೆ ಪ್ರದೇಶದಲ್ಲಿ ಈ ಜೈವಿಕ ಪಾರ್ಕ್ ವ್ಯಾಪಿಸಿಕೊಂಡಿದೆ. ಈ ಪಾರ್ಕ್ ನಲ್ಲಿ ಆನೆ, ನವಿಲು, ಜಿಂಕೆ, ಗಿಳಿ, ಚಿರತೆ ಇತರೆ ವನ್ಯ ಜೀವಿ ಹಾಗೂ ಪಕ್ಷಿಗಳ ಆವಾಸವಿದೆ. ಹಸಿರಿನಿಂದ ಆವೃತ್ತವಾಗಿರುವ ಈ...

  + ಹೆಚ್ಚಿಗೆ ಓದಿ
 • 07ಗೋವಿಂದರಾಜಸ್ವಾಮಿ ದೇವಾಲಯ

  ಗೋವಿಂದರಾಜಸ್ವಾಮಿ ದೇವಾಲಯ

  ಶ್ರೀ ಗೋವಿಂದರಾಜಸ್ವಾಮಿ ದೇವಾಲಯವು ತಿರುಪತಿಯ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖ ದೇವಾಲಯಗಳ ಸಾಲಿನಲ್ಲಿ ಒಂದು. ವೈಷ್ಣವರ ಕಾಲದ ಸಾಂಪ್ರದಾಯಿಕ ಶೈಲಿಯ ವಾಸ್ತುಶಿಲ್ಪ ಮಾದರಿಯಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ವೈಷ್ಣವ ಸಂತರಾದ ರಾಮಾನುಜರು ಈ ದೇವಾಲಯಕ್ಕೆ 1235 ರಲ್ಲಿ ಅಡಿಗಲ್ಲನ್ನು ಹಾಕಿದ್ದರು ಎಂದು ಹೇಳಲಾಗುತ್ತದೆ.

  ...
  + ಹೆಚ್ಚಿಗೆ ಓದಿ
 • 08ಕೋದಂಡರಾಮ ಸ್ವಾಮಿ ದೇವಾಲಯ

  ಕೋದಂಡರಾಮ ಸ್ವಾಮಿ ದೇವಾಲಯ

  ಕೋದಂಡರಾಮ ಸ್ವಾಮಿ ದೇವಾಲಯ 10ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಚೋಳ ಅರಸರು ಇದನ್ನು ನಿರ್ಮಿಸಿದ್ದಾರೆ. ಶ್ರೀರಾಮಚಂದ್ರನ ದೇವಾಲಯ ಇದಾಗಿದೆ. ಇಲ್ಲಿ ರಾಮನೊಂದಿಗೆ ಸೀತಾದೇವಿ ಹಾಗೂ ಲಕ್ಷ್ಮಣ ಕೂಡ ಇದ್ದಾರೆ. ಲಂಕೆಯಿಂದ ಸೀತೆಯನ್ನು ಕರೆತಂದ ನಂತರ ಶ್ರೀರಾಮಚಂದ್ರ ಈ ಪ್ರದೇಶದಲ್ಲಿ ಕೆಲ ಕಾಲ ಸೀತೆ ಹಾಗೂ ಲಕ್ಷ್ಮಣರೊಡಗೂಡಿ...

  + ಹೆಚ್ಚಿಗೆ ಓದಿ
 • 09ಶ್ರೀನಿವಾಸ ಮಂಗಪುರಂ

  ಶ್ರೀನಿವಾಸ ಮಂಗಪುರಂ

  ತಿರುಪತಿಯಿಂದ ಸುಮಾರು 12 ಕಿ.ಮೀ. ದೂರದಲ್ಲಿದೆ ಶ್ರೀನಿವಾಸ ಮಂಗಪುರಂ. ನಂಬಿಕೆಗಳ ಪ್ರಕಾರ ದೇವ ವೆಂಕಟೇಶ್ವರ ಸ್ವಾಮಿಯು ದೇವಿ ಪದ್ಮಾವತಿಯನ್ನು ವಿವಾಹವಾದ ನಂತರ ಇಲ್ಲಿ ಕೆಲ ಕಾಲ ಇದ್ದ. ತದ ನಂತರ ಆತ ತಿರುಮಲಕ್ಕೆ ತೆರಳಿದ ಎಂದು ಹೇಳಲಾಗುತ್ತದೆ. ಇಲ್ಲಿ ಅತ್ಯಾಕರ್ಷಕವಾಗಿ ಆಚರಣೆಯಾಗುವ ಎರಡು ಉತ್ಸವಗಳು ಜಗತ್ತಿಗೇ...

  + ಹೆಚ್ಚಿಗೆ ಓದಿ
 • 10ಕಪಿಲಾ ತೀರ್ಥಂ

  ಕಪಿಲಾ ತೀರ್ಥಂ

  ಈ ಪ್ರದೇಶದಲ್ಲಿ ದೇವ ಶಿವನಿಗೆ ಮೀಸಲಾಗಿರುವ ಒಂದೆ ದೇವಾಲಯ ಕಪಿಲಾ ತೀರ್ಥಂ. ತಿರುಪತಿ ಹಾಗೂ ತಿರುಮಲ ಎರಡೂ ಪಟ್ಟಣದಿಂದ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ತಿರುಮಲ ಬೆಟ್ಟ ತಲುಪುವ ಮುನ್ನ ಸಿಗುವ ಬೆಟ್ಟದ ಕೆಳಭಾಗದ ಪ್ರವೇಶ ಜಾಗದಲ್ಲಿ ಈ ಬೃಹತ್‌ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯ ಪ್ರವೇಶದ್ವಾರದಲ್ಲಿಯೇ ದೊಡ್ಡದಾದ...

  + ಹೆಚ್ಚಿಗೆ ಓದಿ
 • 11ಹನುಮಂತ ದೇವಾಲಯ

  ಹನುಮಂತ ದೇವಾಲಯ

  ತಿರುಪತಿಗೆ ಅತ್ಯಂತ ಸಮೀಪದಲ್ಲಿಯೇ ಇದೆ ಹನುಮಂತ ದೇವಾಲಯ. ಗೋಗ್ರಂಬಂ ಅಣೆಕಟ್ಟಿನಿಂದ ಮೂರು ಕಿ.ಮೀ. ದೂರದಲ್ಲಿದೆ. ಈ ಸ್ಥಳದಲ್ಲಿ ಶ್ರೀರಾಮಚಂದ್ರ, ಸೀತೆ, ಲಕ್ಷ್ಮಣ ಹಾಗೂ ಹನುಮಂತರೊಡಗೂಡಿ ಕೆಲ ಕಾಲ ವಾಸವಾಗಿದ್ದ ಎಂದು ಹೇಳಲಾಗುತ್ತದೆ. ಈ ತಾಣವು ಜಪಲಿ ಅಂತಲೂ ಜನಪ್ರಿಯವಾಗಿದೆ. ಹನುಮಂತ ಇಲ್ಲಿಯೇ ತಪಸ್ಸನ್ನು ಕೂಡ ಆಚರಿಸಿದ್ದ...

  + ಹೆಚ್ಚಿಗೆ ಓದಿ
 • 12ಅವನಾಕ್ಷಮ್ಮ ದೇವಾಲಯ

  ಅವನಾಕ್ಷಮ್ಮ ದೇವಾಲಯ

  ಅವನಾಕ್ಷಮ್ಮ ದೇವಾಲಯವು ತಿರುಪತಿಯಿಂದ 42 ಕಿ.ಮೀ. ದೂರದಲ್ಲಿದೆ. ಪ್ರತಿ ವರ್ಷ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ನವರಾತ್ರಿ ಹಾಗೂ ಬ್ರಹ್ಮೋತ್ಸವಂ ಸಂದರ್ಭದಲ್ಲಿ ಇಲ್ಲಿ ಆಚರಣೆ ಇನ್ನಷ್ಟು ಆಕರ್ಷಕ ಹಾಗೂ ಉತ್ಸಾಹಭರಿತವಾಗಿರುತ್ತದೆ. ಶ್ರೀ ಕಲ್ಯಾಣ ವೆಂಕಟಸ್ವಾಮಿಗೆ ಸಂಬಂಧಿಸಿ ಐದು ದೇವಾಲಯಗಳು ಒಟ್ಟೊಟ್ಟಿಗಿದ್ದು...

  + ಹೆಚ್ಚಿಗೆ ಓದಿ
 • 13ಪರಶುರಾಮೇಶ್ವರ ದೇವಾಲಯ

  ಪರಶುರಾಮೇಶ್ವರ ದೇವಾಲಯ

  ತಿರುಪತಿಯಿಂದ 20 ಕಿ.ಮೀ. ದೂರದಲ್ಲಿರುವ ಗುಡಿಮಾಳಂ ಎಂಬಲ್ಲಿದೆ ಪರಶುರಾಮೇಶ್ವರ ದೇವಸ್ಥಾನ. ಇಲ್ಲಿನ ಮಹತ್ವವೇನೆಂದರೆ ದೇವಾಲಯದ ಗರ್ಭಗುಡಿಯಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಈ ಲಿಂಗದ ವಿಶೇಷವೇನೆಂದರೆ ಇದನ್ನು ಒಂದು ಅಥವಾ ಎರಡನೇ ಶತಮಾನದಲ್ಲಿ ಸಂಶೋಧಿಸಲಾಗುತ್ತಿದ್ದ ಸಮಯದಲ್ಲಿ ಸಿಕ್ಕ ಪ್ರಮುಖ ಲಿಂಗಗಳಲ್ಲಿ ಇದೂ...

  + ಹೆಚ್ಚಿಗೆ ಓದಿ
 • 14ತಿರುಚನೂರು

  ತಿರುಚನೂರು

  ಅಲಮೇಲು ಮಂಗಮ್ಮ ದೇವಾಲಯವು ಅಲಮೇಲುಂಗಪುರಂನಲ್ಲಿ ಬರುತ್ತದೆ. ಇದು ತಿರುಚನೂರು ಅಂತಲೂ ಕರೆಯಲ್ಪಡುತ್ತದೆ. ಈ ದೇವಾಲಯವು ಅಲಮೇಲು ಮಂಗಮ್ಮ ಅಥವಾ ಪದ್ಮಾವತಿ ದೇವಿಗೆ ಸೇರಿದ್ದಾಗಿದೆ. ಈ ದೇವತೆ ಪುಷ್ಕರಣಿ ಎಂಬ ಕೊಳದಲ್ಲಿ ಜನಿಸಿದಳು ಎಂದು ನಂಬಲಾಗುತ್ತದೆ. ಈ ದೇವಾಲಯ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಧಾರ್ಮಿಕ ನಂಬಿಕೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
21 Oct,Wed
Return On
22 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Oct,Wed
Check Out
22 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Oct,Wed
Return On
22 Oct,Thu
 • Today
  Tirupati
  36 OC
  97 OF
  UV Index: 9
  Haze
 • Tomorrow
  Tirupati
  29 OC
  85 OF
  UV Index: 9
  Partly cloudy
 • Day After
  Tirupati
  29 OC
  84 OF
  UV Index: 9
  Partly cloudy