Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನೆಲ್ವೇಲಿ » ಹವಾಮಾನ

ತಿರುನೆಲ್ವೇಲಿ ಹವಾಮಾನ

ತಿರುನೆಲ್ವೇಲಿಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಫೆಬ್ರವರಿ ನಡುವಿನ ಅವಧಿಯು ಇಲ್ಲಿಗೆ ಭೇಟಿಕೊಡಲು ಉತ್ತಮ ಕಾಲವಾಗಿದೆ. ಆಗ ಇಲ್ಲಿನ ಉಷ್ಣಾಂಶವು ಕನಿಷ್ಠ 26 ಡಿಗ್ರಿ ಮತ್ತು ಗರಿಷ್ಠ 33 ಡಿಗ್ರಿ ಸೆಲ್ಶಿಯಸ್ ಇರುತ್ತದೆ.  ನೀವು ಇಲ್ಲಿಗೆ ವರ್ಷದ ಯಾವುದೇ ಸಮಯದಲ್ಲಿ ಭೇಟಿ ಕೊಡಬೇಕಾದರು ಸರಿ ಹತ್ತಿಯ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.

ಬೇಸಿಗೆಗಾಲ

ತಿರುನೆಲ್ವೇಲಿಯಲ್ಲಿ ಬೇಸಿಗೆಯು ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 39 ಡಿಗ್ರಿ ಸೆಲ್ಶಿಯಸ್‍ವರೆಗು ಏರಿಕೆಯಾಗುವ ಸಂಭವವಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಸರಾಸರಿ ಉಷ್ಣಾಂಶವು 34 ರಿಂದ 35 ಡಿಗ್ರಿಯವರೆಗೆ ಇರುತ್ತದೆ. ಆದಷ್ಟೂ ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡದಿರುವುದು ಉತ್ತಮ. ಒಂದು ವೇಳೆ ನೀವೇನಾದರು ಇಲ್ಲಿಗೆ ಭೇಟಿಕೊಡಲೇ ಬೇಕಾದಲ್ಲಿ ಹತ್ತಿಯ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬಾರದು. ಇಲ್ಲಿ ಬೇಸಿಗೆಯು ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಇರುತ್ತದೆ.

ಮಳೆಗಾಲ

ತಿರುನೆಲ್ವೇಲಿಯಲ್ಲಿ ಮಳೆಗಾಲವು ಜೂನ್‍ನಿಂದ ಜುಲೈ ಒಳಗೆ ಪ್ರಾರಂಭವಾಗುತ್ತದೆ. ಮಳೆ ಬೀಳುವುದರಿಂದ ಇಲ್ಲಿನ ಉಷ್ಣಾಂಶದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿ, ಸಹಿಸಿಕೊಳ್ಳುವಷ್ಟರ ಮಟ್ಟಿಗೆ ಉಷ್ಣಾಂಶವುಂಟಾಗುತ್ತದೆ. ಆದರೂ ಸಹ ಮಳೆಗಾಲದಲ್ಲಿ ಇಲ್ಲಿಗೆ ಭೇಟಿಕೊಡುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಮಳೆಯು ಪ್ರವಾಸಿಗರ ಯೋಜನೆಯನ್ನು ತಲೆಕೆಳಗು ಮಾಡುವ ಸಾಧ್ಯತೆಗಳಿರುತ್ತವೆ. ಜೂನ್‍ನಿಂದ ಅಕ್ಟೋಬರ್ ವರೆಗೆ ಇಲ್ಲಿ ಮಳೆಗಾಲವಿರುತ್ತದೆ.

ಚಳಿಗಾಲ

ತಿರುನೆಲ್ವೇಲಿಯಲ್ಲಿ ಚಳಿಗಾಲವನ್ನು ಕಾಣಲಾಗುವುದಿಲ್ಲ. ಆದರೆ ಮಳೆಗಾಲದ ನಂತರದ ದಿನಗಳಲ್ಲಿ ಮಳೆಯ ಕಾರಣದಿಂದಾಗಿ ಉಷ್ಣಾಂಶದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬರುತ್ತದೆ. ಹಾಗಾಗಿ ಈ ಅವಧಿಯಲ್ಲಿ ತಿರುನೆಲ್ವೇಲಿಗೆ ಭೇಟಿಕೊಡಬಹುದು. ಈ ಕಾಲವು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಇರುತ್ತದೆ.