Search
  • Follow NativePlanet
Share
ಮುಖಪುಟ » ಸ್ಥಳಗಳು » ತೌಬಲ್ » ಹವಾಮಾನ

ತೌಬಲ್ ಹವಾಮಾನ

ಮಳೆಗಾಲದ ನಂತರ ತೌಬಲ್ ಗೆ ಪ್ರಯಾಣ ಬೆಳೆಸಲು ಸೂಕ್ತ ಕಾಲ. ಮಳೆಗಾಲವು ಈ ಭೂಭಾಗವನ್ನು ಸ್ವಚ್ಚಗೊಳಿಸಿ ಹಸುರಿನಿಂದ ಕಂಗೊಳಿಸುವಂತೆ ಮಾಡುತ್ತದೆ. ರಸ್ತೆಯ ಗುಣಮಟ್ಟ ಅಷ್ಟು ಚೆನ್ನಾಗಿಲ್ಲದ ಕಾರಣ, ಮಳೆಗಾಲ ಮುಗಿದ ಬಳಿಕ ಇಲ್ಲಿಗೆ ಪ್ರಯಾಣಿಸುವುದು ಒಳಿತು.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ವರೆಗೆ, ಕೆಲವೊಮ್ಮೆ ಜೂನ್ ವರೆಗೆ, ಇರುವ ಬೇಸಗೆಕಾಲವು ತುಂಬಾ ಹಿತವಾಗಿರುತ್ತದೆ. ಇದರಿಂದ ಇಲ್ಲಿಗೆ ಬಂದು ಹೋಗುವವರಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನ 35-37 ಡಿಗ್ರಿ ಸೆಲ್ಸಿಯುಸ್ ಮಧ್ಯದಲ್ಲಿರುತ್ತದೆ.

ಮಳೆಗಾಲ

ಮಳೆಗಾಲ ಇಲ್ಲಿನ ಪ್ರಧಾನ ಋತುವಾಗಿದ್ದು, ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಮಳೆಗಾಲದಲ್ಲಿ ನಿರಂತರ ಮಳೆ ಸುರಿಯುತ್ತದೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದಲ್ಲ. ಮಳೆಗಾಲದ ನಂತರದ ಸಮಯ ಭೇಟಿ ನೀಡಲು ಉತ್ತಮವಾಗಿರುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿ ಹೆಪ್ಪುಗಟ್ಟಿಸುವ ಚಳಿ ಇರುತ್ತದೆ. ಡಿಸೆಂಬರ್ ನಿಂದ ಫೆಬ್ರುವರಿ ವರೆಗೆ ತಾಪಮಾನ 0 ಯಿಂದ 15 ಡಿಗ್ರಿ ವೆರೆಗೆ ಇರುತ್ತದೆ. ಸಾಧಾರಣ 6 ಡಿಗ್ರಿ ಇರುವ ಈ ಸಮಯದಲ್ಲಿ ಬೆಚ್ಚಗಿನ ಉಡುಪುಗಳು ಅತ್ಯವಶ್ಯಕ.