Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಹವಾಮಾನ

ತೂತುಕುಡಿ ಹವಾಮಾನ

ತೂತುಕುಡಿ ನಗರಕ್ಕೆ ವರ್ಷದ ಎಲ್ಲಾ ತಿಂಗಳಿನಲ್ಲೂ ಪ್ರವಾಸ ಹೋಗುವುದು ಅಸಾಧ್ಯ. ಆದ್ದರಿಂದ ಇಲ್ಲಿನ ಹವಾಮಾನಕ್ಕೆ ತಕ್ಕ ಹಾಗೆ ನಿಮ್ಮ ಪ್ರಯಾಣದ ಅವಧಿಯನ್ನು ನಿಗದಿಪಡಿಸಿಕೊಳ್ಳಿ. ಹವಾಮಾನದ ಅನುಕೂಲದ ದೃಷ್ಟಿಯಿಂದ ಅಕ್ಟೋಬರ್ ನಿಂದ ಮಾರ್ಚ್ ಉತ್ತಮ ಸಮಯ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುವುದರಿಂದ ನಗರದ ಯಾವುದೇ ಭಾಗದಲ್ಲೂ ಪ್ರಯಾಣ ಮಾಡಬಹುದು.

ಬೇಸಿಗೆಗಾಲ

ತಮಿಳುನಾಡು ಎಂದರೆ ಎಲ್ಲರಿಗೂ ನೆನಪಾಗುವುದು ಅಲ್ಲಿನ ಅತೀಯಾದ ಬಿಸಿಲಿನ ತಾಪಮಾನ. ಅದರಂತೆ ತೂತುಕುಡಿ ನಗರದಲ್ಲೂ ಬೇಸಿಗೆಯಲ್ಲಿ ಹವಾಮಾನ ಅತ್ಯಂತ ಉಷ್ಣತೆಯಿಂದ ಕೂಡಿರುತ್ತದೆ. ಹಾಗೆಯೇ ಸಮುದ್ರದ ಸಾಮೀಪ್ಯದ ಪರಿಣಾಮವಾಗಿ ವಾತಾವರಣವು ಆರ್ದ್ರತೆಯಿಂದಲೂ ಕೂಡಿರುತ್ತದೆ. ಇದು  ಏಪ್ರಿಲ್ ನಿಂದ ಜುಲೈ ತಿಂಗಳಿನಲ್ಲಿ  ಅನುಭವಕ್ಕೆ ಬರುವಂತಹ ಹವಾಮಾನ.  ಈ ಸಮಯದಲ್ಲಿ ಇಲ್ಲಿನ ತಾಪಮಾನ 30 ಡಿ.ಸೆ ನಿಂದ 40 ಡಿ ಸೆಲ್ಶಿಯಸ್ ನಷ್ಟು ದಾಖಲಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಪ್ರವಾಸಕ್ಕೆ ತೆರಳುವುದು ಅಷ್ಟೊಂದು ಔಚಿತ್ಯಪೂರ್ಣವಲ್ಲ.

ಮಳೆಗಾಲ

ತೂತುಕುಡಿಯಲ್ಲಿ ಬಿಸಿಲು ಹೇಗೋ ಹಾಗೆಯೇ ಮಳೆಯೂ ಕೂಡ. ಮಳೆಗಾಲದಲ್ಲಿ ಇಲ್ಲಿ ಅತಿಯಾಗಿ ಮಳೆ ಸುರಿಯುತ್ತದೆ.ಇಲ್ಲಿನ ಮಳೆಗಾಲದ ಸಮಯ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗೆ. ಆದರೆ ಈ ಅತಿಯಾದ ಮಳೆಯಿಂದಾಗಿ ಬೋಟಿಂಗ್ ಮೊದಲಾದ ಪ್ರವಾಸಿ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ. ಆದರೂ ಈ ಸಮಯದಲ್ಲಿ ತೂತುಕುಡಿ ನಗರದ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಬರಬಹುದು.

ಚಳಿಗಾಲ

ತೂತುಕುಡಿ ನಗರದಲ್ಲಿ ನವೆಂಬರ್ ತಿಂಗಳಿನಿಂದ ಜನವರಿ ತಿಂಗಳಿನವರೆಗೆ ಚಳಿಗಾಲದ ಅವಧಿ. ಚಳಿಗಾಲದ ಅವಧಿಯಲ್ಲಿ ಅತಿ ಸಹಜವಾಗಿಯೇ ತಾಪಮಾನ ಕೆಳಗಿಳಿಯುತ್ತದೆ ಈ ಸಂದರ್ಭದಲ್ಲಿ ನಗರದಲ್ಲಿ ದಾಖಲಾಗುವ ತಾಪಮಾನ 20 ಡಿ.ಸೆ ನಿಂದ 30 ಡಿಗ್ರಿ ಸೆಲ್ಶಿಯಸ್. ಆದ್ದರಿಂದ ತೂತುಕುಡಿ ನಗರದಲ್ಲೊಂದು ಸುತ್ತು ಹೊರಡುಬರಲು ಇದು ಸರಿಯಾದ ಸಮಯ!