Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವರೂರು » ಹವಾಮಾನ

ತಿರುವರೂರು ಹವಾಮಾನ

ತಿರುವರೂರಿಗೆ ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಭೇಟಿ ನೀಡುವುದು ಹೆಚ್ಚು ಸೂಕ್ತವಾದದ್ದು. ಬೇಸಿಗೆಯಲ್ಲಿ ಇಲ್ಲಿಗೆ ಯಾತ್ರಾರ್ಥಿಗಳಾಗಿ ಭೇಟಿ ನೀಡಿದರೆ ದೇವಸ್ಥಾನಗಳಲ್ಲಿನ ವಿಶೇಷ ಹಬ್ಬಗಳ ಆಚರಣೆಗಳನ್ನು ನೋಡಬಹದು.

ಬೇಸಿಗೆಗಾಲ

ಏಪ್ರಿಲ್-ಮೇ ಇಲ್ಲಿ ತೀಕ್ಷ್ಣ ಬೇಸಿಗೆ ಕಾಲ. ಈ ಸಮಯದಲ್ಲಿ ಇಲ್ಲಿನ ಉಷ್ಣತೆಯನ್ನು ತಡೆದುಕೊಳ್ಳುವುದು ಅಸಾಧ್ಯ. ಉಷ್ಣತೆಯು ಗರಿಷ್ಠ 42 ಡಿಗ್ರಿ ಸೆಲ್ಸಿಯಸ್ನಿಂದ ಕನಿಷ್ಠ 32 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಮಳೆಗಾಲ

ಜೂನ್-ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಈ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವುದಿಲ್ಲ. ಇಡೀ ಪ್ರದೇಶ ಈ ಸಮಯದಲ್ಲಿ ಹಸಿರಿನಿಂದ ಕಂಗೊಳಿಸುತ್ತದೆ. ಈ ಸಮಯದಲ್ಲಿ ತಿರುವರೂರಿಗೆ ಹೋಗುವುದು ಹೆಚ್ಚು ಸೂಕ್ತ.

ಚಳಿಗಾಲ

ಡಿಸೆಂಬರ್-ಫೆಬ್ರವರಿ ಇಲ್ಲಿ ಚಳಿಗಾಲ. ಈ ಸಮಯದಲ್ಲಿ ಇಲ್ಲಿ ಉಷ್ಣತೆಯು 20-30 ಡಿಗ್ರಿಗಳಷ್ಟಿರುತ್ತದೆ. ಇದು ತಿರುವರೂರಿಗೆ ಭೇಟಿ ನೀಡಲು ಅತ್ಯಂತ ಪ್ರಶಸ್ತವಾದ ಸಮಯ.