Search
  • Follow NativePlanet
Share
ಮುಖಪುಟ » ಸ್ಥಳಗಳು» ತಿರುವಣ್ಣಾಮಲೈ

ತಿರುವಣ್ಣಾಮಲೈ- ಆಧುನಿಕತೆಯಲ್ಲೊಂದು ಆದರ್ಶ ನಗರ

34

ತಿರುವಣ್ಣಾಮಲೈ ಮನಸ್ಸಿಗೆ ಒಪ್ಪುವಂತ ಅಧ್ಭುತವಾದ ನಗರವಾಗಿದ್ದು, ಆಧುನಿಕ ರಾಮರಾಜ್ಯವೆಂಬ ಹೆಸರು ಪಡೆದುಕೊಂಡಿದೆ. ಈ ದೇಶದಲ್ಲಿ ನಾವೆಲ್ಲರೂ ಪಾಲಿಸಬಹುದಾದ ಪ್ರೀತಿ ಮತ್ತು ಸಹೋದರತ್ವಕ್ಕೆ ತಕ್ಕ ಉದಾಹರಣೆ ತಿರುವಣ್ಣಾಮಲೈ. ಈ ದೇವಸ್ಥಾನಗಳ ನಗರವಿರುವುದು ತಮಿಳುನಾಡು ರಾಜ್ಯದಲ್ಲಿ. ಇಲ್ಲಿನ ಕೇಂದ್ರಸ್ಥಾನವೂ ತಿರುವಣ್ಣಾಮಲೈ ಜಿಲ್ಲೆಯೇ.

ಆಸಕ್ತಿದಾಯಕ ವಿಷಯವೆಂದರೆ ಈ ನಗರದಲ್ಲಿ ಕಾನೂನು ಕಟ್ಲೆಯ ವಿಚಾರಗಳು ಅಪರಾಧ ಪ್ರಕರಣಗಳು ಸಂಪೂರ್ಣ ಶೂನ್ಯ. ಅತಿ ಅಪರೂಪಕ್ಕೆ ಅಪರೂಪವೆಂಬಂತೆ ಇಲ್ಲಿ ನ್ಯಾಯ ಅನ್ಯಾಯದ ವಿಚಾರ ತಲೆದೋರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ, ತಿರುವಣ್ಣಾಮಲೈನಲ್ಲಿ ವಾಸಿಸುವ ಮಂದಿ ದೇವರಲ್ಲಿ ಭಯ ಭಕ್ತಿ ಉಳ್ಳವರು. ಆದಷ್ಟು ತೊಂದರೆಗಳಿಂದ ದೂರ ಉಳಿಯಲು ಬಯಸುವವರು. ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವ ಭಕ್ತರನ್ನೂ ತಿರುವಣ್ಣಾಮಲೈನ ಜನ ಪ್ರೀತಿಯಿಂದ ಸ್ವಾಗತಿಸುತ್ತಾರೆ.

ಪಂಚಭೂತ ಸ್ಥಳಗಳಲ್ಲಿ ಇದೂ ಕೂಡ ಒಂದಾಗಿದ್ದು ಅಗ್ನಿಯನ್ನು ಪ್ರತಿನಿಧಿಸುತ್ತದೆ. ಉಳಿದ ನಾಲ್ಕು ಮೂಲಧಾತುಗಳಾದ ಆಕಾಶ, ಗಾಳಿ, ನೀರು ಮತ್ತು ಭೂಮಿಗಳನ್ನು ಚಿದಂಬರ, ಶ್ರೀ ಕಾಳಹಸ್ತಿ, ತಿರುವಣ್ಣಾಕೋಯಿಲ್ ಮತ್ತು ಕಾಂಚಿಪುರಂಗಳು ಪ್ರತಿನಿಧಿಸುತ್ತವೆ.

ನಾಲ್ಕು ರಿತಿಯ ಬ್ರಹ್ಮೋತ್ಸವಗಳು ಇಲ್ಲಿ ಆಚರಸಿಲ್ಪಡುತ್ತವೆ. ನವೆಂಬರ್/ಡಿಸೆಂಬರ್ ತಿಂಗಳಲ್ಲಿ ಆಚರಸಿಲ್ಪಡುವ ಒಂದು ಬ್ರಹ್ಮೋತ್ಸವ ಇಲ್ಲಿ ಪ್ರಸಿದ್ದಿ. ತಮಿಳು ಕ್ಯಾಲೆಂಡರ್ ಪ್ರಕಾರ, ಈ ತಿಂಗಳು ಕಾರ್ತೀಕ ಮಾಸವೆಂದು ಕರೆಯಲ್ಪುತ್ತವೆ. ಹತ್ತು ದಿನಗಳ ಆಚರಣೆಯ ಕೊನೆಯ ದಿನ ಕಾರ್ತೀಕದೀಪ ಆಚರಿಸಲಾಗುತ್ತದೆ. ಕೊನೆಯ ದಿನ ಭಕ್ತಾಧಿಗಳು ದೊಡ್ಡ ಕೊಪ್ಪರಿಗೆಯಲ್ಲಿ ಟನ್ನುಗಟ್ಟಲೆ ತುಪ್ಪವನ್ನು ಹಾಕಿ ದೀಪ ಹಚ್ಚುತ್ತಾರೆ. ಕೊಪ್ಪರಿಗೆಯನ್ನು ಅಣ್ಣಾಮಲೈ ಬೆಟ್ಟದ ತುದಿಯಲ್ಲಿ ಇಡಲಾಗುತ್ತದೆ.

ಅರುಣಾಚಲೇಶ್ವರ ದೇವಸ್ಥಾನ, ರಮಣ ಆಶ್ರಮ, ವಿರೂಪಾಕ್ಷ ಗುಹೆ, ಶೇಷಾದ್ರಿ ಸ್ವಾಮಿಗಳ ಆಶ್ರಮ ಮತ್ತು ಒಂದಷ್ಟು ಸ್ಥಳಗಳು ದಕ್ಷಿಣ ಭಾರತದಲ್ಲಿ ಹಿಂದೂ ಧಾರ್ಮಿಕತೆಯ ಮಹತ್ವವನ್ನು ಹಿಡಿದಿಟ್ಟಿವೆ.

ನಗರದ ಆಚರಣೆಗಳು ಮತ್ತು ಹಬ್ಬಗಳು:

ಪ್ರತಿ ಹುಣ್ಣಿಮೆಯಂದು ಆಚರಿಸುವ ಶಿವಪೂಜೆಯೂ ಇಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದ್ದು ಪ್ರಸಿದ್ದಿ ಪಡೆದಿದೆ. ಅಣ್ಣಾಮಲೈ ಬೆಟ್ಟದ ಸುತ್ತ ಬರಿಗಾಲಿನಲ್ಲಿ ಸುತ್ತಿ ಪೂಜೆ ಸಲ್ಲಿಸಬೇಕಿರುವುದರಿಂದ ಇದೊಂದು ಸಾಹಸವೇ ಸರಿ. ಸುಮಾರು 14ಕಿಲೋ ಮೀಟರ್ ಗಳು ಈ ಕಡಿದಾದ ಹಾದಿಯಲ್ಲಿ ಚೂಪಾದ ಕಲ್ಲು ಮುಳ್ಳುಗಳಿವೆ. ಪ್ರತಿವರ್ಷ ಸಾವಿರಾರು ಭಕ್ತರು ತಮ್ಮ ಭಕ್ತಿಯ ಪ್ರದರ್ಶನಕ್ಕೆ ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. ಚೈತ್ರಪೌರ್ಣಮಿ ಅಥವಾ ವರ್ಷದ ಸಂಪೂರ್ಣ ಹುಣ್ಣಿಮೆಯಂದು ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.

ತಿರುವಣ್ಣಾಮಲೈನಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲೊಂದು ಕಾರ್ತೀಕ ಮಹಾದೀಪ. ಈ ಹಬ್ಬವನ್ನು ಹೆಚ್ಚಿನ ಶ್ರಧ್ದೆ ಭಕ್ತಿಯಿಂದ ಆಚರಿಸಲಾಗುತ್ತದೆ. ತಿರುವಣ್ಣಾಮಲೈನಲ್ಲಿ 5ಲಕ್ಷ ಜನಸಂಖ್ಯೆ ಇದ್ದು 86 ಲಕ್ಷಕ್ಕೂ ಮಿಗಿಲು ಭಕ್ತರ ದಂಡು ಹಬ್ಬದಲ್ಲಿ ಪಾಲ್ಗೊಳ್ಳುತ್ತದೆ. 2900 ಅಡಿ ಎತ್ತರದಲ್ಲಿರುವ ತಿರುವಣ್ಣಾಮಲೈ ಬೆಟ್ಟದ ತುದಿಯಲ್ಲಿ ಮಹಾದೀಪವನ್ನು ಬೆಳಗಿಸುತ್ತಾರೆ. ಮಹಾದೀಪವನ್ನು ಬೆಳಗಿಸಿದ ಹತ್ತು ದಿನಗಳವರೆಗೆ ಹಬ್ಬ ಹರಿದಿನಗಳು ನೆಡಯುತ್ತವೆ. ಲಕ್ಷಾಂತರ ಭಕ್ತರು ಸೇರಿದರೂ ಕೂಡ ಇಲ್ಲಿ ಯಾವುದೇ ಅಪರಾಧ ಪ್ರಕರಣಗಳು ನಡೆಯುವುದಿಲ್ಲ.

ಶಾಂತಿ ಮಾನವೀಯತೆಯ ನಗರ

ತಿರುವಣ್ಣಾಮಲೈ ಒಂದು ಚಿಕ್ಕ ಪಟ್ಟಣ. ಈ ನಗರ ಧಾರ್ಮಿಕ ಒಲವುಳ್ಳವರ ಹೊರತಾಗಿ ಬೇರೆಯವರ ಗಮನ ಸೆಳೆಯುವುದು ಕಡಿಮೆ. ಹಬ್ಬ ಹರಿದದಿನಗಳು ಆಚರಣೆಗಳು ಹೆಚ್ಚಿನ ಶ್ರದ್ದೆಯಿಂದ ಅಂಸಂಖ್ಯ ಜನಸ್ತೋಮದ ಮಧ್ಯೆಯೂ ಯಾವುದೇ ಅಹಿತಕರ ಘಟನೆ ಸಂಭವಿಸದೇ ನಡೆಯುತ್ತವೆ. ಮಹಿಳೆಯರು ಮಕ್ಕಳು ಮತ್ತು ವ್ರದ್ದರಿಗೂ ಇದು ಭದ್ರ ಸ್ಥಳ. ಕೆಲವೊಂದು ಚಿಕ್ಕಪುಟ್ಟ ಅಪಘಾತ ಮತ್ತು ಕಳ್ಳತನಗಳ ವರಿದಿಯಾದರೂ ಕೂಡ ದೇಶದ ಅಪರಾಧ ಸಂಖ್ಯೆಯನ್ನು ಗಮನಿಸಿದರೆ ಇದು ನಗಣ್ಯ.

ವ್ಯವಸ್ಥಿತವಾಗಿ ಬದುಕುವ ಜನ ತಮ್ಮ ಜೀವನ ಮತ್ತು ವ್ಯವಹಾರಗಳನ್ನು ಆದಷ್ಟು ಶಾಂತಿಯುತವಾಗಿ ಸಾಗಿಸುತ್ತಾರೆ. ಮುಖ್ಯ ವ್ಯಾಪಾರಗಳು ನೆಲೆನಿಂತಿರುವುದು ಜನದಟ್ಟಣೆಯ ರಸ್ತೆಯಾದ ಬೆಂಗಳೂರು ನಗರದ ಸಂಪರ್ಕ ರಸ್ತೆಯಲ್ಲಿ. ಇದೇ ರಸ್ತೆಯಲ್ಲಿ ಹಲವು ವಸತಿ ಸಮುಚ್ಚಯಗಳೂ ನಿರ್ಮಾಣಗೊಳ್ಳುತ್ತಿವೆ.

ತಲುಪುವ ಬಗೆ ಮತ್ತು ಹವಾಮಾನ

ತಿರುವಣ್ಣಾಮಲೈ ತನ್ನದ ಆದ ರೈಲು ನಿಲ್ದಾಣವನ್ನು ಹೊಂದಿದ್ದು, ನಗರದ ಮಧ್ಯ ಭಾಗದಲ್ಲಿ ಸ್ಥಿತಗೊಂಡಿದೆ. ವಿಮಾನಗಳ ಮೂಲಕ ಬರ ಬಯಸುವ ಪ್ರವಾಸಿಗರಿಗೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ಹತ್ತಿರವಾದ ವಾಯುನೆಲೆ. ಆದರೆ ರಸ್ತೆಯ ಮುಖಾಂತರ ಇಲ್ಲಿಗೆ ತೆರಳುವುದು ಅತ್ಯಂತ ಸುಲಭ ಹಾಗು ಸುಗಮವಾದ ಮಾರ್ಗ.

ಈ ಪ್ರದೇಶದಲ್ಲಿ ಬೇಸಿಗೆಯು ಶಾಖಮಯವಾಗಿದ್ದು, ಮಳಗಾಲ ಅಥವಾ ಚಳಿಗಾಲವು ಮಧ್ಯಮ ಪ್ರಮಾಣದಲ್ಲಿರುತ್ತದೆ.

ತಿರುವಣ್ಣಾಮಲೈ ಪ್ರಸಿದ್ಧವಾಗಿದೆ

ತಿರುವಣ್ಣಾಮಲೈ ಹವಾಮಾನ

ಉತ್ತಮ ಸಮಯ ತಿರುವಣ್ಣಾಮಲೈ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಿರುವಣ್ಣಾಮಲೈ

  • ರಸ್ತೆಯ ಮೂಲಕ
    ತಿರುವಣ್ಣಾಮಲೈಗೆ ಅಕ್ಕಪಕ್ಕದ ನಗರಗಳಿಂದ ಉತ್ತಮ ಬಸ್ ಸೌಕರ್ಯಗಳಿವೆ. ತಮಿಳುನಾಡಿನ ಬೇರೇ ಬೇರೇ ಭಾಗಗಳಿಂದ ರಾಜ್ಯ ಸಾರಿಗೆ ಬಸ್ಸುಗಳಿವೆ. ಹಬ್ಬ ಮತ್ತು ಆಚರಣೆಗಳ ಸಂದರ್ಭದಲ್ಲಿ ಬಸ್ಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಭಕ್ತರ ಸಂಖ್ಯೆಗೆ ತಕ್ಕಂತೆ ಬಸ್ಸುಗಳ ಸಂಖ್ಯೆಯಲ್ಲೂ ಹೆಚ್ಚಳ ಮಾಡಲಾಗುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ತಿರುವಣ್ಣಮಲೈ ರೈಲ್ವೇ ನಿಲ್ದಾಣ ಕೇವಲ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿದೆ. ತಿರುವಣ್ಣಮಲೈ ಮತ್ತು ಮಧುರೈ ರೈಲ್ವೇ ಸಂಪರ್ಕ ಉತ್ತಮವಾಗಿದೆ. ಕಾರಣ, ಮಧುರೈ ತಿರುಪತಿ ಮಾರ್ಗದಲ್ಲಿ ಇದು ಇರುವುದರಿಂದ ರೈಲು ಸಂಪರ್ಕ ಉತ್ತಮವಾಗಿದೆ. ನೀವು ಚೆನ್ನೈನಿಂದ ಬರುವವರಾದರೆ ಮಧುರೈನಲ್ಲಿ ರೈಲು ಹತ್ತಬೇಕು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಚೆನ್ನೈ ಅಂತರಾಷ್ಟ್ರೀಯ ವಿಮಾನನಿಲ್ದಾಣ ತಿರುವಣ್ಣಾಮಲೈಗೆ ಹತ್ತಿರದಲ್ಲಿರುವ ಏರ್ಪೋರ್ಟ್. ಚೆನ್ನೈ ವಿಮಾನನಿಲ್ದಾಣದಿಂದ ನಗರ 182ಕಿಮೀ ದೂರದಲ್ಲಿದೆ. ವಿಮಾನಿಲ್ದಾಣದಿಂದ ಖಾಸಗಿ ಟ್ಯಾಕ್ಸಿಗಳನ್ನು ಬಾಡಿಗೆ ಪಡೆಯಬಹುದು. ರಾಜ್ಯ ಸಾರಿಗೆ ಬಸ್ಸುಗಳು ಕೂಡ ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat