Search
  • Follow NativePlanet
Share
ಮುಖಪುಟ » ಸ್ಥಳಗಳು» ತಿರುವನಂತಪುರಂ

ತಿರುವನಂತಪುರಂ : ವಿಸ್ಮಯಗಳ ನಾಡು – ಕೇರಳ

28

“ಹಕ್ಕಿಗಳ ಇಂಚರ, ನೀರಿನ ಜುಳು ಜುಳು ನಾದ, ಚಾಮರ ಬೀಸುವ ಮರಗಿಡಗಳು, ಮಾನವೀಯತೆ ಮೆರೆಯುವ ಪ್ರಾಣಿ ಪಕ್ಷಿಗಳ ಸಂಕುಲ, ಸೂರ್ಯನ ಬೆಳಗಿನ ಸ್ವಾಗತ, ವರುಣನ ಕರುಣೆ ... ಇವೆಲ್ಲ ಶ್ರೀಮಂತಿಕೆಯಿದ್ದರೂ ನಾವೇಕೆ ದೇವರನ್ನು ಪ್ರಾರ್ಥಿಸುತ್ತೇವೆ?”

ಬದುಕುವುದಕ್ಕೆ ದುಡಿಯಲೇ ಬೇಕು. ದುಡಿದು ದುಡಿದು ದಣಿವಾಯಿತು ಎನ್ನುವ ಹಾಗೇ ಇಲ್ಲ. ದಿನಗಳು ಬದಲಾದಂತೆಲ್ಲ, ನಾವೂ ಬದಲಾವಣೆಗಳಿಗೆ ಹೊಂದಿ ಕೊಳ್ಳುತ್ತಾ ಇನ್ನೂ ಹೆಚ್ಚೆಚ್ಚು ಶ್ರಮಪಟ್ಟು ದುಡಿಯುತ್ತಾ, ಮನೆಯವರನ್ನು , ಮಕ್ಕಳನ್ನು ಸಾಕ ಬೇಕು. ಅವರ ಅಗತ್ಯಗಳನ್ನು ನೋಡಿಕೊಳ್ಳಬೇಕು. ಅದೊಂದೆ ಪ್ರತೀ ದಿನ ಎಲ್ಲರ ಮನಸ್ಸಿನ ಯೋಚನೆ. ಅದೇಷ್ಟೋ ಬಾರಿ ನಗರ ಗಳ ಗೌಜು ಗದ್ದಲಗಳ ನಡುವೆ ಈ ಯೋಚನೆಗಳಿಗೂ ಅವಕಾಶವಿಲ್ಲದಾಗುತ್ತದೆ. ಒಟ್ಟಿನಲ್ಲಿ ಮನಶ್ಯಾಂತಿಯನ್ನು ಹುಡುಕಬೇಕಷ್ಟೇ. ಆದ್ರೆ ಈ ಮನಸ್ಸಿನ ಒತ್ತಡಗಳ ನಡುವೆ ಎಂದಾದರೂ ನಿಮಗೆ ತುಸು ಖುಷಿ ಎನ್ನಿಸುವ ಪ್ರದೇಶಗಳಿಗೆ , ಬೇರೆ ಬೇರೆ ಸ್ಥಳಗಳಿಗೇ ಭೇಟಿ ನೀಡಿದ್ದಿರಾ? ಇಲ್ಲವೆನ್ನುವ ಹಾಗಿದ್ದರೆ ನಿಮಗೆ ನಿಮ್ಮ ಮುಂದಿನ ರಜೆಯನ್ನು ಅತ್ಯಂತ ಆಸಕ್ತಿದಾಯಕ ಹಾಗೂ ಉತ್ತಮ ಎನಿಸುವಂತಹ ಸ್ಥಳವೊಂದಕ್ಕೆ ಹೋಗಲು ಸಂಪೂರ್ಣ ಮಾಹಿತಿಯೊಂದನ್ನು ನಿಮಗಿಲ್ಲಿ ನೀಡಲಾಗಿದೆ.

ಹಲವಾರು ಪ್ರದೇಶಗಳು  ಯಾರಿಗೂ ಬಿಡಿಸಲಾಗದ ಗುಟ್ಟಿನಂತೆ ತನ್ನಲ್ಲಿ ಹಲವಾರು ಸತ್ಯಗಳನ್ನು ಬಚ್ಚಿಟ್ಟು ಕೊಂಡಿವೆ. ಅದನ್ನು ಬಿಡಿಸುವುದನ್ನು ಬಿಟ್ಟು ಆ ಸತ್ಯಕ್ಕೆ ಕಾರಣವಾದ ಪ್ರಕೃತಿ ಮಾತೆಯ ಮಡಿಲಲ್ಲಿನ ಸೊಬಗನ್ನು ಸವಿಯುವುದು ಒಳಿತು. ಇಂತಹ ಸಮೃದ್ದ ಪ್ರಕೃತಿ ತಾಣವೇ ನೀವು ಹಾಗೂ ನಿಮ್ಮ ಮನೆಯವರು ಮಕ್ಕಳು ನೋಡಲೇ ಬೇಕಾದ ನಮ್ಮ ದೇಶದಲ್ಲಿಯೇ ಇರುವ ಕರಾವಳಿ ತೀರಗಳ ಸುಂದರ ನಾಡು ಕೇರಳ. ಅತ್ಯಂತ ಹಿಂದಿನಿಂದಲೂ ಅಂದರೆ ಪುರಾಣಗಳ ಕಾಲದಿಂದ ಮಧ್ಯಕಾಲೀನ ಯುಗದ ವರೆಗೂ ಅನೇಕಾನೇಕ ವಿದೇಶಿಯರು ವ್ಯಾಪಾರ , ಸಂಶೋಧನೆ ಮೊದಲಾದ ಕಾರಣಕ್ಕೆ ಭಾದರದಲ್ಲಿನ ಹೆಮ್ಮೆಯ ರಾಜ್ಯ ಕೇರಳಕ್ಕೆ ಬರುತ್ತಲೇ ಇದ್ದರೆಂಬುದಕ್ಕೆ ಇಂದಿನ ಕೇರಳದಲ್ಲಿರುವ ದೇವಾಲಯಗಳು ಪಾರಂಪರಿಕ ಕಟ್ಟಡಗಳು ಹಾಗೂ ವಸ್ತು ಸಂಗ್ರಹಾಲಯಗಳು ಜೀವಂತ ಸಾಕ್ಷಿಗಳಾಗಿವೆ. ಇಂತಹ ಅತ್ಯದ್ಭತಗಳನ್ನು ತನ್ನಲ್ಲಿಯೇ ಅಡಗಿಸಿಕೊಂಡಿರುವ ಕೇರಳ ರಾಜ್ಯ ಹಾಗು ಅದರ ಶ್ರೀಮಂತ ರಾಜಧಾನಿ ತಿರುವನಂತಪುರಂ ಗೆ ಪ್ರವಾಸಕ್ಕಾಗಿ ಬರುವವದ ಸಂಖ್ಯೆ ವರ್ಷ ದಿಂದ ವರ್ಷ ಕ್ಕೆ ಹೆಚ್ಚುತ್ತಲೇ ಸಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶಿಯರೂ ಕೂಡಾ ಸಂಶೋಧನೆ, ಪ್ರವಾಸ ಹೀಗೆ ಇನ್ನಿತರ ಕಾರಣಗಳಿಗೆ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.  

ಕೇರಳದ ರಾಜ್ಯದ ರಾಜಧಾನಿ ತಿರುವನಂತಪುರಂ ದೇವತೆಗಳ ನಾಡು ಎಂದೇ ಕರೆಯಲ್ಪಡುತ್ತದೆ. ತಿರುವನಂತಪುರಂ ನ್ನು ಕೆಲವೊಮ್ಮೆ ತ್ರಿವೇಂದ್ರಂ ಎಂದೂ ಕರೆಯಲಾಗುತ್ತದೆ. ಇದರ ಮೂಲ ಹೆಸರನ್ನು ಇಟ್ಟಿದ್ದು ಮೊದಲಿಗೆ ಬ್ರಿಟಿಷರು. 1991 ರಲ್ಲಿ ಕೇರಳ ಸರ್ಕಾರ ಅಧಿಕೃತವಾಗಿ ಮರುನಾಮಕರಣ ಮಾಡಲು ನಿರ್ಧರಿಸಿತು. ಅಲ್ಲಿಯವರೆಗೂ ಹಿಂದಿನ ಹೆಸರಿನಲ್ಲಿಯೇ ಪಟ್ಟಣವನ್ನು ಕರೆಯಲಾಗುತ್ತಿತ್ತು. ಇದು ಭಾರತದ ದಕ್ಷಿಣದ ತುದಿಯ  ಪಶ್ಚಿಮ ಕರಾವಳಿಯಲ್ಲಿದೆ. ಇತ್ತೀಚಿಗೆ ರಾಷ್ಟ್ರೀಯ  ಬೌಗೋಳಿಕ / ನ್ಯಾಶನಲ್ ಜಿಯೋಗ್ರಫಿ ಟ್ರಾವೆಲರ್ ಈ ಸ್ಥಳವನ್ನು ನೋಡಲೇಬೇಕಾದ ಸ್ಥಳಗಳಲ್ಲಿ ಒಂದು ಎಂದು ಪಟ್ಟಿಮಾಡಿದ್ದಾರೆ. ಮಹಾತ್ಮಾ ಗಾಂಧಿ ಈ ಸ್ಥಳವನ್ನು ’ಭಾರತದ ಸದಾ ಹಸಿರಿನ ನಗರ’ ಎಂದು ಶೀರ್ಷಿಕೆ ಬರೆದಿದ್ದಾರೆ. ತ್ರಿವೇಂದ್ರಂ ನಗರವು ’ಭಾರತದ 10 ಹಚ್ಚ ಹಸಿರಿನ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾದೆ.

ಪರಶುರಾಮನಿಂದ ಹಿಡಿದು ಫಾ ಹಿಯಾನ್, ಮಾರ್ಕೊ ಪೋಲೊ, ಕೊಲಂಬಸ್, ವಾಸ್ಕೋ -ಡ- ಗಾಮಾ  ಮತ್ತು ಇನ್ನೂ ಅನೇಕ ಹೆಚ್ಚಿನ ಮಧ್ಯಕಾಲೀನ ಪರಿಶೋಧಕರು ಕೇರಳದ ತಿರುವನಂತಪುರಂ ಗೆ ಬಂದು ಹೋದ ದಾಖಲೆಗಳು ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ ಆದ್ದರಿಂದಲೇ ತಿರುವನಂತಪುರಂ ಇನ್ನಷ್ಟು ಪ್ರಸಿದ್ಧಿಯನ್ನು ಗಳಿಸಿದೆ.

ತಿರುವನಂತಪುರಂ ಅನೇಕ ಕಛೇರಿಗಳು, ಸಂಸ್ಥೆಗಳು, ಶಾಲೆ ಮತ್ತು ಕಾಲೇಜುಗಳು ಹಾಗೂ ಇನ್ನುಳಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ನೆಲೆಯಾಗಿದೆ. ಅಷ್ಟೇ ಅಲ್ಲದೇ ಇಲ್ಲಿ ಅಭಿವೃದ್ಧಿ ಅಧ್ಯಯನ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ (IIST), ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ (VSSC), ಮಾಹಿತಿ  ತಂತ್ರಜ್ಞಾನ  ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಸೆಂಟರ್ ಆಫ್ ಇಂಡಿಯನ್ ಇನ್ಸ್ಟಿಟ್ಯೂಟ್, ಉಚಿತ ಮತ್ತು ಮುಕ್ತ ಮೂಲ ತಂತ್ರಾಂಶ ಅಂತಾರಾಷ್ಟ್ರೀಯ ಕೇಂದ್ರ (ICFOSS), ಭಾರತೀಯ ನೆಲೆಯಾಗಿರುವ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನೆ (IISER) ಸಂಸ್ಥೆ, ಪ್ರಾದೇಶಿಕ ರಿಸರ್ಚ್ ಲ್ಯಾಬೊರೇಟರಿ, ಜೈವಿಕ ತಂತ್ರಜ್ಞಾನ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ, ರಾಜೀವ್ ಗಾಂಧಿ ಸೆಂಟರ್ ಫಾರ್ ಶ್ರೀ ಚೈತ್ರ ತಿರುಮಲ ಇನ್ಸ್ಟಿಟ್ಯೂಟ್, ಭೂ ವಿಜ್ಞಾನ ಅಧ್ಯಯನ ಮತ್ತು ಟೆಕ್ನೋಪಾರ್ಕ್ ಕೇಂದ್ರಗಳನ್ನು ಕೂಡಾ ಕಾಣಬಹುದು.

ಪ್ರಸಿದ್ಧವಾದ  ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ನವರಾತ್ರಿ ಮಂಟಪದಲ್ಲಿ, ಸಂಗೀತ ಹಬ್ಬವು ಪ್ರತಿ ವರ್ಷ ಇಲ್ಲಿ ಆಯೋಜಿಸಲಾಗುತ್ತದೆ. ಈ ಹಬ್ಬವನ್ನು ವಿದ್ಯಾಧಿದೇವತೆ ಸರಸ್ವತಿಗೆ ಅರ್ಪಣೆ ಮಾಡಲಾಗುತ್ತದೆ.  ಪಾರಂಪರಿಕ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಂತಿರುವ  ’ಕುಥಿರ ಮಲ್ಲಿಕಾ’ ಕ್ಕೆ ಭೇಟಿ ಮಾಡಲೇ ಬೇಕು. ತಿರುವನಂತಪುರಂ ನಲ್ಲಿರುವ ಮಹಾತ್ಮಾ ಗಾಂಧಿ ರಸ್ತೆಯ ಉದ್ದಕ್ಕೂ ಬದಿಗಳಲ್ಲಿ ಕಟ್ಟಲಾಗಿರುವ ಮನೆಗಳು, ಕಟ್ಟಡಗಳು, ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಂಡಿವೆ. ಪಾಲಯಂ ಮುಸ್ಲಿಂ, ಹಳೆಯ ಗಣಪತಿ ದೇವಸ್ಥಾನ, ಗೊಥಿಕ್ ಶೈಲಿಯ ಕ್ರಿಶ್ಚಿಯನ್ ಕ್ಯಾಥಡ್ರಲ್ ಮಹಲ್ ಗಳು ಅಕ್ಕ ಪಕ್ಕದಲ್ಲಿಯೇ ನಿರ್ಮಾಣವಾಗಿವೆ.

ಇಲ್ಲಿನ ವಾಸ್ತುಕಲೆ ನೋಡುಗರನ್ನು ಬೆರಗಾಗುವಂತೆ ಮಾಡುತ್ತವೆ. ನೇಪಿಯರ್ ಮ್ಯುಸಿಯಂ ಹಾಗೂ ಚಿತ್ರ ಕಲಾ ಗ್ಯಾಲರಿಯಲ್ಲಿನ ವೈಭವವನ್ನು ನೋಡಿದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಅಲ್ಲಿ ಸಂಗ್ತಹವಾದ ವಸ್ತುಗಳು ಅಚ್ಚರಿಯನ್ನು ಮೂಡಿಸುತ್ತವೆ. ಇಲ್ಲಿರುವ ಕರಮಣಾ ನದಿ ಹಾಗೂ ಅಂಕುಲಂ ಸರೋವರ ದ ತಡದ ಚಿತ್ರ ಸದೃಶ ದೃಶ್ಯಗಳು ಮನೆಸೆಳೆಯುತ್ತವೆ. ತಿರುವನಂತಪುರಂ ಗೆ ಒಮ್ಮೆ ಭೇಟಿ ನೀಡಿದರೆ ಪ್ರಾಣಿ ಸಂಗ್ರಹಾಲಯ ಮತ್ತು ನೆಯ್ಯರ್ ಅಣೆಕಟ್ಟು ಜೊತೆಗೆ ವನ್ಯಮೃಗ ತಾಣಕ್ಕೆ ಹೋಗಲು ಮರೆಯಬೇಡಿ. ಈ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ನೋಡುತ್ತಿದ್ದರೆ ನಗರ ಪ್ರದೇಶದ ಗದ್ದಲಗಳು ಮರೆತು ಪ್ರಶಾಂತತೆಯ ಅನುಭವವನ್ನು ಪಡೆಯುತ್ತೀರಿ. ಈ ಸ್ಥಳವು ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಎಲ್ಲರಿಗೂ ಇಷ್ಟವಾಗುವಂತಹ ಪ್ರದೇಶ ವಾಗಿದೆ. ಅಲ್ಲದೇ ಇಲ್ಲಿರುವ  ಹ್ಯಾಪಿ ಲ್ಯಾಂಡ್ ವಾಟರ್ ಥೀಮ್ ಪಾರ್ಕ್ ಮತ್ತೊಂದು ಆಕರ್ಷಣೆಯ ಸ್ಥಳವಾಗಿದೆ.

ಕಿಲ್ಲಿ ಮತ್ತು ಕರಮಣಾ ನದಿ ದಡದಲ್ಲಿ ತಿರುವನಂತಪುರಂ ಇದೆ. ಇದರ ಪೂರ್ವದಲ್ಲಿ ತಮಿಳುನಾಡು ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ ಸುತ್ತುವರೆದಿದೆ. ಇದನ್ನು ಸುತ್ತುವರೆದಿರುವ ಪಶ್ಚಿಮ ಘಟ್ಟಗಳ ಹಸಿರಿನ  ವಿಹಂಗಮ ನೋಟ ಹಾಗೂ ಸಮೃದ್ಧ ವನರಾಶಿಗಳಿಂದಾಗಿ  ತಿರುವನಂತಪುರಂ  ಪರಿಪೂರ್ಣ ಸೊಬಗನ್ನು ಹೊಂದಿದೆ ಎನ್ನಬಹುದು.

ಗೋಲ್ಡನ್ ಬೀಚ್(ಬಂಗಾರದ ಕಡಲ ತೀರ), ಪಾಮ್ ಮರಗಳು ಈ ಬೀಚ್ ನ ಸುತ್ತಲೂ ಆವರಿಸಿವೆ. ಈ ಬೀಚ್ ನಲ್ಲಿರುವ ಸ್ಪಟಿಕದಂತೆ ಸ್ವಚ್ಚವಾದ ನೀರು,  ಶ್ರೀಮಂತ ಪರಂಪರೆ,  ಐತಿಹಾಸಿಕ ಸ್ಮಾರಕಗಳು ಮತ್ತು ಪುಣ್ಯಕ್ಷೇತ್ರಗಳು  ದೂರ ಹಾಗೂ ಸಮೀಪದ ಸ್ಥಳಗಳಲ್ಲಿಂದಲೂ ಬರುವ ಸಾವಿರಾರು ಸಂಖ್ಯೆಗಳ ಪ್ರವಾಸಿಗರನ್ನು ನಿತ್ಯವೂ ಸೆಳೆಯುತ್ತವೆ. ಅಗಸ್ತ್ರಾಕೂಡಂ ತಿರುವನಂತಪುರಂ ಜಿಲ್ಲೆಯಯಲ್ಲಿರುವ ಅತ್ಯಂತ ಎತ್ತರದ ಸ್ಥಳವಾಗಿದ್ದು ಸಮುದ್ರ ಮಟ್ಟದಿಂದ 1869 ಮೀ  ಎತ್ತರದಲ್ಲಿದೆ. ಈ ಎತ್ತರ ಪ್ರದೇಶದಲ್ಲಿರುವ . ಪೊನ್ಮುಡಿ ಹಾಗೂ ಮುಕ್ಕುಲ ಮಾಲಾ  ರೆಸಾಲ್ಟ್ ಗಳು ಈ ದಕ್ಷಿಣ ನಗರದ ಪ್ರದೇಶಕ್ಕೆ  ಭೇಟಿ ನೀಡಿದ ಪ್ರವಾಸಿಗರಿಗೆ ಅತ್ಯಂತ  ಮೌಲ್ಯದ ಜಾಗ ವೆನಿಸಿದೆ.  ತಿರುವನಂತಪುರಂ ಪೂರ್ವ ಭಾಗದಲ್ಲಿನ  ಪರಾಯಿ ಕೋವಿಲ್ ನಲ್ಲಿ ಮನೋಹರವಾದ  ಸೂರ್ಯೋದಯ ವೀಕ್ಷಿಸಲು ಅತ್ಯಂತ ಅವಶ್ಯಕ.

ಮಳೆಗಾಲದ ಸಂದರ್ಭದಲ್ಲಿ ಓಣಂ ಆಚರಣೆಯಿಂದ ನಗರವೇ ಅಲಂಕರಿಸಲ್ಪಡುತ್ತದೆ. ಈ ಸಮಯದಲ್ಲಿ ಸುಗ್ಗಿ ಹಬ್ಬ, ಹಾವು ದೋಣಿ ವಿಹಾರ ಸ್ಪರ್ಧೆ ಹಾಗೂ ಆನೆಗಳ ಭವ್ಯವಾದ ಮೆರೆವಣಿಗೆಯ ದೃಶ್ಯವನ್ನು ನೋಡುವುದೇ ಒಂದು ಆನಂದ. ಈ ಸಮಯದಲ್ಲಿ ಪ್ರವಾಸಕ್ಕಾಗಿ ನೀವು ಕುಟುಂಬ ಸಮೇತರಾಗಿ ಆಗಮಿಸಿದರೆ ಇನ್ನೆಂದೂ ಮರೆಯದ ಅನುಭವವನ್ನು ಹೊತ್ತೊಯ್ಯುತ್ತೀರಿ. ಪ್ರಮುಖವಾಗಿ ಮೋಹಿನಿಯಾಟಂ, ಕಥಕ್ಕಳಿ, ಕೂಡಿಯಾಟಂ, ಹೀಗೆ ಇನ್ನೂ ಹಲವಾರು ಕೇರಳದ ಸಾಂಪ್ರದಾಯಿಕ ನೃತ್ಯ, ಹಾಡು ಕುಣಿತಗಳ ಅಧ್ಬುತ ದೃಶ್ಯಗಳನ್ನು ಈ ಸಮಯದಲ್ಲಲ್ಲದೇ ಬೇರೆ ಸಮಯದಲ್ಲಿ ಕಾಣಲು ಸಾಧ್ಯವಿಲ್ಲ.ಕೇರಳದ ಇತರ ಭಾಗಗಳಲ್ಲಿ  ಇರುವಂತೆ ತಿರುವನಂತಪುರಂ ನಲ್ಲಿ ವರ್ಷವಿಡಿ ಒಂದೇ ರೀತಿಯಾದ ಆಹ್ಲಾದಕರ ಹವಾಗುಣವನ್ನು ಹೊಂದಿರುತ್ತದೆ. ಋತುಮಾನಗಳು ಬದಲಾದಂತೆ ಇಲ್ಲಿನ ಹವಾಮಾನಗಳಲ್ಲಿ ಅಂತಹ ಬದಲಾವಣೆಗಳೇನು ಕಂಡುಬರುವುದಿಲ್ಲ. ಇಲ್ಲಿ ವಿಮಾನಯಾಣ, ರೈಲು ನಿಲ್ದಾಣ ರಸ್ತೆ ಸಾರಿಗೆಯ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಿಲ್ಲ. ಅದರಿಂದ ಆಶ್ಚರ್ಯಕರ ಭೂಮಿ ಎನಿಸಿಕೊಂಡಿರುವ ತಿರುವನಂತಪುರಂ ಗೆ  ಬಂದು ಹೋಗುವುದು ಸುಲಭ.  ಮುಂದಿನ ರಜೆಯನ್ನು ಇಲ್ಲಿಯೇ ಕಳೆಯುವ ಯೋಚನೆಯನ್ನು ಮಾಡಿರಿರಲ್ಲವೆ?

ತಿರುವನಂತಪುರಂ ಪ್ರಸಿದ್ಧವಾಗಿದೆ

ತಿರುವನಂತಪುರಂ ಹವಾಮಾನ

ಉತ್ತಮ ಸಮಯ ತಿರುವನಂತಪುರಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಿರುವನಂತಪುರಂ

  • ರಸ್ತೆಯ ಮೂಲಕ
    ತಿರುವನಂತಪುರಂ ಗೆ ಹೋಗಲು ನಾಲ್ಕೂ ದಿಕ್ಕುಗಳಿಂದಲೂ ರಸ್ತೆ ಸಾರುಗೆ ವ್ಯವಸ್ಥೆ ನಿಮಗೆ ಲಭ್ಯವಿದೆ. ಸರ್ಕಾರಿ ಬಸ್ಸುಗಳು ಪ್ರವಾಸಿಗರ ಅನುಕೂಲಕ್ಕಾಗಿ ಲಭ್ಯವಿದ್ದು ಕೇರಳದ ಎಲ್ಲಾ ಪ್ರವಾಸಿ ತಾಣಗಳಿಗೂ ಪ್ರವಾಸಿಗರು ಬಸ್ಸಿನಲ್ಲಿಯೇ ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೆ ಕೇರಳದ ನೆರೆಹೊರೆಯ ರಾಜ್ಯಗಳಿಗೂ ಇಲ್ಲಿಂದ ನೇರವಾದ ಬಸ್ ಸೌಲಭ್ಯಗಳಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ತ್ರಿವೇಂದ್ರಂ / ತಿರುವನಂತಪುರಂ ರೈಲ್ವೆ ನಿಲ್ದಾಣವು ಪ್ರಮುಖ ಕೇಂದ್ರವಾಗಿದ್ದು ತಿರುವನಂತಪುರಂ ಗೆ ಸುಲಭವಾಗಿ ಪ್ರವಾಸಕ್ಕಾಗಿ ರೈಲುಗಳ ಮೂಲಕವೂ ಪಯಣಿಸಬಹುದು. ಈ ರೈಲ್ವೆ ನಿಲ್ದಾಣದಿಂದ ಸಾಕಷ್ಟು ರೈಲುಗಳು ಭಾರತದ ಮುಖ್ಯ ನಗರಗಳಿಗೆ ನೇರವಾಗಿ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದ್ದು ತಿರುವನಂತಪುರಂ ಗೆ ಬರುವುದು ತುಂಬಾ ಸುಲಭ. ಅಲ್ಲದೇ ಹಲವಾರು ನಗರಗಳಿಗೆ ತ್ರಿವೇಂದ್ರಂ ರೈಲ್ವೆ ನಿಲ್ದಾಣದಿಂದಲೇ ರೈಲುಗಳು ಹೊರಡುತ್ತಿದ್ದು ಪ್ರವಾಸಿಗರು ತಮ್ಮ ತಮ್ಮ ನಗರಗಳಿಗೆ ಹಿಂತಿರುಗುವುದು ಅತ್ಯಂತ ಸುಲಭ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತಿರುವನಂತಪುರಂ ನಗರವು ತ್ರಿವೇಂದ್ರಂ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಂತ ಸಮೀಪದಲ್ಲಿದೆ. ತಿರುವನಂತಪುರಂ ವಿಮಾನ ನಿಲ್ದಾಣದಿಂದ ತಿರುವನಂತಪುರಂ ಪಟ್ಟಣಕ್ಕೆ ಅತ್ಯಂತ ಹತ್ತಿರದಲ್ಲಿಯೇ ಅಂದರೆ 10 ಕಿಲೋ ಮೀಟರ್ ಅಂತರದಲ್ಲಿದೆ. ಈ ವಿಮಾನ ನಿಲ್ದಾಣದಿಂದ ಭಾರತದ ಎಲ್ಲಾ ಇತರ ಪ್ರಮುಖ ನಗರಗಳಿಗೆ ಅಷ್ಟೇ ಅಲ್ಲದೆ ವಿದೇಶಗಳಿಗೂ ಸಂಪರ್ಕ ಕಲ್ಪಿಸಲಾಗಿದೆ. ಮುಂಬೈ, ಕೋಲ್ಕತ್ತಾ ಮುಂತಾದ ಪ್ರಮುಖ ನಗರಗಳಿಗೆ ನೇರವಾದ ವಿಮಾನ ಸೌಲಭ್ಯಗಳೂ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed