Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವನಂತಪುರಂ » ಹವಾಮಾನ

ತಿರುವನಂತಪುರಂ ಹವಾಮಾನ

The best time to visit Trivandrum is from October to February. During this time the weather remains cool and calm making it ideal for sightseeing and other activities.

ಬೇಸಿಗೆಗಾಲ

ಬೇಸಿಗೆಯಲ್ಲಿ ತಿರುವನಂತಪುರಂ ಪಟ್ಟಣ ತುಂಬಾ ಉಷ್ಣತೆ ಹಾಗೂ ಆರ್ದ್ರತೆಯಿಂದ ಕೂಡಿರುತ್ತದೆ. ಇಂತಹ ಬೇಸಿಗೆ ಕಾಲದಲ್ಲಿ ತಿರುವನಂತಪುರಂ ಗೆ ಭೇಟಿ ನೀಡುವುದು ಅಷ್ಟು ಸೂಕ್ತವಲ್ಲ. ಬೇಸಿಗೆಯು ಇಲ್ಲಿ ಮಾರ್ಚ್ ನಿಂದ  ಮೇ ತಿಂಗಳಿನ ವರೆಗೆ ಮುಂದುವರೆಯುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶ 37 ಡಿಗ್ರಿ. ಸೆ. ನಷ್ಟಿರುತ್ತದೆ.  ಆದ್ದರಿಂದ ಈ ಸಮಯದಲ್ಲಿ ತಿರುವನಂತಪುರಂ ಗೆ ಭೇಟಿ ನೀಡುವುದು ಅಷ್ಟು ಸೂಕ್ತವಲ್ಲ.

ಮಳೆಗಾಲ

ಮಳೆಗಾಲವು ಪ್ರಾರಂಭವಾಗುವುದು ಜೂನ್ ತಿಂಗಳಿನಲ್ಲಿ. ಅದು ಸೆಪ್ಟಂಬರ್ ವರೆಗೆ ಮುಂದುವರೆಯುತ್ತದೆ. ಮಳೆಗಾಲದ ಸಂದರ್ಭದಲ್ಲಿ ನಗರವು ಅತಿಯಾದ ಮಳೆಯ ಅನುಭವವನ್ನು ಪಡೆಯುತ್ತದೆ. ಉಷ್ಣಾಂಶವು ಶಾಂತವಾಗಿರುತ್ತಿದ್ದು, ಹೆಚ್ಚು ಉಷ್ಣವೂ ಅಲ್ಲದ ಹೆಚ್ಚು ಕೂಲ್ ಅಲ್ಲದ ಉಷ್ಣಾಂಶವನ್ನು ಕಾಣಬಹುದು. ಈ ಸಮಯದಲ್ಲಿ ನಗರದ ಸೌಂದರ್ಯವನ್ನು ಸವಿಯಬಹುದು. ವಿಶೇಷವಾಗಿ ಈ ಸಮಯದಲ್ಲಿಯೇ ಓಣಂ ನ್ನು ಕೂಡಾ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪ್ರವಾಸಿಗರ ದಂಡೇ ತಿರುವನಂತಪುರಂ ಗೆ ಬರಲು ಮುಗಿ ಬೀಳುತ್ತಾರೆ.

ಚಳಿಗಾಲ

ಚಳಿಗಾಲವು ಆರಂಭವಾಗುವುದು ನವೆಂಬರ್ ತಿಂಗಳಿನಲ್ಲಿ ಹಾಗೂ ಫೆಬ್ರವರಿ ವರೆಗೆ ಮುಂದುವರಿಯುತ್ತದೆ. ಭಾರತದ ಇತರ ರಾಜ್ಯಗಳಲ್ಲಿರುವಂತೆಯೇ ಇಲ್ಲಿನ ಉಷ್ಣಾಂಶವು ಪ್ರಶಾಂತ ಹಾಗೂ ಹಿತಕರವಾಗಿರುತ್ತದೆ. ಉಷ್ಣಾಂಶದ ಮಟ್ಟ ಚಳಿಗಾಲದಲ್ಲಿ  30 ಡಿಗ್ರಿ ಸೆ. ದಾಟುವುದಿಲ್ಲ. ಈ ಸಮಯವನ್ನು ತ್ರಿವೇಂದ್ರಂ ಗೆ ಭೇಟಿ ನೀಡಲು ಉತ್ತಮವಾದ ಸಮಯ ಎನ್ನಬಹುದು.