Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನಲ್ಲಾರ್ » ಹವಾಮಾನ

ತಿರುನಲ್ಲಾರ್ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ಅವಧಿಯು ತಿರುನಲ್ಲಾರಿಗೆ ಭೇಟಿ ಕೊಡಲು ಹೇಳಿಮಾಡಿಸಿದ ಸಮಯವಾಗಿದೆ. ಈ ಕಾಲದಲ್ಲಿ ಇಲ್ಲಿ ಹಿತಮಿತವಾದ ವಾತಾವರಣವಿರುತ್ತದೆ. ಅಲ್ಲದೆ ಉಷ್ಣಾಂಶವು ಸಹ 20 ರಿಂದ 30 ಡಿಗ್ರಿ ಸೆಲ್ಶಿಯಸ್ ಇರುವುದರಿಂದ ಪ್ರವಾಸಿಗರು ತಿರುನಲ್ಲಾರಿಗೆ ಈ ಅವಧಿಯಲ್ಲಿ ಭೇಟಿ ಕೊಡುವುದು ಉತ್ತಮ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇವರೆಗೆ): ತಿರುನಲ್ಲಾರ್ ಒಂದು ರೀತಿ ತಣ್ಣಗಿನ ಗ್ರಾಮವಾಗಿದೆ. ಇಲ್ಲಿನ ಉಷ್ಣಾಂಶವು 28 ಡಿಗ್ರಿಯಿಂದ 44 ಡಿಗ್ರಿಯವರೆಗೆ ಇರುತ್ತದೆ. ಅಲ್ಲದೆ ಇಲ್ಲಿ ಸಂಜೆಯ ಸಮಯದಲ್ಲಿ ಇಬ್ಬನಿ ಸಹ ಬೀಳುವುದರಿಂದ ಅತ್ಯಂತ ಆಹ್ಲಾದಕರವಾದ ಹವಾಮಾನವನ್ನು ನಾವು ಇಲ್ಲಿ ಕಾಣಬಹುದು. ಹಾಗಾಗಿ ಈ ಋತುವಿನಲ್ಲಿ ಈ ಪಟ್ಟಣವು ಅತ್ಯಂತ ಅಪ್ಯಾಯಮಾನಕಾರವಾಗಿರುತ್ತದೆ.

ಮಳೆಗಾಲ

(ಜೂನ್‍ನಿಂದ ಸೆಪ್ಟೆಂಬರ್): ತಿರುನಲ್ಲಾರ್ ಮಳೆಗಾಲದ ಸಮಯದಲ್ಲಿ ಅತ್ಯಂತ ಆಹ್ಲಾದಕರವಾಗಿರುತ್ತದೆ. ಇಲ್ಲಿ ಸುಮಾರಾಗಿ ಉತ್ತಮ ಮಳೆಯೆ ಬೀಳುತ್ತದೆ. ಈ ಕಾಲವನ್ನು ಇಲ್ಲಿನ ಜನರು ಅತ್ಯಂತ ಸಂತಸದಿಂದ ಕಳೆಯುತ್ತಾರೆ. ಈ ಸಮಯವು ಇಲ್ಲಿನ ಜನರಿಗಷ್ಟೇ ಅಲ್ಲದೆ ಪ್ರವಾಸಿಗರಿಗೂ ಸಹ ಆಪ್ಯಾಯಮಾನಕರವಾಗಿರುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಚಳಿಗಾಲದ ಸಮಯದಲ್ಲಿ ತಿರುನಲ್ಲಾರಿನಲ್ಲಿ ಅತ್ಯಂತ ಆಹ್ಲಾದಕರವಾದ ಹವಾಮಾನವಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 20 ಡಿಗ್ರಿಯಿಂದ 30 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಇಲ್ಲಿ ಬೀಳುವ ಇಬ್ಬನಿಯು ಅಷ್ಟೇನು ಚಳಿಯಿಂದ ಕೂಡಿರುವುದಿಲ್ಲ. ಹಾಗಾಗಿ ಈ ಸಮಯವು ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸಮಯವಾಗಿದೆ.