Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಣಿ » ಆಕರ್ಷಣೆಗಳು
  • 01ಮೇಘಮಲೈ ಗಿರಿಪ್ರಾಂತ್ಯ

    ಮೇಘಮಲೈ ಗಿರಿಶ್ರೇಣಿಯು ತೇಣಿಯಿಂದ 70 ಕಿಮೀ ದೂದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿದೆ. ಇದು ಸಮುದ್ರ ಮಟ್ಟದಿಂದ 500 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿ ಪ್ರಾಕೃತಿಕ ಸಂಪತ್ತು ಮತ್ತು ವನ್ಯಜೀವಿಗಳು ಹೇರಳವಾಗಿವೆ. ಇಲ್ಲಿ ಸುಮಾರು 100 ಬಗೆಯ ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಇದು ಪಕ್ಷಿವೀಕ್ಷಕರಿಗೆ ಪ್ರಿಯವಾದ ತಾಣ. ಇಲ್ಲಿನ...

    + ಹೆಚ್ಚಿಗೆ ಓದಿ
  • 02ಸುರಳಿ ಜಲಪಾತ

    ಸುರಳಿ ಜಲಪಾತವು 18 ನೇ ಶತಮಾನದಲ್ಲಿ ಕೊರೆಯಲಾದ 18 ಗವಿಗಳಿಗೆ ಪ್ರಸಿದ್ಧಿಯಾಗಿದೆ. ಇದು ಭಾರತದ ಶಿಲಾ ವಾಸ್ತು ಕೌಶಲ್ಯಕ್ಕೆ ಉದಾಹರಣೆಯಾಗಿದೆ. ತೇಣಿಯಿಂದ 56 ಕಿಮೀ ದೂರದಲ್ಲಿ ಈ ಜಲಪಾತವಿದೆ. ಈ ಜಲಪಾತವು ಎರಡು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಮೊದಲಿಗೆ 150 ಅಡಿ ಎತ್ತರದಿಂದ ಬೀಳುವ ಜಲಪಾತವು ಅಲ್ಲೊಂದು ಹಳ್ಳದಲ್ಲಿ...

    + ಹೆಚ್ಚಿಗೆ ಓದಿ
  • 03ಕೈಲಾಸನಾಥರ್ ಗುಹಾಂತರ ದೇವಾಲಯ

    ಕೈಲಾಸನಾಥರ್ ಗುಹಾಂತರ ದೇವಾಲಯ

    ಕೈಲಾಸನಾಥರ್ ಗುಹಾಂತರ ದೇವಾಲಯವು ಸುರುಳಿ ಜಲಪಾತದ ಬಳಿಯಿದೆ. ಈ ಗುಹಾಂತರ ದೇವಾಲಯವು ಸಮುದ್ರ ಮಟ್ಟದಿಂದ 800 ಅಡಿಗಳಷ್ಟು ಎತ್ತರದಲ್ಲಿದೆ. ಆಡಿ, ಥೈ ಮತ್ತು ಚಿತ್ತುತ್ತಿರೈ ತಿಂಗಳುಗಳಲ್ಲಿ ಈ ದೇವಾಲಯದಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ತಮಿಳಿನ ಮಹಾಕಾವ್ಯ ಶಿಲಪ್ಪದಿಗಾರಂನಲ್ಲಿ ಹೇಳಲಾಗಿದೆ.

    ಇಲ್ಲೊಂದು...

    + ಹೆಚ್ಚಿಗೆ ಓದಿ
  • 04ಕುಂಬಕ್ಕಾರಿ ಜಲಪಾತ

    ಕುಂಬಕ್ಕಾರಿ ಜಲಪಾತವು ಕೊಡೈಕೆನಾಲಿನಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತದೆ. ಇದು ಪೆರಿಯಾಕುಳಂನಿಂದ 9 ಕಿಮೀ ದೂರದಲ್ಲಿರುವ ಕುಂಬಕ್ಕಾರಿ ಎಂಬಲ್ಲಿದೆ. ತೇಣಿಯಿಂದ 24 ಕಿಮೀ ದೂರದಲ್ಲಿದೆ. ನಿಸರ್ಗದ ನಡುವಿನ ಈ ಜಲಪಾತವು ಹಕ್ಕಿಗಳ ಚಿಲಿಪಿಲಿಯೊಂದಿಗೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಜಲಪಾತವು ಎರಡು ಹಂತಗಳಲ್ಲಿ...

    + ಹೆಚ್ಚಿಗೆ ಓದಿ
  • 05ಕುಚನೂರ್

    ಕುಚನೂರು ಶನಿ ದೇವಾಲಕ್ಕೆ ಪ್ರಸಿದ್ಧವಾದದ್ದು. ಭಾರತದಲ್ಲಿ ಕಂಡುಬರುವ ಕೇವಲ ಶನಿ ದೇವರಿಗೆಯೇ ಅರ್ಪಿತವಾಗಿರುವ ದೇವಾಲಯಗಳಲ್ಲಿ ಇದೂ ಒಂದು. ಶನಿಯು ಈ ಪ್ರದೇಶದಲ್ಲಿ ತನ್ನ ನೈಜ ರೂಪದಲ್ಲಿ ಪ್ರತ್ಯಕ್ಷನಾಗಿದ್ದಾನೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಪ್ರದೇಶಕ್ಕೆ ಶನಿ ದೇವರ ಹೆಸರುಗಳಲ್ಲಿ ಒಂದಾದ ಕುಬ್ಜನೂರ್ ಎಂಬ ಹೆಸರು ಬಂದಿತು....

    + ಹೆಚ್ಚಿಗೆ ಓದಿ
  • 06ಬೋಡಿ ಮೆಟ್ಟು

    ಬೋಡಿ ಮೆಟ್ಟು ತೇಣಿಯಲ್ಲಿನ ಒಂದು ಗಿರಿಪ್ರದೇಶ. ಇದು ಪಶ್ಚಿಮ ಘಟ್ಟಗಳ ಮಡಿಲಲ್ಲಿ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ. ಇದೊಂದು ಸುಂದರ ಪ್ರವಾಸಿತಾಣ. ಇಲ್ಲಿಗೆ ಪ್ರತಿವರ್ಷವೂ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಬೋಡಿ ಮೆಟ್ಟು ಸಸ್ಯ ಮತ್ತು ಪ್ರಾಣಿ ಸಂಪತ್ತಿನಿಂದ ಶ್ರೀಮಂತವಾಗಿದೆ. ಇಲ್ಲಿ ಹಲವು ಪ್ರಭೇದಗಳ...

    + ಹೆಚ್ಚಿಗೆ ಓದಿ
  • 07ತೀರ್ಥ ತೊಟ್ಟಿ

    ತೀರ್ಥ ತೊಟ್ಟಿ

    ತೀರ್ಥ ತೊಟ್ಟಿಯು ತೇಣಿಯಿಂದ 19 ಕಿಮೀ ಮತ್ತು ಪೆರಿಯಾಕುಳಂನಿಂದ 2 ಕಿಮೀ ದೂರದಲ್ಲಿದೆ. ಇದು ಮದುರೈ-ಕೊಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೇಣಿಯಿಂದ ಬೋಡಿನಾಯಕ್ಕನೂರಿಗೆ ಹೋಗುವ ದಾರಿಯಲ್ಲಿದೆ. ಇದೊಂದು ಪ್ರಸಿದ್ಧ ಯಾತ್ರಾಸ್ಥಳ. ಇಲ್ಲಿ ಸುಬ್ರಮಣಿಯರ್ ದೇವಸ್ಥಾನವಿದೆ. ಇದು 1000 ವರ್ಷಗಳಷ್ಟು ಪುರಾತನವಾದ ದೇವಸ್ಥಾನ. ತೀರ್ಥ...

    + ಹೆಚ್ಚಿಗೆ ಓದಿ
  • 08ಕೌಮಾರಿಯಮ್ಮನ್ ದೇವಾಲಯ

    ಕೌಮಾರಿಯಮ್ಮನ್ ದೇವಾಲಯವನ್ನು 14ನೇ ಶತಮಾನದ ಪಾಂಡ್ಯ ದೊರೆ ವೀರಪಾಂಡ್ಯ ಕಟ್ಟಬೊಮ್ಮನ್ ನಿರ್ಮಿಸಿದನು. ಸ್ಥಳೀಯ ನಂಬಿಕೆಗಳ ಪ್ರಕಾರ, ದೊರೆ ವೀರಪಾಂಡ್ಯನು ಕೌಮಾರಿಯಮ್ಮ ಮತ್ತು ಕನ್ನೇಶ್ವರಮುಡಿಯಾರ್ರನ್ನು ಪೂಜಿಸಿದ್ದರಿಂದ ತನ್ನ ದೃಷ್ಟಿಯನ್ನು ಮರಳಿ ಪಡೆದನು. ಕೌಮಾರಿಯಮ್ಮ ದೇವಿಯು ಭಕ್ತಾದಿಗಳ ಇಷ್ಟಾರ್ಥಗಳನ್ನು...

    + ಹೆಚ್ಚಿಗೆ ಓದಿ
  • 09ಸೊತ್ತುಪಾರೈ ಆಣೆಕಟ್ಟು

    ಸೊತ್ತುಪಾರೈ ಆಣೆಕಟ್ಟು

    ಕೊಡೈಕೆನಾಲ್ ಗಿರಿ ಶ್ರೇಣಿಯ ಹಿಂಭಾಗದಲ್ಲಿರುವ ವರಗಾ ನದಿಗೆ ಅಡ್ಡಲಾಗಿ ಸೊತ್ತುಪಾರೈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಪೆರಿಯಾಕುಳಂನಿಂದ 12 ಕಿ.ಮೀ ದೂರದಲ್ಲಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಲು ಇದೊಂದು ಸೂಕ್ತ ಸ್ಥಳ. ಈ ಆಣೆಕಟ್ಟಿಗೆ ಹೋಗುವ ದಾರಿಯ ಇಕ್ಕೆಲಗಳಲ್ಲಿ ಮಾವಿನ ಮರಗಳಿವೆ....

    + ಹೆಚ್ಚಿಗೆ ಓದಿ
  • 10ಷಣ್ಮುಗನಾಥೈ ಆಣೆಕಟ್ಟು

    ಷಣ್ಮುಗನಾಥೈ ಆಣೆಕಟ್ಟು

    ಷಣ್ಮುಗನಾಥೈ ಆಣೆಕಟ್ಟು ಮೇಘಮಲೈ ಗಿರಿಶ್ರೇಣಿಯ ಸುಂದರ ಹಿನ್ನೆಲೆಯಲ್ಲಿದೆ. ಈ ಆಣೆಕಟ್ಟನ್ನು ತೇಣಿ ಜಿಲ್ಲೆಯ ರಾಯಪಾನಪಟ್ಟಿಯಲ್ಲಿನ ಷಣ್ಮುಗ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ತೇಣಿ ಜಿಲ್ಲೆಯ ಆಡಿಪಟ್ಟಿ, ವೇಲೈಮ್ಮಾಳ್ಪುರಂ, ಪುಸಾರಿಕೌಂಡನ್ ಪಟ್ಟಿ, ಒಡೈಪಟ್ಟಿ, ಸೆಪಾಲಕೊಟ್ಟೈ ಮತ್ತು ಸುಕ್ಕಂಗಳ್ ಪಟ್ಟಿಗೆ ಈ ಆಣೆಕಟ್ಟಿನ...

    + ಹೆಚ್ಚಿಗೆ ಓದಿ
  • 11ಮವೂತು

    ಮವೂತು

    ಮವೂತು ತೇಣಿಯಿಂದ 35 ಕಿಮೀ ಮತ್ತು ಅನಿಪಟ್ಟಿಯಿಂದ 20 ಕಿಮೀ ದೂರದಲ್ಲಿದೆ. ಈ ಸ್ಥಳವು ವರ್ಷನಾಡು ಬೆಟ್ಟದ ಮೇಲಿರುವ ವೇಲಪ್ಪಾರ್ ದೇವಾಲಯದಿಂದ ಪ್ರಸಿದ್ಧವಾಗಿದೆ. ಇಲ್ಲಿ ಸಪ್ತಕನ್ನಿಕೆಯರ ವಿಗ್ರಹಗಳಿವೆ. ಈ ದೇವಾಲಯವನ್ನು ಕಂಡಮಾನೂರ್ ಜಮೀನ್ದಾರ್ ಕಟ್ಟಿಸಿದನು. ಇಲ್ಲೊಂದು ನೈಸರ್ಗಿಕ ಚಿಲುಮೆಯಿದೆ. ಇದರ ನೀರಿಗೆ ರೋಗಗಳನ್ನು...

    + ಹೆಚ್ಚಿಗೆ ಓದಿ
  • 12ದೇವದಾನಪಟ್ಟಿ ಕಾಮಾಕ್ಷಿ ಅಮ್ಮನ್ ದೇವಾಲಯ

    ದೇವದಾನಪಟ್ಟಿ ಕಾಮಾಕ್ಷಿ ಅಮ್ಮನ್ ದೇವಾಲಯ

    ತೇಣಿಯಿಂದ 27 ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿಯಾದ ದೇವದಾನಪಟ್ಟಿಯಲ್ಲಿ ಕಾಮಾಕ್ಷಿ ಅಮ್ಮನವರ ದೇವಾಲಯವಿದೆ. ಇದು ಮಂಜಲ್ ನದಿ ದಂಡೆಯಲ್ಲಿದೆ. ಇದರ ವಿಶೇಷತೆಯೆಂದರೆ ದೇವಾಲಯದ ಮುಖ್ಯ ದೇವತೆಯಿರುವ ಸರ್ಭ ಸ್ಥಳದ ದ್ವಾರವು ಯಾವಾಗಲೂ ಮುಚ್ಚಿರುತ್ತದೆ ಹಾಗು ಪೂಜೆಯನ್ನು ದ್ವಾರದ ಮುಂದೆಯೆ ಮಾಡುತ್ತಾರೆ. ಮಹಾಶಿವರಾತ್ರಿಯ...

    + ಹೆಚ್ಚಿಗೆ ಓದಿ
  • 13ಬಾಲಸುಬ್ರಮಣ್ಯ ದೇವಾಲಯ

    ಬಾಲಸುಬ್ರಮಣ್ಯ ದೇವಾಲಯ

    ಪೆರಿಯಾಕುಳಂನಲ್ಲಿರುವ ಬಾಲಸುಬ್ರಮಣ್ಯ ದೇವಸ್ಥಾನವು ತಮಿಳುನಾಡಿನ ಬಹುಮುಖ್ಯ ದೇವಸ್ಥಾನಗಳಲ್ಲೊಂದು. ಚೋಳರ ದೊರೆ ರಾಜೇಂದ್ರ ಚೋಳ ಇದನ್ನು ಕಟ್ಟಿಸಿದನು. ಇಲ್ಲಿ 6 ಮುಖದ ಮುರುಗನು(ಸುಬ್ರಹ್ಮಣ್ಯ) ತನ್ನ ಪತ್ನಿಯೊಂದಿಗಿರುವ ವಿಗ್ರಹವಿದೆ. ಇದು ಭೂಮಿಯಿಂದ ಉದ್ಭವವಾಗಿರುವ ಮೂರ್ತಿ ಎಂದು ಹೇಳಲಾಗುತ್ತದೆ. ತಮಿಳನಾಡಿನ 200...

    + ಹೆಚ್ಚಿಗೆ ಓದಿ
  • 14ಚಿನ್ನ ಸುರಳಿ ಜಲಪಾತ

    ಚಿನ್ನ ಸುರಳಿ ಜಲಪಾತ

    ಚಿನ್ನ ಸುರುಳಿ ಜಲಪಾತವು ಮೇಘಮಲೈನಲ್ಲಿ ಹುಟ್ಟುವುದರಿಂದ ಇದನ್ನು ‘ಮೇಘಮಲೈ ಜಲಪಾತ’ವೆಂದು ಕೂಡ ಕರೆಯುತ್ತಾರೆ. ಇದು ತೇಣಿಯಿಂದ 54 ಕಿ.ಮೀ ದೂರದಲ್ಲಿರುವ ಕೊಂಬಾಯತೊಳುವಿನಲ್ಲಿದೆ. ಬೆಳ್ಳಿಮೋಡಗಳ ನಡುವಿನ ಈ ಜಲಪಾತದ 'ಧಬ ಧಬ' ಎಂದು ಗಡಚಿಕ್ಕುವ ಧ್ವನಿಯು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಚಿನ್ನ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat