Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಹವಾಮಾನ

ಠಾಣೆ ಹವಾಮಾನ

ಮುಂಬೈ ಮಾದರಿಯ ವಾತಾವರಣವನ್ನೆ ಠಾಣೆಯೂ ಹೊಂದಿದೆ. ಕಾರಣ ಠಾಣೆಯು ಮುಂಬೈಗೆ ಸಮೀಪವಿರುವುದರಿಂದ. ಸಾಮಾನ್ಯ ಹಾಗೂ ತೇವಾಂಶಯುಕ್ತ ವಾತಾವರಣ ಇಲ್ಲಿಯದ್ದು. ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದಲ್ಲ. ಈ ಕಾಲದಲ್ಲಿ ವಾತಾವರಣ ಪ್ರವಾಸಿಗರಲ್ಲಿ ಅಸಹನೆ ಮೂಡಿಸುತ್ತದೆ. ಅಕ್ಟೋಬರ್‌ನಿಂದ ಮಾರ್ಚ್ ನಡುವಿನ ಅವಧಿ ಪ್ರವಾಸಕ್ಕೆ ಯೋಗ್ಯ ಸಮಯ. ಮಳೆಗಾಲದ ನಂತರ ಹಾಗೂ ಚಳಿಗಾಲದ ಅವಧಿ ಇದಾಗಿದೆ. ಈ ಭಾಗವನ್ನು ನೋಡಲು ಇದು ಸಕಾಲ.

ಬೇಸಿಗೆಗಾಲ

ಬೇಸಿಗೆ ಕಾಲವು ಠಾಣೆ ಜಿಲ್ಲೆಯಲ್ಲಿ ಮಾರ್ಚ್ ನಲ್ಲಿ ಆರಂಭವಾಗಿ ಜೂನ್‌ವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ತಾಪಮಾನವು ಅತ್ಯಂತ ಹೆಚ್ಚಿರುತ್ತದೆ. ವಾತಾವರಣದಲ್ಲಿ ಉಷ್ಣತೆ 32 ಡಿಗ್ರಿ ಸೆಲ್ಶಿಯಸ್‌ನಿಂದ 40 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಜಿಲ್ಲೆಗೆ ಸಮೀಪವೇ ಅರೇಬಿಯನ್‌ ಸಮುದ್ರ ಇರುವುದರಿಂದ ಸೆಖೆ ಬೇಸಿಗೆಯಲ್ಲಿ ಹೆಚ್ಚಿರುತ್ತದೆ.

ಮಳೆಗಾಲ

ಬೇಸಿಗೆ ಮುಗಿಯುತ್ತಿದ್ದಂತೆ ಮಳೆಗಾಲ ಇಲ್ಲಿ ಆವರಿಸುತ್ತದೆ. ಮಳೆಗಾಲ ಬೇಸಿಗೆಯ ಉಷ್ಣತೆಯನ್ನು ಮಾತ್ರ ಕೊಂಚ ಇಳಿಸುತ್ತದೆ. ಜೂನ್‌ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಸೆಪ್ಟೆಂಬರ್‌ವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ಮಳೆ ಇಲ್ಲಾಗುತ್ತದೆ. ಈ ಭಾಗದಲ್ಲಿ ಜುಲೈ ವರ್ಷದಲ್ಲಿಯೆ, ಅತಿ ಹೆಚ್ಚು ಮಳೆಯಾಗುವ ತಿಂಗಳು. ಈಶಾನ್ಯ  ಮಾರುತ ಇಲ್ಲಿ ಮಳೆ ಸುರಿಯುವಂತೆ ಮಾಡುತ್ತದೆ.

ಚಳಿಗಾಲ

ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ಠಾಣೆಯಲ್ಲಿ ಚಳಿಗಾಲ ಇರುತ್ತದೆ. ಇತರೆ ಪ್ರದೇಶದಲ್ಲಿರುವಂತೆ ಇಲ್ಲಿಯೂ ಈ ಅವಧಿಯಲ್ಲಿ ಚಳಿಗಾಲ ಇರುತ್ತದೆ. ಪ್ರವಾಸ ಹಾಗೂ ಇತರೆ ಚಟುವಟಿಕೆಗೆ ಈ ಸಮಯ ಪ್ರಶಸ್ತ. ತಾಪಮಾನ ಗಣನೀಯವಾಗಿ ಇಳಿಕೆ ಕಂಡು 15 ಡಿಗ್ರಿ ಸೆಲ್ಶಿಯಸ್‌ನಿಂದ 8 ಡಿಗ್ರಿ ಸೆಲ್ಶಿಯಸ್‌ವರೆಗೂ ಇಳಿಯುತ್ತದೆ.