Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಹವಾಮಾನ

ತಲಸ್ಸೆರಿ ಹವಾಮಾನ

ತಲಸ್ಸೆರಿ ಬೇಸಿಗೆಯಲ್ಲಿ ವಿಪರೀತ ಸೆಖೆ ಹಾಗೂ ಮಳೆಗಾಲದಲ್ಲಿ ಅತಿಯಾದ ಮಳೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಇತ್ತ ಬರದಿದ್ದರೆ ಉತ್ತಮ. ಪ್ರವಾಸ ಋತು ಅಕ್ಟೋಬರ್‌ನಿಂದ ಆರಂಭವಾಗಿ ಫೆಬ್ರವರಿವರೆಗೂ ಇರುತ್ತದೆ. ಈ ಸಮಯ ತಲಸ್ಸೆರಿಗೆ ಭೇಟಿ ನೀಡಲು ಕೂಡ ಸಕಾಲ. ಓಣಂ ನಡೆಯುವ ಆಗಸ್ಟ್‌- ಸೆಪ್ಟೆಂಬರ್‌ನಲ್ಲೂ ಬರಬಹುದು.

ಬೇಸಿಗೆಗಾಲ

ತಲಸ್ಸೆರಿ ಉತ್ತಮ ವಾತಾವರಣವನ್ನು ಹೊಂದಿದೆ. ಮಾರ್ಚ್ ನಿಂದ ಬೇಸಿಗೆ ಆರಂಭವಾಗುತ್ತದೆ. ಮೇ ಕೊನೆಯವರೆಗೂ ಇರುತ್ತದೆ. ಕೊಂಚ ಹೆಚ್ಚೇ ಬಿಸಿ ಈ ಸಂದರ್ಭದಲ್ಲಿ ಇರುತ್ತದೆ. ತಾಪಮಾನ ಹೆಚ್ಚೆಂದರೆ 40 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಬೇಸಿಗೆಯಲ್ಲಿ ಪ್ರವಾಸ ಬರುವುದಾದರೆ ಹತ್ತಿ ಬಟ್ಟೆ ಹಾಗೂ ಸನ್‌ಗ್ಲಾಸ್‌ ತರಲು ಮರೆಯಬೇಡಿ.

ಮಳೆಗಾಲ

ಕೇರಳ ರಾಜ್ಯಕ್ಕೆ ಹೋಲಿಸಿದರೆ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಇಲ್ಲಿ ಅಪಾರ ಪ್ರಮಾಣದ ಮಳೆ ಆಗುತ್ತದೆ. ಕರಾವಳಿ ತೀರ ಆಗಿರುವುದರಿಂದ ವ್ಯಾಪಕ ಮಳೆಯಾಗುತ್ತದೆ. ಸೆಪ್ಟೆಂಬರ್‌ ಕೊನೆಯವರೆಗೂ ಮಳೆಗಾಲ ಇರುತ್ತದೆ. ವಿಪರೀತ ಮಳೆಯಾದ ಸಂದರ್ಭದಲ್ಲಿ ಇತ್ತ ಬರುವುದು ಉತ್ತಮವಲ್ಲ.

ಚಳಿಗಾಲ

ತಲಸ್ಸೆರಿ ಚಳಿಗಾಲದಲ್ಲಿ ಪ್ರವಾಸಿಗರನ್ನು ಆಹ್ವಾನಿಸುವ ರೂಪದಲ್ಲಿ ಇರುತ್ತದೆ. ಡಿಸೆಂಬರ್‌ನಲ್ಲಿ ಚಳಿಗಾಲ ಆರಂಭವಾಗುತ್ತದೆ. ಫೆಬ್ರವರಿ ಕೊನೆಯವರೆಗೂ ಘಾಡವಾಗಿ ಚಳಿಗಾಲ ಇರುತ್ತದೆ. ಈ ಸಂದರ್ಭದಲ್ಲಿ ತಾಪಮಾನ ಕನಿಷ್ಠ 20 ಡಿಗ್ರಿ ಸೆಲ್ಶಿಯಸ್‌ನಿಂದ 32 ಡಿಗ್ರಿ ಸೆಲ್ಶಿಯಸ್‌ ನಡುವೆ ಇರುತ್ತದೆ.  ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿಯಲ್ಲಿ ಬಂದರು, ಪ್ಲಾಂಟೇಶನ್‌, ಪಾರಂಪರಿಕ ಕಟ್ಟಡ ವೀಕ್ಷಣೆಗೆ ಪ್ರಶಸ್ತ ಸಮಯ. ಎಲ್ಲಾ ವಿಧದ ಚಟುವಟಿಕೆಗೆ ಇದು ಉತ್ತಮ ಸಮಯ.