ಮಳೆಗಾಲ ಮುಗಿದ ಬಳಿಕ, ಅಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ತಮೆಂಗ್ಲಾಂಗನ್ನು ಭೇಟಿಮಾಡಲು ಅತ್ಯುತ್ತಮ ಸಮಯ. ಈ ಸಮಯದಲ್ಲಿ ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಂಡುಬರಬೇಕು. ಪ್ರವಾಸಿಗಳು ಬೇಸಿಗೆಯ ಕೊನೆಯಲ್ಲಿ ಕೂಡ ಒಂದು ಪ್ರವಾಸದ ಯೋಜನೆಯನ್ನು ಹಾಕಿಕೊಳ್ಳಬಹುದು. ಆದರೆ ಮಳೆಗಾಲದಲ್ಲಿ ಮಾತ್ರ ಪ್ರವಾಸಮಾಡುವುದು ಸಮಸ್ಯೆಯಾಗುವುದರಿಂದ ಭೇಟಿನೀಡುವುದನ್ನು ತಪ್ಪಿಸಿಕೊಳ್ಳುವುದು ಒಳ್ಳೆಯದು.
ತಮೆಂಗ್ಲಾಂಗ್ ಜಿಲ್ಲೆಯು ಗುಡ್ಡಗಳಿಂದ ಕೂಡಿದ ಪ್ರದೇಶದಲ್ಲಿರುವ ಕಾರಣ, ಬೇಸಿಗೆಯ ತಿಂಗಳುಗಳಲ್ಲಿ ಅಗಾಗ್ಗೆ ಹೆಚ್ಚು ತಾಪಮಾನ ಹೊಂದಿದ್ದು ಬಹುಮಟ್ಟಿಗೆ ಹಿತಕರವಾಗಿರುತ್ತದೆ. ಬೇಸಿಗೆಯು ಮಾರ್ಚ್ನಲ್ಲಿ ಕಾಲಿಟ್ಟು ಮೇ ಮತ್ತು ಜೂನ್ ತಿಂಗಳವರೆಗೆ ಇರುತ್ತದೆ. ತಾಪಮಾನವು 32 ಡಿಗ್ರಿ ಸೆಲ್ಸಿಯುಸ್ ವರೆಗೆ ಏರುತ್ತದೆ. ಮೇ ಮತ್ತು ಜೂನ್ ತೀವ್ರ ತಾಪದ ತಿಂಗಳುಗಳು.
ನಿರಂತರ ಮಳೆಬೀಳುವುದು ತಮೆಂಗ್ಲಾಂಗಿನ ಒಂದು ಅವಿಭಾಜ್ಯ ವಿಶೇಷ. ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ತಮೆಂಗ್ಲಾಂಗ್ ಮಳೆಗಾಲವಿರುತ್ತದೆ. ಈ ಸಮಯದಲ್ಲಿ ನೈರುತ್ಯ ಭಾಗದ ಮುಂಗಾರುಮಳೆ ಈ ಪ್ರದೇಶದಲ್ಲಿ ಬೀಳುತ್ತದೆ. ಆದರೆ ಮಳೆಗಾಲ ಮುಗಿಯುತ್ತಿದ್ದಂತೇ ಅಲ್ಲಿನ ಬೆಟ್ಟಗಳು ಮಿನುಗಲು ಆರಂಭವಾಗುತ್ತದೆ ಮತ್ತು ಪ್ರವಾಸಿಗಳು ಆ ನೋಟವನ್ನು ನೋಡಲು ಹಿಂಡುಹಿಂಡಾಗಿ ಬರುವರು.
ಬೇಸಿಗೆಯಲ್ಲಿ ತಾಪಮಾನವು ಹೆಚ್ಚಾಗಿರುವಂತೆಯೇ ಚಳಿಗಾಲದಲ್ಲಿ ಸಾಕಷ್ಟು ತಣ್ಣನೆಯ ವಾತಾವರಣವಿರುತ್ತದೆ. ಚಳಿಗಾಲದಲ್ಲಿ ಹಲವು ಬಾರಿ ತಾಪಮಾನವು 0 ಡಿಗ್ರಿ ಸೆಲ್ಸಿಯುಸ್ ವರೆಗೂ ಇಳಿದಿದೆ. ತಮೆಂಗ್ಲಾಂಗಿಗೆ ಚಳಿಗಾಲದಲ್ಲಿ ಬರುವ ಪ್ರವಾಸಿಗಳು ಕಡ್ಡಾಯವಾಗಿ ಉಣ್ಣೆಬಟ್ಟೆಗಳನ್ನು ತೆಗೆದುಕೊಂಡು ಬರಬೇಕು. ಚಳಿಗಾಲವು ತೀವ್ರ ತಂಡಿಯಾಗಿರುತ್ತದೆ ಎಂಬುದನ್ನು ಮರೆಯಬಾರದು.