Search
  • Follow NativePlanet
Share
ಮುಖಪುಟ » ಸ್ಥಳಗಳು » ತಡಿಯಾಂಡಮೋಲ್ » ಹವಾಮಾನ

ತಡಿಯಾಂಡಮೋಲ್ ಹವಾಮಾನ

ಬೇಸಿಗೆ ಕಾಲವು ಚಾರಣಕ್ಕೆ ಮತ್ತು ಇತರೆ ಚಟುವಟಿಕೆಗಳಿಗೆ ತಡಿಯಾಂಡಮೋಲ್ ಗೆ ಭೇಟಿ ನೀಡಲು ಸೂಕ್ತವಾಗಿದೆ.

ಬೇಸಿಗೆಗಾಲ

(ಮಾರ್ಚ್‍ನಿಂದ - ಮೇವರೆಗೆ): ತಡಿಯಾಂಡಮೋಲ್‍ನಲ್ಲಿ  ಬೇಸಿಗೆ  ಭಾರಿ ಸೆಖೆಯಿಂದ ಕೂಡಿದ್ದು, ದಿನದ ಉಷ್ಣಾಂಶ 35 ಡಿಗ್ರಿ ತನಕ ಏರಿದರೆ, ರಾತ್ರಿ ಉಷ್ಣಾಂಶ 17 ಡಿಗ್ರಿ ತನಕ ಇಳಿಯಬಹುದು. ಈ ಪರ್ವತಶ್ರೇಣಿಯಲ್ಲಿ ಚಾರಣ ಮತ್ತಿತರ ಹೊರಾಂಗಣ ಚಟುವಟಿಕೆಗಳಿಗೆ ಬೇಸಿಗೆ ಸೂಕ್ತಕಾಲವಾಗಿದೆ.

ಮಳೆಗಾಲ

(ಜೂನ್‍ನಿಂದ -ಅಕ್ಟೋಬರ್‍‍ವರೆಗೆ): ತಡಿಯಾಂಡಮೋಲ್‍ನಲ್ಲಿ ದಕ್ಷಿಣ - ಪಶ್ಚಿಮ ಮಾನ್ಸೂನ್ ಮತ್ತು ಉತ್ತರ - ಪೂರ್ವ ಮಾನ್ಸೂನ್ ಮಾರುತಗಳಿಂದ ಭಾರಿ ಮಳೆಯಾಗುತ್ತದೆ.  ಚಾರಣ ಮತ್ತು ಸ್ಥಳ ವೀಕ್ಷಣೆ ಮುಂತಾದ ಹೊರಾಂಗಣ ಚಟುವಟಿಕೆಗಳು ಮಳೆಗಾಲದಲ್ಲಿ ಕಷ್ಟಸಾಧ್ಯ. ಹಾಗಾಗಿ ಪ್ರವಾಸಿಗರು ಈ ಋತುವಿನಲ್ಲಿ ಇಲ್ಲಿಗೆ ಬರುವುದು ಕಡಿಮೆ.

ಚಳಿಗಾಲ

(ಡಿಸೆಂಬರ್‍ ನಿಂದ -ಫೆಬ್ರವರಿ ವರೆಗೆ): ತಡಿಯಾಂಡಮೋಲ್‍ನಲ್ಲಿ ಚಳಿಗಾಲದಲ್ಲಿ ಸಾಕಷ್ಟು ಶೀತವಾತಾವರಣವಿದ್ದು, ಜನವರಿ ಮಾಹೆಯಲ್ಲಿ ಅತ್ಯಂತ ಚಳಿಯಾಗುತ್ತದೆ. ದಿನದ ಉಷ್ಣಾಂಶ 5 ರಿಂದ 12 ಡಿಗ್ರಿ ಸೆಲ್ಶಿಯಸ್‍ನಷ್ಟು ಇರುತ್ತದೆ.