Search
  • Follow NativePlanet
Share
ಮುಖಪುಟ » ಸ್ಥಳಗಳು » ಸ್ವಾಮಿಮಲೈ » ಹವಾಮಾನ

ಸ್ವಾಮಿಮಲೈ ಹವಾಮಾನ

ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಾಗ ಅಕ್ಟೋಬರ್ ನಿಂದ ಮಾರ್ಚ್ ತನಕದ ಅವಧಿಯು ಭೇಟಿಗೆ ಅತ್ತ್ಯುತ್ತಮವಾದ ಅವಧಿ. ಅಕ್ಟೊಬರ್ ನಲ್ಲಿ ಆಚರಿಸುವ ದೀಪಾವಳಿ ಹಾಗೂ ಈ ಹಿಂದೆ ಚಳಿಗಾಲದಲ್ಲಿ ಆಚರಿಸುವ ಉತ್ಸವಗಳು ಸೇರಿ ಭೇಟಿಯನ್ನು ಮತ್ತಷ್ಟು ನೆನಪಿನಲ್ಲಿರುವಂತೆ ಮಾಡುತ್ತವೆ. ಚಳಿಗಾಲದ ಅವಧಿಯಲ್ಲಿ ಭೇಟಿ ನೀಡುವುದು ಸಂತೋಷವನ್ನು ಇಮ್ಮಡಿಗೊಳಿಸಲು ಸೂಕ್ತವಾದ ಅವಧಿ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತನಕ ಅವಧಿಯಲ್ಲಿ ಇಲ್ಲಿನ ತಾಪಮಾನ 30 ರಿಂದ 39 ಡಿಗ್ರಿ ಸೆಲ್ಶಿಯಸ್ ತನಕ ಇರುತ್ತದೆ. ಪ್ರವಾಸಿಗರು ಏಪ್ರಿಲ್ ಮತ್ತು ಮೇ ತಿಂಗಳ ಬಿಸಿಲಿಗೆ ಭೇಟಿ ನೀಡದಿರುವುದು ಒಳಿತು. ಈ ಅವಧಿಯಲ್ಲಿ ಸುಡುವ ಭೂಮಿ ಮತ್ತು ಬಾನು ನಿಮ್ಮ ಸಂಚಾರವನ್ನು ಹಾಗೂ ಸ್ಥಳಗಳ ಭೇಟಿಯನ್ನು ಕಠಿಣ ಮಾಡುತ್ತದೆ. ಯಾವುದೇ ಸ್ಥಳ ಈ ಅವಧಿಯಲ್ಲಿ ಬೇರೆ ಅವಧಿಗಳಷ್ಟು ಖುಷಿ ನೀಡಲಾರದು.

ಮಳೆಗಾಲ

ಮಳೆಗಾಲ (ಜೂನ್ ನಿಂದ ಸೆಪ್ಟೆಂಬರ್) ಸಾಮಾನ್ಯವಾಗಿ ಸಾಧಾರಣ ಮಳೆ ತರುತ್ತದೆ. ಪ್ರಕೃತಿ ಸೌಂದರ್ಯವನ್ನು ಗಮನದಲ್ಲಿಟ್ಟು ಹೇಳುವುದಾದರೆ ಈ ಅವಧಿಯಷ್ಟು ಸುಂದರವಾದ ಅವಧಿ ಬೇರೊಂದಿಲ್ಲ. ಸಾಮಾನ್ಯವಾಗಿ ಇಲ್ಲಿನ ಹವಾಮಾನ ಶುಷ್ಕವಾಗಿದ್ದರೂ ಆಹ್ಲಾದಕರವಾಗಿರುತ್ತದೆ. ಈ ಅವಧಿಯಲ್ಲಿ ಸ್ವಾಮಿಮಲೈ ದೇವಾಲಯದ ಭೇಟಿಗೂ ಸೂಕ್ತವಾಗಿದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿಯ ತನಕ ಇಲ್ಲಿ ಚಳಿಗಾಲವಿರುತ್ತದೆ. ಈ ಅವಧಿಯಲ್ಲಿ ತಾಪಮಾನ 21 ರಿಂದ 29 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಈ ಅವಧಿಯಲ್ಲಿ ಹವಾಮಾನ ಆಹ್ಲಾದಕರವಾಗಿರುತ್ತದೆ ಜೊತೆಗೆ ಮಕರ, ಪೊಂಗಲ್ ಹಾಗೂ ತೈಪೂಯಮ್ ಉತ್ಸವಗಳು ಈ ಅವಧಿಯಲ್ಲೇ ನಡೆಯುತ್ತವೆ. ಈ ಸಮಯದಲ್ಲಿ ಅನಿರ್ದಿಷ್ಟಾವಧಿಯ ಮಳೆ ಬರುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಈ ಅವಧಿಯಲ್ಲಿ ಬರುವಾಗ ಕೊಡೆಯನ್ನು ಖಂಡಿತ ಜೊತೆಗಿಡುವುದು ಸೂಕ್ತ.