Search
  • Follow NativePlanet
Share
ಮುಖಪುಟ » ಸ್ಥಳಗಳು » ಸೂರತ್ » ಆಕರ್ಷಣೆಗಳು
  • 01ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಗ್ರಹಾಲಯ ಮತ್ತು ತಾರಾಲಯ

    ಸರ್ದಾರ್ ವಲ್ಲಭಭಾಯಿ ಪಟೇಲ್ ಸಂಗ್ರಹಾಲಯ ಮತ್ತು ತಾರಾಲಯ

    ಇದು ಸರ್ದಾರ್ ಸಂಗ್ರಹಾಲಯವೆಂದು ಪ್ರಸಿದ್ಧವಾಗಿದ್ದು 1889ರಲ್ಲಿ ಸ್ಥಾಪನೆಗೊಂಡಿತು. ಈ ಸಂಗ್ರಹಾಲಯದಲ್ಲಿ ಸೂರತ್ನ ಸಂಸ್ಕೃತಿಯನ್ನು ಬಿಂಬಿಸುವ ಹಲವು ವಸ್ತುಗಳನ್ನು ಸಂಗ್ರಹಿಸಲಾಗಿದೆ ಮತ್ತು ತಾರಾಲಯದಲ್ಲಿ ವಿಶ್ವದ ಬಗ್ಗೆ ಅರಿವು ಮೂಡಿಸುವ ಪ್ರದರ್ಶನಗಳನ್ನು ದಿನವೂ ಆಯೋಜಿಸಲಾಗುತ್ತದೆ.

    + ಹೆಚ್ಚಿಗೆ ಓದಿ
  • 02ಗೋಪಿ ತಲಾವ್ ಮತ್ತು ನವ ಸೈದ್ ಮಸೀದಿ

    ಸೂರತ್ನ ಅಭಿವೃದ್ಧಿಗೆ ಶ್ರಮಿಸಿದ ಗೋಪಿ ಎಂಬಾತನ ನೆನಪಿಗೆ ಈ ಕೊಳಕ್ಕೆ ಈತನ ಹೆಸರಿಡಲಾಗಿದೆ. ನವ ಸೈದ್ ಮಸೀದಿಯೊಂದಿಗೆ ಖುದ್ವಾಂದ್ ಮಸೀದಿ, ಸಯ್ಯದ್ ಇಬ್ರಿಸ್ ಮಸೀದಿ ಮತ್ತು ಖ್ವಾಜಾ ದಿವಾನ್ ಸಾಹಿಬ್ ಮಸೀದಿ ಎನ್ನುವ ನಾಲ್ಕು ಮಸೀದಿಗಳಿವೆ.

    + ಹೆಚ್ಚಿಗೆ ಓದಿ
  • 03ಚಿಂತಾಮಣಿ ಜೈನ ಮಂದಿರ

    ಚಿಂತಾಮಣಿ ಜೈನ ಮಂದಿರ

    ಈ ಜೈನ ಮಂದಿರವನ್ನು ಸಾಮ್ರಾಟ ಔರಂಗಜೇಬನ ಕಾಲದಲ್ಲಿ ಕಟ್ಟಿಸಲಾಯಿತು. ಇದರ ಹೊರಭಾಗವು ಒಳಭಾಗಕ್ಕೆ ಹೋಲಿಸಿದಾಗ ಅತ್ಯಂತ ಸರಳವಾಗಿದೆ. ಮರದ ಸ್ತಂಭಗಳಿಗೆ ತೊಲೆಗಳ ಆಧಾರವನ್ನು ನೀಡಲಾಗಿದ್ದು ಇವುಗಳನ್ನು ಚಿತ್ರಗಳಿಂದ ಅಲಂಕರಿಸಲಾಗಿದ್ದು ಇದಕ್ಕೆ ತರಕಾರಿಯ ನೈಜ ಬಣ್ಣಗಳನ್ನು ಬಳಸಲಾಗಿದೆ.

    + ಹೆಚ್ಚಿಗೆ ಓದಿ
  • 04ವಜ್ರದ ಕೈಗಾರಿಕೆ

    ಸೂರತ್ ಇಂದು ವಿಶ್ವದ ವಜ್ರ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಪ್ರತಿ 10 ವಜ್ರಗಳಲ್ಲಿ 8 ವಜ್ರಗಳನ್ನು ಸೂರತ್ನಲ್ಲಿಯೇ ಕತ್ತರಿಸಲಾಗುತ್ತದೆ. ಇಲ್ಲಿಗೆ ವಜ್ರಗಳು ದಕ್ಷಿಣ ಆಫ್ರಕಾದಿಂದ ಬರುತ್ತವೆ. ಏಕೆಂದರೆ ಅಂತರ ರಾಷ್ಟ್ರೀಯ ವಜ್ರ ವ್ಯಾಪಾರವು ಮುಖ್ಯವಾಗಿ ಹಾಸಿಡಿಕ್ ಜ್ಯೂವ್ ಮತ್ತು ಜೈನರ ಕೈಯಲ್ಲಿದ್ದು ಇದನ್ನು ಉತ್ತರ...

    + ಹೆಚ್ಚಿಗೆ ಓದಿ
  • 05ಬಟ್ಟೆ ಮಾರುಕಟ್ಟೆ

    ಸೂರತ್ ಬಟ್ಟೆ ಕೈಗಾರಿಕೆಗೆ ಪ್ರಸಿದ್ಧವಾದುದು. ಇಲ್ಲಿ ಅಸಂಖ್ಯ ಶ್ರೇಣಿಯ ಸೀರೆಗಳು, ಸಲ್ವಾರ್ ಕಮೀಜ್ಗಳು, ಡ್ರೆಸ್ ಪೀಸ್ಗಳು, ಪಾಲಿಯೆಸ್ಟರ್, ರೇಷ್ಮೆ, ಪ್ರಿಂಟೆಡ್ ಮತ್ತು ಎಂಬ್ರಾಯಿಡರಿ ಮೆಟೀರಿಯಲ್ಗಳು ಸಿಗುತ್ತವೆ. ಈ ಮಾರುಕಟ್ಟೆಯು ಬರ್ಡೊೆಲಿ ರಸ್ತೆಗೆ ತೆರೆದುಕೊಳ್ಳುವ ಸಹಾರ ಗೇಟಿನ ದಕ್ಷಿಣ ಭಾಗದಲ್ಲಿದೆ.

    + ಹೆಚ್ಚಿಗೆ ಓದಿ
  • 06ಯುರೋಪಿಯನ್ ಸಮಾಧಿಗಳು

    ಇವು 16ನೆಯ ಶತಮಾನದ ಬ್ರಿಟೀಷ್ ಮತ್ತು ಡಚ್ಚರ ಸಮಾಧಿಗಳು. ಇವು ಹಿಂದೂ ಮತ್ತು ಇಸ್ಲಾಮಿಕ್ ಶೈಲಿಯಿಂದ ಪ್ರಭಾವಿತವಾಗಿದೆ. ಈ ಸಮಾಧಿಗಳ ಮೇಲೆ ಶಾಸನಗಳನ್ನು ಕೂಡ ಕಾಣಬಹುದು. ಇವುಗಳನ್ನು ಐತಿಹಾಸಿಕ ಸ್ಮಾರಕಗಳೆಂದು ರಕ್ಷಿಸಲಾಗಿದ್ದು ಈ ಸ್ಥಳದಲ್ಲಿ ಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ.

    + ಹೆಚ್ಚಿಗೆ ಓದಿ
  • 07ಸೂರತ್ ಕೋಟೆ

    ಸೂರತ್ ಕೋಟೆ

    1540ರಲ್ಲಿ ಸುಲ್ತಾನ ಮೊಹಮದನು ಪೋರ್ಚುಗೀಸರ ದಾಳಿಯಿಂದ ಸೂರತ್ ಪಟ್ಟಣವನ್ನು ರಕ್ಷಿಸುವ ಸಲುವಾಗಿ ತಾಪಿ ನದಿಯ ಪಕ್ಕದಲ್ಲಿ ಇದನ್ನು ಕಟ್ಟಿಸಿದನು. ಇಂದು ಈ ಕೋಟೆಯು ವಿವಿಧ ಸರ್ಕಾರಿ ಕಛೇರಿಗಳ ತಾಣವಾಗಿದೆ.

    + ಹೆಚ್ಚಿಗೆ ಓದಿ
  • 08ಬರ್ದೋಲಿ

    ಬರ್ದೋಲಿ

    ಬರ್ದೋಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ಸ್ಥಳ. 1918ರಲ್ಲಿ ನಡೆದ ‘ಕರ ನಿರಾಕರಣೆ’ ಚಳುವಳಿಯ ನಾಯಕರು ಇವರು. ನಂತರದಲ್ಲಿ ಸರ್ದಾರರು ಈ ನಗರದಿಂದಲೇ ಬ್ರಿಟೀಷರು ಕಂದಾಯವನ್ನು ಹೆಚ್ಚಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ಆರಂಭಿಸಿದರು. ಗಾಂಧೀಜಿಯವರ ದಂಡಿ ಸತ್ಯಾಗ್ರಹದಲ್ಲಿ ಕೂಡ ಪಾಲ್ಗೊಂಡಿದ್ದರು. ಸ್ವರಾಜ್...

    + ಹೆಚ್ಚಿಗೆ ಓದಿ
  • 09ಪಾರ್ಸಿ ಅಗೈರಿ

    ಪಾರ್ಸಿ ಅಗೈರಿ

    ಸೂರತ್ನಲ್ಲಿರುವ ಕೆಲವು ಪಾರ್ಸಿ ಅಗ್ನಿ ದೇವಾಲಯಗಳಲ್ಲಿ ಪಾರ್ಸಿ ಅಗೈರಿ ಮುಖ್ಯವಾದುದು. ಇಲ್ಲಿ ಪವಿತ್ರ ಅಗ್ನಿಜ್ವಾಲೆಯು ಉರಿಯುತ್ತಿದ್ದು. ಪಾರ್ಸಿಯೇತರ ಜನಾಂಗದವರು ಕೂಡ ದೇವಾಲಯದೊಳಗೆ ಹೋಗಬಹುದು.

    + ಹೆಚ್ಚಿಗೆ ಓದಿ
  • 10ಮರ್ಜನ್ ಶಮಿ ರೊಜಾ

    ಮರ್ಜನ್ ಶಮಿ ರೊಜಾ

    ಇದು ಸೂರತ್ನ ಗವರ್ನರ್ ಆಗಿದ್ದ ಖ್ವಾಜ ಸಫರ್ ಸುಲೇಮನೀಮ್ನ ಸಮಾಧಿ. ಈ ಗುಮ್ಮಟವನ್ನು ಆತನ ಮಗ 1540ರಲ್ಲಿ ಕಟ್ಟಿಸಿದನು. ಇದರ ಮೇಲೆ ಪರ್ಷಿಯನ್ ವಾಸ್ತುಶೈಲಿಯ ಪ್ರಭಾವವನ್ನು ಕಾಣಬಹುದು.

    + ಹೆಚ್ಚಿಗೆ ಓದಿ
  • 11ಮುಘಲ್ಸಾರೈ

    ಮುಘಲ್ಸಾರೈ

    ಇದು ಮೂಲಭೂತವಾಗಿ ಸರೈ ಖಾನ. ಇದನ್ನು 17ನೆಯ ಶತಮಾನದಲ್ಲಿ ಷಹಜಹಾನನು ಹಜ್ ಯಾತ್ರಿಗಳಿಗಾಗಿ ಕಟ್ಟಿಸಿದನು. 1857ರಲ್ಲಿ ಕೆಲಕಾಲ ಇದನ್ನು ಬಂಧಿಖಾನೆಯಾಗಿ ಪರಿವರ್ತಿಸಲಾಗಿತ್ತು. ಪ್ರಸ್ತುತ ಇದು ಸೂರತ್ನ ಮುನಿಸಿಪಲ್ ಕಾರ್ಪೊರೇಷನ್ನ ಕಛೇರಿಯಾಗಿದೆ.

    + ಹೆಚ್ಚಿಗೆ ಓದಿ
  • 12ವೀರ ನರ್ಮದ ಸರಸ್ವತಿ ಮಂದಿರ

    ವೀರ ನರ್ಮದ ಸರಸ್ವತಿ ಮಂದಿರ

    ಗುಜರಾತಿನ ನಾಡಗೀತೆ ‘ಜೈ ಜೈ ಗಾರ್ವಿ ಗುಜರಾತ’ಯನ್ನು ಬರೆದ ಕವಿ ನರ್ಮದಶಂಕರ ಲಾಲಶಂಕರ ದಾವೆಯು ಈ ಮನೆಯಲ್ಲಿ ವಾಸವಾಗಿದ್ದರು. ಈ ಮನೆಯು ಈ ಕವಿಯ ಕೃತಿಗಳು ಮತ್ತು ಜೀವನಕ್ಕೆ ಸಂಬಧಿಸಿದ ಸ್ಮಾರಕ ಭವನ.

    + ಹೆಚ್ಚಿಗೆ ಓದಿ
  • 13ರಂದೇರ್ ಮತ್ತು ಜಾಮಾಮಸೀದಿ

    ರಂದೇರ್ ಮತ್ತು ಜಾಮಾಮಸೀದಿ

    ರಂದೇರ್ ಸೂರತ್ ಗುಜರಾತಿನ ಮುಖ್ಯ ನಗರವಾಗುವುದಕ್ಕೆ ಮುಂಚೆ ಈ ರಾಜ್ಯದ ಮುಖ್ಯ ನಗರವಾಗಿತ್ತು. ಇದು ಈ ಪ್ರದೇಶದ ಹಳೆಯ ನಗರಗಳಲ್ಲಿ ಒಂದು. ಇಲ್ಲಿನ ಜಮಾ ಮಸೀದಿ ಅಥವ ಶುಕ್ರವಾರದ ಮಸೀದಿಯನ್ನು 16ನೆಯ ಶತಮಾನದಲ್ಲಿ ಇಲ್ಲಿದ್ದ ಜೈನ ಮಂದಿರವನ್ನು ಕೆಡವಿ ಆ ಮಂದಿರದ ಭಾಗಗಳನ್ನೇ ಬಳಸಿ ಕಟ್ಟಲಾಯಿತು.

    + ಹೆಚ್ಚಿಗೆ ಓದಿ
  • 15ಬಿಲ್ಲಿಮೊರ

    ಬಿಲ್ಲಿಮೊರ

    ನವ್ಸಾರಿಯಿಂದ 25 ಕಿಮೀ ದಕ್ಷಿಣಕ್ಕೆ ಅಂಬಿಕಾ ನದಿ ದಂಡೆಯಲ್ಲಿ ಬಿಲ್ಲಿಮೊರ ಇದೆ. ಸಪುತಾರಾಗೆ ಹೋಗುವವರು ಬಿಲ್ಲಿಮೊರದ ಮೂಲಕವೇ ಸಾಗಬೇಕು. ಇದು ದಂಗ್ಸ್ ಅಡವಿಯ ಉತ್ಪನ್ನಗಳಿವೆ ಇದು ವ್ಯಾಪಾರ ಕೇಂದ್ರ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri