Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಶೈಲಂ » ಹವಾಮಾನ

ಶ್ರೀಶೈಲಂ ಹವಾಮಾನ

ಶ್ರೀಶೈಲಂ ಪ್ರಯಾಣಕ್ಕೆ ಉತ್ತಮ ಸಮಯ ಅಕ್ಟೋಬರ್ ಹಾಗೂ ಫೆಬ್ರವರಿ ತಿಂಗಳುಗಳ ನಡುವಿನ ವೇಳೆ. ಫೆಬ್ರವರಿ ಡಿಸೆಂಬರ್ ತಿಂಗಳಲ್ಲಿ, ಹವಾಮಾನ ಸೌಮ್ಯವಾಗಿದ್ದು,  ತಂಪಾದ ಗಾಳಿಯಿಂದ ಬರುವ ಶೀತವನ್ನು ಸಹಿಸಿಕೊಳ್ಳಬಹುದು. ರಾತ್ರಿ ವೇಳೆ ತಂಪಾದ ವಾತಾವರಣಾವಿದ್ದು ಚಳಿಯನ್ನು ತಡೆಯಲು ಒಂದು ಜಾಕೆಟ್ ಅಥವಾ ಶಾಲನ್ನು ಬಳಸುವುದು ಉತ್ತಮ.

ಬೇಸಿಗೆಗಾಲ

ಶ್ರೀ ಶೈಲಂ ನಲ್ಲಿ ಬೇಸಿಗೆ ಮಾರ್ಚ್ ತಿಂಗಳಲ್ಲಿ ಆರಂಭವಾಗುತ್ತದೆ ಮತ್ತು ಜೂನ್ ಕೊನೆಯವರೆಗೆ ಮುಂದುವರಿಯುತ್ತದೆ. ಬೇಸಿಗೆಯಲ್ಲಿ ತಾಪಮಾನವು ಅಧಿಕವಾಗಿದ್ದು 42  ಡಿ. ಸೆ. ಮಟ್ಟವನ್ನು ತಲುಪಬಹುದು. ಆದ್ದರಿಂದ ಈ ಸಮಯದಲ್ಲಿ ಸಹಿಸಲಸಾಧ್ಯವಾದ ಬಿಸಿಲಿರುತ್ತದೆ. ಬೇಸಿಗೆಯಲ್ಲಿ ಸೂರ್ಯನ ತಾಪಮಾನ ಅತ್ಯಂತ ಬಿಸಿಯಾಗಿರುತ್ತದೆ ಹಾಗೂ ನಿರ್ಜಲೀಕರಣ (ಡಿ ಹೈಡ್ರೇಶನ್) ಸಮಸ್ಯೆಗಳು ಉಂಟಾಗಬಹುದು.

ಮಳೆಗಾಲ

ಶ್ರೀಶೈಲಂ ಪಟ್ಟಣವು ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯಮ ಮಳೆಯನ್ನು ಅನುಭವಿಸುತ್ತದೆ. ನವೆಂಬರ್ ತಿಂಗಳಿನಲ್ಲಿ ಕೆಲವೊಮ್ಮೆ ಸ್ವಲ್ಪ ಮಳೆಯಾಗುತ್ತದೆ. ಮಳೆಗಾಲದಲ್ಲಿ ಇಲ್ಲಿನ ತಾಪಮಾನವು 32  ಡಿ. ಸೆ ಗಿಂತ ಕಡಿಮೆಯಿರುತ್ತದೆ. ತೇವಾಂಶದ ಮಟ್ಟವು ಅಧಿಕವಾಗಿರುತ್ತದೆ. ಆದ್ದರಿಂದ ಶ್ರೀ ಶೈಲಂ ಗೆ ಮಳೆಗಾಲದಲ್ಲಿ ಪ್ರಯಾಣಿಸುವುದು ಉತ್ತಮವಲ್ಲ.

ಚಳಿಗಾಲ

ಶ್ರೀ ಶೈಲಂ ನಲ್ಲಿ ಚಳಿಗಾಲವು ಆಹ್ಲಾದಕರವಾಗಿದ್ದು ಇಲ್ಲಿನ ದೃಶ್ಯಗಳನ್ನು ನೋಡಲು ಸೂಕ್ತ ಸಮಯವಾಗಿದೆ. ಉತ್ತರ ಭಾರತಕ್ಕಿಂತ ವಿಭಿನ್ನವಾದ ವಾಯುಗುಣವನ್ನು ಹೊಂದಿದ್ದು, ಚಳಿಯು ಅತಿಯಾಗಿಲ್ಲ. ತಾಪಮಾನವು 29 ಡಿ. ಸೆ ಗಿಂತ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಶಾಖವನ್ನು ಸಹಿಸಿಕೊಳ್ಳಬಹುದು. ಚಳಿಗಾಲವು ಶ್ರೀ ಶೈಲಂ ಗೆ ಬರಲು ಅತ್ಯಂತ ಸೂಕ್ತವಾದ ಸಮಯ. ಏಕೆಂದರೆ ಈ ಸಂದರ್ಭದಲ್ಲಿ ಮಧ್ಯಾಹ್ನದ ಹೊತ್ತು ಶಾಖವಿದ್ದರೂ ಸಂಜೆ ಹೊತ್ತು ಚಳಿ ಹಾಗೂ ತಂಪಾದ ವಾಯುಗುಣವನ್ನು ಹೊಂದಿರುತ್ತದೆ.