Search
  • Follow NativePlanet
Share
ಮುಖಪುಟ » ಸ್ಥಳಗಳು» ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ – ಇತಿಹಾಸವು ಜೀವಂತಿಕೆ ಪಡೆಯುವ ತಾಣ.

52

ಐತಿಹಾಸಿಕ ಸ್ಥಳಗಳಿಂದ ಕೂಡಿದ ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವುದು ನಿಜಕ್ಕು ಒಂದು ಮೌಲ್ಯಯುತವಾದ ಪ್ರವಾಸವಾಗುತ್ತದೆ. ಶ್ರೀರಂಗಪಟ್ಟಣವು ಕಾವೇರಿ ನದಿಯ ಎರಡು ಕವಲುಗಳಿಂದ ನಿರ್ಮಾಣವಾದ ದ್ವೀಪದ ಊರಾಗಿದೆ. ಈ ದ್ವೀಪವು 13 ಚ.ಕಿ.ಮೀ ವಿಸ್ತೀರ್ಣವಿದ್ದು, ಮೈಸೂರಿಗೆ ತುಂಬ ಹತ್ತಿರದಲ್ಲಿದೆ.

 

ಈ ಪ್ರಾಂತ್ಯದ ಐತಿಹಾಸಿಕ ಪ್ರಾಮುಖ್ಯತೆ.

ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಈ ಊರು ಇಲ್ಲಿ  9ನೇ ಶತಮಾನದಲ್ಲಿ ನಿರ್ಮಾಣವಾದ ರಂಗನಾಥಸ್ವಾಮಿ ದೇವಾಲಯದಿಂದಾಗಿ ಶ್ರೀರಂಗಪಟ್ಟಣ ಎಂಬ ಹೆಸರು ಪಡೆದಿದೆ. ಈ ದೇವಾಲಯವು ಹಲವಾರು ವರ್ಷಗಳಿಂದ ವಿವಿಧ ಬಗೆಯ ಸಿಂಗಾರಗಳನ್ನು ಕಾಣುತ್ತಾ ಬೆಳೆದಿದೆ. ಅದರ ಫಲವಾಗಿ ಈಗ ಈ ದೇವಾಲಯವು ಹೊಯ್ಸಳ ಮತ್ತು ವಿಜಯನಗರ ಶೈಲಿಯ ಸಂಯುಕ್ತ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿ ನಿಂತಿದೆ.

ಈ ಊರು ಟಿಪ್ಪು ಸುಲ್ತಾನನ ಕಾಲದಲ್ಲಿ ಮೈಸೂರಿನ ರಾಜಧಾನಿಯಾದಾಗ ತನ್ನ ಪ್ರಾಮುಖ್ಯತೆಯನ್ನು ಗಳಿಸಿತು. ಈ ಊರಿನ ವಾಸ್ತು ಶಿಲ್ಪವು ಇಂಡೋ –ಮುಸ್ಲಿಂ ಪರಂಪರೆಗೆ ಸೇರಿದೆ. ಇದರ ಪ್ರಭಾವವನ್ನು ಇಲ್ಲಿನ ಸ್ಮಾರಕಗಳಾದ ದರಿಯಾ ದೌಲತ್ ಬಾಗ್ ಮತ್ತು ಜಾಮ ಮಸೀದಿಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ಶ್ರೀರಂಗಪಟ್ಟಣವು ಬೆರಗುಗೊಳಿಸುವ ಸುಂದರ ತಾಣಗಳನ್ನು ಹೊಂದಿದೆ. ಭಾರತದ ಎರಡನೆ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟಿರುವ ಶಿವನಸಮುದ್ರ ಜಲಪಾತದಂತಹ ಪ್ರಸಿದ್ಧ ವಿಹಾರ ತಾಣಗಳು ಇಲ್ಲಿವೆ.

ಶ್ರೀರಂಗಪಟ್ಟಣದ ಸಂಗಮ - ಇಲ್ಲಿ ಕಾವೇರಿ, ಕಬಿನಿ ಮತ್ತು ಹೇಮಾವತಿ ನದಿಗಳು ಕೂಡುವ ಸಂಗಮವಿದ್ದು ನೋಡಲು ಯೋಗ್ಯವಾದ ಸ್ಥಳವಾಗಿದೆ.

ಶ್ರೀರಂಗಪಟ್ಟಣವು ಬೆಂಗಳೂರಿನಿಂದ 127 ಕಿ.ಮೀ ಮತ್ತು ಮೈಸೂರಿನಿಂದ  13 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಊರು ತನ್ನದೆ ಆದ ರೈಲುನಿಲ್ದಾಣವನ್ನುಹೊಂದಿದೆ. ಮೈಸೂರು ಇಲ್ಲಿಗೆ ಸಮೀಪದ ವಿಮಾನನಿಲ್ದಾಣವಾಗಿದೆ.  ರಸ್ತೆಯಮೂಲಕವು ಶ್ರೀರಂಗಪಟ್ಟಣಕ್ಕೆ ಸುಲಭವಾಗಿ ತಲುಪಬಹುದು. ಈ ದ್ವೀಪವು ಬೆಂಗಳೂರುಮೈಸೂರು ಹೆದ್ದಾರಿಯಲ್ಲಿ ನೆಲೆಸಿದೆ.

ಶ್ರೀರಂಗಪಟ್ಟಣ ಪ್ರಸಿದ್ಧವಾಗಿದೆ

ಶ್ರೀರಂಗಪಟ್ಟಣ ಹವಾಮಾನ

ಉತ್ತಮ ಸಮಯ ಶ್ರೀರಂಗಪಟ್ಟಣ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶ್ರೀರಂಗಪಟ್ಟಣ

  • ರಸ್ತೆಯ ಮೂಲಕ
    ಶ್ರೀರಂಗಪಟ್ಟಣಕ್ಕೆ ಹತ್ತಿರದ ಎಲ್ಲಾ ನಗರಗಳಿಂದ ಮತ್ತು ರಾಜ್ಯದ ಪ್ರಮುಖ ನಗರಗಳಿಂದ ಬಸ್ಸುಗಳ ಸೌಲಭ್ಯವಿದೆ. ಪ್ರವಾಸಿಗರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆ ಎಸ್ ಆರ್ ಟಿ ಸಿ) ಬಸ್ಸುಗಳಲ್ಲಿ ಶ್ರೀರಂಗಪಟ್ಟಣಕ್ಕೆ ತಲುಪಬಹುದು. ಬೆಂಗಳೂರಿನಿಂದ ಸುವಿಹಾರಿ ಬಸ್ಸುಗಳು ಲಭ್ಯವಿದೆ. ಇಲ್ಲಿನ ಸಮೀಪದ ಯಾತ್ರಾ ಸ್ಥಳಗಳಿಗೆ ಪ್ರವಾಸಿಗರು ಇಲ್ಲಿಂದ ಬಾಡಿಗೆ ಟ್ಯಾಕ್ಸಿ ಮತ್ತು ಮಿನಿ ಬಸ್ಸುಗಳನ್ನು ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮೈಸೂರು ರೈಲ್ವೆ ನಿಲ್ದಾಣವು ಶ್ರೀರಂಗಪಟ್ಟಣಕ್ಕೆ ಅತ್ಯಂತ ಹತ್ತಿರ ರೈಲ್ವೆ ಜಂಕ್ಷನ್ ಆಗಿದೆ. ಇದು ಇಲ್ಲಿಂದ 17 ಕಿ.ಮೀ ದೂರದಲ್ಲಿದೆ. ಇದು ಭಾರತದ ಪ್ರಮುಖ ಪಟ್ಟಣ ಮತ್ತು ನಗರಗಳಿಂದ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಂದ ಶ್ರೀರಂಗಪಟ್ಟಣಕ್ಕೆ ಬಾಡಿಗೆ ವಾಹನ,ಬಸ್ಸುಗಳಲ್ಲಿ ಅಥವಾ ಟ್ಯಾಕ್ಸಿಗಳಲ್ಲಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶ್ರೀರಂಗಪಟ್ಟಣಕ್ಕೆ ಸಮೀಪದ ವಿಮಾನನಿಲ್ದಾಣವು ಮೈಸೂರಿನಲ್ಲಿದ್ದು, ಅದು ಇಲ್ಲಿಂದ 14 ಕಿ.ಮೀ ದೂರದಲ್ಲಿದೆ. ಅಲ್ಲದೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ಶ್ರೀರಂಗಪಟ್ಟಣಕ್ಕೆ ಹತ್ತಿರದ ವಿಮಾನನಿಲ್ದಾಣವಾಗಿದ್ದು,140 ಕಿ,ಮೀ ದೂರದಲ್ಲಿದೆ. ಇದು ಅಮೆರಿಕಾ, ಯೂರೋಪ್, ಏಶಿಯಾ ಮತ್ತು ಮಧ್ಯ ಪ್ರಾಚ್ಯದಂತಹ ದೇಶದ ಪ್ರವಾಸಿಗರಿಗೆ ಅನುಕೂಲಕರವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat