Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರವಣಬೆಳಗೊಳ » ಹವಾಮಾನ

ಶ್ರವಣಬೆಳಗೊಳ ಹವಾಮಾನ

ಶ್ರವಣಬೆಳಗೊಳವನ್ನು ಭೇಟಿ ಮಾಡಲು ಅತ್ಯುತ್ತಮ ಸಮಯ ಎಂದರೆ ಅಕ್ಟೋಬರಿನಿಂದ ಏಪ್ರಿಲ್‌ ಅವಧಿ. ಈ ಸಮಯದಲ್ಲಿ, ಜೈನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭೇಟಿ ನೀಡುತ್ತಾರೆ.

ಬೇಸಿಗೆಗಾಲ

(ಮಾರ್ಚ್‌‌ನಿಂದ ಮೇ): ಶ್ರವಣಬೆಳಗೊಳದ ವಾತಾವರಣವು ಬೇಸಿಗೆಯಲ್ಲಿ ಅತಿಯಾದ ಉಷ್ಣವಾಗಿರುತ್ತದೆ ಮತ್ತು ಅನುಕೂಲದ ವಾತಾವರಣ ಆಗಿರುವುದಿಲ್ಲ. ಬೇಸಿಗೆ ಕಾಲದ ತಾಪಮಾನವು 24°C ಮತ್ತು 37°C ಮಧ್ಯೆ ಇರುತ್ತದೆ. ಪ್ರವಾಸಿಗರು ಕಾದ ಕಾವಲಿಯಂತಾಗುವ ಬೇಸಿಗೆಕಾಲದಲ್ಲಿ ಶ್ರವಣಬೆಳಗೊಳಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳಬಹುದು.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ್): ಬೇಸಿಗೆಯ ನಂತರ ಬರುವ ಮಳೆಗಾಲವು ಮಧ್ಯಮ ಪ್ರಮಾಣದ ಮಳೆಯನ್ನು ಸುರಿಸುತ್ತದೆ. ಮಳೆ ಬಂದ ನಂತರದಲ್ಲಿ ಒಣಹವೆ ಮುಂದುವರಿಯುತ್ತದೆ. ಹೀಗಾಗಿ ಪ್ರವಾಸಿಗರು ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಇಷ್ಟಪಡುತ್ತಾರೆ. ಯಾಕೆಂದರೆ ಮಳೆಗಾಲದಲ್ಲಿ ಅತ್ಯಂತ ಸುಂದರವಾಗಿ ಈ ಗುಡ್ಡವು ಕಾಣುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಚಳಿಗಾಲವು ಶ್ರವಣಬೆಳಗೊಳದಲ್ಲಿ ಅನುಕೂಲದ ವಾತಾವರಣ. ಯಾಕೆಂದರೆ ಇಲ್ಲಿ ತಂಪಾದ ವಾತಾವರಣವಿರುತ್ತದೆ. ತಾಪಮಾನವು 19°C ರಿಂದ 30°C ರವರೆಗೆ ಇರುತ್ತಿದ್ದು, ಶ್ರವಣಬೆಳಗೊಳಕ್ಕೆ ಭೇಟಿ ನೀಡಲು ಅತ್ಯುತ್ತಮ ವಾತಾವರಣವಾಗಿದೆ.