Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿರ್ಸಾ » ಹವಾಮಾನ

ಸಿರ್ಸಾ ಹವಾಮಾನ

ಬೇಸಿಗೆಗಾಲ

ಬೇಸಿಗೆ ಇಲ್ಲಿ ಮಾರ್ಚ್ ನಿಂದ ಮೇ ತಿಂಗಳವರೆಗಿರುತ್ತದೆ, ಕೆಲವು ಬಾರಿ ಜೂನ್ ತಿಂಗಳವರೆಗೂ ಮುಂದುವರಿಯುತ್ತದೆ. ಈ ಸಮಯದಲ್ಲಿ ಉಷ್ಣಾಂಸ 22-40 ಡಿಗ್ರಿಯವರೆಗಿರುತ್ತದೆ. ಈ ಸಮಯದಲ್ಲಿ ಸೆಖೆ, ನೆಮ್ಮದಿಯಿಲ್ಲದ ಗಾಳಿ ಬೀಸುತ್ತಿರುತ್ತದೆ.

ಮಳೆಗಾಲ

ಮಳೆಗಾಲ ಜುಲೈನಿಂದ ಸೆಪ್ಟಂಬರ್ ವರೆಗಿರುತ್ತದೆ, ಮತ್ತು ಸಿರ್ಸಾದಲ್ಲಿ ಈ ಸಮಯದಲ್ಲಿ ಅತಿ ಮಳೆಯಾಗುತ್ತದೆ. ಆಕಾಶ ಮೋಡದಿಂದ ಕೂಡಿರುತ್ತದೆ, ವಾತಾವರಣ ತೇವಭರಿತವಾಗಿರುತ್ತದೆ.

ಚಳಿಗಾಲ

ಚಳಿಗಾಲ ನವೆಂಬರ್ ನಿಂದ ಫೆಬ್ರವರಿಯವರೆಗಿರುತ್ತದೆ. ವಾತಾವರಣವು ಈ ಸಮಯದಲ್ಲಿ ಆಹ್ಲಾದಕರವಾಗಿರುತ್ತದೆ. ಮತ್ತು ಈ ಸಮಯದಲ್ಲಿ ಉಷ್ಣಾಂಸ 12 ರಿಂದ 20 ಡಿಗ್ರಿಯವರೆಗಿರುತ್ತದೆ. ಸಿರ್ಸಾದಲ್ಲಿ ಉಲ್ಲಾಸಭರಿತ ವಾತಾವರಣ ನವೆಂಬರ್ ನಿಂದ ಎಪ್ರಿಲ್ ವರೆಗಿದ್ದು, ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಆದರೂ ಧಾರ್ಮಿಕ ಕೇಂದ್ರಗಳು, ದೇವಾಲಯಗಳು ವರ್ಷ ಪೂರ್ತಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ.