Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ಚರ್ » ಹವಾಮಾನ

ಸಿಲ್ಚರ್ ಹವಾಮಾನ

ಇಲ್ಲಿ ಸಮಶಿತೋಷ್ಣ ವಾಯುಗುಣ ಇರುವ ಕಾರಣ ವರ್ಷದ ಯಾವುದೇ ಅವಧಿಯಲ್ಲೂ ಭೇಟಿ ನೀಡಬಹುದು. ಆದರೂ ಮಳೆಗಾಲದಲ್ಲಿ ಆದಷ್ಟು ಭೇಟಿ ನೀಡದಿರುವುದೇ ಒಳಿತು. ಬೇಸಗೆ ಮತ್ತು ಮಳೆಗಾಲದಲ್ಲಿ ಇಲ್ಲಿನ ಸುತ್ತಮುತ್ತಲ ಪ್ರದೇಶದ ಸ್ಥಳಗಳನ್ನು ನೊಡಲು ಬಹಳ ಉತ್ತಮವಾದ ಅವಧಿ.

ಬೇಸಿಗೆಗಾಲ

ಮಾರ್ಚ್ ಕೊನೆಯಲ್ಲಿ ಅಥವಾ ಎಪ್ರಿಲ ಮೊದಲಲ್ಲಿ ಆರಂಭವಾಗುವ ಬೇಸಿಗೆ ಕಾಲ ಜುಲೈ ತನಕ ಮುಂದುವರಿಯುತ್ತದೆ. ಈ ಅವಧಿಯ ಗರಿಷ್ಟ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ ಹಾಗೂ ಈ ಅವಧಿಯ ಕನಿಷ್ಟ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಿದೆ. ದಿನದ ಅವಧಿಯಲ್ಲಿ ಹೆಚ್ಚು ಆದ್ರವಾದ ವಾತಾವರಣ ಇರುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಸಿಲ್ಚರ್ ನಲ್ಲಿ ಧಾರಾಕಾರ ಮಳೆಯಾಗುತ್ತದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಇಲ್ಲಿ ಮಳೆಯ ತಿಂಗಳುಗಳಾಗಿವೆ. ಇಲ್ಲಿನ ಆದ್ರ ವಾತಾವರಣ ಮತ್ತು ಬೇಸಗೆಗೆ ಮಳೆಗಾಲ ತಂಪನ್ನೀಯುತ್ತದೆ. ಮಳೆಗಾಲದ ಒಂದೇ ಸಮಸ್ಯೆ ಎಂದರೆ ಭೂಕುಸಿತದ ಕಾರಣದಿಂದ ಇಲ್ಲಿನ ರಸ್ತೆಗಳು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುತ್ತದೆ.

ಚಳಿಗಾಲ

ಚಳಿಗಾಲ ಸಿಲ್ಚರ್ ನಲ್ಲಿ ಅತ್ಯುತ್ತಮ ಅವಧಿಯಾಗಿದೆ. ಮಳೆ ಒಂದು ಬಾರಿ ಕಡಿಮೆ ಆದ ಕೂಡಲೆ ಆರಂಭವಾಗುವ ಚಳಿ ಇಡಿಯ ಸಿಲ್ಚರ್ ನಲ್ಲಿ ಚಟುವಟಿಕೆ ಹೆಚ್ಚು ಮಾದುತ್ತದೆ. ನವೆಂಬರ್ ನಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿಯ ತನಕ ಮುಂದುವರಿಯುತ್ತದೆ. ಈ ಅವಧಿಯ ಸಾಮಾನ್ಯ ತಾಪಮಾನ 25 ರಿಂದ 12 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗಳು ಉಣ್ಣೆಯ ಬಟ್ಟೆಗಳನ್ನು ತರದಿದ್ದರೆ ಚಳಿಯ ಪ್ರಭಾವ ಸಹಿಸುವುದು ಕಷ್ಟ ಸಾಧ್ಯ.