Search
  • Follow NativePlanet
Share
ಮುಖಪುಟ » ಸ್ಥಳಗಳು » ಶೋಘಿ » ಹವಾಮಾನ

ಶೋಘಿ ಹವಾಮಾನ

ಶೋಘಿಯನ್ನು ವರ್ಷದ ಯಾವುದೇ ಕಾಲದಲ್ಲಿ ಭೇಟಿ ಮಾಡಬಹುದು. ಆದರೆ ಜನೇವರಿಯ ಸಮಯದಲ್ಲಿ ಈ ಸ್ಥಳದ ಹವಾಮಾನ ಪರಿಸ್ಥಿತಿ ತುಂಬಾ ಕಠಿಣ ಮತ್ತು ಅಹಿತಕರವಾಗಿರುವದರಿಂದ ಈ ತಿಂಗಳಲ್ಲಿ ಭೇಟಿ ಸೂಕ್ತವಲ್ಲ.

ಬೇಸಿಗೆಗಾಲ

(ಮಾರ್ಚ್ ನಿಂದ  ಜೂನ್ ): ಶೋಘಿಯಲ್ಲಿ ಬೇಸಿಗೆಯು ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಜೂನ್ ತಿಂಗಳ ವರೆಗೂ ಮುಂದುವರೆಯುತ್ತದೆ. ಈ ಕಾಲದಲ್ಲಿ, ಪ್ರದೇಶವು ಸರಾಸರಿ ತಾಪಮಾನವು  14 ° C ಮತ್ತು 27 ° C  ನಡುವೆ ಇರುತ್ತಿದ್ದು , ಶೋಘಿಯು ಈ ಸಮಯದಲ್ಲಿ ಸಾಕಷ್ಟು ಬೆಚ್ಚನೆಯ ಹವಾಮಾನವನ್ನು ಅನುಭವಿಸುತ್ತದೆ.

ಮಳೆಗಾಲ

(ಜುಲೈ- ಆಗಸ್ಟ್ ): ಶೋಘಿಯಲ್ಲಿ  ಜುಲೈನಲ್ಲಿ ಆರಂಭವಾಗುವ ಮಳೆಗಾಲವು ಅಗಸ್ಟ್ ವರೆಗೂ ಮುಂದುವರೆಯುತ್ತದೆ, ಆದರೆ ಇದು ಮಧ್ಯಮ ಗತಿಯ ಮಳೆಯನ್ನು ಅನುಭವಿಸುತ್ತದೆ. ಈ ಕಾಲದಲ್ಲಿ ಎಲ್ಲೆಲ್ಲೂ ಹಸಿರು ನಳನಳಿಸುತ್ತಿರುವ ಕಾರಣ ಈ ಋತುವಿನಲ್ಲಿ ಸ್ಥಳಕ್ಕೆ ಭೇಟಿ ನೀಡಲು ಹೆಚ್ಚಿನ ಪ್ರವಾಸಿಗರು ಬಯಸುತ್ತಾರೆ.

ಚಳಿಗಾಲ

(ನವೆಂಬರ್ - ಫೆಬ್ರವರಿ ): ನವೆಂಬರ್ನಿಂದ  ಫೆಬ್ರವರಿವರೆಗೆ ವ್ಯಾಪಿಸಿರುವ ಚಳಿಗಾಲದಲ್ಲಿ ಜನವರಿ ತಿಂಗಳಿನಲ್ಲಿ ಸ್ವಲ್ಪ ಹೆಚ್ಚು ಚಳಿ ಇರುತ್ತಿದ್ದು, ಈ ಸಮಯದಲ್ಲಿ ಉಷ್ಣಾಂಶ -4 ° C ನಿಂದ 10 ° C ನಡುವೆ ಇರುತ್ತದೆ. ಈ  ಪ್ರದೇಶದಲ್ಲಿ  ಸ್ವಲ್ಪ ಹಿಮಪಾತವೂ ಆಗುವದುಂಟು.