Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಹವಾಮಾನ

ಶಿವಪುರಿ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಇಲ್ಲಿನ ವಾತಾವರಣ ಪ್ರವಾಸಿಗರಿಗೆ ಅನುಕೂಲಕರವಾಗಿರುತ್ತದೆ. ಬೇಸಿಗೆಯಲ್ಲಿ ಬಿಸಿಲು ಏರುವುದರಿಂದ ಮತ್ತು ವಾತಾವರಣ ಒಣವಾಗಿರುವುದರಿಂದ ಶಿವಪುರಿಗೆ ಭೇಟಿ ನೀಡದಿರುವುದು ಉತ್ತಮ. ಬೇಸಿಗೆಯಲ್ಲಿ ಹುಲಿ ಸಫಾರಿಗೆ ಹೋಗಬಹುದು. ಜಲಪಾತ ಮತ್ತು ಕೆರೆಗಳನ್ನು ನೋಡುವುದೇ ಪ್ರಮುಖವಾಗಿದ್ದರೆ ಮಳೆಗಾಲವೇ ಬೆಸ್ಟ್.

ಬೇಸಿಗೆಗಾಲ

ಬೇಸಿಗೆಯಲ್ಲಿ ಶಿವಪುರಿ ಒಣಹವೆ ಹೊಂದಿರುತ್ತದೆ ಮತ್ತು ಬಿಸಿಲು ಜಾಸ್ತಿಯಿರುತ್ತದೆ. ಆದರೆ ಬೇಸಿಗೆಯಲ್ಲಿಯೂ ದಟ್ಟ ಅರಣ್ಯ, ಅಸಂಖ್ಯ ಜಲಪಾತಗಳು, ಪಕ್ಷಿಧಾಮ ಮತ್ತು ಕೆರೆಗಳು ಸುಡುವ ಬಿಸಿಲಿನಲ್ಲಿಯೂ ಹಿತಕರ ವಾತಾವರಣ ಸೃಷ್ಟಿಸುತ್ತವೆ. ಜೂನ್ ತಿಂಗಳಲ್ಲಿ 42 ಡಿಗ್ರಿ ಸೆಂಟಿಗ್ರೇಡ್ ವರೆಗೆ ತಾಪಮಾನ ತಲುಪುತ್ತದೆ.

ಮಳೆಗಾಲ

ಜುಲೈನಿಂದ ಅಕ್ಟೋಬರ್ ವರೆಗೆ ಮಳೆಗಾಲವಿರುತ್ತದೆ. ಮಳೆಗಾಲದಲ್ಲಿ ಜಲಪಾತಗಳು, ಕೊಳಗಳು ತುಂಬಿ ತುಳುಕುವುದರಿಂದ ಈ ಕಾಲವೇ ಪ್ರವಾಸಕ್ಕೆ ಅತ್ಯುತ್ತಮವಾದ ಸಮಯ. ಈ ಸಮಯದಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿರುತ್ತದೆ, ತಾಪಮಾನ 20 ಡಿಗ್ರಿಯಷ್ಟು ಮುಟ್ಟಿರುತ್ತದೆ ಮತ್ತು ಅತ್ಯಂತ ಹಿತಕರವಾಗಿರುತ್ತದೆ. ಆದರೆ, ಮಳೆಗಾಲದ ಸಮಯದಲ್ಲಿ ಮಾಧವ ನ್ಯಾಷನಲ್ ಪಾರ್ಕ್ ಭೇಟಿ ನೀಡುವುದು ಅಷ್ಟು ಸಮಂಜಸವಲ್ಲ.

ಚಳಿಗಾಲ

ಚಳಿಗಾಲದಲ್ಲಿ ಮಧ್ಯಪ್ರದೇಶದಲ್ಲಿ 28ರಿಂದ 15 ಡಿಗ್ರಿ ಸೆಂಟಿಗ್ರೇಡ್ ವರೆಗೆ ತಾಪಮಾನವಿರುತ್ತದೆ ಮತ್ತು ಸಾಕಷ್ಟು ತಂಪಾಗಿರುತ್ತದೆ. ಈ ಕಾಲವೇ ಶಿವಪುರಿಗೆ ಭೇಟಿ ನೀಡಲು ಎಲ್ಲ ಋತುಗಳಿಗಿಂತ ಪ್ರಶಸ್ತವಾದದ್ದು. ಚಳಿಯಿದ್ದರೂ ಸಾಕಷ್ಟು ಹಿತಕರವಾಗಿರುತ್ತದೆ.