Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಗಿರಿ » ಹವಾಮಾನ

ಶಿವಗಿರಿ ಹವಾಮಾನ

ಈ ಸ್ಥಳಕ್ಕೆ ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಬಹುದು; ಅದೇನೆ ಆದರು ಅಕ್ಟೋಬರ್ ಮತ್ತು ಮೇ ತಿಂಗಳುಗಳಲ್ಲಿ ತಾಪಮಾನ ಸಾಕಷ್ಟು ಆಹ್ಲಾದಕರವಿರುವ ಕಾರಣ, ಇದು ಭೇಟಿ ನೀಡಲು ಸೂಕ್ತ ಕಾಲ ಎಂದು ಪರಿಗಣಿಸಲಾಗುತ್ತದೆ. ಭಾರೀ ಮಳೆಯ ಕಾರಣದಿಂದಾಗಿ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭೇಟಿ ನೀಡುವುದು ಸೂಕ್ತವಲ್ಲ.

ಬೇಸಿಗೆಗಾಲ

(ಮಾರ್ಚ್ ಇಂದ ಮೇ): ಬೇಸಿಗೆಯಲ್ಲಿ ಶಿವಗಿರಿಯು ಸಾಕಷ್ಟು ಉಷ್ಣತೆಯಿಂದ ಕೂಡಿದ್ದು ಮತ್ತು ದಿನದ ಉಷ್ಣತೆ 37° C ವರೆಗೆ ಹೋಗುತ್ತದೆ.ಈ ಸ್ಥಳದಲ್ಲಿ ಕನಿಷ್ಠ ಉಷ್ಣಾಂಶ 22° C ಇರುತ್ತದೆ. ಬೇಸಿಗೆಯು ಈ ಸ್ಥಳಕ್ಕೆ ಭೇಟಿ ನೀಡಬಲ್ಲ ಉತ್ತಮ ಸಮಯ ಎಂದು ಪರಿಗಣಿಸಲ್ಪಡುತ್ತದೆ.

ಮಳೆಗಾಲ

(ಜೂನ್ ಇಂದ ಸೆಪ್ಟೆಂಬರ್): ಮಳೆಗಾಲದಲ್ಲಿ ಶಿವಗಿರಿಯು ಭಾರೀ ಪ್ರಮಾಣದಲ್ಲಿ ಮಳೆಯನ್ನು ಅನುಭವಿಸುತ್ತದೆ. ಹೊರಾಂಗಣ ಚಟುವಟಿಕೆಗಳು ಸಾಧ್ಯವಿಲ್ಲದ ಕಾರಣ ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದಿಲ್ಲ.

ಚಳಿಗಾಲ

(ಡಿಸೆಂಬರ್ ಇಂದ ಫೆಬ್ರವರಿ): ಚಳಿಗಾಲದ ಋತುವಿನಲ್ಲಿ ಶಿವಗಿರಿಯ ಹವಾಮಾನವು ಸಾಕಷ್ಟು ಆಹ್ಲಾದಕರತೆಯನ್ನು ಪಡೆಯುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ 21 ° C  ಇಂದ 31° C  ವರೆಗೆ ಇರುತ್ತದೆ.