Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವನಸಮುದ್ರ » ಹವಾಮಾನ

ಶಿವನಸಮುದ್ರ ಹವಾಮಾನ

ಮಳೆಗಾಲದ ಸಮಯ ಹಾಗು ಅಗಸ್ಟ ಮತ್ತು ಫೆಬ್ರುವರಿ ಮಧ್ಯದ ಅವಧಿಯು ಭೇಟಿ ನೀಡಲು ಸೂಕ್ತವಾಗಿರುತ್ತದೆ.

ಬೇಸಿಗೆಗಾಲ

(ಏಪ್ರೀಲ್ ನಿಂದ ಜೂನ್): ಶಿವನಸಮುದ್ರದಲ್ಲಿ ಬೇಸಿಗೆಯು ಹಿತವಾಗಿ ಮತ್ತು ಆರಾಮವನ್ನುಂಟು ಮಾಡುವ ಹವಾಮಾನದಿಂದ ಕೂಡಿರುತ್ತದೆ. ಆಗ ಇಲ್ಲಿನ ಗರಿಷ್ಟ ಉಷ್ಣಾಂಶ 37 ° ಸೆಲ್ಶಿಯಸ್ ಇದ್ದು ,ಕನಿಷ್ಟ 20°ಸೆಲ್ಶಿಯಸ ಹಾಸು ಪಾಸಿನಲ್ಲಿರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಶಿವನ ಸಮುದ್ರವು ಅಲ್ಪಕಾಲದ ಮಳೆಗಾಲವನ್ನು ಹೊಂದಿದ್ದು, ಮಳೆಗಾಲದಲ್ಲಿ  ಮಿತ ಪ್ರಮಾಣದ ಮಳೆಯನ್ನು  ಪಡೆಯುತ್ತದೆ. ಈ ಕಾಲದಲ್ಲಿ ಇಲ್ಲಿನ ಜಲಪಾತವು ಅತ್ಯಂತ ರಮಣೀಯವಾಗಿ ಕಾಣುವುದರಿಂದ ಪ್ರವಾಸಿಗರು ಈ ದೃಶ್ಯಕ್ಕೆ ಸಾಕ್ಷಿಯಾಗಲು ತಂಡೋಪತಂಡವಾಗಿ ಆಗಮಿಸುತ್ತಾರೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಶಿವನಸಮುದ್ರದಲ್ಲಿ ಚಳಿಗಾಲ ಅತ್ಯಂತ ಆರಾಮದಾಯಕ ಮತ್ತು ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಆಗ ಇಲ್ಲಿನ ಕನಿಷ್ಟ ಉಷ್ಣಾಂಶವು 12° ಸೆಲ್ಶಿಯಸ್ ಹಾಸು ಪಾಸಿನಲ್ಲಿರುತ್ತದೆ ಮತ್ತು ಗರಿಷ್ಟ ಉಷ್ಣಾಂಶವು 31° ಸೆಲ್ಶಿಯಸ್ ಹಾಸುಪಾಸಿನಲ್ಲಿರುತ್ತದೆ.