Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಗಂಗೆ » ಹವಾಮಾನ

ಶಿವಗಂಗೆ ಹವಾಮಾನ

ಶಿವಗಂಗೆಗೆ ಯಾವುದೆ ಸಮಯದಲ್ಲಿ ಭೇಟಿ ನೀಡಬಹುದಾದರೂ ಚಳಿಗಾಲವು ಅತ್ಯಂತ ಪ್ರಶಸ್ತವಾಗಿರುತ್ತದೆ.

ಬೇಸಿಗೆಗಾಲ

 (ಫೆಬ್ರವರಿ ಇಂದ ಮೇವರೆಗೆ):  ಬೇಸಿಗೆಯಲ್ಲಿ ಶಿವಗಂಗೆಯ ಹವಾಮಾನವು ಹಿತವಾಗಿದ್ದು, ಉಷ್ಣಾಂಶವು 27°ಸೆಲ್ಶಿಯಸ್ ವರೆಗೆ ಏರುತ್ತದೆ. ಈ ಕಾಲದಲ್ಲಿ ಇಲ್ಲಿ ನಮೂದಾಗಿರುವ ಕನಿಷ್ಟ ಉಷ್ಣಾಂಶ 24° ಸೆಲ್ಶಿಯಸ್. ಬೇಸಿಗೆಯ ರಾತ್ರಿಗಳಲ್ಲಿ ಉಷ್ಣಾಂಶ ಏರಿದಂತೆಲ್ಲ ಸಾಂದರ್ಭಿಕವಾಗಿ ತಂಪಾದ ಮಳೆ ಬೀಳುವ ಸಾಧ್ಯತೆಯು ಉಂಟು.

ಮಳೆಗಾಲ

 (ಜೂನ್ ನಿಂದ ನವೆಂಬರ್): ಶಿವಗಂಗೆಯಲ್ಲಿ ವರ್ಷದ ಎಲ್ಲಾ ಸಮಯದಲ್ಲಿ ಮಳೆಯ ಸಾಧ್ಯತೆ ಉಂಟು. ಆದರು ಪ್ರವಾಸಿಗರು ಮಳೆಗಾಲದಲ್ಲಿ ಶಿವಗಂಗೆಗೆ ಭೇಟಿ ಕೊಡದಿರುವುದು ಒಳ್ಳೆಯದು. ಆಗ ಇಲ್ಲಿನ ರಸ್ತೆಗಳು ಹಾಳಾಗಿ,  ಜಾರುತ್ತಿರುತ್ತವೆ.

ಚಳಿಗಾಲ

(ಡಿಸೆಂಬರ್ ನಿಂದ ಜನವರಿ): ಶಿವಗಂಗೆಯಲ್ಲಿ ಚಳಿಗಾಲವು ಸ್ವಲ್ಪ ಚಳಿಯಿಂದ ಕೂಡಿದ್ದು, ಉಷ್ಣಾಂಶ ಗರಿಷ್ಟ 30° ಸೆಲ್ಶಿಯಸ್ ವರೆಗು ಏರುತ್ತದೆ. ಜನವರಿಯಲ್ಲಿ ಇಲ್ಲಿ ಕೊರೆಯುವ ಚಳಿ ಇದ್ದು, ಉಷ್ಣಾಂಶವು 12°ಸೆಲ್ಶಿಯಸ್ ಇರುತ್ತದೆ.